Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಖತರ್ನಾಕ್ ಮೈಗ್ರೇನ್ ತಲೆ ನೋವಿಗೆ -ಪವರ್ ಫುಲ್ ಮನೆಮದ್ದು
ಮೈಗ್ರೇನ್ ತಲೆನೋವು ಕಾಣಿಸಿಕೊಂಡರೆ ಉಪಶಮನ ಮಾಡೋದು ಅಷ್ಟು ಸುಲಭವಲ್ಲ. ಮಾತ್ರೆ ತೆಗೆದುಕೊಂಡರೂ ಮೈಗ್ರೇನ್ ಬೇಗ ಹೋಗೋದಿಲ್ಲ...ಆದರೆ ಇದನ್ನು ನಿಯಂತ್ರಿಸಬಹುದಾದ ಮನೆಮದ್ದಗಳಿವೆ...
ಮೈಗ್ರೇನ್ ಎಂಬುವುದು ತಲೆನೋವುಗಳಲ್ಲಿಯೇ ಅತ್ಯುಗ್ರ ರೂಪವಾಗಿದ್ದು ರೋಗಿಯನ್ನು ಇಡಿಯ ದಿನ, ಕೆಲವೊಮ್ಮೆ ವಾರಗಟ್ಟಲೇ ಹಿಂಡಿ ಹಿಪ್ಪೆ ಮಾಡಿ ಹಾಕುತ್ತದೆ. ಕೆಲವೊಮ್ಮೆ ಇದರ ಆಘಾತ ಹೆಚ್ಚಾದಾಗ ಆಸ್ಪತ್ರೆಗೂ ಸೇರಿಸಬೇಕಾಗಿ ಬರಬಹುದು. ಉಗ್ರರೂಪವಿದ್ದಾಗ ಯೋಚನಾ ಶಕ್ತಿಯೇ ಕುಂದುತ್ತದೆ, ಕಣ್ಣುಗಳ ಕೇಂದ್ರ ಭಾಗ ಅದೃಶ್ಯವಾಗುತ್ತದೆ.
ಇದಕ್ಕೆ ಕಾರಣವೇನು ಎಂಬುದನ್ನು ಇದುವರೆಗೆ ಸ್ಪಷ್ಟವಾಗಿ ವಿವರಿಸಲು ಇದುವರೆಗೆ ವೈದ್ಯವಿಜ್ಞಾನಕ್ಕೆ ಸಾಧ್ಯವಾಗಿಲ್ಲ. ಸ್ಥೂಲವಾಗಿ ಮಾನಸಿಕ ಒತ್ತಡ, ಹಾರ್ಮೋನುಗಳಲ್ಲಿ ಏರುಪೇರು, ಅಸಮರ್ಪಕ ಆಹಾರ ಕ್ರಮ, ಉದ್ವೇಗ, ರಜೋನಿವೃತ್ತಿ, ಕೆಲವು ಔಷಧಿಗಳ ಅಡ್ಡಪರಿಣಾಮಗಳು ಮೊದಲಾದವುಗಳ ಮೂಲಕ ಮೈಗ್ರೇನ್ ಎದುರಾಗಬಹುದು.
ಕೆಲವೊಮ್ಮೆ ಇದು ಅನುವಂಶೀಯವೂ ಆಗಿರುತ್ತದೆ. ಕಾರಣವೇನೇ ಇರಲಿ, ಇದರ ಶಮನಕ್ಕೆ ಈ ತಲೆನೋವು ಪ್ರಾರಂಭವಾದ ತಕ್ಷಣ ಮದ್ದು ತೆಗೆದುಕೊಳ್ಳುವುದೇ ಹೆಚ್ಚಿಸದಿರಲು ಜಾಣತನದ ಕ್ರಮವಾಗಿದೆ. ಒಮ್ಮೆ ಮೇಲೇರಿತೋ, ಬಳಿಕ ಇದರ ಪರಿಣಾಮವನ್ನು ಅನುಭವಿಸಿದ ಮೇಲೇ ಇದು ಕಡಿಮೆಯಾಗುತ್ತದೆ.
ಜಾಣರಿಗಾಗಿ ಕೆಲವು ಸಲಹೆಗಳನ್ನು ಕೆಳಗೆ ನೀಡಲಾಗಿದ್ದು ಇದರಲ್ಲಿ ಸೂಕ್ತವಾದುದನ್ನು ತಲೆನೋವು ಈಗತಾನೇ ಶುರುವಾಗುತ್ತಿದೆ ಎಂದ ತಕ್ಷಣ ಅನುಸರಿಸಿದರೆ ಉತ್ತಮ ಪರಿಹಾರವನ್ನು ಪಡೆಯಬಹುದು.

ಹಸಿಶುಂಠಿ
ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಜಗಿಯುವುದು ಅಥವಾ ಹಸಿಶುಂಠಿಯನ್ನು ಜಜ್ಜಿ ಬೆರೆಸಿದ ಟೀ ಕುಡಿಯುಮ ಮೂಲಕ ಉತ್ತಮ ಶಮನ ಪಡೆಯಬಹುದು.

ದ್ರಾಕ್ಷಿ ಹಣ್ಣಿನ ಜ್ಯೂಸ್
ವಿಶೇಷವಾಗಿ ಕಪ್ಪು ದ್ರಾಕ್ಷಿ ಹಣ್ಣಿನ ಜ್ಯೂಸ್‌ನಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು ಇದರೊಂದಿಗೆ ರೈಬೋಫ್ಲೇವಿನ್ ಎಂಬ ಪೋಷಕಾಂಶವೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ರಸವನ್ನು ತಲೆನೋವು ಪ್ರಾರಂಭವಾದ ತಕ್ಷಣ ಸೇವಿಸಿದರೆ ಉಲ್ಬಣಗೊಳ್ಳದಂತೆ ತಡೆಯಬಹುದು.

ಗಿಡಮೂಲಿಕೆಗಳ ಟೀ
ಪುದೀನಾ ಎಲೆಗಳನ್ನು ಕೊಂಚ ಜಜ್ಜಿ ಕುದಿಸಿದ ನೀರಿನಲ್ಲಿ ಟೀ ಮಾಡಿ ಕುಡಿಯುವ ಮೂಲಕ ಅನ್ನನಾಳದ ಸೋಂಕು, ವಾಕರಿಕೆ, ಕಫದ ಮೂಲಕ ಎದುರಾಗಿದ್ದ ತಲೆನೋವು ಇಲ್ಲವಾಗುತ್ತದೆ.

ಹಸಿರು ತರಕಾರಿಗಳು
ನಿಮ್ಮ ನಿತ್ಯದ ಆಹಾರದ ಜೊತೆಗೆ ಹೆಚ್ಚು ಹೆಚ್ಚಾಗಿ ಹಸಿರು ತರಕಾರಿ ಸೊಪ್ಪುಗಳನ್ನು ಸೇವಿಸುವ ಮೂಲಕ ಹೆಚ್ಚಿನ ವಿಟಮಿನ್ ಮತ್ತು ಆಂಟಿ ಆಕ್ಸಿಡೆಂಟುಗಳನ್ನು ಪಡೆಯಬಹುದು. ಇದರಿಂದ ಮೆದುಳಿಗೆ ರಕ್ತಸಂಚಾರ ಉತ್ತಮಗೊಂಡು ತಲೆನೋವನ್ನು ನಿಭಾಯಿಸಲು ಹೆಚ್ಚಿನ ಶಕ್ತಿ ಪಡೆಯುತ್ತದೆ.

ಆಲಿವ್ ಎಣ್ಣೆ
ಆಲಿವ್ ಎಣ್ಣೆಯಲ್ಲಿ ಹಾರ್ಮೋನುಗಳ ಏರುಪೇರನ್ನು ಸರಿಪಡಿಸುವ ಗುಣವಿದೆ. ಈ ಕಾರಣದಿಂದ ಎದುರಾದ ತಲೆನೋವಿನ ಶಮನಕ್ಕೆ ನಿಮ್ಮ ನಿತ್ಯದ ಆಹಾರವನ್ನು ಆಲಿವ್ ಎಣ್ಣೆಯಲ್ಲಿ ತಯಾರಿಸಿ ಅಥವಾ ಊಟದಲ್ಲಿ ಒಂದೆರಡು ಚಮಚ ಬೆರೆಸಿ ಸೇವಿಸುವ ಮೂಲಕ ಈ ನೋವು ಬರದಂತೆ ತಡೆಗಟ್ಟಬಹುದು.

ಕಾಫಿ
ಕಾಫಿಯಲ್ಲಿರುವ ಕೆಫೀನ್ ಮೆದುಳಿಗೆ ರಕ್ತಸಂಚಾರ ಹೆಚ್ಚಿಸಲು ನೆರವಾಗುತ್ತದೆ. ಆಗಾಗ ಚಿಕ್ಕ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ತಲೆನೋವು ಉಲ್ಬಣಗೊಳ್ಳುವುದನ್ನು ತಡೆಯುತ್ತದೆ. ಸಂಶೋಧನೆಗಳ ಮೂಲಕ ಈ ವಿಷಯ ದೃಢಪಟ್ಟಿದೆ. ಆದರೆ ಈ ಪ್ರಮಾಣ ಅತಿ ಕಡಿಮೆ ಇರಬೇಕು ಎಂದೂ ಸೂಚಿಸಿವೆ. ಒಂದು ಅಂದಾಜಿನ ಪ್ರಕಾರ ತಲೆನೋವು ಪ್ರಾರಂಭವಾದ ತಕ್ಷಣ ಅರ್ಧ ಲೋಟ, ಬಳಿಕ ಪ್ರತಿ ಗಂಟೆಗೊಮ್ಮೆ ಕಾಲು ಲೋಟದ ಸೇವನೆ ಉತ್ತಮ ಪರಿಹಾರ ನೀಡುತ್ತದೆ.



Click it and Unblock the Notifications