ನಿದ್ದೆ ಕೆಡಿಸುವ ಹಲ್ಲು ನೋವಿಗೆ ಮನೆಮದ್ದಿನ ಚಿಕಿತ್ಸೆ

By Manu

ಸಾಮಾನ್ಯವಾಗಿ ಹಲ್ಲುಗಳ ಬಗ್ಗೆ ನಾವು ಕಾಳಜಿ ವಹಿಸುವುದು ಬೆಳಿಗ್ಗೆ ಮತ್ತು ರಾತ್ರಿ ಹಲ್ಲುಜ್ಜುವಾಗ ಮಾತ್ರ. ಇನ್ನುಳಿದಂತೆ ದಿನವಿಡೀ ಏನನ್ನಾದರೂ ಕುರುಕುತ್ತಾ, ಹಲ್ಲಿನ ಆರೈಕೆಯನ್ನು ಕಡೆಗಣಿಸುವುದೇ ಹೆಚ್ಚು. ವಾಸ್ತವವಾಗಿ ಹಲ್ಲುಗಳು ಮೂಳೆಗಳಂತೆಯೇ ಗಟ್ಟಿಯಾದ ಅಂಗಗಳಾಗಿರುವುದರಿಂದ, ಕಾಲಕಾಲಕ್ಕೆ ಸರಿಯಾಗಿ ಸ್ವಚ್ಛಗೊಳಿಸುತ್ತಾ ಮತ್ತು ಬಳಕೆಯ ಸಮಯದಲ್ಲಿ ಕೊಂಚ ಜಾಗರೂಕತೆ ವಹಿಸಿದರೆ ಸಾಕು, ಹಲ್ಲಿನ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ.

ಆದರೆ ಈ ಬಗ್ಗೆ ಅರಿವಿಲ್ಲದೇ ನಾವೆಲ್ಲರೂ ನಿತ್ಯದ ಎಷ್ಟೋ ಕೆಲಸಗಳಿಗೆ ಹಲ್ಲುಗಳನ್ನೇ ತಪ್ಪಾಗಿ ಬಳಸುತ್ತೇವೆ ಅಥವಾ ಸರಿಯಾದ ರೀತಿಯಲ್ಲಿ ಕಾಳಜಿ ತೆಗೆದುಕೊಳ್ಳುವುದಿಲ್ಲ. ಉದಾಹರಣೆಗೆ ನಗರಗಳಲ್ಲಿರುವ ಉಪಾಹಾರ ಗೃಹಗಳಲ್ಲಿ ಕೈ ತೊಳೆಯಲು ವ್ಯವಸ್ಥೆ ಇದ್ದರೂ ಯುವಜನತೆ ತಿಂಡಿ ತಿಂದ ಬಳಿಕ ಶಿಸ್ತಾಗಿ ಟಿಶ್ಯೂ ಪೇಪರ್ ಬಳಸಿ ಕೈ ಒರೆಸಿಕೊಂಡು ನಿರಾಳವಾಗಿ ಹೊರಟುಬಿಡುತ್ತಾರೆ. ಅರೆರೆ, ಬಾಯಿ ಮುಕ್ಕಳಿಸುವುದು? ಅದೆಲ್ಲಾ ಅವರ ಪಾಲಿಗೆ ಹಳೆಯ ಓಬೀರಾಯನ ಕಾಲದ ವಿಧಾನವಾಗಿದೆ. ಇದೇ ಇವರು ಮಾಡುತ್ತಿರುವ ಬಹುದೊಡ್ಡ ತಪ್ಪು. ಆದರೆ ಇದರ ಪರಿಣಾಮ ಮಾತ್ರ ಅನುಭವಿಸಿದವರಿಗೇ ಗೊತ್ತು.

ಅದರಲ್ಲೂ, ಹಲ್ಲುಗಳ ನಡುವೆ ಸಿಕ್ಕಿಕೊಂಡಿರುವ ಆಹಾರದ ತುಣುಕುಗಳು ಬ್ಯಾಕ್ಟೀರಿಯಾಗಳಿಗೆ ರಸದೌತಣವಾಗಿದ್ದು ಕೆಲವೇ ದಿನಗಳಲ್ಲಿ ಈ ಬ್ಯಾಕ್ಟೀರಿಯಾಗಳು ಭಾರೀ ವೇಗದಲ್ಲಿ ತಮ್ಮ ಪಡೆಯನ್ನು ಹೆಚ್ಚಿಸಿಕೊಂಡು ಉಂಡ ಮನೆಗೆ ದ್ರೋಹ ಬಗೆಯುವ ಹುನ್ನಾರದಲ್ಲಿರುತ್ತವೆ. ಅದರಲ್ಲೂ ಯಾವುದಾದರೂ ಕಾರಣದಿಂದ ತುಂಡಾಗಿದ್ದರೆ ಅಥವಾ ಹೊರಕವಚ ಸವೆದಿದ್ದರೆ ಮಾತ್ರ ಮೃದುವಾದ ಒಳಭಾಗ ಸುಲಭವಾಗಿ ಕ್ರಿಮಿಗಳ ಆಕ್ರಮಣಕ್ಕೆ ತುತ್ತಾಗುತ್ತದೆ. ಒಂದು ವೇಳೆ ಹಲ್ಲಿನ ಬೇರಿನ ಸೋಂಕಿನಿಂದಾಗಿ ನೋವು ಉಂಟಾದರೆ (Root Canal) ಆ ನೋವು ಸಹಿಸಲಸಾಧ್ಯವಾಗಿದ್ದು ನಿತ್ಯದ ಚಟುವಟಿಕೆಗಳನ್ನೇ ಸ್ಥಗಿತಗೊಳಿಸಿಬಿಡುತ್ತದೆ. ಅದರಲ್ಲೂ ಮೇಲ್ದವಡೆಯ ಹಲ್ಲಿನ ನೋವು ಎಂತಹ ಜಟ್ಟಿಯನ್ನಾದರೂ ನೆಲಕ್ಕುರುಳಿಸುತ್ತದೆ. ಬನ್ನಿ ಹಲ್ಲು ನೋವಿಗೆ ಕೆಲವೊಂದು ಸೂಕ್ತ ಮನೆಮದ್ದನ್ನು ಪರಿಚಯಿಸುತ್ತಿದ್ದೇವೆ, ಅವು ಯಾವುದು ಎಂಬುದನ್ನು ಮುಂದೆ ಓದಿ...

ಲವಂಗದ ಎಣ್ಣೆ

ಲವಂಗದ ಎಣ್ಣೆ

ಲವಂಗದ ಎಣ್ಣೆಯು ಇನ್‍ಫೆಕ್ಷನ್ ನಿವಾರಿಸಲು ಹೇಳಿ ಮಾಡಿಸಿದ ಔಷಧಿಯಾಗಿದೆ. ಇದು ದವಡೆಗಳ ನೋವು ಮತ್ತು ಹಲ್ಲು ನೋವುಗಳಿಗೆ ರಾಮ ಬಾಣದಂತೆ ಕೆಲಸ ಮಾಡುತ್ತದೆ. ಸ್ವಲ್ಪ ಪ್ರಮಾಣದ ಲವಂಗದ ಎಣ್ಣೆಯನ್ನು ತೆಗೆದುಕೊಳ್ಳಿ. ಅದರಿಂದ ಮೃದುವಾಗಿ ಬ್ರಷ್ ಮಾಡಿ. ಇದನ್ನು ನೋವಿರುವ ಭಾಗಕ್ಕೆ ಬಳಸುವಾಗ ಸ್ವಲ್ಪ ಜಾಗರೂಕರಾಗಿರಿ. ಹೆಚ್ಚು ಒತ್ತಡವನ್ನು ನೀಡದೆ ಬ್ರಷ್ ಮಾಡಿ, ಇಲ್ಲವಾದಲ್ಲಿ ನಿಮ್ಮ ನೋವು ಮತ್ತಷ್ಟು ಹೆಚ್ಚಾಗಬಹುದು. ಲವಂಗದ ಎಣ್ಣೆಯನ್ನು ದವಡೆಗಳ ಮೇಲೆ ಹಾಕಿ ಮೃದುವಾಗಿ ಮಸಾಜ್ ಮಾಡಿ.

ಪೆಪ್ಪರ್‌ಮಿಂಟ್ ಎಣ್ಣೆ

ಪೆಪ್ಪರ್‌ಮಿಂಟ್ ಎಣ್ಣೆ

ಪೆಪ್ಪರ್‌ಮಿಂಟ್ ಆಯಿಲ್ ಹಲ್ಲು ನೋವಿನ ಮೇಲೆ ಪವಾಡ ಸದೃಶ್ಯವಾಗಿ ಕೆಲಸ ಮಾಡುತ್ತದೆ. ಈ ಎಣ್ಣೆಯನ್ನು ನಿಮ್ಮ ಬೆರಳುಗಳಲ್ಲಿ ತೆಗೆದುಕೊಂಡು ಅದನ್ನು ಮೃದುವಾಗಿ ನೋವಿರುವ ಭಾಗದಲ್ಲಿ ಮಸಾಜ್ ಮಾಡಿ. ಇದರಿಂದಾಗಿ ಬಾವು ಬಂದ ಹಲ್ಲುಗಳ ನೋವಿನಿಂದ ನಿಮಗೆ ತಕ್ಷಣ ಉಪಶಮನ ದೊರೆಯುತ್ತದೆ.

ಉಪ್ಪು

ಉಪ್ಪು

ಹಲ್ಲು ನೋವಿಗೆ ಉಪ್ಪು ತತ್‍ಕ್ಷಣದ ನೋವು ನಿವಾರಕವಾಗಿ ಕೆಲಸಕ್ಕೆ ಬರುವ ಅಂಶವಾಗಿದೆ. ಇದಕ್ಕೆಲ್ಲ ಬೇಕಾಗಿರುವುದು ಕೇವಲ ಎರಡು ವಸ್ತುಗಳು ಒಂದು ಬೆಚ್ಚನೆಯ ನೀರು ಮತ್ತು ಎರಡು ಸ್ವಲ್ಪ ಉಪ್ಪು.ಇವೆರಡನ್ನು ಬೆರೆಸಿ ಅದರಿಂದ ಬಾಯಿಯನ್ನು ಮುಕ್ಕುಳಿಸಿ. ಮೊದಲೆರಡು ಬಾರಿ ಬಾಯಿಯನ್ನು ಮುಕ್ಕುಳಿಸುವಾಗ ನಿಮಗೆ ನೋವಿನ ಅನುಭವವಾಗಬಹುದು. ಆದರೆ ನಂತರ ನಿಮಗೆ ನೋವಿನಿಂದ ಉಪಶಮನ ದೊರೆಯುವುದು ಸುಳ್ಳಲ್ಲ. ಇದನ್ನು ಕೆಲವು ಬಾರಿ ಪುನರಾವರ್ತಿಸಿ ಮತ್ತು ಶೇ.90ರಷ್ಟು ನೋವನ್ನು ಕಡಿಮೆ ಮಾಡಿಕೊಳ್ಳಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಒಂದು ಪ್ರಾಕೃತಿಕವಾದ ಬ್ಯಾಕ್ಟೀರಿಯಾ ನಿರೋಧಕವಾಗಿದೆ. ಬೆಳ್ಳುಳ್ಳಿಯ ರಸವು ಇನ್‍ಫೆಕ್ಷನ್ ಅನ್ನು ಹೋಗಲಾಡಿಸುತ್ತದೆ. ಒಂದು ವೇಳೆ ನಿಮಗೆ ವಿಪರೀತವಾದ ಹಲ್ಲು ನೋವು ಕಂಡು ಬಂದಲ್ಲಿ ಹೀಗೆ ಮಾಡಿ. ಇದಕ್ಕಾಗಿ ಬೆಳ್ಳುಳ್ಳಿಯನ್ನು ತೆಗೆದು ಕೊಂಡು ಅದನ್ನು ಜಜ್ಜಿ ರಸವನ್ನು ತೆಗೆಯಿರಿ. ಈಗ ಈ ರಸವನ್ನು ಸೋಂಕು (ಇನ್‍ಫೆಕ್ಷನ್) ಆಗಿರುವ ಭಾಗಕ್ಕೆ ಲೇಪಿಸಿ. ಈ ಮನೆ ಮದ್ದು ನಿಮ್ಮ ಹಲ್ಲು ನೋವನ್ನು ನಿವಾರಿಸಲು ಪರಿಣಾಮಕಾರಿಯಾಗಿ ನೆರವಾಗುತ್ತದೆ.

ಕಹಿ ಬೇವು

ಕಹಿ ಬೇವು

ಒ೦ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿರಿ, ಇದಕ್ಕೆ ಒ೦ದು ಅಥವಾ ಎರಡು ಹನಿಗಳಷ್ಟು ಲಿ೦ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ೦ದ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲು ನೋವಿನಿಂದ ಮುಕ್ತಿ ಪಡೆಯಬಹುದು. ಫಲಿತಾ೦ಶವು ಗಮನಾರ್ಹವಾಗಿ ಕ೦ಡುಬರುವ೦ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ೦ದು ಬಾರಿ ಕೈಗೊಳ್ಳಿರಿ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಬಳಸಿ ಹತ್ತಿಯ ಒಂದು ಚಿಕ್ಕ ಉಂಡೆಯನ್ನು ಆಲಿವ್ ಎಣ್ಣೆಯಲ್ಲಿ ಮುಳುಗಿಸಿ ನೋವಿರುವ ಒಸಡಿಗೆ ನಯವಾಗಿ ಹಚ್ಚಿರಿ. ತಕ್ಷಣವೇ ಅಲ್ಲದಿದ್ದರೂ ನಿಧಾನವಾಗಿ ಆಲಿವ್ ಎಣ್ಣೆ ಹಲ್ಲುನೋವನ್ನು ಕಡಿಮೆಗೊಳಿಸುತ್ತಾ ಬರುತ್ತದೆ. ಆಲಿವ್ ಎಣ್ಣೆಯ ಉರಿಯೂತ ನಿವಾರಕ ಗುಣ ಹಲ್ಲುನೋವು ಶಮನಗೊಳಿಸಲು, ಬಾವು ಕಡಿಮೆಗೊಳಿಸಲು ಹಾಗೂ ಶೀಘ್ರವಾಗಿ ಗಾಯ ಮಾಗಲು ನೆರವಾಗುತ್ತದೆ

Story first published: Tuesday, February 23, 2016, 23:15 [IST]
X
Desktop Bottom Promotion