Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೀಲು ನೋವಿಗೆ ಸಾಂತ್ವನ ನೀಡುವ ಸರಳ ಚಿಕಿತ್ಸೆ
ಮಾನವನ ದೇಹವು ಅತ್ಯಂತ ಸಂಕೀರ್ಣವಾದ ರಚನೆಯಾಗಿದೆ. ಬುದ್ಧಿ ಶಕ್ತಿಯಲ್ಲಿ ಮಾನವ ಎಲ್ಲಾ ಪ್ರಾಣಿಗಳಿಗಿಂತ ಮುಂದೆ ಇದ್ದಾನೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದರು ಇವನ ಬುದ್ಧಿಶಕ್ತಿಯನ್ನು ಮೀರಿ, ಇವನ ದೇಹದ ಅಂಗಾಂಗಗಳು ಕೈ ಕೊಡುವುದು ಸಾಮಾನ್ಯವಾಗಿ ಬಿಟ್ಟಿವೆ. ಅದರಲ್ಲೂ ಕೀಲು ನೋವು ಇವನನ್ನು ಭಾದಿಸುವ ನೋವುಗಳಲ್ಲಿ ಒಂದಾಗಿದೆ. ಮಾನವನ ದೇಹದಲ್ಲಿರುವ 206 ಮೂಳೆಗಳಲ್ಲಿ ಯಾವಾಗ ಯಾವ ನೋವು ಬರುತ್ತದೆ ಎಂದು ಹೇಳುವುದು ಕಷ್ಟ. ಮಕ್ಕಳಿಗಾದರೆ ಇನ್ನೂ ಹೆಚ್ಚಿನ ಮೂಳೆಗಳು ಇದ್ದು, ಅವರಿಗೆ ಈ ನೋವುಗಳು ಬರುವುದಿಲ್ಲ, ಆ ವಿಚಾರದಲ್ಲಿ ಮಕ್ಕಳು ಅದೃಷ್ಟಶಾಲಿಗಳು.
ಕೀಲುಗಳು ಎಂದರೆ ಒಂದಕ್ಕಿಂತ ಹೆಚ್ಚು ಮೂಳೆಗಳು ಕೂಡುವ ಜಾಗವಾಗಿರುತ್ತವೆ. ಇವುಗಳು ನಮ್ಮ ದೇಹವನ್ನು ನಡೆಯಲು, ಬಾಗಲು, ಸುತ್ತಲು ಮತ್ತು ಉರುಳಾಡಲು ಸಹಾಯ ಮಾಡುತ್ತವೆ. ಇವುಗಳನ್ನು ನಾವು ಜೀವನ ಪರ್ಯಂತ ಕಾಪಾಡಿಕೊಳ್ಳುವುದು ತೀರಾ ಮುಖ್ಯವಾದ ಅಂಶ ಎಂಬುದನ್ನು ಮರೆಯಬಾರದು. ಯಾವಾಗೆಲ್ಲ ನೀವು ನಡೆಯುತ್ತಿರೋ, ಜಿಗಿಯುತ್ತೀರೋ, ಅಥವಾ ಅತ್ತಿತ್ತ ಓಡಾಡುತ್ತಿರೋ, ಆಗ ಈ ಕೀಲುಗಳು ಕೆಲಸ ಮಾಡುತ್ತವೆ. ಕಂಗಾಲಾಗದಿರಿ ಕೀಲು ನೋವಿಗೆ: ಇಲ್ಲಿದೆ ಶೀಘ್ರ ಪರಿಹಾರ
ಈ ದೇಹದ ಅಂಗಗಳ ನಿರಂತರ ಬಳಕೆಯಿಂದಾಗಿ ಕಾಲಾನುಕ್ರಮೇಣ ಅವುಗಳು ಸವೆಯುವ ಸಾಧ್ಯತೆಗಳು ಹೆಚ್ಚಿಗೆ ಇರುತ್ತವೆ. ಇದರಿಂದಾಗಿ ಹಲವಾರು ಸಮಸ್ಯೆಗಳು ನಿಮಗೆ ಕಾಣಿಸಿಕೊಳ್ಳುತ್ತವೆ. ವಯಸ್ಸಾದಂತೆ ಈ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುತ್ತವೆ. ಅದರಲ್ಲು ಇತ್ತೀಚಿನ ದಿನಗಳಲ್ಲಿ ಮೂಳೆಗಳಿಗೆ ಸಂಬಂಧಿಸಿದ ಆರ್ಥೊಪೆಡಿಕ್ ಸಮಸ್ಯೆಗಳು ಚಿಕ್ಕವಯಸ್ಸಿನಲ್ಲಿಯೇ ಕಾಣಿಸಿಕೊಳ್ಳಲು ಆರಂಭಿಸಿವೆ. ಜನರು ಅವುಗಳಿಂದ ಬಹುವಾಗಿ ನರಳುತ್ತಿದ್ದಾರೆ. ಕೀಲು ನೋವಿನ ಪರಿಹಾರಕ್ಕೆ ಪೂರಕ ಔಷಧಿ ಯಾವುದು?
ಒಂದು ಅಧ್ಯಯನದ ಪ್ರಕಾರ ಅಮೆರಿಕಾದಲ್ಲಿ 40% ಮಂದಿ ಕೀಲು ನೋವು ಸಂಬಂಧಿತ ಸಮಸ್ಯೆಗಳಿಂದ ನರಳುತ್ತಿದ್ದಾರಂತೆ. ಅದರಲ್ಲೂ ಬಹುತೇಕ ರೋಗಿಗಳಲ್ಲಿ ಈ ನೋವು ಕೈ ಮೀರಿ ಹೋಗಿದೆ ಎಂದು ಹೇಳಲಾಗುತ್ತದೆ. ಈ ಕೀಲು ನೋವುಗಳಿಂದ ನೀವು ಹೆಚ್ಚು ನೋವನ್ನು ಅನುಭವಿಸುವ ಮುನ್ನ, ನಿಮ್ಮ ಕೀಲುಗಳನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿ ಇರಿಸಿಕೊಳ್ಳುವ ಮೂಲಕ ಇದರಿಂದ ಪಾರಾಗಿ. ಅದಕ್ಕಾಗಿ ಈ ಕೆಳಗೆ ನೀಡಿರುವ ಪರಿಹಾರಗಳನ್ನು ಪಾಲಿಸಿ.

ದೀರ್ಘ ಕಾಲ ಕುಳಿತುಕೊಳ್ಳಬೇಡಿ
ಧಿರ್ಘ ಕಾಲ ಒಂದೇ ಕಡೆ ಕುಳಿತುಕೊಳ್ಳುವುದರಿಂದಾಗಿ ನಿಮ್ಮ ಕೀಲುಗಳು ವಿಪರೀತವಾಗಿ ಹಾಳಾಗುತ್ತವೆ. ಆದ್ದರಿಂದ ಆಗಾಗ ಎದ್ದು ಓಡಾಡಿ. ಒಂದೇ ಕಡೆ ಕೂರಬೇಡಿ.

ಆರೋಗ್ಯಕರವಾದ ಭಂಗಿಯನ್ನು ಇರಿಸಿಕೊಳ್ಳಿ
ಬಾಗಿಕೊಂಡು, ಮಲಗಿದಂತೆ ಕೂರುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ. ನಿಮ್ಮ ಭಂಗಿಯು ಸಹ ಕೀಲುಗಳ ಮೇಲೆ ಪ್ರಭಾವ ಬೀರುತ್ತದೆ. ನಡೆಯುವಾಗ ಮತ್ತು ಓಡುವಾಗ ಸಹ ಸರಿಯಾದ ಭಂಗಿಯನ್ನು ಇರಿಸಿಕೊಳ್ಳಿ. ನಿಮ್ಮ ಕೀಲು ಆರೋಗ್ಯಕರವಾಗಿರಬೇಕು ಎಂದಲ್ಲಿ, ನಿಮ್ಮ ಭಂಗಿ ಸರಿಯಾಗಿರಬೇಕು.

ನಿಮ್ಮ ದೇಹವನ್ನು ದಣಿಸಬೇಡಿ
ಒತ್ತಡ ಮತ್ತು ದಣಿವು ನಿಮ್ಮ ದೇಹಕ್ಕೆ ಒಳ್ಳೆಯದಲ್ಲ. ನಿಮ್ಮ ದೇಹವನ್ನು ದಣಿಸುವುದರಿಂದ ನೀವು ಕೀಲುಗಳ ಮೇಲೆ ಅಧಿಕ ಒತ್ತಡವನ್ನು ತರುತ್ತೀರಿ. ಇದು ಕಾಲ ಕ್ರಮೇಣ ಅವುಗಳನ್ನು ಹಾಳು ಮಾಡಿಬಿಡುತ್ತದೆ. ಹಾಗಾಗಿ ನಿಮ್ಮ ದೇಹವನ್ನು ದಣಿಯದಂತೆ ಕಾಪಾಡಿಕೊಳ್ಳುವ ಮೂಲಕ ನಿಮ್ಮ ಕೀಲುಗಳನ್ನು ಕಾಪಾಡಿಕೊಳ್ಳಿ.

ವಿಶ್ರಾಂತಿ ಪಡೆಯಿರಿ
ದೈಹಿಕವಾಗಿ, ಮಾನಸಿಕವಾಗಿ ವಿಶ್ರಾಂತಿಯನ್ನು ಪಡೆಯಿರಿ. ಇದು ನಿಮ್ಮ ಕೀಲುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಶ್ರಾಂತಿಯು ನಿಮ್ಮ ಅಂಗಾಂಗಳಿಗೆ ಅಗತ್ಯವಾದ ಪುನಃಶ್ಚೇತನವನ್ನು ಒದಗಿಸುತ್ತದೆ. ಮುಂದೆ ಆಗುವ ಅನಾಹುತಗಳನ್ನು ಇದು ತಪ್ಪಿಸುತ್ತದೆ.

ಒಂದು ಒಳ್ಳೆಯ ಡಯಟ್ ಸೇವಿಸಿ
ನೀವು ತಿನ್ನುವ ಆಹಾರವು ಸಹ ನಿಮ್ಮ ದೇಹದ ಮೇಲೆ ಪ್ರಭಾವವನ್ನು ಬೀರುತ್ತದೆ. ಹಾಗಾಗಿ ಆರೋಗ್ಯಕರವಾದ ಆಹಾರವನ್ನು ಸೇವಿಸಿ. ಇದರಿಂದ ಮೂಳೆಗಳಿಗೆ ಮತ್ತು ಕೀಲುಗಳಿಗೆ ಬೇಕಾದ ಅಗತ್ಯ ಪೋಷಕಾಂಶ ಲಭಿಸುತ್ತದೆ. ಹಾಗು ನಿಮ್ಮ ಕೀಲುಗಳು ಬಹುಕಾಲ ಆರೋಗ್ಯವಾಗಿರುತ್ತವೆ.

ಸ್ನಾಯುಗಳನ್ನು ಬೆಳೆಸಿ
ಅಧಿಕವಾದ ಸ್ನಾಯುಗಳನ್ನು ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ. ಆದರೆ ಒಂದು ಇತಿ ಮಿತಿಯಲ್ಲಿ ಸ್ನಾಯುಗಳನ್ನು ಬೆಳೆಸಿಕೊಂಡರೆ, ಅದರ ಒಳಗಡೆ ಇರುವ ಕೀಲುಗಳನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಸ್ನಾಯುಗಳ ಪದರವು ಅದರ ಒಳಗೆ ಇರುವ ಮೂಳೆಗಳನ್ನು ಕಾಪಾಡುತ್ತವೆ. ಮುಂದೆ ಇವು ಮುರಿಯದೆ, ನೋವಿಗೆ ಒಳಗಾಗದೆ ಇರಲು ಇವು ಅವಶ್ಯಕ.

ನಿಮ್ಮ ವಯಸ್ಸಿಗೆ ಅನುಗುಣವಾಗಿ ಕೆಲಸ ಕಾರ್ಯ ಮಾಡಿ
ಇದು ಒಂದು ಉತ್ತಮ ಪರಿಹಾರ. ನಿಮ್ಮ ವಯಸ್ಸಿಗೆ ತಕ್ಕಂತಹ ಕೆಲಸ ಕಾರ್ಯಗಳನ್ನು ಮಾತ್ರ ಮಾಡಿ. ಅದಕ್ಕಿಂತ ಹೆಚ್ಚು-ಕಡಿಮೆ ಇರುವ ಕೆಲಸಗಳನ್ನು ಮಾಡಲು ಹೋಗಬೇಡಿ. ಯಾವಾಗಲು ಈ ವಯಸ್ಸಿನಲ್ಲಿ ನಾನು ಇದನ್ನು ಮಾಡಬಹುದಾ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಿ.



Click it and Unblock the Notifications