Latest Updates
-
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ!
ವ್ಯಾಯಾಮ ಮಾಡುವ ಮುನ್ನ ಇಂಥಾ ಆಹಾರಗಳಿಂದ ದೂರವಿರಿ
ಇತ್ತೀಚೆಗೆ ಎಲ್ಲರಲ್ಲೂ ಆರೋಗ್ಯ ಬಗ್ಗೆ ಕಾಳಜಿ ಹೆಚ್ಚಾಗಿದೆ. ಆದ್ದರಿಂದಲೇ ಬಹುತೇಕರು ನಿತ್ಯ ವ್ಯಾಯಾಮ, ದೈಹಿಕ ಕಸರತ್ತು, ವಾಕ್ ಮಾಡಲು ಆರಂಭಿಸಿದ್ದಾರೆ. ಆದರೆ ಒಬ್ಬರನ್ನು ನೋಡಿ ಮತ್ತೊಬ್ಬರು ಮಾಡುವ ಈ ವ್ಯಾಯಾಮ ಮಾಡುವ ಮುನ್ನ ನಾವು ಯಾವೆಲ್ಲಾ ಮುಂಜಾಗ್ರತೆ ವಹಿಸಬೇಕು ಎಂಬುದರ ಬಗ್ಗೆ ಹಲವರು ಹೆಚ್ಚು ಕಾಳಜಿ ವಹಿಸುವುದೇ ಇಲ್ಲ.

ನಾವಿಂದು ಈ ಲೇಖನದಲ್ಲಿ ನಿತ್ಯ ವ್ಯಾಯಾಮ ಮಾಡುವ ಮುನ್ನ ಎಂಥಾ ಆಹಾರಗಳನ್ನು ಸೇವಿಸಬಾರದು ಮತ್ತು ಏಕೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಡಲಿದ್ದೇವೆ:

ಖಾರದ ಆಹಾರಗಳು
ಜಿಮ್ ಗೆ ತೆರಳುವ ಸಮಯದಲ್ಲಿ ಜಂಗ್ ಫುಡ್ ಸೇರಿದಂತೆ ಮಸಾಲೆ ಪದಾರ್ಥಗಳನ್ನು ಕಡ್ಡಾಯವಾಗಿ ಸೇವಿಸಬಾರದು. ಇದರಿಂದ ನಿಮ್ಮ ವ್ಯಾಯಾಮ ಪ್ರಕ್ರಿಯೆ ಉತ್ತಮವಾಗಿರಲು ಸಾಧ್ಯವೇ ಇಲ್ಲ. ನೀವು ಖಾರದ ಆಹಾರವನ್ನು ವ್ಯಾಯಾಮದ ಮುನ್ನ ಸೇವಿಸಲೇಬಾರದು. ಮಸಾಲೆಯುಕ್ತ ಖಾರದ ಆಹಾರಗಳು ಕೇವಲ ಎದೆಯುರಿ ಮತ್ತು ಸಾಮಾನ್ಯ ಅಸ್ವಸ್ಥತೆಯನ್ನು ಮಾತ್ರವೇ ಮಾಡುವುದಿಲ್ಲ ಬದಲಾಗಿ ಸೆಳೆತದಂತಹ ಸಮಸ್ಯೆಗೂ ಕಾರಣವಾಗಬಹುದು.

ಕಾರ್ಬೊನೇಟೆಡ್ ಪಾನೀಯಗಳು
ಕಾರ್ಬೊನೇಟೆಡ್ ಪಾನೀಯ ಸೇವಿಸುವುದು ಎಂದಿಗೂ ಒಳ್ಳೆಯದಲ್ಲ. ಇವು ನಿಮ್ಮ ವ್ಯಾಯಾಮದ ಅವಧಿಯಲ್ಲಿ ಹೊಟ್ಟೆಯಲ್ಲಿ ಸೆಳೆತ ಮತ್ತು ವಾಕರಿಕೆಗೆ ಕಾರಣವಾಗುವ ಸಾಧ್ಯತೆ ಇದೆ. ಈ ರೀತಿಯ ಪಾನೀಯಗಳು ಸಕ್ಕರೆ ಅಂಶದಿಂದ ಕೂಡಿರುವುದರಿಂದಾಗಿ ಸಕ್ಕರೆ ಸಮಸ್ಯೆಗಳಿಗೂ ಇದು ಕಾರಣವಾಗುವ ಸಾಧ್ಯತೆ ಇದೆ. ಹಾಗಾಗಿ ವ್ಯಾಯಾಮಕ್ಕೂ ಮುನ್ನ ಈ ರೀತಿಯ ಜ್ಯೂಸ್ ಗಳ ಸೇವನೆ ಮಾಡುವ ಬದಲು ನೀರು ಕುಡಿಯಿರಿ. ವರ್ಕ್ ಔಟ್ ಮಾಡುವುದಕ್ಕೂ ಎರಡು-ಮೂರು ತಾಸುಗಳ ಮುಂಚೆ ಎರಡರಿಂದ ಮೂರು ಲೋಟದಷ್ಟು ನೀರು ಕುಡಿಯುವುದು ವ್ಯಾಯಾಮದ ಅವಧಿಗೆ ಉತ್ತಮವೆನಿಸುತ್ತದೆ.

ಹಾಲು
ಹಾಲಿನಲ್ಲಿ ಪ್ರೊಟೀನ್, ವಿಟಮಿನ್ ಮತ್ತು ಅಗತ್ಯವಾಗಿರುವ ಎಲ್ಲಾ ಪೋಷಕಾಂಶಗಳೂ ಇರುತ್ತದೆ. ಹಾಗಿರುವಾಗ ಹಾಲು ಅತ್ಯುತ್ತಮ ಆಹಾರವೆಂದು ಅನ್ನಿಸುತ್ತದೆಯಾದರೂ ಅದು ವ್ಯಾಯಾಮದ ಮುನ್ನ ಸೇವಿಸುವುದು ಹಿತವಲ್ಲ. ವ್ಯಾಯಾಮದ ಮುನ್ನ ಡೈರಿ ಪದಾರ್ಥಗಳನ್ನು ಸೇವಿಸುವುದರಿಂದಾಗಿ ವ್ಯಾಯಾಮದ ಸಂದರ್ಬದಲ್ಲಿ ವಾಕರಿಕೆ ಮತ್ತು ಗ್ಯಾಸ್ ಅನುಭವ ಆಗಬಹುದು. ಡೈರಿ ಪದಾರ್ಥಗಳಾಗಿರುವ ಚೀಸ್, ಮೊಸರು ಮತ್ತು ಹಾಲು ಕೊಬ್ಬಿನಾಂಶದಿಂದ ಸಮೃದ್ಧವಾಗಿರುವುದರಿಂದಾಗಿ ಇವುಗಳನ್ನು ವ್ಯಾಯಾಮದ ನಂತರ ಸೇವಿಸುವುದು ಒಳ್ಳೆಯದು.

ಬೀನ್ಸ್
ದ್ವಿದಳ ಧಾನ್ಯಗಳು ಪ್ರೊಟೀನ್ ನಿಂದ ಸಮೃದ್ಧವಾಗಿರುತ್ತದೆ ಮತ್ತು ಅದು ನಾರಿನಂಶವನ್ನು ಹೆಚ್ಚು ಹೊಂದಿರುವುದರಿಂದಾಗಿ ಜೀರ್ಣವಾಗುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ. ಇದು ನಿಮ್ಮ ಜೀರ್ಣಕ್ರಿಯೆ ಸಮಸ್ಯೆಯನ್ನು ಮತ್ತು ಹೊಟ್ಟೆ ಉಬ್ಬರಿಸುವಂತ ಸಮಸ್ಯೆಯನ್ನು ವ್ಯಾಯಾಮ ಪ್ರಕ್ರಿಯೆಯಲ್ಲಿ ಮಾಡುವ ಸಾಧ್ಯತೆ ಇದೆ. ಹಾಗಾಗಿ ವ್ಯಾಯಾಮ ಮಾಡುವಾಗ ಸರಿಯಾದ ಅಂದರೆ ಆರಾಮದಾಯಕವಾಗಿರುವ ನಿಖರವಾದ ಸ್ಥಾನದಲ್ಲಿ ವ್ಯಾಯಾಮ ಮಾಡುವುದಕ್ಕೆ ಸಾಧ್ಯವಾಗದೇ ಇರಬಹುದು.



Click it and Unblock the Notifications
