ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ಫಾರಂನಲ್ಲಿರುವ 300 ಹಂದಿಗಳನ್ನು ಕೊಲ್ಲಲು ಆದೇಶ

ಆಫ್ರಿಕನ್‌ ಹಂದಿ ಜ್ವರ ಕೇರಳದ ವಯನಾಡ್‌ನ ಮಾನಂದವಾಡಿಯಲ್ಲಿ ಶುಕ್ರವಾರ (ಜುಲೈ 22) ಪತ್ತೆಯಾಗಿದೆ.

ಎರಡು ಫಾರಂನಲ್ಲಿರುವ ಹಂದಿಗಳಲ್ಲಿ ಈ ವೈರಸ್‌ ಪತ್ತೆಯಾಗಿದೆ. ಈ ಹಂದಿಗಳ ಸ್ಯಾಂಪಲ್ ಅನ್ನು ಭೂಪಾಲ್‌ನಲ್ಲಿರುವ ನ್ಯಾಷನಲ್ ಇನ್ಸಿಟ್ಯೂಟ್‌ ಆಫ್‌ ಹೈ ಸೆಕ್ಯೂರಿಟಿ ಎನಿಮಲ್‌ ಡಿಸೀಜ್‌ ಸೆಂಟರ್‌ಗೆ ಕಳುಹಿಸಲಾಗಿದೆ.

 African swine fever

ಫಾರಂ ಒಂದು ಹಂದಿ ಸತ್ತಾಗ ಇತರ ಹಂದಿಗಳ ಸ್ಯಾಂಪಲ್ ಅನ್ನು ಅಲ್ಲಿಯ ಪಶು ಸಂಗೋಪನೆ ಇಲಾಖೆ ಸಂಗ್ರಹಿಸಿದೆ. ಎರಡನೇ ಫಾರಂನಲ್ಲಿರುವ 300 ಹಂದಿಗಳಲ್ಲಿ ಕೊಲ್ಲಲು ಆದೇಶ ನೀಡಿದೆ.

ಹಂದಿ ಜ್ವರ ಹರಡುವುದನ್ನು ತಡೆಗಟ್ಟಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಕೇರಳದ ಆರೋಗ್ಯ ಇಲಾಖೆ ಹೇಳಿದೆ.

ಆಫ್ರಿಕನ್‌ ಹಂದಿ ಜ್ವರ ತುಂಬಾ ಅಪಾಯಕಾರಿ

ಆಫ್ರಿಕನ್‌ ಹಂದಿ ಜ್ವರ ತುಂಬಾ ಅಪಾಯಕಾರಿ

ಆಫ್ರಿಕನ್‌ ಹಂದಿ ಜ್ವರ ತುಂಬಾ ಅಪಾಯಕಾರಿಯಾಗಿದೆ. ಈ ವೈರಸ್‌ ಸಾಕು ಹಂದಿಗಳ ಮೇಲೆ ಪ್ರಭಾವ ಬೀರುವುದು.

ಹೆದರಬೇಕಾಗಿಲ್ಲ

* ಹಂದಿ ಜ್ವರದ ಬಗ್ಗೆ ಆತಂಕ ಬೇಡ, ಹಂದಿ ಜ್ವರ ತಡೆಗಟ್ಟಲು ಎಲ್ಲಾ ಮುನ್ನೆಚ್ಚರಿಕೆವಹಿಸಲಾಗಿದೆ ಎಂದು ಕೇರಳ ಸರ್ಕಾರ ಹೇಳಿದೆ.

* ಹಂದಿ ಜ್ವರಕ್ಕೆ ಯಾವುದೇ ಔಷಧಿಯಿಲ್ಲ.

* ಕೇಂದ್ರ ಸರ್ಕಾರ ಕೂಡ ಹಂದಿ ಜ್ವರ ತಡೆಗಟ್ಟಲು ಎಲ್ಲಾ ವ್ಯವಸ್ಥೆ ಮಾಡುವಂತೆ ಸೂಚಿಸಿದೆ.

ಹಂದಿಗಳಲ್ಲಿ ಹಂದಿ ಜ್ವರದ ಲಕ್ಷಣಗಳು ಕಂಡು ಬಂದರೆ ಇಲ್ಲಿಗೆ ಮಾಹಿತಿ ನೀಡುವಂತೆ ಕೇರಳ ಸರ್ಕಾರ ಸೂಚಿಸಿದೆ.

The control room, working at the Kudappanakkunnu Animal Diseases Control Project office, can be conta...

ಕರ್ನಾಟಕವೂ ಮುನ್ನೆಚ್ಚರಿಕೆವಹಿಸಬೇಕು

ಕುಟ್ಟ- ಮಾನಂದವಾಡಿ ಕರ್ನಾಟಕದ ಕೊಡಗಿಗೆ ಸಮೀಪವಾಗಿದೆ, ಆದ್ದರಿಂದ ಈ ಭಾಗದಲ್ಲೂ ಎಚ್ಚರಿಕೆ ವಹಿಸಬೇಕಾಗಿದೆ.

ಯಾರಿಗೆ ಅಪಾಯ ಹೆಚ್ಚು?

ಯಾರಿಗೆ ಅಪಾಯ ಹೆಚ್ಚು?

ಹಂದಿ ಜ್ವರ ಹೆಚ್ಚಾಗಿ 5 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ವಯಸ್ಸಾದವರಿಗೆ ಬೇಗ ತಗುಲುತ್ತದೆ. ಇವರುಗಳು ಹೃದಯ ಸಮಸ್ಯೆ, ಮತ್ತಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು.

ಇದರಲ್ಲಿ ಎ ಮತ್ತು ಬಿ ಟೈಪ್ ಕಾಯಿಲೆಯನ್ನು ಮನೆಯಲ್ಲೇ ಗುಣಪಡಿಸಬಹುದು, ಅದೇ ಸಿ ಟೈಪ್‌ ಆಗಿದ್ದರೆ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಬೇಕು.

 ಹಂದಿಜ್ವರದ ಲಕ್ಷಣಗಳೇನು?

ಹಂದಿಜ್ವರದ ಲಕ್ಷಣಗಳೇನು?

ಇದೊಂದು ಸಾಂಕ್ರಾಮಿಕ ರೋಗವಾಗಿದೆ. ಗಾಳಿಯ ಮೂಲಕ ಕೂಡ ರೋಗಾಣುಗಳು ಹರಡುತ್ತವೆ.

* ವಿಪರೀತ ಕೆಮ್ಮು, ಜ್ವರ, ಗಂಟಲು ಕೆರೆತ, ಮೈಕೈ ನೋವು, ಸುಸ್ತು, ತಲೆನೋವು ಮತ್ತು ವಾಂತಿ ಮತ್ತು ಬೇಧಿ ಇದರ ಲಕ್ಷಣವಾಗಿದೆ.

* ಈ ವೈರಸ್ ಪೀಡಿತ ಹಂದಿಯ ಮಾಂಸವನ್ನು ಸರಿಯಾಗಿ ಸ್ವಚ್ಛಗೊಳಿಸದೇ ಅಥವಾ ಬೇಯಿಸದೇ ತಿಂದರೆ ರೋಗ ಸಂಭವವಿರುತ್ತದೆ. ಆದ್ದರಿಂದ ಹಂದಿ ಮಾಂಸ ಚೆನ್ನಾಗಿ ಬೇಯಿಸಿ ತಿನ್ನಿ.

* ಹಂದಿಜ್ವರ ರೋಗ ತಗುಲಿದ ವ್ಯಕ್ತಿಯ ಜೊಲ್ಲು, ಸೀನಿನ ಮೂಲಕ ಸಿಡಿದ ದ್ರವ ಆಹಾರ ವಸ್ತುಗಳಿಗೆ ಸೇರಿದರೆ ಸೋಂಕು ಹರಡುವುದು.

* ಮಾಸ್ಕ್‌ ಧರಿಸಿ

ತಡೆಗಟ್ಟುವುದು ಹೇಗೆ?

ತಡೆಗಟ್ಟುವುದು ಹೇಗೆ?

* ಬಿಸಿನೀರನ್ನು ಸೇವಿಸುವುದು,

*ಸಣ್ಣ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು, ನೀರಿನಲ್ಲಿ ಆಡಲು ಬಿಡಬಾರದು ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

* ಪ್ರವಾಸಿತಾಣಗಳಿಗೆ ಹೋಗುವಾಗ, ಆಸ್ಪತ್ರೆಗಳಿಗೆ ಭೇಟಿ ನೀಡುವಾಗ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ವೇಳೆ ಮಾಸ್ಕ್ ಧರಿಸಬೇಕು.

* ಮನೆಯಲ್ಲಿ ಯಾರಿಗಾದರೂ ಎಚ್1ಎನ್1 ಸೋಂಕಿದರೆ ಇತರೆ ಸದಸ್ಯರು ಮಾಸ್ಕ್‌ಗಳನ್ನು ಧರಿಸಬೇಕು. ಅವರನ್ನು ಆರೈಕೆ ಮಾಡುವವರು ಹೆಚ್ಚು ಮುನ್ನೆಚ್ಚರಿಕೆವಹಿಸಬೇಕು.

* ಸೋಂಕು ತಗುಲಿದವರನ್ನು ಐಸೋಲೇಟ್ ಮಾಡಿ ಚಿಕಿತ್ಸೆ ನೀಡಿ.

* ಈ ರೋಗದ ಸೋಂಕಿರುವ ಸ್ಥಳಗಳಲ್ಲಿ ಮೂಗು, ಬಾಯಿಯನ್ನು ಕರವಸ್ತ್ರ ಅಥವಾ ಮಾಸ್ಕ್‌ನಿಂದ ಮುಚ್ಚಿಕೊಳ್ಳಬೇಕು.

ಕೈ ತೊಳೆಯದೆ ಯಾವುದೇ ಆಹಾರ ಸೇವನೆ ಮಾಡಬಾರದು. ಜ್ವರದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಮೇರೆಗೆ ಔಷಧ ತೆಗೆದುಕೊಳ್ಳಬೇಕು.

English summary

African Swine Fever Reported In Kerala's Wayanad; Know Signs, Symptoms and Prevention in kannada

Very Dangerous African swine fever reported in Kerala's Wayanad; Know Signs, Symptoms and Prevention in kannada...
Story first published: Friday, July 22, 2022, 20:38 [IST]
X
Desktop Bottom Promotion