Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಬಿಟ್ಟುಬಿಡಿ 'ಧೂಮಪಾನದ' ಸಂಗ-ಇಲ್ಲದಿದ್ದರೆ ನಿದ್ದೆಗೆ ಭಂಗ!
ಧೂಮದಲ್ಲಿರುವ ನಿಕೋಟಿನ್ ರಕ್ತದಲ್ಲಿ ಸೇರಿದ ಬಳಿಕ ಆರೋಗ್ಯದಲ್ಲಿ ಹಲವಾರು ಏರುಪೇರುಗಳಾಗುವುದು ಮಾತ್ರವಲ್ಲ, ನಿದ್ದೆಯ ಲಯವನ್ನೇ ತಪ್ಪಿಸುತ್ತದೆ... ಮಾಹಿತಿಗಾಗಿ ಫೋಟೋ ಕ್ಲಿಕ್ ಮಾಡಿ....
ಮದ್ಯಪಾನ ಹಾಗೂ ಧೂಮಪಾನ ದೇಹಕ್ಕೆ ಹಾನಿಕಾರಕವೆಂದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೂ ಧೂಮಪಾನದ ಚಟ ಬೆಳೆಸಿಕೊಂಡಿರುವವರು ಇದನ್ನು ಬಿಡಲು ಆಗದೆ ಮುಂದುವರಿಸಿಕೊಂಡು ಹೋಗುತ್ತಾ ಇದ್ದಾರೆ. ಧೂಮಪಾನ ತ್ಯಜಿಸುವಂತೆ ಮಾಡುವ ಗಿಡಮೂಲಿಕೆಗಳು
ಪ್ರತೀ ದಿನ ಧೂಮಪಾನದಿಂದ ಹಲವಾರು ಕಾಯಿಲೆಗಳು ದೇಹವನ್ನು ಸೇರಿಕೊಳ್ಳುವುದು, ಶ್ವಾಸಕೋಶದ ಸಮಸ್ಯೆ, ಕ್ಯಾನ್ಸರ್ ನಂತಹ ಮಾರಕ ರೋಗವು ದೇಹವನ್ನು ಕಾಡಬಹುದು. ಧೂಮಪಾನ ಮಾಡುವವರಲ್ಲಿ ಹೆಚ್ಚಾಗಿ ನಿದ್ರಾಹೀನತೆ ಸಮಸ್ಯೆ ಕಂಡುಬರುತ್ತದೆ. ನಿದ್ರಾಹೀನತೆ ಇದ್ದರೆ ಇದಕ್ಕೆ ಅಂಟಿಕೊಂಡು ಇನ್ನಷ್ಟು ಕಾಯಿಲೆಗಳು ಬರಬಹುದು. ನೈಸರ್ಗಿಕವಾಗಿ ಧೂಮಪಾನವನ್ನು ತ್ಯಜಿಸುವ ಸರಳ ವಿಧಾನಗಳು
ಇದರಿಂದ ಆರೋಗ್ಯಕರ ಜೀವನಶೈಲಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದರೆ ಧೂಮಪಾನವನ್ನು ತ್ಯಜಿಸುವುದು ಅತೀ ಮುಖ್ಯ. ನಿಕೋಟಿನ್ ನಿದ್ರೆಗೆ ಸಮಸ್ಯೆಯನ್ನು ಉಂಟು ಮಾಡಬಹುದು. ಧೂಮಪಾನವು ನಿದ್ರೆಗೆ ಯಾವ ರೀತಿಯಿಂದ ಹಾನಿಯುಂಟು ಮಾಡಬಹುದು ಎಂದು ತಿಳಿದುಕೊಳ್ಳಿ...

ವಾಸ್ತವ #1
ಧೂಮಪಾನವು ನೇರವಾಗಿ ದೇಹದ ಗಡಿಯಾರದ ಮೇಲೆ ಪರಿಣಾಮ ಬೀರಬಹುದು. ದೇಹದ ಗಡಿಯಾರದ ಮೇಲೆ ಪರಿಣಾಮ ಉಂಟಾದಾಗ ಅದರಿಂದ ನಿದ್ರೆಗೆ ಸಮಸ್ಯೆಯಾಗುವುದು. ಆತಂಕ ಮತ್ತು ಖಿನ್ನತೆಯು ಸಾಮಾನ್ಯವಾಗಿರುತ್ತದೆ.

ವಾಸ್ತವ #2
ಧೂಮಪಾನ ಮಾಡುವವರಿಗೆ ರಾತ್ರಿ ಅಡೆತಡೆಯಿಲ್ಲದ ನಿದ್ರೆ ಬರುವುದಿಲ್ಲ. ಹೆಚ್ಚಿನವರು ರಾತ್ರಿ ನಿದ್ರೆಯಿಂದ ಎದ್ದು ನಡೆಯುವುದನ್ನು ನೋಡಬಹುದು.

ವಾಸ್ತವ #3
ಹೆಚ್ಚಿನ ಧೂಮಪಾನಿಗಳಿಗೆ ರಾತ್ರಿ ನಿದ್ರೆ ಮಾಡುವಾಗ ಉಸಿರುಗಟ್ಟಿದಂತೆ ಆಗುವುದು ಸಾಮಾನ್ಯವಾಗಿದೆ. ಅತಿಯಾಗಿ ಧೂಮಪಾನ ಮಾಡುವವರಿಗೆ ರಾತ್ರಿ ನಿದ್ರೆಯಲ್ಲಿ ಉಸಿರು ಕಟ್ಟುವುದು. ಗಂಟಲು ಹಾಗೂ ಮೂಗಿನಲ್ಲಿ ಕಿರಿಕಿರಿಯಾಗಿ ನಿದ್ರೆಗೆ ಭಂಗವಾಗುವುದು.

ವಾಸ್ತವ #4
ಮಲಗುವ ಮೊದಲು ಧೂಮಪಾನ ಮಾಡಿದರೆ ಸಿಗರೇಟಿನಲ್ಲಿರುವ ನಿಕೋಟಿನ್ ಉತ್ತೇಜನಕಾರಿಯಾಗಿರುವ ಕಾರಣ ಅದು ನಿದ್ರೆಗೆ ತೊಂದರೆ ನೀಡುವುದು.

ವಾಸ್ತವ #5
ಧೂಮಪಾನಿಗಳು ಹೆಚ್ಚಾಗಿ ನಿದ್ರಾಹೀನತೆಯ ಸಮಸ್ಯೆಗೆ ಗುರಿಯಾಗುತ್ತಾರೆ. ಆದರೆ ಧೂಮಪಾನ ಮಾಡದೆ ಇರುವವರಲ್ಲಿ ಈ ಸಮಸ್ಯೆ ಕಾಣಿಸುವುದಿಲ್ಲ.

ವಾಸ್ತವ #6
ಧೂಮಪಾನಿಗಳು ನಿದ್ರೆಯಿಂದ ಎದ್ದಾಗ ತುಂಬಾ ಬಳಲಿದಂತೆ ಕಾಣುತ್ತಾರೆ. ಮಲಗುವ ಮೊದಲು ಧೂಮಪಾನ ಮಾಡಿದರೆ ನಿದ್ರೆ ಬರಲು ತುಂಬಾ ಸಮಯ ಬೇಕಾಗುತ್ತದೆ.



Click it and Unblock the Notifications
