Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ರಕ್ತ ಹೀನತೆಯ ಲಕ್ಷಣಗಳು- ನಿರ್ಲಕ್ಷಿಸಿದರೆ ಅಪಾಯ ತಪ್ಪದು!
ಕ್ಯಾನ್ಸರ್‌ನಂತಹ ಮಾರಕ ರೋಗಗಳ ಬಗ್ಗೆ ನಾವು ಕೇಳಿದ್ದೇವೆ. ಇದು ಒಂದು ರೀತಿಯಲ್ಲಿ ನಿಧಾನವಾಗಿ ಕೊಲ್ಲುವ ರೋಗ. ಯಾಕೆಂದರೆ ಕೆಲವು ವಿಧದ ಕ್ಯಾನ್ಸರ್ ಅಂತಿಮ ಘಟ್ಟ ತಲುಪುವ ತನಕ ಅದರ ಲಕ್ಷಣಗಳು ಕಾಣಿಸುವುದೇ ಇಲ್ಲ. ಇನ್ನು ಕೆಲವನ್ನು ಬೇಗನೆ ಪತ್ತೆ ಹಚ್ಚ ಬಹುದಾಗಿದೆ.
ಕ್ಯಾನ್ಸರ್‌ನಂತೆ ಇತರ ಕೆಲವು ರೋಗಗಳು ತಮ್ಮ ಲಕ್ಷಣಗಳನ್ನು ಆರಂಭದಲ್ಲೇ ತೋರಿಸುವುದಿಲ್ಲ ಮತ್ತು ಅದು ನಮಗೆ ಗೊತ್ತಾಗುವುದೂ ಇಲ್ಲ. ಇಂತಹ ರೋಗಗಳ ಬಗ್ಗೆ ನಾವು ಅತಿಯಾದ ಎಚ್ಚರಿಕೆ ವಹಿಸಿಕೊಂಡರೆ ಒಳ್ಳೆಯದು. ಯಾವುದೇ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಅನಿಮೀಯಾ(ರಕ್ತಹೀನತೆ) ಕೂಡ ಇಂತಹ ಕಾಯಿಲೆ ಗುಂಪಿಗೆ ಸೇರಿಕೊಳ್ಳುತ್ತದೆ. ಈ ಲಕ್ಷಣಗಳು ಕಂಡು ಬಂದರೆ ರಕ್ತಹೀನತೆ ಇರಬಹುದು
ಯಾಕೆಂದರೆ ರಕ್ತಹೀನತೆಯೆಂದರೆ ರಕ್ತದಲ್ಲಿ ಆರೋಗ್ಯಕರ ಕೆಂಪುರಕ್ತದ ಕಣಗಳು ಕಡಿಮೆಯಾಗುವುದು. ಇದರಿಂದಾಗಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ರಕ್ತಹೀನತೆಗೆ ಪ್ರಮುಖ ಕಾರಣವೆಂದರೆ ಕಬ್ಬಿನಾಂಶ ಕಡಿಮೆಯಾಗುವುದು, ಗಾಯಾಳುವಾದಾಗ ಅತಿಯಾದ ರಕ್ತ ಸೋರುವಿಕೆ, ಮುಟ್ಟಿನ ವೇಳೆ ಅತಿಯಾದ ರಕ್ತ ಸ್ರಾವ, ಕಳಪೆ ಪೋಷಕಾಂಶ, ಅನುವಂಶೀಯತೆ ಇತ್ಯಾದಿ. ರಕ್ತಹೀನತೆ ಸಮಸ್ಯೆ ಬೀಟ್ರೂಟ್ ನಿಂದ ದೂರ
ರಕ್ತಹೀನತೆ ವೇಳೆ ಕಾಣಿಸಿಕೊಳ್ಳುವಂತಹ ಪ್ರಮುಖ ಲಕ್ಷಣಗಳೆಂದರೆ ಆಯಾಸ, ನಿಶ್ಯಕ್ತಿ ಮತ್ತು ಉಸಿರಾಡಲು ಕಷ್ಟವಾಗುವುದು ಇತ್ಯಾದಿ. ರಕ್ತಹೀನತೆಯ ಕೆಲವೊಂದು ಲಕ್ಷಣಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಇದನ್ನು ಗಮನಿಸಿ ಯಾವುದೇ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ....

ಚರ್ಮ ಕಳೆಗುಂದುವುದು
ರಕ್ತಹೀನತೆಯ ಪ್ರಮುಖ ಲಕ್ಷಣಗಳಲ್ಲಿ ಚರ್ಮ ಕಳೆಗುಂದುವುದು ಮತ್ತು ಮೇಣದಂತೆ ಆಗುವುದು ಮೊದಲನೇಯದಾಗಿದೆ. ಹೀಗೆ ಆದರೆ ನಿಮ್ಮ ದೇಹದಲ್ಲಿ ರಕ್ತದ ಕೊರತೆಯಿದ್ದು, ರಕ್ತಹೀನತೆಯಾಗಿದೆ ಎಂದು ತಿಳಿದುಕೊಳ್ಳಬೇಕು.

ಎದೆ ನೋವು
ಹೃದಯದ ವ್ಯವಸ್ಥೆಯು ಸರಿಯಾಗಿದ್ದರೂ ನಿಮ್ಮ ಎದೆಯಲ್ಲಿ ಆಗಾಗ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಕೆಂಪುರಕ್ತದ ಕಣಗಳ ಕೊರತೆಯಿಂದಾಗಿ ನಿಮ್ಮ ಹೃದಯವು ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಯಬೇಕು.

ಗರ್ಭಧಾರಣೆ-ಇದೊಂದು ಕಾರಣ, ಲಕ್ಷಣವಲ್ಲ
ಗರ್ಭಧಾರಣೆಯ ಆರಂಭಿಕ ಕೆಲವು ತಿಂಗಳಲ್ಲಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಾರೆ. ಗರ್ಭಧಾರಣೆಯು ರಕ್ತಹೀನತೆಗೆ ಕಾರಣವಲ್ಲ, ಇದು ರಕ್ತಹೀನತೆಗೆ ಒಂದು ಕಾರಣ.

ಮೂಲವ್ಯಾಧಿ
ಮೂಲವ್ಯಾಧಿ ಅಥವಾ ಹೊಟ್ಟೆಯ ಅಲ್ಸರ್ ನಿಂದ ಬಳಲುತ್ತಿರುವವರಲ್ಲಿ ರಕ್ತಹೀನತೆ ಕಂಡುಬರುತ್ತದೆ. ಯಾಕೆಂದರೆ ಇಂತಹ ಸಮಸ್ಯೆಯಲ್ಲಿ ಕರುಳಿನಲ್ಲಿ ರಕ್ತಸ್ರಾವಾಗುತ್ತಾ ಇರುತ್ತದೆ.

ಹೃದಯಬಡಿತ ಹೆಚ್ಚಾಗುವಿಕೆ
ಕಾರಣವಿಲ್ಲದೆ ಹೃದಯಬಡಿತ ಅಥವಾ ನಾಡಿಬಡಿತವು ಹೆಚ್ಚಾಗುತ್ತಿದ್ದರೆ ನಿಮಗೆ ರಕ್ತಹೀನತೆ ಇದೆಯೆಂದರ್ಥ. ರಕ್ತಹೀನತೆಯಿಂದಾಗಿ ಹೃದಯವು ಸಾಕಷ್ಟು ರಕ್ತ ಪಡೆಯದೆ ಹೀಗೆ ಆಗಬಹುದು.

ಹಿಮೋಗ್ಲೋಬಿನ್ ಮಟ್ಟ ತಗ್ಗುವುದು
ಸಾಮಾನ್ಯಕ್ಕಿಂತ ಹಿಮೋಗ್ಲೋಬಿನ್ ಮಟ್ಟವು ಕಡಿಮೆಯಿದೆ ಎಂದಾದರೆ ರಕ್ತಹೀನತೆ ಇದೆ ಎನ್ನಬಹುದು. ಇದಕ್ಕೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು.

ಒಡೆದ ಉಗುರುಗಳು
ರಕ್ತಹೀನತೆ ಸಹಿತ ಹಲವಾರು ರೋಗಗಳ ಲಕ್ಷಣಗಳನ್ನು ಒಡೆದ ಉಗುರುಗಳು ತೋರಿಸುತ್ತದೆ. ನಿಮ್ಮ ಉಗುರುಗಳು ಒಡೆದಿದೆ ಎಂದಾದರೆ ರಕ್ತಹೀನತೆಯನ್ನು ಪರೀಕ್ಷಿಸಿಕೊಳ್ಳಿ.



Click it and Unblock the Notifications
