ಕನೋಲಾ ಎಣ್ಣೆಯ ಆರೋಗ್ಯ ಲಾಭಗಳು

By: Hemanth Amin
Subscribe to Boldsky

ಭಾರತೀಯರಾದ ನಾವು ಹೆಚ್ಚಾಗಿ ಅಡುಗೆ ಹಾಗೂ ಇತರೆಡೆಗಳಲ್ಲಿ ಬಳಸುವುದು ತೆಂಗಿನೆಣ್ಣೆ, ಸಾಸಿವೆ, ನೆಲಗಡಲೆ, ಸೂರ್ಯಕಾಂತಿ ಎಣ್ಣೆ ಇತ್ಯಾದಿಗಳನ್ನು. ಇತ್ತೀಚಿನ ದಿನಗಳಲ್ಲಿ ಮಾಲ್ ಗಳಲ್ಲಿ ಸಿಗುವಂತಹ ಆಲಿವ್ ತೈಲವು ಭಾರತೀಯ ಅಡುಗೆ ಮನೆಗಳನ್ನು ಸೇರಿಸಿಕೊಂಡಿದೆ. ಆದರೆ ಕನೋಲಾ ಎಣ್ಣೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಯಾಕೆಂದರೆ ಇದು ಕನೋಲಾ ಬೀಜ(ವೈಜ್ಞಾನಿಕವಾಗಿ ಬ್ರಾಸ್ಸಿಕ ನೇಪಸ್) ತಯಾರಿಸಲಾಗುತ್ತದೆ. ಕಳೆದ ಒಂದು ದಶಕದಿಂದ ಇದನ್ನು ಆರೋಗ್ಯವರ್ಧಕ ಎಣ್ಣೆಯೆಂದು ಪರಿಗಣಿಸಲಾಗಿದೆ. ಕನೋಲಾ ಎಣ್ಣೆಯಲ್ಲಿ ಆಲ್ಫಾ-ಲಿನೋಲೆನಿಕ್ ಮತ್ತು ಲಿನೋಲಿಯಿಕ್ ಆಮ್ಲವಿದೆ. ಇದರಲ್ಲಿ ಪ್ರಮುಖವಾಗಿ ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲವಿದ್ದು, ಇದು ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ.

ಕನೋಲಾ ಎಣ್ಣೆಯನ್ನು ಅಡುಗೆ ಮಾಡಲು, ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಬಯಸಬಹುದು. ಇದು ರೋಗ ನಿವಾರಣೆ ಮಾಡುವುದು ಮಾತ್ರವಲ್ಲದೆ, ರೋಗ ಬರದಂತೆ ಕಾಪಾಡುವ ಗುಣ ಹೊಂದಿದೆ. ಇದರ ಹಲವಾರು ಗುಣಗಳಿಂದಾಗಿ ಇದನ್ನು ವೈವಿಧ್ಯದ ಎಣ್ಣೆಯೆಂದು ಪರಿಗಣಿಸಲಾಗಿದೆ. ಕನೋಲಾ ಎಣ್ಣೆ ಬಳಸಿಕೊಂಡು ಯಾವ ರೀತಿ ಆರೋಗ್ಯ ಪಡೆಯಬಹುದು ಎಂದು ನೀವು ಈ ಲೇಖನ ಮೂಲಕ ತಿಳಿದುಕೊಳ್ಳಬಹುದು.

ಆರೋಗ್ಯಕರ ಹೃದಯಕ್ಕೆ

ಆರೋಗ್ಯಕರ ಹೃದಯಕ್ಕೆ

ಕನೋಲಾ ಎಣ್ಣೆಯು ಹೃದಯಕ್ಕೆ ತುಂಬಾ ಆರೋಗ್ಯಕಾರಿ ಎಣ್ಣೆಯೆಂದು ಪರಿಗಣಿಸಲಾಗಿದೆ. ಇದರಲ್ಲಿ ಇರುವಂತಹ ಸ್ಯಾಚುರೇಟೆಡ್ ಕೊಬ್ಬು ಆರೋಗ್ಯಕಾರಿ ಹೃದಯಕ್ಕೆ ತುಂಬಾ ಒಳ್ಳೆಯದು. ಕೊಬ್ಬಿನಾಮ್ಲಗಳು ಮತ್ತು ಸ್ಟೆರಾಲ್‌ಗಳು ಆರೋಗ್ಯಕರ ಹೃದಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ. ಇದು ಕೊಲೆಸ್ಟ್ರಾಲ್‌ನಿಂದ ಮುಕ್ತವಾಗಿರುವ ಕಾರಣದಿಂದ ಇದು ಆರೋಗ್ಯಕರ ಆಯ್ಕೆ. ಈ ಎಣ್ಣೆಯಲ್ಲಿ ಇರುವಂತಹ ಪೈಥೋಸ್ಟೆರೊಲ್ಸ್, ಇತರ ಆಹಾರದಿಂದ ದೇಹದಲ್ಲಿ ಜಮೆಯಾಗುವ ಮತ್ತು ಹೀರಿಕೊಳ್ಳುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು.

ಉರಿಯೂತ ಕುಗ್ಗಿಸುವುದು

ಉರಿಯೂತ ಕುಗ್ಗಿಸುವುದು

ಕನೋಲಾ ಎಣ್ಣೆಯು ಉರಿಯೂತವನ್ನು ಕಡಿಮೆ ಮಾಡುವುದು ಇದು ಅಸ್ತಮಾ ಮತ್ತು ಸಂಧಿವಾತವನ್ನು ನಿವಾರಿಸುವುದು. ಗಂಟಿನ ಸೆಳೆತವನ್ನು ನಿವಾರಿಸಿ ಚಲಶೀಲತೆ ಸುಧಾರಿಸುವುದು.

ಶಕ್ತಿಯ ಮಟ್ಟ ಹೆಚ್ಚಿಸುವುದು

ಶಕ್ತಿಯ ಮಟ್ಟ ಹೆಚ್ಚಿಸುವುದು

ಈ ಎಣ್ಣೆಯು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಶಕ್ತಿಯ ಮಟ್ಟ ಕಡಿಮೆಯಾಗದಂತೆ ನೋಡಿಕೊಳ್ಳುವುದು ಮತ್ತು ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲ.

ಕ್ಯಾನ್ಸರ್ ಅಪಾಯ ಕಡಿಮೆಗೊಳಿಸುವುದು

ಕ್ಯಾನ್ಸರ್ ಅಪಾಯ ಕಡಿಮೆಗೊಳಿಸುವುದು

ಕನೋಲಾ ಎಣ್ಣೆಯು ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಕನೋಲಾ ಎಣ್ಣೆಯಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ಕ್ಯಾನ್ಸರ್ ಬರದಂತೆ ತಡೆಯುವುದು ಮತ್ತು ದೇಹದಲ್ಲಿ ರೋಗದ ಲಕ್ಷಣಗಳನ್ನು ನಿವಾರಿಸುವುದು.

ರಕ್ತದಲ್ಲಿನ ಸಕ್ಕರೆ ಮಟ್ಟ ಕುಗ್ಗಿಸುವುದು

ರಕ್ತದಲ್ಲಿನ ಸಕ್ಕರೆ ಮಟ್ಟ ಕುಗ್ಗಿಸುವುದು

ಕನೋಲಾ ಎಣ್ಣೆಯ ಬಳಕೆಯಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿ ಇರುವುದು ಕಂಡುಬಂದಿದೆ. ಮಧುಮೇಹಿಗಳು ಕನೋಲಾ ಎಣ್ಣೆಯನ್ನು ಬಳಕೆ ಮಾಡಿಕೊಂಡ ಬಳಿಕ ಅವರ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಕುಸಿದಿದೆ. ಇದರಲ್ಲಿ ಮೊನೊಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು.

ಮರೆವು ತಡೆಯುವುದು

ಮರೆವು ತಡೆಯುವುದು

ಕನೋಲಾ ತೈಲದ ಮತ್ತೊಂದು ಉಪಯೋಗವೆಂದರೆ ಇದರಲ್ಲಿರುವಂತಹ ಅಂಶಗಳು ಮೆದುಳಿನ ಆರೋಗ್ಯ ಹೆಚ್ಚಿಸುವುದು ಮತ್ತು ಮೆದುಳಿಗೆ ವಯಸ್ಸಾಗದಂತೆ ತಡೆಯುವುದು.

ಚರ್ಮದ ಆರೋಗ್ಯ

ಚರ್ಮದ ಆರೋಗ್ಯ

ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಕನೋಲಾ ಎಣ್ಣೆಯು ಪರಿಣಾಮಕಾರಿ. ಇದರಲ್ಲಿ ಇರುವಂತಹ ಕೊಬ್ಬಿನಾಮ್ಲವು ಚರ್ಮವು ಪೋಷಣೆ ಮತ್ತು ಮಾಯಿಶ್ಚರೈಸ್ ಆಗಿ ಇರುವಂತೆ ಮಾಡುವುದು. ಒಣ ಚರ್ಮಕ್ಕೆ ಇದು ಒಳ್ಳೆಯದು. ನೆರಿಗೆ, ಚರ್ಮದ ಸೋಂಕು ಮುಂತಾದ ಸಮಸ್ಯೆಗಳಿಗೆ ಕನೋಲಾ ತೈಲ ಬಳಸಿಕೊಳ್ಳಲಾಗುತ್ತದೆ. ಕನೋಲಾ ತೈಲದಲ್ಲಿರುವ ವಿಟಮಿನ್ ಇ ಮತ್ತು ಆ್ಯಂಟಿಆಕ್ಸಿಡೆಂಟ್ ಚರ್ಮವನ್ನು ಕಾಂತಿಯುವ ಹಾಗೂ ಯೌವನಭರಿತವಾಗಿಸುವುದು.

ಸುಂದರ ಕೂದಲಿನ ವಿನ್ಯಾಸ ಮತ್ತು ಗುಣಮಟ್ಟಕ್ಕೆ

ಸುಂದರ ಕೂದಲಿನ ವಿನ್ಯಾಸ ಮತ್ತು ಗುಣಮಟ್ಟಕ್ಕೆ

ಕನೋಲಾ ಎಣ್ಣೆಯಲ್ಲಿರುವ ನೈಸರ್ಗಿಕ ಗುಣಗಳಿಂದ ಇದು ಕೂದಲು ಮತ್ತು ತಲೆಬುರುಡೆಗೆ ಪೋಷಣೆ ನೀಡುವುದು. ಇದರಿಂದ ತಲೆಹೊಟ್ಟು, ಒಣಕೂದಲು ನಿವಾರಿಸಬಹುದು. ಕನೋಲಾ ಎಣ್ಣೆಯನ್ನು ತಲೆಬುರುಡೆಗೆ ಆಳವಾಗಿ ಹಚ್ಚಿಕೊಳ್ಳಬೇಕು. ಇದರಿಂದ ಕೂದಲಿನ ಗುಣಮಟ್ಟ ಸುಧಾರಣೆಯಾಗುವುದು. ಇದು ಕೂದಲಿನ ಬೆಳವಣೆಗೆ ಹೆಚ್ಚಿಸಿ ಕೂದಲು ಉದುರುವಿಕೆ ಕಡಿಮೆ ಮಾಡುವುದು. ಕೂದಲಿಗೆ ಬೇರೆ ಎಣ್ಣೆ ಬಳಸುವವರು ಕನೋಲಾ ಎಣ್ಣೆಯನ್ನು ಇನ್ನು ಮುಂದಕ್ಕೆ ಬಳಸಬಹುದು. ಕನೋಲಾ ಎಣ್ಣೆಯನ್ನು ಬಳಸುವುದು ತುಂಬಾ ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಆಯ್ಕೆಯಾಗಿದೆ.

ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.

English summary

8 Health Benefits Of Canola Oil

Canola oil is used for cooking as well as for maintaining overall health, which includes hair and skin health. The oil not only has curative properties but is also known for its disease prevention capabilities. Considering its overall usage and benefits, it is termed as a versatile oil, which can be an ideal choice to switch over. So, here are some of the health benefits which you can derive with the usage of canola oil.
Subscribe Newsletter