Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ವಿಶ್ವದಲ್ಲಿಯೇ ಮೊದಲ ಕೊರೊನಾ ಲಸಿಕೆ ಪಡೆದ 90 ವರ್ಷದ ವೃದ್ಧೆ
ಇಡೀ ಜಗತ್ತನ್ನು ಸಂಕಷ್ಟಕ್ಕೆ ತಳ್ಳಿದ್ದ ಕೊರೋನಾ ವೈರಸ್‌ಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿದೆ. ಅವುಗಳಲ್ಲಿ ಸಾಕಷ್ಟು ಲಸಿಕೆಗಳು ಯಶಸ್ಸಿನತ್ತ ಸಾಗುತ್ತಿದೆ. ಈ ಪೈಕಿ ಅಮೆರಿಕದ ಫೈಜರ್ ಲಸಿಕೆಯೂ ಒಂದು. ಕಳೆದ ವಾರವಷ್ಟೇ ಈ ಲಸಿಕೆಯ ತುರ್ತು ಬಳಕೆಗೆ ಅನುಮತಿ ದೊರೆತಿದ್ದು, ಸದ್ಯ ಈ ಲಸಿಕೆಯನ್ನು ಜಗತ್ತಿನಲ್ಲಿಯೇ ಪ್ರಫ್ರಥಮ ಬಾರಿಗೆ ಅಮೆರಿಕದ ಹಿರಿಯ ವೃದ್ಧೆಗೆ ನೀಡಲಾಗಿದೆ.

ಈ ಮೂಲಕ ಫೈಜರ್ ಲಸಿಕೆಯನ್ನು ಹಾಕಿಕೊಂಡ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಈ ಅಜ್ಜಿ ಪಾತ್ರರಾಗಿದ್ದಾರೆ. ಅಷ್ಟೆ ಅಲ್ಲ, ಅಮೆರಿಕವು ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ಆರಂಭಿಸಿದ ವಿಶ್ವದ ಮೊದಲ ರಾಷ್ಟ್ರವಾಗಿದೆ.
91 ವರ್ಷದ ಮಾರ್ಗರೇಟ್ ಕೀನನ್ ಹೆಸರಿನ ವ್ರಿಟಿಷ್ ಮೂಲದ ವೃದ್ಧೆಯು ಸಾಮೂಹಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಫೈಜರ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಲಸಿಕೆ ಪಡೆದ ಅಜ್ಜಿ ಹರ್ಷ ವ್ಯಕ್ತಪಡಿಸಿದ್ದು, ಇಡೀ ವಿಶ್ವದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡ ಮೊದಲ ವ್ಯಕ್ತಿಯಾಗಿದ್ದು ನನ್ನ ಅದೃಷ್ಠ. ನನ್ನ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ನೀಡಿದ ಉತ್ತಮ ಉಡುಗೊರೆ. ಇದ್ರಿಂದ ನಾನು ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮತ್ತಷ್ಟು ಸಮಯ ಕಳೆಯುವ ಅವಕಾಶ ದೊರೆತಿದೆ' ಎಂದು ಹೇಳಿದ್ದಾರೆ.
ಮುಂದಿನ ವಾರದಲ್ಲಿ ಸುಮಾರು 8ಲಕ್ಷ ಡೋಸ್‌ಗಷ್ಟು ಲಸಿಕೆ ಬಿಡುಗಡೆಯಾಗಲಿದ್ದು, ಈ ತಿಂಗಳ ಕೊನೆಗೆ 4ಮಿಲಿಯನ್‌ನಷ್ಟು ಲಸಿಕಯೆನ್ನು ತಯಾರು ಮಾಡುವ ನಿರೀಕ್ಷೆಯಿದೆ ಅಂತ ಫೈಜರ್ ಲಸಿಕಾ ಕಂಪನಿ ಹೇಳಿದೆ.
ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದ ಇಂಗ್ಲೆಂಡಿನ ಎನ್‌ಎಚ್‌ಎಸ್‌ನ ನಿರ್ದೇಶಕರು ವೃದ್ಧೆಯ ಉತ್ಸಾಹ, ಧೈರ್ಯ, ಜೀವನ ಪ್ರೀತಿ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಆಕೆಯ ಈ ನಿರ್ಧಾರಕ್ಕೆ ಪ್ರತಿಪೂರ್ವಕವಾಗಿ ಸಿಬ್ಬಂದಿಗಳೆಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.
ಇನ್ನೂ ಕೇವಲ ಒಂದೇ ಕಡೆಯಲ್ಲಿ ಈ ಲಸಿಕಾ ವಿತರಣಾ ಕಾರ್ಯಕ್ರಮ ನಡೆದಿರಲಿಲ್ಲ. ಅಮೆರಿಕದ ವಿವಿಧ 50 ಆಸ್ಪತ್ರೆಗಳಲ್ಲಿ ಹಲವಾರು ಆರೋಗ್ಯ ಕಾರ್ಯಕರ್ತರು, ರೋಗಿಗಳಿಗೆ ಲಸಿಕೆ ಹಾಕಲಾಗಿದೆ. ಉತ್ತರ ಐರ್ಲೆಂಡ್‌ನಲ್ಲಿ ಜೊನ್ನಾಸ್ಲೋನ್, ವೇಲ್‌ನಲ್ಲಿ ಕ್ರೇಗ್ ಅಟ್ಕಿನ್ಸ್, ಸ್ಕಾಟ್‌ಲ್ಯಾಂಡ್‌ನಲ್ಲಿ ಡಾ.ಕೇಟಿ ಸ್ಟೀವರ್ಟ್ ಲಸಿಕೆ ಪಡೆದ ಮೊದಲ ವ್ಯಕ್ತಿಗಳಾಗಿದ್ದಾರೆ.
ಅದೇನಾಗಲೀ ಕೊರೊನಾದಿಂದ ಕಂಗೆಟ್ಟ ಜನತೆಗೆ ಅಂತೂ ಮುಕ್ತಿ ದೊರೆಯುವ ದಿನ ಸಮೀಪವಾಗುತ್ತಿರುವುದಂತೂ ಸತ್ಯ. ಆದಷ್ಟು ಬೇಗ ಜಗತ್ತಿನ ಎಲ್ಲರಿಗೂ ಕೊರೋನಾ ಲಸಿಕೆ ದೊರೆಯುವಂತಾಗಲೀ ಎಂಬುದು ಎಲ್ಲರ ಆಶಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
