Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಇ-ಸಿಗರೇಟ್‌ಗೆ ಯುವಜನಾಂಗವೇ ಹೆಚ್ಚು ಟಾರ್ಗೆಟ್!
ಹದಿಹರೆಯದವರಲ್ಲಿ ಧೂಮಪಾನ ಚಟವನ್ನು ಬಿಡಿಸಲು ನೆರವಾಗದೇ ಇರುವುದಲ್ಲದೆ ಇ - ಸಿಗರೇಟ್ ಎಂಬುದು ಯುವಜನಾಂಗವನ್ನು ತನ್ನತ್ತ ಹೆಚ್ಚು ಸೆಳೆಯುತ್ತಿದೆ. ಇದನ್ನು ಹದಿಹರೆಯದವರು ಒಂದು ಮೋಜು, ಮಜ ಕೊಡುವ ಅಂಶ ಎಂದು ಪರಿಗಣಿಸುವುದರಿಂದ ಇವರಲ್ಲಿ ನಿಕೋಟಿನ್ ಸೇವನೆ ಹೆಚ್ಚಾಗುತ್ತಿದೆ. ಈ ಅಂಶ ಸಂಶೋಧನೆಯಿಂದ ತಿಳಿದು ಬಂದಿದೆ.
ಈ ಇ-ಸಿಗರೇಟನ್ನು ವಯಸ್ಕರಲ್ಲಿ ಧೂಮಪಾನವನ್ನು ಅಂತ್ಯಗೊಳಿಸಲು ಆಗಾಗ್ಗೆ ಉಪಕರಣಗಳಂತೆ ಉಪಯೋಗಿಸಲಾಗುತ್ತದೆ. ಈ ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಪ್ರೇರೇಪಿತರಾಗುತ್ತಿದ್ದರು ಎಂದು ಸಂಶೋಧನಕಾರರಾದ ಮೈಕೆಲ್ ಖೌರಿ ಹೇಳಿದರು. ಅವರು ಟೊರಾಂಟೋ ಆಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ ಕಾರ್ಡಿಯೋಲಜಿ ನಿವಾಸಿಯಾಗಿ ರೋಗಪೀಡಿತ ಮಕ್ಕಳ ಮೇಲೆ ಸಂಶೋಧನೆ ನಡೆಸುತ್ತಿದ್ದರು.

ಸಿಗರೇಟಂತೇ ಕಾಣುವ ಹಾಗೆ, ಈ ಇ-ಸಿಗರೇಟನ್ನು ವಿನ್ಯಾಸಗೊಳಿಸಲಾಗಿದೆ. ಈ ಉಪಕರಣವು ಬ್ಯಾಟರಿಯಿಂದ ಚಾಲಿತವಾಗುತ್ತದೆ ಹಾಗು ದ್ರವ ರೂಪದಲ್ಲಿರುವ ನಿಕೋಟಿನ್ ಆವಿಯಾಗಿ ಹೊರಬರುತ್ತದೆ. ಹಿಂದಿನ ಅಧ್ಯಯನದ ಪ್ರಕಾರ ಯುಎಸ್ ಮತ್ತು ಕ್ಯಾನಡಾದಲ್ಲಿ ಈ ಇ-ಸಿಗರೇಟ್ ಬಳಕೆಯು ಹದಿಹರೆಯದವರಲ್ಲಿ ಹೆಚ್ಚುತ್ತಿರುವುದಷ್ಟೇ ಅಲ್ಲದೇ ಇಂತಹವರಲ್ಲಿ ತಂಬಾಕು ಸೇವನೆಗೂ ದಾರಿ ಮಾಡಿಕೊಡುತ್ತಿದೆ. ಧೂಮಪಾನ ತ್ಯಜಿಸುವಂತೆ ಮಾಡುವ ಗಿಡಮೂಲಿಕೆಗಳು
ಸಂಶೋಧನೆಕಾರರ ಪ್ರಕಾರ ಕೆನೆಡಾದಲ್ಲಿ, ತರುಣಾವಸ್ಥೆಯಲ್ಲಿರುವವರು ಸಿಗರೇಟಿಗಿಂತ ಇ-ಸಿಗರೇಟನ್ನೇ ಹೆಚ್ಚು ಸಾಮಾನ್ಯವಾಗಿ ಬಳಸುತ್ತಿದ್ದಾರೆ. ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹೃದಯಕ್ಕೆ ಸಂಬಂಧಪಟ್ಟ ತಪಾಸಣೆ ಕಾರ್ಯಕ್ರಮದಲ್ಲಿ ಸಂಶೋಧನಕಾರರು ತರುಣಾವಸ್ಥೆಯಲ್ಲಿರುವವರು ಇ-ಸಿಗರೇಟನ್ನು ಹೆಚ್ಚಾಗಿ ಬಳಸಲು ಹಿಂದಿರುವ ಪ್ರೇರೇಪಣೆ, ಆವರ್ತನ ಮತ್ತು ಇತರ ಅಂಶಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಪ್ರಯತ್ನಪಟ್ಟರು.
ಕೆನೆಡಾದ ಒಂಟಾರಿಯೋದ ನೈಯಾಗರ ಪ್ರದೇಶದಲ್ಲಿ ಸುಮಾರು 14 - 15 ವಯಸ್ಸಿನ 9ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಅಧ್ಯಾಯನ ನಡೆಸಲಾಯಿತು. ಇದರಲ್ಲಿ ಸುಮಾರು 2,367 ವಿದ್ಯಾರ್ಥಿಗಳು ಭಾಗವಗಿಸಿದ್ದರು. ಧೂಮಪಾನಕ್ಕೆ ಸಂಬಂಧಪಟ್ಟಂತೆ, ನಡೆಸಿದ ಸಮೀಕ್ಷೆಯಲ್ಲಿ, ಕನಿಷ್ಠ ಒಂದು ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿಗಳ ಪ್ರಕಾರ, ಶೇಕಡ 70ರಷ್ಟು ವಿದ್ಯಾರ್ಥಿಗಳು ಈ ಇ-ಸಿಗರೇಟಿನ ಬಗ್ಗೆ ಅರಿವಿದ್ದವರಾಗಿದ್ದರು ಮತ್ತು ಶೇಕಡ 10ರಷ್ಟು ವಿದ್ಯಾರ್ಥಿಗಳು ಇ-ಸಿಗರೇಟನ್ನು ಬಳಸಿದ್ದರು. ಸಿಗರೇಟ್ ಚಟ ಬಿಡುವ ವಿಧಾನಗಳು
ಸಿಎಮ್ಎಜೆ (ಕ್ಯಾನಾಡಿಯನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್)ಪ್ರಕಟಿಸಿದ ಅಧ್ಯಯನದ ಪ್ರಕಾರ ನವೀನತೆಯ ಅಂಶವೇ ಹದಿಹರೆಯದವರಲ್ಲಿ ಹೆಚ್ಚು ಇ-ಸಿಗರೇಟ್ ಬಳಸಲು ಕಾರಣ. ಇ-ಸಿಗರೇಟ್ ಬಳಕೆ ಸಾಮಾನ್ಯವಾಗಿ ಗಂಡಸರಲ್ಲಿ, ಅದರಲ್ಲೂ ಧೂಮಪಾನ ಮಾಡುವವರಲ್ಲಿ ಮತ್ತು ತಂಬಾಕು ಉತ್ಪನ್ನಗಳನ್ನು ಸೇವಿಸುವವರಲ್ಲಿ ಅಥವಾ ಯಾರ ಪರಿವಾರದಲ್ಲಿ ಸದಸ್ಯರು, ಗೆಳೆಯರು ಧೂಮಪಾನ ಮಾಡುತ್ತಿದ್ದರೋ ಅಂತಹವರಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು.
ಧೂಮಪಾನ ಸಮಾಪ್ತಿಗೆ ಇ-ಸಿಗರೇಟ್ ಬಳಕೆ ಪ್ರಯೋಜನಕಾರಿಯಾಗಲಿಲ್ಲ ಎಂದು ಸಂಶೋಧಕರು ಕಂಡುಕೊಂಡರು. ಇ-ಸಿಗರೇಟ್ ಬಳಕೆ ಹೆಚ್ಚು ಒತ್ತಡ, ಕುಟುಂಬದಲ್ಲಿ ಕಡಿಮೆ ಆದಾಯ, ತಮ್ಮಲ್ಲಿ ತಾವೇ ಗುರುತಿಸಿಕೊಂಡ ಅನಾರೋಗ್ಯದ ಲಕ್ಷಣಗಳು ಇವೇ ಮೊದಲಾದ ಕಾರಣಗಳಿಗೆ ಸಂಬಂಧಪಟ್ಟಿವೆ. ಇದರ ಬಳಕೆ ಹದಿಹರೆಯದವರು ತೊಂದರೆಯಲ್ಲಿದ್ದಾರೆಂದು ಎಂದು ಸೂಚಿಸುತ್ತದೆ. ಹೀಗೆಂದು ಲೇಖಕರು ಬರೆದಿದ್ದಾರೆ. ಐಎಎನ್ಎಸ್ ನಿಂದ ಒಳಹರಿವು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














