Latest Updates
-
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ!
ಮಲೇರಿಯಾ ರೋಗ ಗುಣಪಡಿಸುವ ಪವರ್‌ಫುಲ್ ಮನೆಮದ್ದು
ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು ಎಂಬ ಮಾತಿಗೆ ನೂರು ವರ್ಷದ ಇತಿಹಾಸವಿದ್ದರೂ ಇದಕ್ಕೆ ಮುಖ್ಯ ಕಾರಣ ಅಂದು ಕೊಪ್ಪದಲ್ಲಿ ಬಾಧಿಸುತ್ತಿದ್ದ ಮಲೇರಿಯಾ ರೋಗವೇ ಕಾರಣ. ಇಂದು ಈ ರೋಗ ಎಲ್ಲೆಡೆ ಸಾಮಾನ್ಯವಾಗಿದ್ದು ಅನಾಫಿಲಿಸ್ ಸೊಳ್ಳೆಯ ಕಡಿತವೇ ಇದಕ್ಕೆ ಕಾರಣ ಎಂದು ಗೊತ್ತಾಗಿದೆ.
ಈ ಜ್ವರ ಬಂದ ಕೂಡಲೇ ಗುರುತಿಸಲ್ಪಟ್ಟರೆ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸುವ ಮೂಲಕ ಉಲ್ಬಣಗೊಳ್ಳದಂತೆ ತಡೆದು ಶೀಘ್ರವೇ ಗುಣಮುಖರಾಗಬಹುದು. ವೈದ್ಯರು ನೀಡುವ ಚಿಕಿತ್ಸೆಯೊಂದಿಗೇ ಕೆಲವು ನೈಸರ್ಗಿಕ ಆಹಾರಗಳನ್ನೂ ವೈದ್ಯರ ಅನುಮತಿಯ ಮೇರೆಗೆ ಸೇವಿಸುವ ಮೂಲಕ ಗುಣಮುಖರಾಗುವ ಗತಿಯನ್ನು ಇನ್ನಷ್ಟು ತೀವ್ರವಾಗಿಸಬಹುದು.
ಸೊಳ್ಳೆಯ ಕಡಿತದಿಂದ ನಮ್ಮ ರಕ್ತಕ್ಕೆ ಆಗಮಿಸುವ ಪ್ಲಾಸ್ಮೋಡಿಯಂ ಎಂಬ ಅತಿಸೂಕ್ಷ್ಮ ವೈರಾಣುಗಳು ರಕ್ತದ ಕೆಂಪುಕಣಗಳು ಗುಂಪುಗೂಡುವಂತೆ ಮಾಡುತ್ತವೆ. ಪ್ರಥಮವಾಗಿ ಇದು ನಮ್ಮ ಯಕೃತ್ತನ್ನು ಬಾಧಿಸುತ್ತದೆ. ಕ್ರಮೇಣ ದೇಹದ ಇತರ ಭಾಗಗಳನ್ನೂ ಬಾಧಿಸುತ್ತಾ ಹೋಗುತ್ತದೆ. ಈ ವೈರಾಣುಗಳನ್ನು ನಿಗ್ರಹಿಸಲು ದೇಹ ತಾಪಮಾನವನ್ನು ವಿಪರೀತವಾಗಿ ಏರಿಸುತ್ತದೆ. ಈ ಹಂತಕ್ಕೇರುವ ಮುನ್ನ ಸೂಕ್ತ ವಿಧಾನಗಳನ್ನು ಅಳವಡಿಸಿಕೊಂಡರೆ ವೈರಾಣುಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಅತ್ಯಂತ ಅಪಾಯಕರ ಮಳೆಗಾಲದ 10 ಕಾಯಿಲೆಗಳು ಮಲೇರಿಯಾ ಜ್ವರದ ಲಕ್ಷಣಗಳು ಕಂಡು ಬಂದ ತಕ್ಷಣ ತುಳಸಿ ಎಲೆಗಳ ಮೊರೆ ಹೋಗುವ ಮೂಲಕ ನಿಸರ್ಗವೇ ಈ ವೈರಾಣುವಿನ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ. ಇದಕ್ಕಾಗಿ ಕೊಂಚ ತುಳಸಿ ಎಲೆಗಳನ್ನು ಕೊಂಚ ಕಾಳುಮೆಣಸಿನೊಂದಿಗೆ ಅರೆದು ಈ ಲೇಪನವನ್ನು ಹಾಗೇ ನುಂಗಿಬಿಡಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ ಇದರಿಂದ ದೇಹ ಬಿಸಿಯೇರುವುದರಿಂದ ತಪ್ಪುತ್ತದೆ ಹಾಗೂ ಮಲೇರಿಯಾ ವೈರಾಣುಗಳ ವಿರುದ್ದ ದೇಹ ಹೋರಾಡಲು ಹೆಚ್ಚಿನ ಶಕ್ತಿ ಲಭಿಸುತ್ತದೆ. ಅತಿ ಹೆಚ್ಚು ಜ್ವರ ಮಲೇರಿಯಾದ ಲಕ್ಷಣ. ಜ್ವರ ಸತತವಾಗಿ ಏರುತ್ತಾ ಹೋಗುತ್ತಿದ್ದರೆ ತಕ್ಷಣ ಕೊಂಚ ಉಗುರುಬೆಚ್ಚನೆಯ ನೀರಿಗೆ ಒಂದು ತಾಜಾ ಲಿಂಬೆಹಣ್ಣನ್ನು ಹಿಂಡಿ ರಸ ಬೆರೆಸಿ ರೋಗಿಗೆ ಕುಡಿಸಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ ಒಮ್ಮೆಲೇ ಸಾಧ್ಯವಾಗದಿದ್ದರೆ ಕೊಂಚ ಕೊಂಚವಾಗಿ ಕುಡಿಸುತ್ತಲೇ ಇದ್ದರೆ ಜ್ವರ ಶೀಘ್ರವಾಗಿ ಇಳಿಯುತ್ತದೆ. ಮಲೇರಿಯಾ ನಿಗ್ರಹಕ್ಕೆ ಇನ್ನೊಂದು ನೈಸರ್ಗಿಕ ಆಹಾರವೆಂದರೆ ಮೆಂತೆ. ಒಂದು ವೇಳೆ ಮಲೇರಿಯಾ ರೋಗ ಉಲ್ಬಣಗೊಂಡಿದ್ದು ರೋಗಿ ಸುಸ್ತಾಗಿದ್ದರೆ ಮೆಂತೆ ಕಾಳುಗಳು ಅತ್ಯುತ್ತಮವಾಗಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ ಕೊಂಚ ಮೆಂತೆ ಕಾಳುಗಳನ್ನು ನೆನೆಸಿ ಹಾಗೇ ಅಥವಾ ಅರೆದು ಲೇಪನದ ರೂಪದಲ್ಲಿ ತಿನ್ನಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ವೈರಾಣುಗಳ ವಿರುದ್ಧ ಹೋರಾಡಲು ಮತ್ತು ನಿಗ್ರಹಿಸಲು ಸಾಧ್ಯವಾಗುತ್ತದೆ. ಮಲೇರಿಯಾ ಉಲ್ಬಣಗೊಂಡು ವಾಕರಿಕೆ, ಸ್ನಾಯು ಸೆಳೆತ, ಅಜೀರ್ಣ, ಹಸಿವಿಲ್ಲದಿರುವುದು, ಸೆಡೆತ ಮೊದಲಾದ ತೊಂದರೆಗಳು ಎದುರಾದರೆ ತಕ್ಷಣ ದಾಲ್ಚಿನ್ನಿ ಅಥವಾ ಚೆಕ್ಕೆಯ ಪುಡಿಯನ್ನು ಬೆರೆಸಿದ ಹಾಲಿಲ್ಲದ ಟೀ ಸತತವಾಗಿ ರೋಗಿಗೆ ಕುಡಿಸುತ್ತಾ ಹೋಗಬೇಕು. ಇದರ ಉರಿಯೂತ ನಿವಾರಕ ಮತ್ತು ಸೆಳೆತ ನಿವಾರಕ ಗುಣ ಮಲೇರಿಯಾವನ್ನು ಶೀಘ್ರವೇ ಗುಣಪಡಿಸಲು ನೆರವಾಗುತ್ತವೆ.

ತುಳಸಿ ಎಲೆಗಳು

ತುಳಸಿ ಎಲೆಗಳು

ಲಿಂಬೆ ಬೆರೆಸಿದ ನೀರು

ಲಿಂಬೆ ಬೆರೆಸಿದ ನೀರು

ಮೆಂತೆ ಕಾಳುಗಳು

ಮೆಂತೆ ಕಾಳುಗಳು

ಚೆಕ್ಕೆ (ದಾಲ್ಚಿನ್ನಿ)

ಚೆಕ್ಕೆ (ದಾಲ್ಚಿನ್ನಿ)



Click it and Unblock the Notifications