Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಿಡ್ನಿಯ ಆರೋಗ್ಯಕ್ಕೆ ಸರಳ ಟಿಪ್ಸ್, ಮರೆಯದೇ ಅನುಸರಿಸಿ
ದೇಹದ ಆರೋಗ್ಯ ಕಾಪಾಡುವಲ್ಲಿ ಅಂಗಾಂಗಗಳ ಪಾತ್ರ ಪ್ರಮುಖವಾಗಿದೆ. ದೇಹದ ಹೊರಗೆ ಅಥವಾ ಒಳಗಡೆ ಇರುವ ಅಂಗಾಂಗಗಳೇ ಆಗಿರಲಿ. ಇವುಗಳು ಸರಿಯಾಗಿ ಕಾರ್ಯನಿರ್ವಹಿಸುವುದು ತುಂಬಾ ಮುಖ್ಯ. ಇಂತಹ ಅಂಗಾಂಗಗಳಲ್ಲಿ ಪ್ರಮುಖವಾಗಿ ಹೃದಯ, ಶ್ವಾಸಕೋಶ, ಯಕೃತ್ ಮತ್ತು ಕಿಡ್ನಿ ನಮ್ಮ ಕಣ್ಣಿಗೆ ಕಾಣದಿದ್ದರೂ ಅವುಗಳ ಕೆಲಸ ಮಾತ್ರ ಅಪಾರ. ಕಿಡ್ನಿ ಕಲ್ಲಿನ ಸಮಸ್ಯೆಗೆ ಗಿಡಮೂಲಿಕೆಗಳ ನಲ್ಮೆಯ ಆರೈಕೆ
ಒಂದು ವೇಳೆ ಇವುಗಳಲ್ಲಿ ಯಾವುದೇ ಒಂದು ಅಂಗವು ಕೆಲಸ ನಿಲ್ಲಿಸಿದರೆ ಆಗ ನಮ್ಮ ಪ್ರಾಣವೇ ಹೋಗಬಹುದು ಅಥವಾ ಅನಾರೋಗ್ಯ ಕಾಡಬಹುದು. ಇದರಲ್ಲಿ ರಕ್ತವನ್ನು ಶುದ್ದೀಕರಿಸುವಂತಹ ಕಿಡ್ನಿ. ಇದು ದೇಹದಲ್ಲಿರುವ ವಿಷಕಾರಿ ಅಂಶ ಮತ್ತು ಕಲ್ಮಶವನ್ನು ಹೊರಗೆ ಹಾಕುತ್ತದೆ. ಆದರೆ ದೇಹದೊಳಗೆ ಅತಿಯಾದ ವಿಷಕಾರಿ ಅಂಶಗಳು ಸೇರಿಕೊಂಡಾಗ ಕಿಡ್ನಿ ಕೆಲಸ ತ್ರಾಸದಾಯಕವಾಗುವುದು. ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು
ಕಳಪೆ ಆಹಾರ ಮತ್ತು ಕುಡಿಯುವ ನೀರು ಶುಚಿಯಾಗದೆ ಇದ್ದರೆ ವಿಷಕಾರಿ ಅಂಶಗಳು ಹೆಚ್ಚಾಗಿ ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಇದು ನಿಮ್ಮ ಕಿಡ್ನಿ ಹಾಗೂ ಯಕೃತ್‌ಗೆ ಅಪಾಯಕಾರಿ. ಕಿಡ್ನಿಯನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಇದಕ್ಕಾಗಿ ನಾವು ಸಾವಿರಾರು ರೂಪಾಯಿ ವ್ಯಯಿಸಬೇಕಿಲ್ಲ. ನೈಸರ್ಗಿಕ ಆಹಾರಗಳಿಂದಲೇ ನಾವು ಕಿಡ್ನಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು. ಅದು ಹೇಗೆಂದು ತಿಳಿದುಕೊಳ್ಳಿ...

ಟಿಪ್ಸ್ #1
ಕೋಸುಗಡ್ಡೆ, ಪಾಲಕ್, ಕ್ಯಾರೆಟ್, ಲೆಟಿಸ್, ಸೌತೆಕಾಯಿ ಮತ್ತು ಗುಡ್ಡಸೋಂಪು ತರಕಾರಿಗಳಲ್ಲಿರುವ ಪೋಷಕಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಟಿಪ್ಸ್ #2
ಲಿಂಬೆ ಜ್ಯೂಸ್ ನ್ನು ನಿಯಮಿತವಾಗಿ ಕುಡಿಯುವುದರಿಂದ ಕಿಡ್ನಿಯ ಕಲ್ಲು ಮೂಡುವುದಿಲ್ಲ ಎಂದು ಅಧ್ಯಯನಗಳು ಹೇಳಿವೆ.

ಟಿಪ್ಸ್ #3
ನಿಮಗೆ ತರಕಾರಿಗಳು ಇಷ್ಟವಿಲ್ಲವೆಂದಾದರೆ ಹಣ್ಣುಗಳಾದ ಆ್ಯಪಲ್, ಪೀಚ್, ಅನಾನಸ್, ಪೇರಳೆ ಮತ್ತು ಕಿತ್ತಳೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ.

ಟಿಪ್ಸ್ #4
ಕ್ರ್ಯಾನ್ಬೆರಿ ಜ್ಯೂಸ್ ಮೂತ್ರದ ಕೆಲವೊಂದು ಸೋಂಕುಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ. ಸಾವಯದ ಕ್ರ್ಯಾನ್ಬೆರಿ ಬಳಸಿಕೊಂಡು ಜ್ಯೂಸ್ ಮಾಡಿ ಕುಡಿಯಿರಿ.

ಟಿಪ್ಸ್ #5
ಲಿಂಬೆ ರಸ, ಆ್ಯಪಲ್ ಸೀಡರ್ ವಿನೆಗರ್ ಮತ್ತು ಒಂದು ಕಪ್ ನೀರು ಹಾಕಿ ಕಲಸಿ ಕುಡಿಯಿರಿ. ನಿಯಮಿತವಾಗಿ ಇದನ್ನು ಕುಡಿಯುತ್ತಾ ಇರಿ. ಇದು ಕಿಡ್ನಿಗೆ ಒಳ್ಳೆಯದು.

ಟಿಪ್ಸ್ #6
ಬೀಟ್ ರೂಟ್ ನಲ್ಲಿ ಕೆಲವೊಂದು ರೀತಿಯ ಸಸ್ಯಜನ್ಯ ರಾಸಾಯನಿಕಗಳಿವೆ. ಇದು ಮೂತ್ರದಲ್ಲಿ ಆ್ಯಸಿಡ್ ಮಟ್ಟವನ್ನು ಕಡಿಮೆ ಮಾಡುವುದು. ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಲು ಬೀಟ್ ರೂಟ್ ಜ್ಯೂಸ್ ಕುಡಿಯಿರಿ.

ಟಿಪ್ಸ್ #7
ಅಂತಿಮವಾಗಿ ನಿಯಮಿತವಾಗಿ ಸರಿಯಾಗಿ ನೀರು ಕುಡಿಯಿರಿ. ನೀರಿನ ಹೊರತಾಗಿ ನಿಮ್ಮ ಕಿಡ್ನಿಯನ್ನು ಆರೋಗ್ಯವಾಗಿಡಲು ಸಾಧ್ಯವಿಲ್ಲ.



Click it and Unblock the Notifications
