Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಯಸ್ಸಾದ ಮೇಲೆ ನಶೆ ಏಕೆ ಮಿತಿ ಮೀರುತ್ತದೆ?
ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡು ನೀವು ಕೇಳಿರುತ್ತೀರಿ. ನಶೆ ಏರಿದರೆ ಹುಡುಗಿಯರು ಸಹ ಗಂಡುಗಳಾಗುತ್ತಾರೆ ಎಂದ ಮೇಲೆ ವಯಸ್ಸಾದವರಿಗೆ ನಶೆ ಏರಿದರೆ ಹೇಗಿರುತ್ತದೆ. ಅವರ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಖಚಿತಪಡಿಸಿವೆ. ಹೌದು, ಯಾರಿಗೆ ಆಗಲಿ ಕುಡಿದ ಮೇಲೆ ಅದರ ಹ್ಯಾಂಗೋವರ್ ಹತ್ತುವುದು ಸಹಜ.
ಅದರಲ್ಲಿಯೂ ವಯಸ್ಸಾದವರಿಗೆ ತಮ್ಮ ದೇಹದ ಅಂಗಾಂಗಗಳ ಮೇಲೆ ನಿಯಂತ್ರಣವು ಕಡಿಮೆಯಾಗಿರುತ್ತದೆ. ಆ ಸಮಯದಲ್ಲಿ ಅವರ ಕರುಳು ಸಹ ನಿಮ್ಮ ಹಿಂದಿನ ಸಾಮರ್ಥ್ಯದಷ್ಟು ಆಲ್ಕೋಹಾಲ್ ಅನ್ನು ತಾಳಿಕೊಳ್ಳುವುದಿಲ್ಲ. ಅದರ ಜೊತೆಗೆ ನಿಮ್ಮ ಸ್ನಾಯುಗಳ ಸಾಮರ್ಥ್ಯ, ದೇಹದಲ್ಲಿನ ಅಧಿಕ ಕೊಬ್ಬು ಮತ್ತು ಆಲ್ಕೋಹಾಲನ್ನು ಕರಗಿಸುವ ಕಿಣ್ವಗಳ ಸಾಮರ್ಥ್ಯ ಕಡಿಮೆಯಾಗಿರುವುದು ಎಲ್ಲವೂ ಸೇರಿ ನಿಮ್ಮ ಹ್ಯಾಂಗೋವರನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತವೆ.

ಮತ್ತೊಂದು ಅಂಶವು ಸಹ ನಿಮ್ಮ ಪರಿಸ್ಥಿತಿಯ ಮೇಲೆ ಪರಿಣಾಮವನ್ನು ಬೀರುತ್ತದೆ, ಅದೇ ಔಷಧಿಗಳು. ಹೌದು, ವಯಸ್ಸಾದವರು ವಯೋಸಹಜ ಕಾಯಿಲೆಗಳಿಗಾಗಿ ಕೆಲವೊಂದು ಔಷಧಿಗಳನ್ನು ಸೇವಿಸುವುದು ಸಹಜ. ಅವುಗಳಲ್ಲಿ ಕೆಲವು ಆಲ್ಕೋಹಾಲಿನ ಜೊತೆಗೆ ಸೇರಿದಾಗ ವಿಭಿನ್ನವಾಗಿ ವರ್ತಿಸುತ್ತವೆ. ಈ ವರ್ತನೆಯ ಪರಿಣಾಮವನ್ನು ನೀವು ಹ್ಯಾಂಗೋವರಿನಲ್ಲಿ ಕಾಣಬಹುದು. ಇದರ ಜೊತೆಗೆ ತೂಕ ಕಡಿಮೆಯಾಗುವಿಕೆಯು ಸಹ ವಯಸ್ಸಾದಂತೆ ಕಾಣಿಸಿಕೊಳ್ಳುತ್ತಾ ಇರುತ್ತದೆ.
ಇದು ಸಹ ಕೆಲವರಲ್ಲಿ ಅಧಿಕ ಪ್ರಮಾಣದ ನಿಶೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ನಿಮ್ಮ ಕರುಳಿನಲ್ಲಿ ಅಸಿಟಾಲ್ಡಿಹೈಡ್‌ನಂತಹ ಕೆಲವೊಂದು ಅಂಶಗಳು ಶೇಖರಣೆಗೊಂಡಾಗ, ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುತ್ತದೆ. ಒಂದು ವೇಳೆ ನೀವು ದಿನ ನಿತ್ಯ ಕುಡಿಯುತ್ತಿದ್ದಲ್ಲಿ, ಕಾಲಾನುಕ್ರಮೇಣ ಈ ಅಂಶಗಳು ನಿಮ್ಮ ಕರುಳಿನಲ್ಲಿ ಶೇಖರಣೆಗೊಳ್ಳುತ್ತಾ ಸಾಗಿ ಮತ್ತಷ್ಟು ಅಪಾಯವನ್ನು ತಂದೊಡ್ಡುತ್ತವೆ.
ಈ ಮೇಲಿನ ದುಷ್ಪರಿಣಾಮಗಳ ಜೊತೆಗೆ ಮೆದುಳು ಸಹ ಇದರಿಂದ ಹಾಳಾಗುತ್ತದೆ. ಆಲ್ಕೋಹಾಲ್‌ನಲ್ಲಿರುವ ವಿಷಕಾರಿ ಅಂಶಗಳು ಮೆದುಳಿನ ಮೇಲೆ ಬೇಗ ಪರಿಣಾಮವನ್ನು ಬೀರುತ್ತವೆ ಮತ್ತು ವಯಸ್ಸಾದ ಮೇಲೆ ಇದು ಮತ್ತಷ್ಟು ಬಿಗಡಾಯಿಸುತ್ತದೆ. ಇದಲ್ಲದೆ ವಯಸ್ಸಾದವರು ಕಡಿಮೆ ಪ್ರಮಾಣದ ನೀರನ್ನು ಸೇವಿಸುತ್ತಾರೆ. ಹಾಗಾಗಿ ಇವರಲ್ಲಿ ನಿರ್ಜಲೀಕರಣ ಸಮಸ್ಯೆಯು ಬೇಗ ಕಾಣಿಸಿಕೊಳ್ಳುತ್ತದೆ, ಇದು ಸಹ ಹ್ಯಾಂಗೋವರ್ ಕಾಣಿಸಿಕೊಳ್ಳಲು ಪ್ರಮುಖ ಅಂಶವಾಗಿದೆ. ಹ್ಯಾಂಗೋವರ್? ಈ ವ್ಯಾಯಾಮ ಮಾಡಿ
ಸಾಮಾನ್ಯವಾಗಿ ಹ್ಯಾಂಗೋವರ್ ಎಂಬುದು ಅಧಿಕ ಪ್ರಮಾಣದ ಆಲ್ಕೋಹಾಲ್ ಸೇವನೆಯಿಂದ ಕಾಣಿಸಿಕೊಳ್ಳುವ ಒಂದು ಸ್ಥಿತಿಯಾಗಿರುತ್ತದೆ. ಇದು ಬಂದಾಗ ನಿಮಗೆ ನಾಸಿಯಾ, ತಲೆನೋವು, ಸುಸ್ತು ಮತ್ತು ವಾಂತಿ ಸಹ ಕಾಣಿಸಿಕೊಳ್ಳಬಹುದು. ಆರೋಗ್ಯ ತಜ್ಞರು ಕುಡಿಯುವ ಮೊದಲು ಮತ್ತು ನಂತರ ಚೆನ್ನಾಗಿ ಊಟ ಮಾಡಲು ಸಲಹೆ ನೀಡುತ್ತಾರೆ. ಇದರ ಜೊತೆಗೆ ಚೆನ್ನಾಗಿ ನೀರು ಕುಡಿಯುವುದು ಸಹ ಮುಖ್ಯ ಎಂದು ನೆನಪಿಸುತ್ತಾರೆ. ಹ್ಯಾಂಗೋವರ್ ಅನ್ನು ಕಡಿಮೆ ಮಾಡಿಕೊಳ್ಳಲು ಲಿಂಬೆರಸವನ್ನು ಸೇವಿಸುವುದು ಒಳ್ಳೆಯ ಪರಿಹಾರ ಎಂಬುದನ್ನು ಮರೆಯಬಾರದು.
ಯಾವಾಗ ನೀವು ಸರಿಯಾಗಿ ಊಟ ಮಾಡದೆ ಆಲ್ಕೋಹಾಲನ್ನು ಸೇವಿಸುತ್ತೀರೋ, ಆಗ ನಿಮ್ಮ ಕರುಳಿನ ಗೋಡೆಗಳಲ್ಲಿ ಕಿರಿಕಿರಿಯನ್ನುಂಟು ಮಾಡಬಹುದು. ಆದ್ದರಿಂದ ನೀವು ಮದ್ಯಪಾನವನ್ನು ಸೇವಿಸುವ ಮುನ್ನ ಸರಿಯಾಗಿ ಊಟವನ್ನು ಮಾಡಿರಬೇಕಾದುದು ಅನಿವಾರ್ಯ. ವಯಸ್ಸಾದಂತೆ, ಮತ್ತು ನಿಮ್ಮ ದೇಹದ ತೂಕವು ಕಡಿಮೆಯಾದಂತೆ ನಿಮ್ಮ ಜೀರ್ಣ ಶಕ್ತಿಗೆ ಸಹಕರಿಸುವ ಕಿಣ್ವಗಳ ಪೂರೈಕೆಯು ಕಡಿಮೆಯಾಗುತ್ತವೆ. ಇನ್ನೂ ಕುತೂಹಲಕಾರಿ ವಿಚಾರವೇನೆಂದರೆ ಗಂಡಸರಿಗಿಂತ ಹೆಂಗಸರು ಹ್ಯಾಂಗೋವರಿನ ಪರಿಣಾಮಕ್ಕೆ ಹೆಚ್ಚು ತುತ್ತಾಗುತ್ತಾರಂತೆ.
ಇಡೀ ಅಧ್ಯಯನವು ಹ್ಯಾಂಗೋವರ್‌ಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂಬುದನ್ನು ನೀವು ಗಮನಿಸಬೇಕು. ಇದಕ್ಕೆ ಇರುವುದು ಒಂದೇ ಪರಿಹಾರ ಮದ್ಯಪಾನ ಅಥವಾ ಕುಡಿತಕ್ಕೆ ಗುಡ್‌ಬೈ ಹೇಳುವುದು. ಇಲ್ಲವೇ ಹಿತ-ಮಿತವಾಗಿ, ಯಾವುದಾದರು ಸಂತೋಷಕೂಟದಲ್ಲಿ ಮಾತ್ರ ಮದ್ಯಪಾನ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


