Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ಮೂತ್ರ ವಿಸರ್ಜನೆ ಬಳಿಕ ಉರಿ ಅನುಭವ: ಕಾರಣವೇನು, ಚಿಕಿತ್ಸೆಯೇನು?
ಮಹಿಳೆಯರಿಗೆ ಮೂತ್ರ ಸೋಂಕು (UTI)ಎಂಬುವುದು ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಗಾಯ ಅಥವಾ ಸೋಂಕಿನ ಕಾರಣದಿಂದಾಗಿ ಹೆಚ್ಚಾಗಿ ಈ ರೀತಿಯ ಸಮಸ್ಯೆ ಉಂಟಾಗುವುದು. ಸಾಮಾನ್ಯವಾಗಿ ಮೂತ್ರ ಸೋಂಕು ಈ ಕಾರಣಗಳಿಂದಾಗಿ ಉಂಟಾಗುವುದು
* ಲೈಂಗಿಕ ಸೋಂಕು (STI)
* ಮೂತ್ರ ನಾಳಕ್ಕೆ ಹಾನಿಯುಂಟಾಗಿದ್ದರೆ
* ಊತ
* ಸರ್ಜರಿ
* ಇತ್ತೀಚೆಗೆ ಕ್ಯಾಥೆಟರ್ ಬಳಸಿದ್ದರೆ
ಮೂತ್ರ ಸೋಂಕು ಉಂಟಾಗಿದ್ದರೆ ಉರಿ ಮೂತ್ರದ ಜೊತೆಗೆ ಮೂತ್ರ ವಿಸರ್ಜನೆ ಕಡಿಮೆಯಾಗುವುದು. ಈ ರೀತಿಯ ಸಮಸ್ಯೆ ಗಾಯ ಒಣಗಿದಾಗ ಅಥವಾ ಮೂತ್ರ ಸೋಂಕಿಗೆ ಔಷಧ ತೆಗೆದುಕೊಂಡಾಗ ಕಡಿಮೆಯಾಗುವುದು.

ಈ ಕಾರಣಗಳಿಂದಲೂ ಮೂತ್ರ ಉರಿ ಉಂಟಾಗುವುದು
* ಮೂತ್ರವನ್ನು ತುಂಬಾ ಸಮಯ ತಡೆ ಹಿಡಿದಾಗ: ಮೂತ್ರ ವಿಸರ್ಜನೆಗೆ ಹೋಗದೆ ತುಂಬಾ ಸಮಯ ತಡೆ ಹಿಡಿದರೆ ಮೂತ್ರ ವಿಸರ್ಜನೆ ಬಳಿಕ ಉರಿ ಉಂಟಾಗುವುದು.
* ಸಾಕಷ್ಟು ನೀರು ಕುಡಿಯದಿದ್ದರೆ: ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ದೇಹದಲ್ಲಿ ಕಶ್ಮಲ ಹಾಗೇ ಉಳಿದು ಮೂತ್ರ ವಿಸರ್ಜನೆ ಮಾಡಿದ ಬಳಿಕ ಉರಿ ಉಂಟಾಗುವುದು.
ಈ ಕಾರಣಗಳಿಂದ ಉರಿ ಮೂತ್ರ ಸಮಸ್ಯೆ ಉಂಟಾದರೆ ಸಾಕಷ್ಟು ನೀರು ಕುಡಿದರೆ ಸರಿಯಾಗುವುದು. ದಿನಾ ಅಥವಾ 3-4 ಬಾರಿ ಎಳನೀರು ಕುಡಿಯುವುದರಿಂದ ಈ ಸಮಸ್ಯೆ ತಡೆಗಟ್ಟಬಹುದು.
ಆದರೆ ಈ ಕೆಳಗಿನ ಕಾರಣಗಳಿಂದಾದರೆ ಉರಿ ಮೂತ್ರ ಸಮಸ್ಯೆ ಸುಲಭದಲ್ಲಿ ಹೋಗುವುದಿಲ್ಲ, ಈ ರೀತಿ ಉಂಟಾದಾಗ ಸೂಕ್ತ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಿರಿ:

ಬ್ಲೇಡರ್ ಸಿಂಡ್ರೋಮ್
ಬ್ಲೇಡರ್ ಸಮಸ್ಯೆ ಇರುವವರಿಗೆ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಅನಿಸುವುದು, ಆದರೆ ಮೂತ್ರ ವಿಸರ್ಜನೆ ಮಾಡುವಾಗ ಅಥವಾ ಬಳಿಕ ಉರಿ-ಉರಿ ಅನಿಸುವುದು. ಈ ಸಮಸ್ಯೆ ತುಂಬಾ ಸಮಯದವರೆಗೆ ಕಾಡಬಹುದು, ಪೆಲ್ವಿಕ್ ಬಳಿ ನೋವುಂಟು ಮಾಡಬಹುದು. ಸೆಕ್ಸ್ ಮಾಡುವಾಗಲೂ ನೋವುಂಟು ಮಾಡಬಹುದು. ಸದ್ಯಕ್ಕೆ ಬ್ಲೇಡರ್ ಸಿಂಡ್ರೋಮ್‌ಗೆ ಯಾವುದೇ ಚಿಕಿತ್ಸೆಯಿಲ್ಲ, ಆದರೆ ರೋಗ ಲಕ್ಷಣ ಕಡಿಮೆಯಾಗಲು ಚಿಕಿತ್ಸೆ ನೀಡಲಾಗುವುದು. ಇದಕ್ಕೆ ಫಿಸಿಕಲ್ ಥೆರಪಿ, ಬ್ಲೇಡರ್ ಟ್ರೈಯನಿಂಗ್, ಜೀವನಶೈಲಿಯಲ್ಲಿ ಬದಲಾವಣೆ, ಧ್ಯಾನ ಇವೆಲ್ಲಾ ರೋಗ ಲಕ್ಷಣಗಳು ಕಡಿಮೆಯಾಗಲು ಸಹಾಯ ಮಾಡುತ್ತೆ.

ಪ್ರೊಸ್ಟಟೈಟಿಸ್
ಈ ಸಮಸ್ಯೆ ಪುರುಷರಲ್ಲಿ ಕಂಡು ಬರುವುದು. ಯಾವುದೇ ಗಾಯ ಅಥವಾ ಸೋಂಕುನಿಂದಾಗಿ ಪ್ರೊಸ್ಟೇಟ್ ಸುತ್ತ ಊತ ಉಂಟಾಗಿ ಅದರಿಂದ ನರಗಳಿಗೆ ಹಾನಿಯುಂಟಾಗಿ ತುಂಬಾ ನೋವುಂಟಾಗುವುದು. ಈ ರೀತಿಯ ಸಮಸ್ಯೆ ಉಂಟಾದಾಗ ಆ್ಯಂಟಿಬಯೋಟಿಕ್ಸ್ ನೀಡಲಾಗುವುದು. ಔಷಧಗಳು ಹಾಗೂ ಪ್ರೊಸ್ಟೇಟಿಕ್ ಮಸಾಜ್ ಮೂಲಕ ಆ ಭಾಗದ ನೀರನ್ನು ಹೊರ ತೆಗೆದು ಒತ್ತಡ ಕಡಿಮೆ ಮಾಡಲಾಗುವುದು.

ಕಿಡ್ನಿಯಲ್ಲಿ ಕಲ್ಲುಂಟಾದಾಗ
ಕಿಡ್ನಿಯಲ್ಲಿ ಕಲ್ಲುಂಟಾದಾಗ ಕೂಡ ಮೂತ್ರ ವಿಸರ್ಜನೆ ಬಳಿಕ ಉರಿ ಉಂಟಾಗುವುದು. ಕಿಡ್ನಿಯಲ್ಲಿನ ಕಲ್ಲು ಮೂತ್ರ ನಾಳಗಳನ್ನು ಮುಚ್ಚಿದಾಗ ಮೂತ್ರ ವಿಸರ್ಜನೆಗೆ ತೊಂದರೆ ಉಂಟಾಗುವುದು. ಈ ರೀತಿ ಕಿಡ್ನಿ ಸ್ಟೋನ್ ಉಂಟಾದಾಗ ಇತರ ಲಕ್ಷಣಗಳೆಂದರೆ ಬೆನ್ನು ನೋವು, ತಲೆ ಸುತ್ತು, ವಾಂತಿ, ಮೂತ್ರ ವಿಸರ್ಜನೆ ಮಾಡುವಾಗ ಕೆಟ್ಟ ವಾಸನೆ ಬೀರುವುದು. ಕಿಡ್ನಿಯಲ್ಲಿ ಕಲ್ಲು ಬರಲು ಪ್ರಮುಖ ಕಾರಣ ತುಂಬಾ ಉಪ್ಪು ಹಾಗೂ ಸಕ್ಕರೆ ಸೇವನೆ, ಸಾಕಷ್ಟು ನೀರು ಕುಡಿಯದಿರುವುದು. ಯಾರು ತುಂಬಾ ನೀರು ಕುಡಿಯುತ್ತಾರೋ ಅವರಲ್ಲಿ ಈ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಕಿಡ್ನಿ ಸ್ಟೋನ್ ದೊಡ್ಡದಾದರೆ ಸರ್ಜರಿ ಮಾಡಬೇಕಾಗುವುದು.

ಕೆಲವೊಮ್ಮೆ ಉರಿ ಮೂತ್ರದ ಜೊತೆಗೆ ಈ ರೀತಿಯ ಲಕ್ಷಣಗಳೂ ಕಂಡು ಬರುವುದು
* ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು
* ಕಿಡ್ನಿ, ಬ್ಲೇಡರ್, ಮೂತ್ರ ನಾಳದಲ್ಲಿ ನೋವು
* ಕಡಿಮೆ ಮೂತ್ರ ಹೋಗುವುದು
* ತಕ್ಷಣ ಮೂತ್ರ ಮಾಡಬೇಕೆನಿಸುವುದು
* ತುರಿಕೆ ಅಥವಾ ಕಿರಿಕಿರಿ
ನೀವು ವೈದ್ಯರನ್ನು ಭೇಟಿಯಾದಾಗ ಈ ಲಕ್ಷಣಗಳಿದ್ದರೆ ಅದನ್ನೂ ತಿಳಿಸಿ.

ಚಿಕಿತ್ಸೆಯೇನು?
* ಸಾಕಷ್ಟು ನೀರು ಕುಡಿಯುವುದು
* ಮದ್ಯ ಹಾಗೂ ಕೆಫೀನ್ ವಸ್ತುಗಳಿಂದ ದೂರವಿರುವುದು
* ಸೋಡಿಯಂ ಬೈಕಾರ್ಬೋನೇಟ್ ಅಥವಾ ಪೊಟಾಷ್ಯಿಯಂ ಇರುವ ಪಾನೀಯಗಳ ಸೇವನೆ
* ibuprofen ತೆಗೆದುಕೊಳ್ಳಿ
* ಸಡಿಲವಾದ ಬಟ್ಟೆ ಧರಿಸಿ
* ಮೂತ್ರವನ್ನು ತಡೆಹಿಡಿಯಬೇಡಿ.

ಯಾವಾಗ ವೈದ್ಯರಿಗೆ ತೋರಿಸಬೇಕು
* ಮೂತ್ರದಲ್ಲಿ ರಕ್ತ ಕಂಡು ಬಂದರೆ
* ಜ್ವರವಿದ್ದರೆ
* ತುಂಬಾ ಬೆನ್ನು ನೋವು
ಇವೆಲ್ಲಾ ಕಿಡ್ನಿ ಸ್ಟೋನ್ ತುಂಬಾ ತುಂಬಾ ಗಂಭೀರವಾಗಿದೆ ಎಂದು ತೋರಿಸುವ ಲಕ್ಷಣವಾಗಿದೆ.
ಕೊನೆಯದಾಗಿ: ಮೂತ್ರ ವಿಸರ್ಜನೆ ಬಳಿಕ ಉರಿ -ಉರಿಯಾದರೆ ಮೂತ್ರ ಸೋಂಕು ಆದರೆ ಔಷಧಿ ತೆಗೆದುಕೊಂಡಾಗ ಒಂದೆರಡು ದಿನದಲ್ಲಿ ಹೋಗುತ್ತೆ, ಆದರೆ ನೋವು ಕಡಿಮೆಯಾಗದಿದ್ದರೆ ನೀವು ವೈದ್ಯರನ್ನು ಭೇಟಿಯಾಗಿ ಇತರ ಆರೋಗ್ಯ ಸಮಸ್ಯೆ ಇದೆಯೇ ಎಂದು ಪರೀಕ್ಷಿಸುವುದು ಒಳ್ಳೆಯದು.



Click it and Unblock the Notifications