Latest Updates
-
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ?
ಮೂತ್ರದ ವಾಸನೆಯಿಂದಲೇ ಇರುವೆಗಳಿಗೆ ಸಿಗುತ್ತೆ ಕ್ಯಾನ್ಸರ್ ಸುಳಿವು
ಕ್ಯಾನ್ಸರ್ ಹೆಸರು ಕೇಳಿದ್ರೆ ಜನ ಬೆಚ್ಚಿ ಬೀಳ್ತಾರೆ. ವೈದ್ಯಕೀಯ ಲೋಕದಲ್ಲಿ ಆದ ಮಹಾ ಬದಲಾವಣೆಗಳಿಂದ ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ಕೂಡ ಒಂದು ಬಾರಿ ಈ ಕಾಯಿಲೆ ವಕ್ಕರಿಸಿಕೊಂಡ್ರೆ ಮನುಷ್ಯ ಯಮ ಯಾತನೆ ಪಡಬೇಕಾಗುತ್ತದೆ.

ಪ್ರತಿನಿತ್ಯ ವೈದ್ಯಕೀಯ ಲೋಕದಲ್ಲಿ ಒಂದಲ್ಲ ಒಂದು ಬದಲಾವಣೆಗಳು ಆಗುತ್ತಲಿರುತ್ತದೆ. ಆಶ್ಚರ್ಯಕರವೆಂಬಂತೆ ಈ ಬಾರಿ ಇರುವೆಗಳಲ್ಲೂ ಕ್ಯಾನ್ಸರ್ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಪತ್ತೆ ಹಚ್ಚಲಾಗಿದೆ.

ಕ್ಯಾನ್ಸರ್ ಪತ್ತೆ ಹಚ್ಚುವ ಇತರ ವಿಧಾನಗಳು
2023 ರ ವರದಿಯ ಪ್ರಕಾರ ಭಾರತದಲ್ಲಿ ಒಟ್ಟು 2.25 ಮಿಲಿಯನ್ಗೂ ಅಧಿಕ ಕ್ಯಾನ್ಸರ್ ರೋಗಿಗಳಿದ್ದಾರೆ. ಮಹಿಳೆ ಹಾಗೂ ಪುರುಷರು ಸೇರಿದಂತೆ ಸಾಮಾನ್ಯವಾಗಿ ಎಲ್ಲರಲ್ಲೂ ಈ ರೋಗ ಕಾಣಿಸುತ್ತದೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ತನ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಿ ಪತ್ತೆಯಾಗುತ್ತಿದೆ. ಕ್ಯಾನ್ಸರ್ ರೋಗ ಭಾದಿಸುವುದನ್ನು ತಪ್ಪಿಸೋದಕ್ಕೆ ಸಾಧ್ಯವಿಲ್ಲ. ಆದರೆ ಕೆಲವೊಂದು ಆರೋಗ್ಯಕರ ಜೀವನಶೈಲಿಯನ್ನು ಪಾಲಿಸೋದ್ರಿಂದ ಕ್ಯಾನ್ಸರ್ನ ಅಪಾಯವನ್ನು ಕಡಿಮೆಗೊಳಿಸುತ್ತದೆ.
ಕ್ಯಾನ್ಸರ್ನ ಗುಣಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆದರೆ ಕೇವಲ ಒಂದೇ ಪರೀಕ್ಷೆಯಲ್ಲಿ ಕ್ಯಾನ್ಸರ್ ಇರುವಿಕೆಯ ಬಗ್ಗೆ ಖಚಿತ ಪಡಿಸೋದಕ್ಕೆ ಸಾಧ್ಯವಿಲ್ಲ. ಬಿಯೋಪ್ಸಿ, ಸಿಟಿ ಸ್ಕ್ಯಾನ್, ಮೂಳೆಯ ಸ್ಕ್ಯಾನ್, ಎಂಆರ್ಐ ಸ್ಕ್ಯಾನ್, ಪಿಸ್ಟ್ರೋನ್ ಎಮಿಷನ್ ಟೊಮೋಗ್ರಾಫಿ ಸ್ಕ್ಯಾನ್(PET), ಅಲ್ಟ್ರಾ ಸೌಂಡ್, ಎಕ್ಸ್ ರೇ ಮೂಲಕ ಕ್ಯಾನ್ಸರ್ ಪತ್ತೆ ಹಚ್ಚೋದಕ್ಕೆ ಸಾಧ್ಯವಾಗುತ್ತದೆ.

ಇರುವೆಯಿಂದ ಕ್ಯಾನ್ಸರ್ ಪತ್ತೆ ಹಚ್ಚೋದಕ್ಕೆ ಸಾಧ್ಯನಾ?
ಇತ್ತೀಚಿಗಿನ ಒಂದು ಅಧ್ಯಯನದ ಪ್ರಕಾರ ಮೂತ್ರದ ಮೂಲಕ ಇರುವೆಗೆ ಕ್ಯಾನ್ಸರ್ ಪತ್ತೆ ಹಚ್ಚುವಂತೆ ವಿಶೇಷ ತರಬೇತಿ ನೀಡಲಾಗಿದ್ಯಂತೆ. ಆಚ್ಚರಿಯಾದ್ರು ಇದು ನಿಜ. ಹಾಗಾದ್ರೆ ಇರುವೆಯು ಯೂರಿನ್ ಮೂಲಕ ಕ್ಯಾನ್ಸರ್ ಪತ್ತೆ ಹಚ್ಚೋದು ಹೇಗೆ ಅನ್ನೋದನ್ನ ತಿಳಿಸಿಕೊಡ್ತೀವಿ.
ಹೌದು, ಅಧ್ಯಯನಗಳ ಪ್ರಕಾರ ಇರುವೆಗಳು ಯೂರಿನ್ನಿಂದ ಬರುವ ವಾಸನೆಯ ಸಹಾಯದಿಂದ ಕ್ಯಾನ್ಸರ್ ಪತ್ತೆ ಹಚ್ಚುವ ಶಕ್ತಿಯನ್ನು ಹೊಂದಿದ್ಯಂತೆ. ನಿಮಗೆಲ್ಲಾ ಗೊತ್ತಿರುವ ಹಾಗೆ ಪ್ರಾಣಿಗಳು ತಮ್ಮ ಇಂದ್ರಿಯಗಳಲ್ಲಿ ಅಭೂತಪೂರ್ವ ಶಕ್ತಿಯನ್ನು ಹೊಂದಿರುತ್ತದೆ. ಇವುಗಳು ಕೇವಲ ವಾಸನೆಯ ಮೂಲಕ ಎಲ್ಲವನ್ನೂ ತಿಳಿದುಕೊಳ್ಳುವ ಶಕ್ತಿಯನ್ನು ಹೊಂದಿದೆ. ಉದಾಹರಣೆಗೆ ಆಹಾರವನ್ನು ಹುಡುಕುವುದು, ಪರಭಕ್ಷಕಗಳನ್ನು ಮತ್ತು ಸಂಗಾತಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ.

ಇರುವೆಗಳು ಕ್ಯಾನ್ಸರ್ ಕೋಶವನ್ನು ಗುರುತಿಸುತ್ತದೆ
ಕ್ಯಾನ್ಸರ್ ಕೋಶಗಳಲ್ಲಿ ಬಾಷ್ಪಶೀಲ ಸಾವಯವ ಸಂಯುಕ್ತಗಳು (volatile organic compounds) ಇದ್ದು, ಇರುವೆಗಳಿಗೆ ವಾಸನೆಯ ಮೂಲಕ ಇದನ್ನು ಪತ್ತೆಹಚ್ಚುವಂತೆ ತರಬೇತಿ ನೀಡಲಾಗಿದೆ.
ಇರುವೆಗಳ ಆಂಟೆನಾಗಳಲ್ಲಿ ಅಸಾಧಾರಣ ಸಂಖ್ಯೆಯ ವಾಸನೆ ಗ್ರಾಹಕಗಳನ್ನು ಒಳಗೊಂಡಿದ್ದು, ಇವುಗಳು ಸಸ್ತನಿಗಳಂತೆಯೇ ವಾಸನೆಯ ಪ್ರಜ್ಞೆಯನ್ನು ಹೊಂದಿಲ್ಲ. ಆದರೆ ವಿಭಿನ್ನ ರೀತಿಯ ವಾಸನೆಯನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ.
ಒಂದು ಅಂಶದಲ್ಲಿರುವ ಬೇರೆ ಬೇರೆ ವಿಧದ ವಾಸನೆಯನ್ನು ಪತ್ತೆ ಹಚ್ಚುವ ಗುಣವನ್ನು ಇರುವೆಗಳು ಹೊಂದಿದೆ.

ಇರುವೆಗಳ ನೆನಪಿನ ಶಕ್ತಿ ಚೆನ್ನಾಗಿದೆ
ಇರುವೆಗಳ ನೆನೆಪಿನ ಶಕ್ತಿ ಚೆನ್ನಾಗಿದೆ ಎಂದು ಅಧ್ಯಯಯನಗಳೇ ಸಾಭೀತು ಪಡಿಸಿದೆ. ಕೇವಲ ಒಂದು ತರಬೇತಿ ಅವಧಿಯ ನಂತರ ಇರುವೆಗಳು ದೀರ್ಘಕಾಲೀನ ನೆನಪುಗಳನ್ನು ಉಳಿಸಿಕೊಳ್ಳುತ್ತಂತೆ. ಅಷ್ಟೇ ಅಲ್ಲ, ಬರೋಬ್ಬರಿ 9 ಪರೀಕ್ಷೆಗಳ ನಂತರವೂ ಸರಿಯಾಗಿ ಪ್ರತಿಕ್ರಿಯೆ ನೀಡಿದ್ಯಂತೆ.
ನಿಮಗೊತ್ತಾ ಕೇವಲ ಮೂರು ಬಾರಿ ತರಬೇತಿ ನೀಡಿದ ನಂತರ ಕ್ಯಾನ್ಸರ್ ಕೋಶಗಳಲ್ಲಿ ಇರುವ ಬಾಷ್ಪಶೀಲ ಸಾವಯವ ಸಂಯುಕ್ತಗಳನ್ನು ಇರುವೆಗಳು ಪತ್ತೆ ಹಚ್ಚಿದ್ಯಂತೆ. ಹೀಗಾಗಿ ಇರುವೆಗಳು ಕ್ಯಾನ್ಸರ್ ಪತ್ತೆ ಹಚ್ಚಲು ಇರುವ ಅಗ್ಗವಾದ ಹಾಗೂ ಉಪಯುಕ್ತವಾದ ಸಾಧನವಾಗಿದೆ.

ಇರುವೆಗಳು ಕ್ಯಾನ್ಸರ್ ಪತ್ತೆ ಹಚ್ಚಲು ಭವಿಷ್ಯದ ಭರವಸೆ ಆಗಬಹುದೇ?
ಸಂಶೋಧಕರ ಪ್ರಕಾರ ಇರುವೆಗಳು ಕ್ಯಾನ್ಸರ್ ಪತ್ತೆ ಹಚ್ಚಲು ಭವಿಷ್ಯದ ಸಾಧನವಾಗಬಹುದು. ಯಾಕೆಂದರೆ ಇರುವೆಗಳ ನೆನಪಿನ ಶಕ್ತಿ ಚೆನ್ನಾಗಿದೆ, ವೇಗವಾಗಿ ಕಲಿತುಕೊಳ್ಳುತ್ತದೆ, ಅತ್ಯಂತ ವೇಗವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ಅಗ್ಗವಾದ ಸಾಧನವಾಗಿದೆ.

ಪ್ರಾಣಿಗಳ ಮೂಲಕ ಕ್ಯಾನ್ಸರ್ ಪತ್ತೆ ಮಾಡಬಹುದಾ?
ಪ್ರಾಣಿಗಳನ್ನು ಬಳಸಿಕೊಂಡು ಆರಂಭಿಕವಾಗಿ ಕ್ಯಾನ್ಸರ್ ಪತ್ತೆಹಚ್ಚಬಹುದಾಗಿದೆ. ಉದಾಹರಣೆಗೆ ನಾಯಿಯು ಜೀವಕೋಶದ ಮಾದರಿಗಳು ಅಥವಾ ದೇಹದ ವಾಸನೆಯ ಮೂಲಕ ಕ್ಯಾನ್ಸರ್ಗೆ ಸಂಬಂಧಿಸಿದ ಬಾಷ್ಪಶೀಲ ಸಾವಯವ ಸಂಯುಕ್ತಗಳನ್ನು (VOCs) ಪತ್ತೆಹಚ್ಚಲು ತರಬೇತಿ ನೀಡಬಹುದು.
ಸಂಶೋಧನೆಗಳು ಇರುವೆಗಳಿಂದ ಕ್ಯಾನ್ಸರ್ ಪತ್ತೆ ಹಚ್ಚಲು ಸಾಧ್ಯವಿದೆ ಎಂದು ದೃಢಪಡಿಸಿದೆ. ಕ್ಯಾನ್ಸರ್ ರೋಗಿಗಳಿಗೆ ಇದರಿಂದ ಪ್ರಯೋಜನವೂ ಆಗಲಿದೆ. ಆದ್ರೆ ಇರುವೆಗಳು ಕ್ಯಾನ್ಸರ್ ಪತ್ತೆ ಹಚ್ಚುತ್ತೆ ಅಂದ್ರೆ ನಿಜವಾಗ್ಲೂ ಅಚ್ಚರಿಯಾಗುತ್ತೆ ಅಲ್ವಾ?



Click it and Unblock the Notifications
