ಪ್ರಾಣಕ್ಕೆ ಸಂಚಕಾರ ತರುವ ಸಂಚುಕೋರ-ಪ್ಲಾಸ್ಟಿಕ್‌ ಪಾತ್ರೆ

By Manjula Balaraj

ಮನೆಯ ಅಡುಗೆಮನೆ ಎಂದಾಕ್ಷಣ ಕೇಳಬೇಕೇ..?, ಅಲ್ಲಿ ವಿಭಿನ್ನ ಶೈಲಿಯ ಪಾತ್ರೆಗಳದ್ದೇ ಕಾರುಬಾರು, ಅಲ್ಯುಮಿನಿಯಂ, ಸ್ಟೀಲ್ ಪಾತ್ರೆಗಳು, ಒಂದು ಕಡೆಯಾದರೆ, ವಿಭಿನ್ನ ಶೈಲಿಯ ಪ್ಲಾಸ್ಟಿಕ್ ಪಾತ್ರೆಗಳು ತಾವು ಏನು ಕಡಿಮೆ ಇಲ್ಲವೆನ್ನುವಂತೆ,ಝಗಮಗಿಸುತ್ತಿರುತ್ತದೆ. ಸುಮಾರು ಹತ್ತು, ಹದಿನೈದು ವರ್ಷಗಳ ಹಿಂದೆ ಇಷ್ಟೆಲ್ಲ ವೆರೈಟಿ ಪಾತ್ರೆಗಳು ಮಾರುಕಟ್ಟೆಯಲ್ಲಿ ಸಿಗುತ್ತಲೇ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ, ಸಿಕ್ಕಾಪಟ್ಟೆ ಆಯ್ಕೆಗಳು ಮಹಿಳೆಯರನ್ನು ಇನ್ನಷ್ಟು ಆಕರ್ಷಿಸುವಂತೆ ಮಾಡುತ್ತಿದೆ, ಅದರಲ್ಲೂ ಪ್ಲಾಸ್ಟಿಕ್ ಪಾತ್ರೆಗಳಂತೂ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸುತ್ತಿದೆ...ಎಲ್ಲಿಯವರೆಗೆ ಎಂದರೆ ಪ್ಲಾಸ್ಟಿಕ್ ಪಾತ್ರೆ ಇಲ್ಲದ ಅಡುಗೆಮನೆಯೇ ಇಲ್ಲ...ಎನ್ನುವಷ್ಟರವರೆಗೆ ಫೇಮಸ್ ಆಗಿ ಹೋಗಿದೆ.

ಹೌದು, ಇಂದು ಪ್ಲಾಸ್ಟಿಕ್ ಪಾತ್ರೆ ಎಲ್ಲರ ಮನೆಯ ಖಾಯಂ ಸದಸ್ಯನಾಗಿಯೇ ಬಿಟ್ಟಿದೆ ಅಂತಾನೇ ಹೇಳಬಹುದು, ದಿನನಿತ್ಯದ ಆಹಾರ ಸೇವಿಸಲು ಪ್ಲಾಸ್ಟಿಕ್ ಪ್ಲೇಟ್‌ಗಳನ್ನೇ ಬಳಸುತ್ತೇವೆ, ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುತ್ತೇವೆ, ಅಥವಾ ನಾವು ನಮ್ಮ ತಿನ್ನುವ ಆಹಾರವನ್ನು ಕೂಡ ಪ್ಲಾಸ್ಟಿಕ್ ಡಬ್ಬದಲ್ಲಿಯೇ ಕೊಂಡೊಯ್ಯುತ್ತೇವೆ.

ಹೀಗೆ ನಾವು ತಿನ್ನುವ ಆಹಾರವು ಪ್ಲಾಸ್ಟಿಕ್‌ನಿಂದ ಹೊರತಾಗಿರುವುದಿಲ್ಲ. ಅಷ್ಟೇ ಅಲ್ಲದೆ ಪ್ಲಾಸ್ಟಿಕ್ ಪ್ರಭಾವ ಎಷ್ಟಿದೆ ಎಂದರೆ, ಆಹಾರ ಪದಾರ್ಥಗಳನ್ನು ಬೆಳೆಸುವುದರಿಂದ, ಹಿಡಿದು ಅದನ್ನು ತಿನ್ನುವಲ್ಲಿಯ ತನಕವು ಉಪಯೋಗಿಸಲ್ಪಡುತ್ತದೆ. ಆಹಾರವನ್ನು ಸಂಸ್ಕರಿಸಲು, ಪ್ಯಾಕ್ ಮತ್ತು ಸಾಗಿಲು ಪ್ಲಾಸ್ಟಿಕ್ ಅನ್ನೇ ಬಳಸಲಾಗುತ್ತದೆ. ಅಲ್ಲದೇ ಮನೆಯಲ್ಲಿಯು ಕೂಡ ನಾವು ಪ್ಲಾಸ್ಟಿಕ್ ಡಬ್ಬದಲ್ಲಿಯೇ ಬಿಸಿ ಮಾಡುತ್ತೇವೆ.

ಸಂಶೋಧನೆಯೊಂದರ ಪ್ರಕಾರ ಬಿಪಿಎ, ಆಹಾರ ಪ್ಯಾಕ್ ಮಾಡುವಲ್ಲಿ ಅಥವಾ ಮಕ್ಕಳ ಬಾಟಲುಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಪ್ಲಾಸ್ಟಿಕ್ ಕಂಟೈನರ್ ಬಳಕೆ ವಸ್ತುವನ್ನು ಸಂಗ್ರಹಿಸಲು, ತಿನ್ನುವ ಆಹಾರ ಅಥವಾ ನೀರು ಕೊಂಡೊಯ್ಯಲು ಸುಲಭ ಎನ್ನುವುದು ಸಹಜವಾದರೂ, ಅದು ಅಷ್ಟೇ ಆರೋಗ್ಯಕ್ಕೆ ಹಾನಿಕಾರಕವಾಗುತ್ತದ್ದಲ್ಲವೇ?

ಬನ್ನಿ ಬೋಲ್ಡ್ ಸ್ಕೈ, ಇಂದು ಪ್ಲಾಸ್ಟಿಕ್ ಆಹಾರ ಸೇವನೆ ನಮಗೆ ನಿಜವಾಗಿಯೂ ಅಪಾಯಕಾರಿಯೋ ಅಥವಾ ಪ್ಲಾಸ್ಟಿಕ್ ಕಂಪನಿಗಳ ವಿರುದ್ಧ ಸುಳ್ಳು ಪ್ರಚಾರವೋ ಎನ್ನುವುದರ ಬಗ್ಗೆ ಒಂದು ಸಣ್ಣ ಚರ್ಚೆಯನ್ನು ನಿಮ್ಮ ಮುಂದಿಡಲಿದ್ದೇವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ..

ಬಿಪಿಎನ ಇರುವಿಕೆ

ಬಿಪಿಎನ ಇರುವಿಕೆ

ಪ್ಲಾಸ್ಟಿಕ್ಕಿನಲ್ಲಿರುವ bisphenol A ಅಥವಾ BPA ಎಂದು ಕರೆಯಲಾಗುವ ರಾಸಾಯನಿಕವಾಗಿದೆ. ಆರೋಗ್ಯಕ್ಕೆ ಮಾರಕವಾದ ಈ ರಾಸಾಯನಿಕ ಅಲ್ಪ ಪ್ರಮಾಣದಲ್ಲಿ ನಮ್ಮ ಆಹಾರ ಮತ್ತು ಚರ್ಮದ ಮೂಲಕ ದೇಹವನ್ನು ಸೇರುತ್ತದೆ, The U.S. Food and Drug Administration (FDA)ಪ್ರಕಾರ ಈ ರಾಸಾಯನಿಕದ ಪ್ರಮಾಣ ದೇಹದಲ್ಲಿ ಹೆಚ್ಚಾದರೆ ಮೆದುಳಿನ ಕ್ಷಮತೆಯನ್ನು ಕ್ಷೀಣಿಸುವುದು, ವರ್ತನೆಯಲ್ಲಿ ಬದಲಾವಣೆ, ಗರ್ಭದಲ್ಲಿರುವ ಶಿಶುವಿನ, ಚಿಕ್ಕ ಮತ್ತು ದೊಡ್ಡ ಮಕ್ಕಳ ಪ್ರೋಸ್ಟ್ರೇಟ್ ಗ್ರಂಥಿಯ ಮೇಲೆ ಅಪಾಯಕರ ಪರಿಣಾಮ ಆಗಬಹುದು ಎಂದು ಎಚ್ಚರಿಸಿದೆ.

ಬಿಪಿಎನ ಇರುವಿಕೆ

ಬಿಪಿಎನ ಇರುವಿಕೆ

ಅದರಲ್ಲೂ ಬಿಪಿಎಯನ್ನು ಅಥವಾ ಬಿಸ್ಫೆನಾಲ್ ಎ, ಸಾಮಾನ್ಯವಾಗಿ ಕಡಿಮೆ ತೂಕದ ಅಥವಾ ಗಟ್ಟಿಯಾದ ಪ್ಲಾಸ್ಟಿಕ್ ಗಳಲ್ಲಿ ಬಳಸುತ್ತಾರೆ. ಉದಾಹರಣೆಗೆ ನೀರಿನ ಬಾಟಲಿಗಳು ಅಥವಾ ಸಣ್ಣ ಮಕ್ಕಳ ಬಾಟಲಿಗಳು.ಬಿಪಿಎಯು ಆಹಾರ ಕಟ್ಟುವ ಕ್ಯಾನುಗಳಲ್ಲಿಯೂ ಕಂಡುಬರುತ್ತದೆ. ಬಿಪಿಎಯು ಮಧುಮೇಹ, ಹೃದ್ರೋಗ ಹಾಗೂ ಪಿತ್ತಜನಕಾಂಗದ ನಂಜು ಮುಂತಾದ ಕಾಯಿಲೆಗಳಿಗೆ ಅಡಿಪಾಯ ಹಾಕುವ ಸಾಧ್ಯತೆಗಳೇ ಹೆಚ್ಚು ಎನ್ನುವುದು ಅಪಾಯ ಆಗುವ ಸಾಧ್ಯತೆ ಹೆಚ್ಚು ಅಧ್ಯಯನದ ಮೂಲಕ ಕಂಡು ಬಂದಿದೆ.

ಥಾಲೇಟ್ಗಳು

ಥಾಲೇಟ್ಗಳು

ಥಾಲೇಟ್ಗಳು ಪಿವಿಸಿ ಪೈಪುಗಳಲ್ಲಿ ಮತ್ತು ಸುಗಂಧ ವಸ್ತುಗಳಲ್ಲಿ ವಿವಿಧ ಕಡೆಗಳಲ್ಲಿ ಕಂಡುಬರುತ್ತದೆ. ದೇಹಕ್ಕೆ ಜಾಸ್ತಿ ಪ್ರಮಾಣದಲ್ಲಿ ಥಾಲೇಟ್ಗಳ ಬಳಕೆಯಾದರೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಮತ್ತು ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಗೆ ಅಪಾಯಕಾರಿ. ಅಧ್ಯಯನಗಳ ಪ್ರಕಾರ,ಇದು ನಮ್ಮ ದೇಹಗಳನ್ನು ವಿವಿಧ ರೀತಿಯಲ್ಲಿ ಪ್ರವೇಶಿಸಬಹುದು ಅದು ಹೇಗೆಂದರೆ ಪ್ಯಾಕ್ ಮಾಡುವ ಆಹಾರ ಪದಾರ್ಥಗಳು ಅಥವಾ ನಾವು ತಿನ್ನುವ ಹೈನೋತ್ಪನ್ನಗಳ ಪದಾರ್ಥಗಳಿಂದ ನಮ್ಮ ದೇಹವನ್ನು ಪ್ರವೇಶಿಸಬಹುದು.

ನಾನ್ ಸ್ಟಿಕ್ (ಥವಾ) ಕುಕ್ ವೇರ್

ನಾನ್ ಸ್ಟಿಕ್ (ಥವಾ) ಕುಕ್ ವೇರ್

ನಾನ್ ಸ್ಟಿಕ್ ಕುಕ್ ವೇರ್ ಸಾಮಾನ್ಯವಾಗಿ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ, ಅಧ್ಯಯನಗಳ ಪ್ರಕಾರ ಅತಿ ಹೆಚ್ಚು ತಾಪಮಾನ ಒಡ್ಡಿಕೊಂಡಾಗ ಈ ತಟ್ಟೆ ಮೇಲೆ ಇರುವ ಟೆಫ್ಲಾನ್ ಲೇಪನ ಆಹಾರದ ಮೇಲೆ ಅಪಾಯಕಾರಿ ವಸ್ತುವನ್ನು ಬಿಡುಗಡೆ ಮಾಡುತ್ತದೆ, ಹಾಗಾಗಿ ಹೆಚ್ಚು ಶಾಖದ ಮೂಲಕ ಮುಂಚಿತವಾಗಿ ಬಿಸಿ ಮಾಡುವುದನ್ನು ತಪ್ಪಿಸಿಕೊಳ್ಳುವುದು ಸೂಕ್ತ. ಹಾಗಾದರೆ ಇದಕ್ಕೆ ಪರಿಹಾರವೇನು? ಪ್ಲಾಸ್ಟಿಕನ್ನು ಸಂಪೂರ್ಣವಾಗಿ ನಮ್ಮ ಪ್ರಪಂಚದಿಂದ ತೊಡೆದುಹಾಕಲು ಬಹಳ ಕಷ್ಟ ಎನ್ನುವುದು ಒಪ್ಪಿಕೊಳ್ಳುವ ಮಾತು. ಬೋಲ್ಡ್ ಸ್ಕೈ, ಇದಕ್ಕೆ ಯಾವ ರೀತಿಯಲ್ಲಿ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನುವುದನ್ನು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪ್ಲಾಸ್ಟಿಕ್ ಕಂಟೇನರ್ಸ್‌ಗಳನ್ನು ಮತ್ತೆ ಬಿಸಿ ಮಾಡಬಾರದು

ಪ್ಲಾಸ್ಟಿಕ್ ಕಂಟೇನರ್ಸ್‌ಗಳನ್ನು ಮತ್ತೆ ಬಿಸಿ ಮಾಡಬಾರದು

ಆಹಾರ ತಜ್ಞರ ಪ್ರಕಾರ, ಆಹಾರವನ್ನು ಪ್ಲಾಸ್ಟಿಕ್ ನಲ್ಲಿ ಬಿಸಿ ಮಾಡಿದಾಗ, ಕಂಟೇನರ್ ನಲ್ಲಿರುವ ಒಂದು ರೀತಿಯ ದ್ರವ ಸೋರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ, ಮೈಕ್ರೋ ಓವೆನ್ ಉತ್ತಮ ಕಂಡೀಷನ್ ನಲ್ಲಿದ್ದರೂ ಇದರಿಂದ ಆಹಾರ ಬಿಸಿ ಮಾಡುವುದನ್ನು ಆದಷ್ಟು ಕಮ್ಮಿ ಮಾಡುವುದು ಉತ್ತಮ. ಇದರ ಜೊತೆಗೆ ಪ್ಲಾಸ್ಟಿಕ್ ಪ್ಲೇಟುಗಳಲ್ಲಿ ಬಿಸಿ ಪದಾರ್ಥವನ್ನು ತಿನ್ನುವುದು ಕಮ್ಮಿಮಾಡುವುದು ಉತ್ತಮ.

ಪ್ಲಾಸ್ಟಿಕ್ ಕಂಟೇನರ್ ಬಳಸುವುದರಿಂದ ದೂರವಿರಿ

ಪ್ಲಾಸ್ಟಿಕ್ ಕಂಟೇನರ್ ಬಳಸುವುದರಿಂದ ದೂರವಿರಿ

ಏಳು ಅಥವಾ ಒಂದು ಮಾರ್ಕ್ ಇರುವ ಪ್ಲಾಸ್ಟಿಕ್ ಕಂಟೇನರ್ ಅಥವಾ ಪ್ಲಾಸ್ಟಿಕಿನ ಬಾಟಲುಗಳನ್ನು ಬಳಸುವುದರಿಂದ ದೂರವಿರಿ. ಏಳು ಅಥವಾ ಒಂದು ಮಾರ್ಕ್ ಇರುವ ಪ್ಲಾಸ್ಟಿಕ್ ಬಾಟಲ್, ತಂಪು ಪಾನೀಯ ಬಾಟಲ್ ಗಳನ್ನು ಮೊದಲು ಉಪಯೋಗಿಸಿದ ನಂತರ ಬಿಸಾಕಬೇಕು. ಇಂತಹ ಬಾಟಲುಗಳನ್ನು ರಿಸೈಕಲ್ ಮಾಡುವುದು ಸೂಕ್ತ.

English summary

Is Eating In Plastic Containers Dangerous?

Plastic is ubiquitous in today’s world. We eat in plastic plates, drink in plastic bottles, or even carry our food in it. Hence, the food that we eat is always in touch with plastic. It is even present in food production and preparation. The food that comes to our plate is processed, packaged and shipped in plastic. In homes too, we heat our food in plastic containers.
Story first published: Thursday, February 25, 2016, 23:03 [IST]
X
Desktop Bottom Promotion