Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಪಾರ್ಶ್ವವಾಯುವಿಗೆ ನಿಮ್ಮಲ್ಲಿಯೇ ಇದೆ ಪಾಶುಪತಾಸ್ತ್ರ
ಪಾರ್ಶ್ವವಾಯು ಅಥವಾ ಸ್ಟ್ರೋಕ್ ನಿಜಕ್ಕೂ ಮಾರಣಾಂತಿಕ ಸಮಸ್ಯೆಯೇ ಹೌದು. ಇದರಿಂದ ನರಳುತ್ತಿರುವವರು ಮರಳಿ ಸಹಜ ಸ್ಥಿತಿಗೆ ಬರಲು ತುಂಬಾ ಕಷ್ಟಸಾಧ್ಯವಾಗಿದ್ದು, ಜೀವನಪೂರ್ತಿ ಕೈ, ಕಾಲುಗಳು ಸ್ವಾಧೀನಕ್ಕೆ ಬರದೆ ಹೆಚ್ಚು ನರಳುತ್ತಿರುತ್ತಾರೆ. ಇದೊಂದು ನರಕಸದೃಶವಾದ ಯಾತನೆಯೇ ಸರಿ. ಇದರಿಂದ ದೇಹವು ಸಂಪೂರ್ಣವಾಗಿ ನಿಯಂತ್ರಣ ತಪ್ಪಿ, ದೇಹದ ಅಂಗಾಂಗಗಳು ಸ್ವಾಧೀನ ಕಳೆದುಕೊಳ್ಳುತ್ತವೆ.
ಭಾರತದಲ್ಲಿ ಸುಮಾರು ಮೂರನೆಯ ಒಂದು ಭಾಗದಷ್ಟು ಜನರು ಹೃದಯದ ಪಾರ್ಶ್ವವಾಯುವಿನ ಸಮಸ್ಯೆಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೊಂದು ಕಳವಳಕಾರಿ ಬೆಳವಣಿಗೆ. ಈ ನಿಟ್ಟಿನಲ್ಲಿ ಔಷಧೀಯ ಕ್ಷೇತ್ರಗಳಲ್ಲಿ ಸಮರ್ಪಕವಾದ ಸಂಶೋಧನೆಗಳ ಅಗತ್ಯವಿದ್ದು, ಈ ಬಗ್ಗೆ ಜನರಲ್ಲಿಯೂ ಜಾಗೃತಿ ಮೂಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಪಾರ್ಶ್ವವಾಯುವಿಗೆ ಮುನ್ನ ಕಂಡು ಬರುವ ಲಕ್ಷಣಗಳು
ಅನಿರೀಕ್ಷಿತ ಪಾರ್ಶ್ವವಾಯು ಅಪಾಯವನ್ನು ತಡೆಗಟ್ಟಲು ಉತ್ತಮ ಉಪಾಯ ನಮ್ಮಲ್ಲಿಯೇ ಇದೆ. ಅದೇನೆಂದರೆ, ನಮ್ಮ ಜೀವನಶೈಲಿಯ ಬದಲಾವಣೆಯಿಂದ ಸ್ಟ್ರೋಕ್ ಪ್ರಮಾಣವನ್ನು ಸುಲಭವಾಗಿ ತಗ್ಗಿಸಬಹುದು. ಈ ಲೇಖನದಲ್ಲಿ ನಿಮಗಾಗಿ ಕೆಲವು ವಿಶಿಷ್ಟ ಸಂಗತಿಗಳನ್ನು ಹಂಚಿಕೊಳ್ಳಲಾಗಿದೆ. ನಿಮ್ಮ ದಿನನಿತ್ಯದ ಜೀವನಶೈಲಿಯಲ್ಲಿ ಈ ವಿಧಾನಗಳನ್ನು ಅಳವಡಿಸಿಕೊಂಡರೆ ಖಂಡಿತವಾಗಿ ಅನಿರೀಕ್ಷಿತವಾಗಿ ಉಂಟಾಗುವ ಪಾರ್ಶ್ವವಾಯು ಪ್ರಮಾಣವನ್ನು ತಡೆಗಟ್ಟಬಹುದು. ವಿವರಗಳಿಗೆ ಮುಂದೆ ಓದಿ...

ಅಧಿಕ ರಕ್ತದೊತ್ತಡ ಅಥವಾ ಹೈಪರ್ ಟೆನ್ಷನ್
ಅಧಿಕ ರಕ್ತದೊತ್ತಡವು ಪುರುಷರನ್ನು ಮತ್ತು ಮಹಿಳೆಯರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಇದನ್ನು ಅಲಕ್ಷಿಸಿದಷ್ಟು ನಿಮ್ಮ ಹೃದಯಕ್ಕೆ ನಿಜಕ್ಕೂ ಹಾನಿಯನ್ನುಂಟು ಮಾಡುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಕೂಡಲೇ ಈ ಬಗ್ಗೆ ಎಚ್ಛೆತ್ತುಕೊಂಡು, ರಕ್ತದೊತ್ತಡದ ಮಟ್ಟವನ್ನು ಸಮತೋಲನದಲ್ಲಿ ಇಡಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಕ್ರಮವಾದ ವ್ಯಾಯಾಮ
ರಕ್ತ ಸಂಚಲನ ವ್ಯವಸ್ಥೆಯನ್ನು ಉತ್ತಮಪಡಿಸಲು ಇರುವ ಒಂದೇ ಸಾಧನವೆಂದರೆ ಕ್ರಮವಾದ ವ್ಯಾಯಾಮ. ಇದನ್ನು ಎಲ್ಲರೂ ಅನುಸರಿಸಬಹುದಾಗಿದ್ದು, ಇದರಿಂದ ನಿಮ್ಮ ದೇಹದ ಅನುಪಯುಕ್ರ ರಕ್ತದ ಬೊಜ್ಜಿನ ಪ್ರಮಾಣವನ್ನು ತಗ್ಗಿಸಿ, ರಕ್ತದೊತ್ತಡದ ಮಟ್ಟವನ್ನು ಸಮತೋಲನದಲ್ಲಿರಿಸಿ ಹೃದಯ ವೈಫಲ್ಯವನ್ನು ತಡೆಯುತ್ತದೆ. ವಾರಕ್ಕೆ ಸುಮಾರು 150 ನಿಮಿಷಗಳ ಕಾಲ ಸೈಕಲ್ ಓಡಿಸುವುದು ಅಥವಾ ನಿಧಾನವಾದ ನಡಿಗೆ ಮಾಡುವುದು ನಿಜಕ್ಕೂ ನಿಮ್ಮ ಹೃದಯಕ್ಕೆ ಸಂಜೀವಿನಿಯಿದ್ದಂತೆ.

ಧೂಮಪಾನವನ್ನು ನಿಲ್ಲಿಸಿ/ಮದ್ಯಪಾನ ಮಿತಗೊಳಿಸಿ
ಧೂಮಪಾನವು ನಿಮ್ಮ ರಕ್ತವನ್ನು ಗಟ್ಟಿಗೊಳಿಸಿ, ರಕ್ತ ನಾಳದಲ್ಲಿ ಪ್ಲೇಗ್ ಸತ್ವವನ್ನು ಹೆಚ್ಚಿಸಿ ರಕ್ತ ಹೆಪ್ಪುಗಟ್ಟಲು ಕಾರಣವಾಗುತ್ತದೆ. ಅನಿಯಮಿತವಾದ ಮಧ್ಯಪಾನ ಸೇವನೆಯೂ ಸಹ ಸ್ಟ್ರೋಕ್ ಗೆ ದಾರಿ ಮಾಡಿಕೊಡುತ್ತದೆ. ಮಿತಿಯನ್ನು ದಾಟಿದರೆ ನಿಮ್ಮ ಸ್ಟ್ರೋಕ್ ಆಗುವ ಪ್ರಮಾಣವು ಖಂಡಿತ ಇಮ್ಮಡಿಗೊಳ್ಳುತ್ತದೆ. ಆದ್ದರಿಂದ ಧೂಮಪಾನದಿಂದ ದೂರವಿರಿ ಹಾಗೂ ಮದ್ಯಪಾನ ವನ್ನು ಮಿತಿಗೊಳಿಸಲು ಮರೆಯದಿರಿ.

ಆಹಾರ ಪದ್ಧತಿಯನ್ನು ಪರಿಷ್ಕರಿಸಿ
ಆರೋಗ್ಯಕರ ಆಹಾರ ಪದ್ಧತಿಯು ಅನಿರೀಕ್ಷಿತ ಹೃದಯ ವೈಫಲ್ಯದ ಅಪಾಯದ ಪ್ರಮಾಣವನ್ನು ತಗ್ಗಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಇದರಿಂದ ಹೃದಯ ತೊಂದರೆಗಳು ನಿಯಂತ್ರಣದಲ್ಲಿದ್ದು, ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಇದರ ಅಪಾಯದ ಪ್ರಮಾಣವನ್ನು ಶೇಖಡಾ 2೦ ರಷ್ಟು ತಗ್ಗಿಸಲು ಪೊಟಾಶಿಯಮ್ ಯುಕ್ತ ಆಹಾರ ಸತ್ವಗಳು ಹೆಚ್ಚು ನೆರವಾಗುತ್ತದೆ ಎಂದು ಇತ್ತೀಚಿನ ಅಧ್ಯಯನದ ವರದಿಯೊಂದು ತಿಳಿಸಿದೆ.

ದೇಹದ ತೂಕವನ್ನು ತಗ್ಗಿಸಿ
ಸ್ಥೂಲಕಾಯ ಮತ್ತು ಇತರೆ ಸಮಸ್ಯೆಗಳಾದ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ತೊಂದರೆಗಳು ಸ್ಟ್ರೋಕ್ ನ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತವೆ. ಆದ್ದರಿಂದ ಕನಿಷ್ಠ 10 ಪೌಂಡ್ ಗಳಷ್ಟು ತೂಕವನ್ನು ಕಡಿಮೆಗೊಳಿಸಲು ಪ್ರಯತ್ನಿಸಿ. ಇದರಿಂದ ನಿಮ್ಮ ಹೃದಯಕ್ಕೆ ಹೆಚ್ಚು ಸಹಕಾರಿ.



Click it and Unblock the Notifications











