Latest Updates
-
ಸೋಶಿಯಲ್ ಮೀಡಿಯಾ ಕಿರಿಕಿರಿ: ನಿಮ್ಮ ಸಂಬಂಧವನ್ನು ವದಂತಿಗಳಿಂದ ರಕ್ಷಿಸಿ ನೆಮ್ಮದಿಯಾಗಿರಲು ದಂಪತಿಗಳು ಪಾಲಿಸಬೇಕಾದ ಸೀಕ್ರೆಟ್ ಟಿಪ್ಸ್ -
ದಿಢೀರ್ ಬಿರುಗಾಳಿ ಮತ್ತು ಬಿಸಿಲಿನಿಂದ ನಿಮ್ಮ ಬಾಲ್ಕನಿ ಹಾಳಾಗುತ್ತಿದೆಯೇ? ಮನೆಯನ್ನು ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲಿನ ಬೇಗೆಯಿಂದ ಸುಸ್ತಾಗಿದ್ದೀರಾ? ಹೀಟ್ ಸ್ಟ್ರೋಕ್ ತಡೆಯಲು ಈ ತಂಪು ಆಹಾರಗಳೇ ನಿಮಗೆ ಮದ್ದು! -
ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದೀರಾ? ನಿಮ್ಮ ಜೇಬಿಗೆ ಹೊರೆಯಾಗದಂತೆ ಇಂಧನ ಉಳಿಸಲು ಇಲ್ಲಿವೆ ನೋಡಿ ಬೆಸ್ಟ್ ಟಿಪ್ಸ್! -
ಡೇಟಿಂಗ್ ಆಪ್ ಬಳಸುವ ಮುನ್ನ ಎಚ್ಚರ: ನಿಮ್ಮನ್ನು ಬಲಿಪಶು ಮಾಡುವ ಹನಿಟ್ರ್ಯಾಪ್ ಜಾಲದ ಅಸಲಿ ಮುಖ ಇಲ್ಲಿದೆ! -
ಬಿಸಿಲ ಬೇಗೆಯಿಂದ ಮನೆ ಮತ್ತು ಗಿಡಗಳನ್ನು ರಕ್ಷಿಸುವುದು ಹೇಗೆ? ತಾಪಮಾನ ಏರಿಕೆಯ ನಡುವೆ ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಉಪ್ಪಿನಕಾಯಿ, ಹಪ್ಪಳ ಇಷ್ಟನಾ? ಎಚ್ಚರ! ಹೃದಯದ ಆರೋಗ್ಯಕ್ಕಾಗಿ ಅಡುಗೆಯಲ್ಲಿ ಈ ಬದಲಾವಣೆ ಮಾಡಲೇಬೇಕು -
ಅಮೆಜಾನ್ ಸೇಲ್ ಮುಗಿಯಲು ಕೆಲವೇ ಗಂಟೆ ಬಾಕಿ: ಈ ಬ್ಯೂಟಿ ಮತ್ತು ಫ್ಯಾಷನ್ ಡೀಲ್ಸ್ ಮಿಸ್ ಮಾಡ್ಬೇಡಿ! -
ತೀವ್ರ ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಆರೋಗ್ಯವಾಗಿರಲು ಈ ಸುರಕ್ಷತಾ ಕ್ರಮಗಳನ್ನು ಮಿಸ್ ಮಾಡ್ಬೇಡಿ! -
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ!
ಸೈನಸ್ ಸೋಂಕಿನಿಂದ ಬಳಲುತ್ತಿದ್ದೀರಾ? ಇನ್ನು ಚಿಂತೆ ಬಿಡಿ!
ನಮ್ಮ ಮೂಗಿನ ಮೂಳೆ ಮೃದುವಾಗಿದ್ದು ಈ ಮೂಳೆಯ ಹಿಂದೆ, ಎರಡೂ ಕಣ್ಣುಗಳ ನಡುವೆ ಮತ್ತು ಹಣೆಭಾಗದ ಕೊಂಚ ಅಡಿಯಲ್ಲಿ (ಅಂದರೆ ಹುಬ್ಬು ಪ್ರಾರಂಭವಾಗುವ ಕೆಳಗೆ) ಟೊಳ್ಳು ಭಾಗವೊಂದಿದೆ. ಇದೇ ಕುಹರ ಅಥವಾ ಸೈನಸ್ (ಸೈನಸೈಟಿಸ್). ಈ ಟೊಳ್ಳಿನಲ್ಲಿ ಸೋಂಕು ಉಂಟಾದರೆ ಇದರ ಅಕ್ಕಪಕ್ಕ ಹಾದು ಹೋಗುವ ನರಗಳಲ್ಲಿ ಭಾರೀ ಸಂವೇದನೆಯುಂಟಾಗಿ ತಲೆನೋವು, ಮುಖದ ಸ್ನಾಯುಗಳಲ್ಲಿ ನೋವು, ಮೂಗಿನ ಒಳಗಿನಿಂದ ಗಂಟಲವರೆಗೆ ಭಾರೀ ಉರಿ, ನೋವು, ವಾಕರಿಕೆ ಮೊದಲಾದವು ಎದುರಾಗುತ್ತವೆ.
ಅದರಲ್ಲೂ ಸೈನಸ್ ಬ್ಲಾಕ್ ಆದಾಗ ಅಲ್ಲಿ ನೀರು ತುಂಬಿಕೊಂಡು ಬ್ಯಾಕ್ಟೀರಿಯಾ ಬೆಳೆದು ಸೋಂಕು ಕಾಣಿಸಿಕೊಳ್ಳಬಹುದು. ಸೈನಸ್ನ ಸೋಂಕು ಶೀತ, ಅಲರ್ಜಿ, ಮೂಗಿನ ಸಂಯುಕ್ತಗಳಿಂದ ಕಾಣಿಸಿಕೊಳ್ಳಬಹುದು. ಸೈನಸ್ನಿಂದ ತಲೆನೋವು, ಮುಖದಲ್ಲಿ ನೋವು ಅಥವಾ ಭಾದಿತ ಪ್ರದೇಶದಲ್ಲಿ ನೋವು ಕಾಣಿಸಿಕೊಳ್ಳಬಹುದು. ಇದು ಸೈನಸ್ಗೆ ಸಂಬಂಧಿಸಿದ ನೋವಾಗಿರಬಹುದು. ಅದರಲ್ಲೂ ಸೈನಸ್ನಿಂದ ಪೀಡಿತರಾಗಿರುವವರು ಬಗ್ಗಿದಾಗ ಅಥವಾ ಕೆಳಗಡೆ ನೋಡಿದಾಗ ಇದು ಮತ್ತಷ್ಟು ಹೆಚ್ಚಾಗಬಹುದು.

ಅಷ್ಟೇ ಅಲ್ಲದೆ ತಲೆಯ ಒಂದು ಭಾಗದಲ್ಲಿ ನೋವು ಕಾಣಿಸಿಕೊಂಡು ಬಳಿಕ ಇತರ ಭಾಗಗಳಿಗೆ ಹರಡಬಹುದು. ಕೆಲವೊಮ್ಮೆ ದಪ್ಪಗಿನ ಹಳದಿ ಬಣ್ಣದ ತುಂಬಾ ವಾಸನೆಯ ದ್ರವವು ಮೂಗಿನಿಂದ ಹೊರಬರಬಹುದು. ಮೂಗು ಕಟ್ಟುವುದು ಕೆಲವೊಮ್ಮೆ ಬಿಟ್ಟುಹೋಗಲು ಕೇಳುವುದೇ ಇಲ್ಲ. ಇದು ಕಫ ಅಥವಾ ವಾತಾವರಣದಿಂದ ಆಗಿರಲೂಬಹುದು. ಆರೋಗ್ಯ ಟಿಪ್ಸ್: ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!
ಸೈನಸ್ ಕೆಲವೊಮ್ಮೆ ತುಂಬಾ ನೋವುಂಟು ಮಾಡಬಹುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡಲು ನಿಮಗೆ ಸಾಧ್ಯವಾಗದೆ ಇರಬಹುದು. ಹಾಗಾಗಿ ಸೈನಸ್ಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಮತ್ತು ಅದಕ್ಕೆ ಸಂಬಂಧಿಸಿದ ನೋವನ್ನು ನಿವಾರಿಸುವುದು ಹೇಗೆಂದು ತಿಳಿದುಕೊಳ್ಳಿ.
ಉಪ್ಪು ಚಿಕಿತ್ಸೆಯು ಸೈನಸ್ನಿಂದ ನೈಸರ್ಗಿಕ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದೆ ಪರಿಹಾರ ನೀಡುವುದು. ಉಪ್ಪಿನ ಕೋಣೆಯಲ್ಲಿ ಕುಳಿತುಕೊಂಡರೆ ಉಪ್ಪಿನ ಕಣಗಳು ಉಸಿರಾಟದ ವ್ಯವಸ್ಥೆಯನ್ನು ಸ್ವಚ್ಛ ಮಾಡುವುದು ಮತ್ತು ವಿಷಕಾರಿ ಅಂಶಗಳನ್ನು ದೂರ ಮಾಡುವುದು. ಉಪ್ಪಿನ ಕಣಗಳು ಉಸಿರಾಟದ ವ್ಯವಸ್ಥೆಯ ಮೇಲ್ಭಾಗ ಮತ್ತು ಕೆಲಭಾಗವನ್ನು ತಲುಪುವುದು.
ಉಪ್ಪು ವೇಗವಾಗಿ ಹೀರಿಕೊಳ್ಳುವ ಗುಣವನ್ನು ಹೊಂದಿದೆ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ, ಉರಿಯೂತ ಶಮನಕಾರಿ ಗುಣಗಳಿವೆ. ಇದು ಕಿರಿಕಿರಿ ಮತ್ತು ಲೋಳೆ ಉಂಟು ಮಾಡುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಇದರಿಂದ ಸೈನಸ್ನಿಂದ ಹೆಚ್ಚುವರಿ ಲೋಳೆಯು ದೂರವಾಗಿ ಕೀಟಾಣು ಮತ್ತು ಸೂಕ್ಷ್ಮಜೀವಿಗಳಿಂದ ಸೈನಸ್ನ್ನು ರಕ್ಷಿಸುತ್ತದೆ.
ಆವಿಗೆ ಮುಖವನ್ನು ಒಡ್ಡುವುದು ಮತ್ತೊಂದು ರೀತಿಯ ಚಿಕಿತ್ಸೆಯಾಗಿದೆ. ಇದು ಮೂಗು ಕಟ್ಟುವುದನ್ನು ನಿವಾರಿಸಿ ವಿಶ್ರಾಂತಿ ನೀಡುವುದು. ಬಿಸಿಯಾದ ಪಾನೀಯ ಮತ್ತು ಸೂಪ್ ಕುಡಿಯುವುದರಿಂದಲೂ ನೆರವಾಗಬಹುದು. ವೈದ್ಯರು ಸೂಚಿಸಿದ ಮೂಗಿನ ಸ್ಪ್ರೇಯನ್ನು ಬಳಸಬಹುದಾಗಿದೆ. ಉರಿಯೂತ ಶಮನಕಾರಿಯಾಗಿರುವ ಆಹಾರವನ್ನು ಸೇವಿಸಿದರೆ ಉತ್ತಮ.
ಗೋಧಿ ಮತ್ತು ಹಾಲಿನ ಉತ್ಪನ್ನಗಳಿಂದ ಆದಷ್ಟು ದೂರವಿರಿ. ಇದರ ಬದಲಿಗೆ ಮೀನು, ಮಾಂಸ, ಕೋಳಿಮಾಂಸ, ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ. ಇದರಿಂದ ಸೈನಸೈಟಿಸ್ ನಿಂದ ಪರಿಹಾರ ಸಿಗುವುದು. ಯಾವುದೇ ಪರಿಹಾರ ಸಿಗದೆ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಕೆಲವೊಂದು ಸಂದರ್ಭಗಳಲ್ಲಿ ಸೈನಸೈಟಿಸ್ಗೆ ಆ್ಯಂಟಿಬಯೋಟಿಕ್ ನೀಡಬೇಕಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

