Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕ್ಯಾನ್ಸರ್ಗೆ ಸಡ್ಡು ಹೊಡೆದು ನಿಲ್ಲುವ ಪುಟ್ಟ ಬೆಳ್ಳುಳ್ಳಿ
ನಮ್ಮ ಆರೋಗ್ಯವನ್ನು ವೃದ್ಧಿಸಲು ಅಜ್ಜಿಯ ಮನೆಮದ್ದುಗಳು ಹಲವು ರೀತಿಯಲ್ಲಿ ಪೂರಕವಾಗಿವೆ. ಆದರೆ ಹೆಚ್ಚಿನವರು ಸುಲಭದಲ್ಲಿ ಇದನ್ನು ನಂಬುವುದಿಲ್ಲ. ಇವು ನೈಸರ್ಗಿಕವಾಗಿದ್ದು ಯಾವುದೇ ಅಡ್ಡಪರಿಣಾಮಗಳಿಲ್ಲದೇ ಶೀಘ್ರವಾಗಿ ಹಲವು ಕಾಯಿಲೆಗಳನ್ನು ಗುಣಪಡಿಸುತ್ತವೆ. ಆದರೆ ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳಿಗೆ ಈ ಮನೆಮದ್ದುಗಳು ಸಾಟಿಯಲ್ಲ ಎಂದು ಹೆಚ್ಚಿನವರು ಅಭಿಪ್ರಾಯ ಪಡುತ್ತಾರೆ.
ಇದಕ್ಕೆ ಆಸ್ಪತ್ರೆಯ ಚಿಕಿತ್ಸೆಯೇ ಅನಿವಾರ್ಯ ಎಂಬ ಭಾವನೆ ಇದೆ. ಆದರೆ ವೈದ್ಯರೇ ಹೇಳುವಂತೆ ಯಾವುದೇ ಕಾಯಿಲೆ ಬರದಂತೆ ತಡೆಯುವುದು ಕಾಯಿಲೆ ಬಂದ ಮೇಲೆ ಗುಣಪಡಿಸುವುದಕ್ಕಿಂತ ಉತ್ತಮ. ಕಾಯಿಲೆ ಬರದಂತೆ ತಡೆಯಲು ಹಲವು ಆಹಾರಗಳಿದ್ದು ಇವುಗಳ ನಿಯಮಿತ ಸೇವನೆಯಿಂದ ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದು. ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಅತ್ಯುತ್ತಮವಾದ ಆಹಾರ ಎಂದರೆ ಬೆಳ್ಳುಳ್ಳಿ. ಒಂದು ವೇಳೆ ಶ್ವಾಸಕೋಶದ ಕ್ಯಾನ್ಸರ್ ಈಗಾಗಲೇ ವ್ಯಾಪಿಸಿದ್ದು ಉಲ್ಬಣಗೊಂಡಿದ್ದರೆ ಮಾತ್ರ ಇದನ್ನು ಹಿಂದೆ ಪಡೆಯುವುದು ಸಾಧ್ಯವಿಲ್ಲ. ಇದಕ್ಕೆ ಮುಖ್ಯ ಕಾರಣ ಧೂಮಪಾನ.

ಒಂದು ವೇಳೆ ರೋಗಿ ಧೂಮಪಾನ ಮಾಡದವನಾಗಿದ್ದರೂ ಕ್ಯಾನ್ಸರ್ ಬೇರೆ ಕಾರಣದಿಂದ ಆವರಿಸಿದ್ದು ಪ್ರಾರಂಭಿಕ ಹಂತದಲ್ಲಿದ್ದರೆ ಇದನ್ನು ಗುಣಪಡಿಸಬಹುದು. ಇದಕ್ಕೆ ದೀರ್ಘಕಾಲದ ಚಿಕಿತ್ಸೆ ಮತ್ತು ಔಷಧಿ ಸೇವನೆ ಅಗತ್ಯ. ಆದರೆ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದಿದ್ದರೆ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆ ಮಾಡಬಹುದು. ಬೆಳ್ಳುಳ್ಳಿಯ ಕ್ಯಾನ್ಸರ್ ನಿವಾರಕ ಗುಣಗಳು ಕ್ಯಾನ್ಸರ್‌ಗೆ ಕಾರಣವಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹಿಮ್ಮೆಟ್ಟಿಸುತ್ತದೆ. ಅಲ್ಲದೇ ಜೀರ್ಣಶಕ್ತಿಯನ್ನು ಉತ್ತಮಗೊಳಿಸುವ ಮೂಲಕ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಆದರೆ ಶ್ವಾಸಕೋಶದ ಕ್ಯಾನ್ಸರ್‌ಗೆ ಬೆಳ್ಳುಳ್ಳಿ ಹೇಗೆ ನೆರವಾಗುತ್ತದೆ? ಇದಕ್ಕೆ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸುವುದು ಅಗತ್ಯ. ಇದರ ರಸದಿಂದ ಹೊಮ್ಮುವ ಆವಿ ಶ್ವಾಸಕೋಶದೊಳಕ್ಕೆ ಹಾದು ಅಲ್ಲಿನ ಕ್ಯಾನ್ಸರ್ ಕಾರಕ ಕಣಗಳನ್ನು ಕೊಲ್ಲುತ್ತದೆ. ಅಚ್ಚರಿಗೆ ತಳ್ಳುವ ಈ ಪುಟ್ಟ ಬೆಳ್ಳುಳ್ಳಿಯ ಕಾರುಬಾರು!
ಅಲ್ಲದೇ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸುವ ಮೂಲಕ ಧೂಮಪಾನಿಗಳಿಗೂ ಉಪಯೋಗವಿದೆ. ಸಿಗರೇಟಿನ ಹೊಗೆ ಶ್ವಾಸಕೋಶಕ್ಕೆ ಧಾವಿಸಿದ ಬಳಿಕ ಇದಕ್ಕೆ ಕೇವಲ ಶೇಖಡಾ ಇಪ್ಪತ್ತರಷ್ಟು ಮಾತ್ರ ಹಾನಿ ಎಸಗಲು ಸಾಧ್ಯವಾಗುತ್ತದೆ. ಅಂದರೆ ಬೆಳ್ಳುಳ್ಳಿ ಈ ಧೂಮಪಾನದ ಹಾನಿಯನ್ನು ಶೇಖಡಾ ಎಂಭತ್ತರಷ್ಟು ಕಡಿಮೆಗೊಳಿಸುತ್ತದೆ ಎಂದಾಯ್ತು. ಆದ್ದರಿಂದ ವಂಶವಾಹಿನಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್ ಇರುವ ವ್ಯಕ್ತಿಗಳು ಬೆಳ್ಳುಳ್ಳಿಯ ನಿಯಮಿತ ಸೇವನೆಯಿಂದ ತಮಗೆ ಈ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಬಹಳಷ್ಟು ಕಡಿಮೆಗೊಳಿಸಬಹುದು
ಬೆಳ್ಳುಳ್ಳಿ ಮತ್ತು ಶ್ವಾಸಕೋಶದ ಕ್ಯಾನ್ಸರ್:
ಇದರ ಸೇವನೆಗೆ ಸೂಕ್ತ ಸಮಯ ಯಾವುದು?
ಬೆಳ್ಳುಳ್ಳಿಯ ಅತ್ಯುತ್ತಮ ಪರಿಣಾಮ ಪಡೆಯಬೇಕೆಂದರೆ ಬೆಳಿಗ್ಗೆದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದು ಆಗಲಿಲ್ಲ ಎಂದರೆ ರಾತ್ರಿ ಊಟದ ಒಂದು ಘಂಟೆಯ ಬಳಿಕ ಸೇವಿಸಿ ಮಲಗಬೇಕು. ಬೆಳ್ಳುಳ್ಳಿಯ ಕೆಲವು ಹಸಿ ಎಸಳುಗಳನ್ನು ಹಾಗೇ ತಿಂದು ನುಂಗಿದ ಬಳಿಕ ನೀರು ಕುಡಿಯಬಾರದು ಅಥವಾ ಬೇರೇನನ್ನೂ ತಿನ್ನಬಾರದು. ಇದರಿಂದ ಬೆಳ್ಳುಳ್ಳಿಯ ರಸ ರಕ್ತದ ಮೂಲಕ ಶ್ವಾಸಕೋಶ ಮತ್ತು ಇತರ ಅಗತ್ಯ ಅಂಗಗಳಿಗೆ ಧಾವಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಕಾಯಿಲೆ ಬರುವ ಸಂಭವವನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ. ಬೆಳ್ಳುಳ್ಳಿಯಲ್ಲಿರುವ ಪ್ರಮುಖ 15 ಗುಣಗಳು
ಬೆಳ್ಳುಳ್ಳಿಯ ಇತರ ಪ್ರಯೋಜನಗಳೇನು?
ಬೆಳ್ಳುಳ್ಳಿಯಿಂದ ಆರೋಗ್ಯಕ್ಕೆ ಇನ್ನೂ ಹಲವಾರು ಪ್ರಯೋಜನಗಳಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು, ಅಧಿಕ ಮತ್ತು ಕಡಿಮೆ ರಕ್ತದ ಒತ್ತಡವನ್ನು ಸಮರ್ಪಕವಾಗಿಸುವುದು, ಮೂಳೆಗಳ ದೃಢತೆ ಹೆಚ್ಚಿಸುವುದು, ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುವುದು, ಮತ್ತು ಅತಿ ಮುಖ್ಯವಾಗಿ ಮರೆಗುಳಿತನ ಮತ್ತು ಅಲ್ಜೀಮರ್ ಕಾಯಿಲೆಯನ್ನು ತಡೆಯುವ ಗುಣಗಳನ್ನು ಹೊಂದಿದೆ. ಔಷಧೀಯ ಗುಣಗಳ ಆಗರ 'ಬೆಳ್ಳುಳ್ಳಿಯ' ಮಹತ್ವ ಅರಿಯಿರಿ!
ಹಸಿ ಬೆಳ್ಳುಳ್ಳಿಯನ್ನು ಸೇವಿಸಲು ಸೂಕ್ತ ವಿಧಾನ ಯಾವುದು?
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications















