Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೆಂಪಕ್ಕಿ Vs ಬೆಳ್ತಕ್ಕಿಯಲ್ಲಿ ಯಾವುದು ಹೆಚ್ಚು ಆರೋಗ್ಯಕರ?
ನಮ್ಮ ದಕ್ಷಿಣ ಭಾರತದಲ್ಲಿ ಅನ್ನ ಹಾಗೂ ಅಕ್ಕಿಯಿಂದ ಮಾಡುವ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತೇವೆ. ಅದರಲ್ಲೂ ಬೆಳ್ತಕ್ಕಿಯನ್ನು ಹೆಚ್ಚಿನವರು ಬಳಸಿದರೆ ಕೆಲವೇ ಕೆಲವು ಜನರಷ್ಟೇ ಕೆಂಪಕ್ಕಿ ಬಳಸುತ್ತಾರೆ. ಕೆಂಪಕ್ಕಿಗಿಂತ ಬೆಳ್ತಕ್ಕಿ ಅನ್ನ ಹೆಚ್ಚು ರುಚಿಕರ ಅನಿಸುವುದರಿಂದ ಬೆಳ್ತಕ್ಕಿಯನ್ನು ಹೆಚ್ಚಾಗಿ ಬಳಸಲಾಗುವುದು.

ಬೆಳ್ತಕ್ಕಿಯನ್ನು ಹೆಚ್ಚು ಬಳಸುವುದಾದರೂ ಬೆಳ್ತಕ್ಕಿಗಿಂತ ಕೆಂಪಕ್ಕಿ ಅನ್ನ ಹೆಚ್ಚು ಆರೋಗ್ಯಕರ ಎಂದು ಹೇಳುವುದನ್ನು ಕೇಳಿರಬಹುದು. ಕೆಂಪಕ್ಕಿ ಹಾಗೂ ಬೆಳ್ತಕ್ಕಿ ಎರಡರಲ್ಲೂ ಪಿಷ್ಟ ಹೆಚ್ಚಾಗಿರುವುದರಿಂದ ಎರಡೂ ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಕೆಲವೊಂದು ಅಂಶಗಳಿಂದ ಕೆಂಪಕ್ಕಿ ಮತ್ತಷ್ಟು ಒಳ್ಳೆಯದೆಂದು ಹೇಳಲಾಗುವುದು.
ಈ ಎರಡು ಅಕ್ಕಿಗಳಲ್ಲಿರುವ ಆರೋಗ್ಯಕರ ಗುಣಗಳು, ಈ ಎರಡು ಅಕ್ಕಿಗಳಲ್ಲಿರುವ ವ್ಯತ್ಯಾಸವೇನು ಎಂದು ನೋಡೋಣ ಬನ್ನಿ:

ಕೆಂಪಕ್ಕಿ V/S ಬೆಳ್ತಕ್ಕಿ
ಕೆಂಪಕ್ಕಿಯಲ್ಲಿ ಬೆಳ್ತಕ್ಕಿಯಲ್ಲಿರುವುದಕ್ಕಿಂತ ಪೋಷಕಾಂಶಗಳು ಅಧಿಕವಿರುತ್ತದೆ. ಭತ್ತವನ್ನು ಮಿಲ್‌ನಲ್ಲಿ ಹೆಚ್ಚು ಪಾಲಿಷ್ ಮಾಡಿದರೆ ಅದು ಬೆಳ್ತಕ್ಕಿ ಆಗುತ್ತದೆ, ಕಡಿಮೆ ಪಾಲಿಷ್ ಮಾಡಿದರೆ ಅದು ಕೆಂಪಕ್ಕಿ ಆಗುತ್ತದೆ. ಕೆಂಪಕ್ಕಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಪೋಷಕಾಂಶಗಳು ಅಧಿಕವಿರುತ್ತದೆ. ಅಕ್ಕಿಯನ್ನು ತುಂಬಾ ಪಾಲಿಷ್ ಮಾಡಿದರೆ ಅದರ ಪೋಷಕಾಂಶ ಕಡಿಮೆಯಾಗುವುದು.

1. ಗ್ಲೈಸೆಮಿಕ್ ಇಂಡೆಕ್ಸ್
ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಆಹಾರ ಹೆಚ್ಚು ಆರೋಗ್ಯಕರ. ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಿದ್ದರೆ ದೇಹದ ರಕ್ತದಲ್ಲಿ ಬೇಗನೆ ಸಕ್ಕರೆಯಂಶ ಹೆಚ್ಚಾಗುವುದು. ಅದೇ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಆಹಾರ ತಿಂದರೆ ಅದು ರಕ್ತದಲ್ಲಿ ಸಕ್ಕರೆಯಂಶವನ್ನು ನಿಧಾನಕ್ಕೆ ಹೆಚ್ಚು ಮಾಡುತ್ತದೆ. ಇದಕ್ಕೆ ಕಾರಣ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಿದ್ದರೆ ಬೇಗನೆ ಜೀರ್ಣವಾಗುತ್ತದೆ, ಇದರಿಂದ ದೇಹದ ರಕ್ತದಲ್ಲಿ ಸಕ್ಕರೆಯಂಶ ಬೇಗನೆ ಹೆಚ್ಚಾಗುತ್ತದೆ.
ಆದರೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರ ಹಸಿವನ್ನು ನಿಯಂತ್ರಸುತ್ತದೆ, ತೂಕ ಇಳಿಕೆಗೆ ಸಹಕಾರಿ. ಬೆಳ್ತಕ್ಕಿಗೆ ಹೋಲಿಸಿದರೆ ಕೆಂಪಕ್ಕಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದೆ.
ಸೂಚನೆ: ಇನ್ನು ಬೆಳ್ತಕ್ಕಿಯಲ್ಲಿ ಹಲವು ಬಾಸುಮತಿ, ರಾಜಮುಡಿ ಹೀಗೆ ವಿವಿಧ ಬಗೆಗಳಿದ್ದು ಅಕ್ಕಿಯಿಂದ-ಅಕ್ಕಿಗೆ ಗ್ಲೈಸೆಮಿಕ್ ಇಂಡೆಕ್ಸ್ ಪ್ರಮಾಣ ಕಡಿಮೆಯಾಗುವುದು.

ಕ್ಯಾಲೋರಿ
ಕೆಲವರು ಕ್ಯಾಲೋರಿ ಇರುವ ಆಹಾರ ಒಳ್ಳೆಯದಲ್ಲ ಎಂದೇ ಭಾವಿಸುತ್ತಾರೆ. ಆದರೆ ನಮ್ಮ ದೇಹಕ್ಕೆ ಕ್ಯಾಲೋರಿ ಅಂಶ ಬೇಕು, ಆದರೆ ಮಿತಿಯಲ್ಲಿರಬೇಕು ಅಷ್ಟೇ. ಬೆಳ್ತಕ್ಕಿ ಹಾಗೂ ಕೆಂಪಕ್ಕಿಯಲ್ಲಿ ದೇಹಕ್ಕೆ ಶಕ್ತಿ ನೀಡುವ ಕ್ಯಾಲೋರಿ ಅಂಶವಿದ್ದು ಬೆಳ್ತಕ್ಕಿಗಿಂತ ಕೆಂಪಕ್ಕಿಯಲ್ಲಿ ಕ್ಯಾಲೋರಿ ಕಡಿಮೆ ಇದೆ. ತೂಕ ಕಡಿಮೆಯಾಗಬೇಕೆಂದರೆ ಕೆಂಪಕ್ಕಿ ತಿನ್ನಬಹುದು, ಅದೇ ಮೈ ತೂಕ ಹೆಚ್ಚಿಸಲು ಬೆಳ್ತಕ್ಕಿ ಒಳ್ಳೆಯದು. ಒಟ್ಟಿನಲ್ಲಿ ಎರಡೂ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದು.
ಒಂದು ಕಪ್ ಬೆಳ್ತಕ್ಕಿ ಅನ್ನದಲ್ಲಿ 242 ಕ್ಯಾಲೋರಿ ಇದ್ದರೆ, ಕೆಂಪಕ್ಕಿ ಅನ್ನದಲ್ಲಿ 218 ಕ್ಯಾಲೋರಿ ಇರುತ್ತದೆ. ಆದ್ದರಿಂದ ಕ್ಯಾಲೋರಿ ಕಡಿಮೆ ಮಾಡಬಯಸುವುದಾದರೆ ಕೆಂಪಕ್ಕಿ ತಿನ್ನುವುದು ಒಳ್ಳೆಯದು.

3. ನಾರಿನಂಶ
ಆಹಾರದಲ್ಲಿ ನಾರಿನಂಶ ಹೆಚ್ಚಾಗಿದ್ದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ನಾರಿನಂಶ ಕಡಿಮೆಯಾದರೆ ಮಲಬ್ಧತೆ ಸಮಸ್ಯೆ ಉಂಟಾಗುತ್ತದೆ. ಕೆಂಪಕ್ಕಿಯಲ್ಲಿ ನಾರಿನಂಶ ಬೆಳ್ತಕ್ಕಿಗಿಂತ ಅಧಿಕವಿದೆ. ಕೆಂಪಕ್ಕಿಯಲ್ಲಿ ಆ್ಯಂಟಿ ಆಕ್ಸಿಡೆಟಂಟ್ ಅಂಶ ಕೂಡ ಅಧಿಕವಿದೆ. ನೂರು ಗ್ರಾಂ ಕೆಂಪಕ್ಕಿ ಬೇಯಿಸಿದರೆ ಅದರಲ್ಲಿ 1.8ಗ್ರಾಂ ನಾರಿನಂಶವಿದ್ದರೆ , 100 ಗ್ರಾಂ ಬೆಳ್ತಕ್ಕಿಯ್ಲಿ 0.4 ಗ್ರಾಂ ನಾರಿನಂಶ ಮಾತ್ರ ಇರುತ್ತದೆ.

4. ಆರ್ಸೆನಿಕ್ ಪ್ರಮಾಣ
ಆರ್ಸೆನಿಕ್ ಸಾಮಾನ್ಯವಾಗಿ ಆಹಾರ ಪದಾರ್ಥಗಳಲ್ಲಿಇರುತ್ತದೆ. ಆರ್ಸೆನಿಕ್ ಪ್ರಮಾಣ ಹೆಚ್ಚಾದರೆ ದೇಹಕ್ಕೆ ಒಳ್ಳೆಯದಲ್ಲ. ಆರ್ಸೆನಿಕ್ ಹೆಚ್ಚಾದರೆ ಮಧುಮೇಹದಂಥ ಆರೋಗ್ಯ ಸಮಸ್ಯೆ ಉಂಟಾಗುವುದು. ಬೆಳ್ತಕ್ಕಿಗಿಂತ ಕೆಂಪಕ್ಕಿಯಲ್ಲಿ ಆರ್ಸೆನಿಕ್ ಅಂಶ ಹೆಚ್ಚಿರುವುದು. ಆದರೆ ಯಾವುದೇ ಅನ್ನವಾಗಿರಲಿ ಮಿತಿಯಲ್ಲಿ ತಿಂದರೆ ಏನೂ ತೊಂದರೆಯಿಲ್ಲ.

6. ಮಧುಮೇಹಿಗಳಿಗೆ
ಮಧುಮೇಹಿಗಳಿಗೆ ತಿನ್ನಲು ಕೆಂಪಕ್ಕಿ ಅನ್ನ ಒಳ್ಳೆಯದು. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ನಿಧಾನಕ್ಕೆ ಜೀರ್ಣವಾಗುತ್ತದೆ. ಹಾಗಾಗಿ ದೇಹದಲ್ಲಿ ಸಕ್ಕರೆಯಂಶ ಬೇಗನೆ ಬಿಡುಗಡೆಯಾಗುವುದಿಲ್ಲ, ಇದರಿಂದ ದೇಹದ ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.
100 ಗ್ರಾಂ ಪ್ರಮಾಣದ ಕೆಂಪಕ್ಕಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಪ್ರಮಾಣ 50 ಇದ್ದರೆ ಅಷ್ಟೇ ಪ್ರಮಾಣದ ಬೆಳ್ತಕ್ಕಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಪ್ರಮಾಣ 89ರಷ್ಟಿರುತ್ತದೆ.
ಇನ್ನು ಕೆಂಪಕ್ಕಿ ಅನ್ನ ಹೃದಯದ ಆರೋಗ್ಯಕ್ಕೂತುಂಬಾ ಒಳ್ಳೆಯದು.

ನಿಮ್ಮ ಅಯ್ಕೆ ಯಾವುದು?
ಒಂದು ಮಾತಿದೆ ಏನೇ ತಿನ್ನಿ ಅದನ್ನು ಜೀರ್ಣಮಾಡುವ ಶಕ್ತಿ ದೇಹಕ್ಕೆ ಇದ್ದರೆ ಯಾವುದೇ ತೊಂದರೆಯಿಲ್ಲ. ಆರೋಗ್ಯದ ದೃಷ್ಟಿಯಲ್ಲಿ ಎರಡೂ ಅಕ್ಕಿ ದೇಹಕ್ಕೆ ಅಗ್ಯತವಾದ ಶಕ್ತಿ, ಪ್ರೊಟೀನ್, ಕ್ಯಾಲೋರಿ ನೀಡುತ್ತದೆ ಆದರೆ ಪ್ರಮಾಣದಲ್ಲಿ ನೋಡುವುದಾದರೆ ಕೆಂಪಕ್ಕಿಯಲ್ಲಿ ಸ್ವಲ್ಪ ಅಧಿಕವಿರುತ್ತದೆ.
ಬೆಳಕ್ತಿ ಅನ್ನ ತಿಂದು ಚೆನ್ನಾಗಿ ನೀರು ಕುಡಿಯುವುದು, ವ್ಯಾಯಾಮ ಮಾಡುವುದು ಮಾಡಿದರೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಇನ್ನು ಅನ್ನ ತಿಂದರೆ ತೂಕ ಹೆಚ್ಚಾಗುತ್ತದೆ ಎಂದು ಭಯಪಟ್ಟು ಕೆಲವರು ಅನ್ನ ತಿನ್ನುವುದೇ ಇಲ್ಲ. ಆದರೆ ಅನ್ನ ತಿಂದು ಅದನ್ನು ಕರಗಿಸಿದರೆ ಮೈ ಫಿಟ್ ಆಗಿಡಬಹುದು.



Click it and Unblock the Notifications