Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವು ಬೆಳಗ್ಗೆ ಕುಡಿಯಬೇಕಾದ 9 ಆರೋಗ್ಯಕಾರಿ ಪಾನೀಯಗಳು
ಮುಂಜಾನೆ ಎದ್ದ ಬಳಿಕ ನಾವು ಮೊದಲು ಮಾಡುವಂತಹ ಕೆಲಸ ಮುಖ ತೊಳೆದು, ನೈಸರ್ಗಿಕ ಕ್ರಿಯೆಗಳನ್ನು ಪೂರೈಸಿದ ಬಳಿಕ ಅವಸರವಾಗಿ ಸ್ವಲ್ಪ ಉಪಹಾರ ಸೇವನೆ ಮಾಡಿ, ಚಾ ಅಥವಾ ಕಾಫಿಯನ್ನೋ ಕುಡಿದು ಕಚೇರಿ ಕಡೆಗೋ ಅಥವಾ ನಮ್ಮ ಉದ್ಯೋಗದತ್ತ ಸಾಗುತ್ತೇವೆ. ಆದರೆ ನಾವಿಲ್ಲಿ ಮೊದಲು ಪರಿಗಣಿಸಬೇಕಾಗಿರುವ ಅಂಶವೆಂದರೆ ನಾವು 7-8 ಗಂಟೆಗಳ ಕಾಲ ಮಲಗಿರುತ್ತೇವೆ. ಈ ವೇಳೆ ದೇವು ನಿರ್ಜಲೀಕರಣವಾಗುವುದು.

ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದರಿಂದ ನಾವು ಬೆಳಗ್ಗೆ ಮಾಡುವಂತಹ ಕೆಲವೊಂದು ಅಭ್ಯಾಸಗಳನ್ನು ಬದಲಾಯಿಸಿಕೊಂಡರೆ ಅದರಿಂದ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಯಾಕೆಂದರೆ ಕಾಫಿ ಅಥವಾ ಚಾ ಸೇವಿಸುವ ಬದಲು ನಾವು ಆರೋಗ್ಯಕರವಾಗಿರುವಂತಹ ಪಾನೀಯ ಸೇವನೆ ಮಾಡಬೇಕು. ಈ ಲೇಖನದಲ್ಲಿ ಇಂತಹ ಕೆಲವು ಪಾನೀಯಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ಯಾವುದು ಎಂದು ತಿಳಿಯಿರಿ.

ಜೀರಿಗೆ ನೀರು
ಜೀರಿಗೆ ನೀರಿನಲ್ಲಿ ಜೀರ್ಣಕ್ರಿಯೆ ಸುಧಾರಿಸುವಂತಹ ಗುಣಗಳು ಇವೆ. ಇದು ಜೀರ್ಣಕ್ರಿಯೆ ಕಿಣ್ವಗಳ ಸ್ರವಿಸುವಿಕೆಯನ್ನು ಉತ್ತೇಜಿಸಲು ನೆರವಾಗುವುದು ಮತ್ತು ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸಿ, ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವುದು. ಜೀರಿಗೆ ನೀರಿನಲ್ಲಿ ಇರುವಂತಹ ಶಕ್ತಿವರ್ಧಕ ಗುಣಗಳು ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚಿಸುವುದು ಮತ್ತು ಆಯಾಸ ನಿವಾರಿಸುವುದು.
ತಯಾರಿಸುವುದು ಹೇಗೆ?
ಒಂದು ಚಮಚ ಜೀರಿಗೆಯನ್ನು ಒಂದು ಕಪ್ ನೀರಿಗೆ ಹಾಕಿ ಬಿಸಿ ಮಾಡಿ. ಇದನ್ನು ಸೋಸಿಕೊಂಡ ಬಳಿಕ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಅಜ್ವೈನ್ ನೀರು
ಅಜ್ವೈನ್ ನಲ್ಲಿ ಇರುವಂತಹ ಥೈಮೊಲ್ ನಿಂದಾಗಿ ಇದರಲ್ಲಿ ಸಾರಸಂಗ್ರಹಿ ಗುಣಗಳು ಇವೆ. ಜೀರ್ಣಕ್ರಿಯೆಯ ಪ್ರಮುಖ ತೈಲವು ಇದಾಗಿದ್ದು, ಅಸಿಡಿಟಿ ನಿವಾರಿಸುವುದು ಮತ್ತು ತೂಕ ಕಳೆದುಕೊಳ್ಳಲು ಇದು ಸಹಕಾರಿ. ಥೈಮೊಲ್ ಹೊಟ್ಟೆಯಲ್ಲಿ ಪಿತ್ತರಸವನ್ನು ಬಿಡುಗಡೆ ಮಾಡುವುದು ಮತ್ತು ಇದು ಜೀರ್ಣಕ್ರಿಯೆ ಹೆಚ್ಚಿಸಲು ನೆರವಾಗುವುದು.
ತಯಾರಿಸುವುದು ಹೇಗೆ?
ಅರ್ಧ ಚಮಚ ಅಜ್ವೈನ್ ನ್ನು ಒಂದು ಕಪ್ ನೀರಿಗೆ ಹಾಕಿ ಮತ್ತು ಬಿಸಿ ಮಾಡಿ. ಇದು ತಣ್ಣಗಾದ ಬಳಿಕ ಸೋಸಿಕೊಂಡು ಕುಡಿಯಿರಿ.

ಮಿಶ್ರಿತ ನೀರು
ನಿಮಗೆ ಸಾಮಾನ್ಯ ನೀರು ಕುಡಿದು ಬೇಸರ ಮೂಡಿದ್ದರೆ ಆಗ ನೀವು ನೀರಿಗೆ ಗಿಡಮೂಲಿಕೆಗಳು, ಆ್ಯಪಲ್ ಸೀಡರ್ ವಿನೇಗರ್, ಸೌತೆಕಾಯಿ ಅಥವಾ ಹಣ್ಣುಗಳಾಗಿರುವ ಲಿಂಬೆ ಅಥವಾ ಕಿತ್ತಳೆಯನ್ನು ಹಾಕಿಕೊಂಡು ಕುಡಿಯಬಹುದು. ಲಿಂಬೆ ಮತ್ತು ಕಿತ್ತಳೆಯಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಸುವಂತಹ ವಿಟಮಿನ್ ಸಿ ಇದೆ. ಆ್ಯಪಲ್ ಸೀಡರ್ ವಿನೇಗರ್ ಚಯಾಪಚಯ ಕ್ರಿಯೆ ಹೆಚ್ಚಿಸುವುದು, ರಕ್ತದೊತ್ತಡ ತಗ್ಗಿಸುವುದು ಮತ್ತು ತೂಕ ಇಳಿಸಲು ಸಹಕಾರಿ. ಸೌತೆಕಾಯಿಯು ದೇಹವನ್ನು ತೇವಾಂಶದಿಂದ ಇಡುವುದು ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕುವುದು. ಗಿಡಮೂಲಿಕೆಗಳಾಗಿರುವ ತುಳಸಿ ಮತ್ತು ಪುದೀನಾದಲ್ಲಿ ಆ್ಯಂಟಿಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ.
ತಯಾರಿಸುವುದು ಹೇಗೆ?
ಒಂದು ಜಗ್ ಗೆ ನೀರು ಹಾಕಿ. ಇದಕ್ಕೆ ಯಾವುದಾದರೂ ಗಿಡಮೂಲಿಕೆ ಹಾಕಿ ಮತ್ತು 2-4 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ. ಇದು ಸುವಾಸನೆ ಹಾಗೂ ರುಚಿ ನೀಡುವುದು. ರಾತ್ರಿ ನೀಡು ನೀರಿಗೆ ಗಿಡಮೂಲಿಕೆ ಹಾಕಿ ಫ್ರಿಡ್ಜ್ ನಲ್ಲಿಟ್ಟರೆ ಬೆಳಗ್ಗೆ ಸಮಯ ವ್ಯರ್ಥವಾಗದು.

ಎಳನೀರು
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಇದರಲ್ಲಿ ಲಾರಿಕ್ ಆಮ್ಲವಿದೆ ಮತ್ತು ಇದು ಪ್ರತಿರೋಧಕ ಶಕ್ತಿ ವೃದ್ಧಿಸುವುದು, ಚಯಾಪಚಯ ಕ್ರಿಯೆಗೆ ವೇಗ ನೀಡುವುದು ಮತ್ತು ತೂಕ ಇಳಿಸಲು ನೆರವಾಗುವುದು. ಎಳನೀರಿನಲ್ಲಿ ಹಲವಾರು ವಿಟಮಿನ್ ಗಳು ಮತ್ತು ವಿದ್ಯುದ್ವಿಚ್ಛೇದ ಸಹಿತ ಹಲವಾರು ಖನಿಜಾಂಶಗಳು ಇವೆ. ಸೋಡಿಯಂ ಮತ್ತು ಪೊಟಾಶಿಯಂ ಎನ್ನುವ ಎರಡು ವಿದ್ಯುದ್ವಿಚ್ಛೇದಗಳು ಎಳನೀರಿನಲ್ಲಿದೆ. ಇದು ದೇಹವನ್ನು ತೇವಾಂಶದಿಂದ ಇಡುತ್ತದೆ.

ತರಕಾರಿ ಜ್ಯೂಸ್
ನೈಸರ್ಗಿಕವಾಗಿ ಜ್ಯೂಸ್ ಕುಡಿದರೆ ಅದರಿಂದ ಆ್ಯಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ದೇಹಕ್ಕೆ ಸಿಗುವುದು. ಜ್ಯೂಸ್ ಮೂಲಕ ತರಕಾರಿ ಸೇವನೆ ಮಾಡಿದರೆ ಪೋಷಕಾಂಶಗಳನ್ನು ದೇಹವು ಬೇಗನೆ ಹೀರಿಕೊಳ್ಳುವುದು. ಹಸಿರೆಲೆ ತರಕಾರಿಗಳಾಗಿರುವಂತಹ ಬಸಲೆ, ಪಾಲಕ ಇತ್ಯಾದಿಗಳು ದೇಹದ ಶಕ್ತಿಯ ಮಟ್ಟ ಹೆಚ್ಚಿಸುವುದು. ಕಬ್ಬಿನಾಂಶವು ಅಧಿಕವಾಗಿರುವಂತಹ ತರಕಾರಿಗಳನ್ನು ಸೇವನೆ ಮಾಡಿದರೆ ಕೋಶಗಳಿಗೆ ಆಮ್ಲಜನಕವು ಸರಬರಾಜು ಆಗುವುದು ಮತ್ತು ಬೆಳಗ್ಗೆ ನಿಶ್ಯಕ್ತಿ ದೂರವಾಗುವುದು.
ತಯಾರಿಸುವುದು ಹೇಗೆ?
ನೀವು ಬಳಸುವಂತಹ ತರಕಾರಿಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಇದನ್ನು ನೀರು ಅಥವಾ ಎಳನೀರಿನ ಜತೆಗೆ ಹಾಕಿ ಜ್ಯೂಸ್ ತಯಾರಿಸಿ.

ಗೊಜಿ ಬೆರ್ರಿ ಜ್ಯೂಸ್
ಗೊಜಿ ಬೆರ್ರಿ ಜ್ಯೂಸ್ ನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಗೊಜಿ ಬೆರ್ರಿ ಜ್ಯೂಸ್ ನಲ್ಲಿ ಹಲವಾರು ರೀತಿಯ ವಿಟಮಿನ್ ಗಳು, ಖನಿಜಾಂಸಗಳು, ಆ್ಯಂಟಿಆಕ್ಸಿಡೆಂಟ್ ಗಳು ಮತ್ತು ಎಂಟು ರೀತಿಯ ಅಮಿನೊ ಆಮ್ಲಗಳು ಇವೆ. ಬೆಳಗ್ಗೆ ಗೊಜಿ ಬೆರ್ರಿ ಜ್ಯೂಸ್ ಕುಡಿದರೆ ಅದರಿಂದ ಶಕ್ತಿಯ ಮಟ್ಟ ಹೆಚ್ಚಾಗುವುದು, ಅಥ್ಲೆಟಿಕ್ ಗಳಲ್ಲಿ ಪ್ರದರ್ಶನ ಉತ್ತಮವಾಗುವುದು, ನಿಶ್ಯಕ್ತಿ ಕಡಿಮೆಯಾಗುವುದು ಮತ್ತು ಮಾನಸಿಕ ಶಕ್ತಿಯು ವೃದ್ಧಿಸುವುದು.
ಇದನ್ನು ತಯಾರಿಸುವುದು ಹೇಗೆ?
ಒಂದು ಬ್ಲೆಂಡರ್ ಗೆ 1 ಕಪ್ ಗೊಜಿ ಬೆರ್ರಿಗಳನ್ನು ಹಾಕಿ ಮತ್ತು ಅದಕ್ಕೆ 600 ಮಿ.ಲೀ. ಎಳನೀರು ಹಾಕಿ ಜ್ಯೂಸ್ ಮಾಡಿ.

ಅಲೋವೆರಾ ಜ್ಯೂಸ್
ಅಲೋವೆರಾ ಜ್ಯೂಸ್ ನಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಜಠರಗರುಳಿನ ಉರಿಯೂತವನ್ನು ಇದು ಕಡಿಮೆ ಮಾಡುವುದು. ಕೆರಳಿಸುವ ಕರುಳಿನ ಸಹಲಕ್ಷಣ(ಐಬಿಡಿ) ಸಮಸ್ಯೆ ಇರುವವರಿಗೆ ಇದು ತುಂಬಾ ಸಹಕಾರಿಯಾಗಿದೆ. ಇದು ಕೆಟ್ಟ ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ, ಮಲಬದ್ಧತೆ, ಅಸಿಡಿಟಿ, ಗ್ಯಾಸ್ ಮತ್ತು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುವುದು.
ತಯಾರಿಸುವುದು ಹೇಗೆ?
ಅಲೋವೆರಾ ಎಲೆ ಸೀಳಿಕೊಂಡು ಅದರ ಲೋಳೆ ತೆಗೆಯಿರಿ. ಎರಡು ಚಮಚ ಅಲೋವೆರಾ ಲೋಳೆಯನ್ನು ತೆಗೆದುಕೊಂಡು ಮಿಕ್ಸಿಗೆ ಹಾಕಿ. ಇದಕ್ಕೆ ಮೂರು ಚಮಚ ನೀರು ಹಾಕಿ ಜ್ಯೂಸ್ ತಯಾರಿಸಿ.

ಶುಂಠಿ ಚಹಾ
ಶುಂಠಿಯಲ್ಲಿ ಜಿಂಜರಾಲ್ ಎನ್ನುವ ಅಂಶವಿದ್ದು, ಬೆಳಗ್ಗೆ ಶುಂಠಿ ಚಾ ಕುಡಿದರೆ ಅದರಿಂದ ಭೇದಿ ಮತ್ತು ಹೊಟ್ಟೆಯ ಸಮಸ್ಯೆ ನಿವಾರಣೆ ಮಾಡಬಹುದು. ಶುಂಠಿಯು ಸ್ನಾಯುಗಳ ನೋವು ಮತ್ತು ಊತ ಕಡಿಮೆ ಮಾಡುವುದು. ವ್ಯಾಯಾಮದ ಬಳಿಕ ನೀವು ಶುಂಠಿ ಚಾ ಕುಡಿದರೆ ಅದರಿಂದ ನಿಮಗೆ ನೆರವಾಗುವುದು.
ತಯಾರಿಸುವುದು ಹೇಗೆ?
ಶುಂಠಿ ಸಿಪ್ಪೆ ತೆಗೆದುಕೊಂಡು ಅದನ್ನು ತುರಿಯಿರಿ ಮತ್ತು ಒಂದು ಕಪ್ ನೀರಿಗೆ ಹಾಕಿ. ಇದನ್ನು ಬಿಸಿ ಮಾಡಿ ಮತ್ತು ಒಂದು ಲಿಂಬೆಯ ರಸ ಇದಕ್ಕೆ ಹಾಕಿ. ಸೋಸಿಕೊಂಡು ಬಳಿಕ ಕುಡಿಯಿರಿ.

ಟೊಮೆಟೋ ಜ್ಯೂಸ್
ದಿನದ ಆರಂಭವನ್ನು ಉತ್ತಮ ರೀತಿಯಲ್ಲಿ ಮಾಡಬೇಕಾದರೆ ಟೊಮೆಟೋ ಜ್ಯೂಸ್ ಕುಡಿಯಬೇಕು. ಟೊಮೆಟೋ ದಲ್ಲಿ ಶೇ.95ರಷ್ಟು ನೀರಿನಾಂಶವಿದೆ ಮತ್ತು ಇದು ದೇಹವನ್ನು ತೇವಾಂಶದಿಂದ ಇಡುವುದು. ಇದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತೇಜಿಸಿ, ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು. ಇದರಲ್ಲಿ ಇರುವಂತಹ ವಿಟಮಿನ್ ಎ ಮತ್ತು ಸಿ ಯು ಸೋಂಕಿನ ವಿರುದ್ಧ ಹೋರಾಡುವುದು. ಇದು ದೇಹವನ್ನು ನಿರ್ವಿಷಗೊಳಿಸುವ ಪ್ರಮುಖ ಪಾನೀಯವಾಗಿದೆ.
ತಯಾರಿಸುವುದು ಹೇಗೆ?
ಒಂದು ಟೊಮೆಟೋ ತುಂಡು ಮಾಡಿ ಮತ್ತು ಮೂರು ಕಪ್ ನೀರನ್ನು ಮಿಕ್ಸಿಗೆ ಹಾಕಿ. ಕೆಲವು ಹನಿ ಲಿಂಬೆರಸ ಹಾಕಿಕೊಂಡು ಸರಿಯಾಗಿ ರುಬ್ಬಿಕೊಳ್ಳಿ. ಸೋಸಿಕೊಂಡು ಜ್ಯೂಸ್ ತೆಗೆಯಿರಿ.



Click it and Unblock the Notifications











