Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಮುಟ್ಟು ನಿಲ್ಲುವ ಅವಧಿಯಲ್ಲಿ ಪಾಲಿಸಬೇಕಾದ ಎಚ್ಚರಿಕೆಯ ಕ್ರಮಗಳೇನು?
ಸ್ಥೂಲ ಕಾಯ, ಸುಸ್ತು ,ಮೂಡಿಯಾಗಿರುವಿಕೆ ಮತ್ತು ದೇಹ ಬಿಸಿಯಾಗುವಿಕೆ ಮುಂತಾದ ಸಮಸ್ಯೆಗಳೆಲ್ಲವು ಸೇರಿಕೊಂಡು ನೀವು ಮತ್ತೊಂದು ತುಂಡು ಕೇಕ್ ಅಥವಾ ಎರಡನೆ ಮಾರ್ಟಿನಿಯನ್ನು ಸೇವಿಸಲು ಬಿಡುವುದಿಲ್ಲ. ಏಕೆಂದರೆ ನೀವು ಇವುಗಳನ್ನು ಆಯ್ಕೆ ಮಾಡಿಕೊಂಡಲ್ಲಿ, ನಿಮ್ಮ ಮುಟ್ಟು ನಿಲ್ಲುವ ಅವಧಿಯನ್ನು ಇವುಗಳು ಮತ್ತಷ್ಟು ಅಪಾಯಕಾರಿಯನ್ನಾಗಿ ಮಾಡಿಬಿಡುತ್ತವೆ.
ಅದಕ್ಕಾಗಿ ಈ ಅವಧಿಯಲ್ಲಿ ನೀವು ಸ್ವಲ್ಪ ತಿನ್ನುವ ವಿಚಾರಗಳಲ್ಲಿ ಜಾಗರೂಕತೆಯನ್ನು ಮತ್ತು ದೇಹಕ್ಕೆ ಅಗತ್ಯವಾದ ವ್ಯಾಯಾಮವನ್ನು ನೀಡುವುದು ಒಳ್ಳೆಯದು. ಸಕ್ಕರೆ ಇರುವ ಡೆಸರ್ಟ್‌ಗಿಂತ ಹಣ್ಣುಗಳನ್ನು ಸೇವಿಸುವ ಸುಲಭವಾದ ಡಯಟ್ ಪಾಲಿಸುವ ಮೂಲಕ ನಿಮ್ಮ ದಿನ ಮತ್ತು ಮೂಡಿನಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಮುಟ್ಟು ನಿಂತ ಮೇಲೂ ಮಗುವಿನ ಜನನ ಸಾಧ್ಯವೇ?

ಕೊಬ್ಬಿರುವ ಮಾಂಸ
ಮುಟ್ಟು ನಿಲ್ಲುವ ಅವಧಿಗೆ ತಲುಪುವ ಹೆಂಗಸರು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಲಿಲ್ಲವಾದಲ್ಲಿ, ಮೊದಲ ಎರಡು ವರ್ಷಗಳಲ್ಲಿ 8 ರಿಂದ 15 ಪೌಂಡ್ ತೂಕವನ್ನು ಗಳಿಸಿಕೊಳ್ಳುತ್ತಾರೆ. ಅದಕ್ಕಾಗಿ ನೀವು ಸೇವಿಸುವ ದೈನಂದಿನ ಆಹಾರದಲ್ಲಿ ಕೊಬ್ಬು ಶೇ.20 ಇದ್ದರೆ ಒಳ್ಳೆಯದು. ನಿಮಗೆ ಪ್ರತಿದಿನ ಅಗತ್ಯವಿರುವ ಕ್ಯಾಲೋರಿಗಳಲ್ಲಿ 25% ರಿಂದ 35% ರಷ್ಟನ್ನು ಕೊಬ್ಬುಗಳೆ ಒದಗಿಸುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ನಿಮ್ಮ ದೈನಂದಿನ ಕ್ಯಾಲೋರಿಗಳಲ್ಲಿ 7% ರಷ್ಟು ಸ್ಯಾಚುರೇಟೇಡ್ ಕೊಬ್ಬನ್ನು ಸಹ ನಿಯಂತ್ರಿಸಿ. ಸ್ಯಾಚುರೇಟೇಡ್ ಕೊಬ್ಬು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ನೀವು ಸ್ವಲ್ಪ ಪ್ರಯೋಗಶೀಲರಾಗುವ ಅಗತ್ಯವಿರುತ್ತದೆ. ಅದಕ್ಕಾಗಿ ಕೆಂಪು ಮಾಂಸವನ್ನು ಸೇವಿಸುವ ಬದಲಿಗೆ ಗ್ರಿಲ್ ಮಾಡಲಾದ ಕೋಳಿ ಮಾಂಸವನ್ನು ಸೇವಿಸಬಹುದು.

ಸಕ್ಕರೆ
ಮುಟ್ಟು ನಿಲ್ಲುವ ಅವಧಿಯಲ್ಲಿ ಸಕ್ಕರೆಯನ್ನು ಕಡಿಮೆ ಸೇವಿಸುವ ಮೂಲಕ ಸ್ಥೂಲಕಾಯ ಹಾಗು ಸುಸ್ತನ್ನು ಹತೋಟಿಯಲ್ಲಿಟ್ಟುಕೊಳ್ಳಿ. ದಿನಕ್ಕೆ ಕನಿಷ್ಠ 10 ಗ್ರಾಂನಷ್ಟು ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದ ಸಕ್ಕರೆಯನ್ನು ಸೇವಿಸಿ. ನಿಮಗೆ ಬೇಕಾದಲ್ಲಿ, ಒಂದು ಸಣ್ಣ ಕುಕಿಯನ್ನೊ ಅಥವಾ ಬರ್ಫಿಯನ್ನೊ ಸೇವಿಸಬಹುದು. ಆದರೆ ಮುಟ್ಟು ನಿಲ್ಲುವ ಅವಧಿಯಲ್ಲಿ ಹಣ್ಣುಗಳು, ಅದರಲ್ಲಿಯೂ ವಿಶೇಷವಾಗಿ ಬೆರ್ರಿಗಳು ಮತ್ತು ತರಕಾರಿಗಳು ಈ ನಿಟ್ಟಿನಲ್ಲಿ ಒಳ್ಳೆಯದು.

ಸೋಡಿಯಂ
ಸೋಡಿಯಂ ಹೆಚ್ಚಾಗಿರುವ ಆಹಾರವು ಅಧಿಕ ರಕ್ತದೊತ್ತಡದ ಜೊತೆಗೆ ತಳುಕು ಹಾಕಿಕೊಂಡಿರುತ್ತದೆ. ಆದ್ದರಿಂದ ಹೊಗೆಯಾಡುವ, ಉಪ್ಪು ಅಧಿಕವಿರುವ, ಬೆಂಕಿಯಲ್ಲಿ ಬೇಯಿಸಿದ ಆಹಾರಗಳನ್ನು ಸೇವಿಸಬೇಡಿ. ಇಂತಹ ಆಹಾರಗಳಲ್ಲಿ ಅಧಿಕ ಪ್ರಮಾಣದ ನೈಟ್ರೇಟ್‍ಗಳು ಇರುತ್ತವೆ. ಈ ನೈಟ್ರೇಟ್ ಕ್ಯಾನ್ಸರ್‌ಗಳಿಗೆ ಮೂಲ ಕಾರಣವಾಗಿರುತ್ತವೆ.

ಸಂಸ್ಕರಿಸಿದ ಕಾರ್ಬೋಹೈಡ್ರೇಟ್‍ಗಳು
ಬಿಳಿಯ ಬ್ರೆಡ್, ಪಾಸ್ತಾ, ಅನ್ನ, ಆಲೂಗಡ್ಡೆಗಳು, ಜೋಳ, ಇವೆಲ್ಲವುಗಳಲ್ಲಿ ಕಾರ್ಬೋಹೈಡ್ರೇಟ್ ಅಧಿಕ ಪ್ರಮಾಣದಲ್ಲಿರುತ್ತವೆ. ಜೊತೆಗೆ ಇವೆಲ್ಲವು ಮುಟ್ಟು ನಿಲ್ಲುವಾಗ ಕಾಣಿಸಿಕೊಳ್ಳುವ ಸುಸ್ತು ಮತ್ತು ಖಿನ್ನರಾಗಿ ಕುಳಿತುಕೊಳ್ಳುವಂತಹ ಸಂದರ್ಭಗಳನ್ನು ಹೆಚ್ಚು ಮಾಡುತ್ತವೆ. ಅದಕ್ಕಾಗಿ ಈ ಅವಧಿಯಲ್ಲಿ ನೀವು ಸ್ವಲ್ಪ ವೋಲ್ ಗ್ರೇನ್ ಹೆಚ್ಚಾಗಿ ಸೇವಿಸಿ, ಇಲ್ಲವೆ ನೀವು ಸೇವಿಸುವ ಕಾರ್ಬೋಹೈಡ್ರೇಟ್ ಆಹಾರವನ್ನು ಕಡಿಮೆ ಸೇವಿಸಿ.

ಕೆಫಿನ್
ಕೆಫಿನ್ ನಿಮ್ಮನ್ನು ಮತ್ತಷ್ಟು ಮೂಡಿಯನ್ನಾಗಿ ಹಾಗು ಸುಸ್ತಾಗುವಂತೆ ಮಾಡುತ್ತದೆ. ವಿಶೇಷವಾಗಿ ಕೆಫಿನ್ ಅನ್ನು ಮಧ್ಯಾಹ್ನ ಸೇವಿಸಿದರೆ, ಇದು ನಿದ್ರೆಯ ಮೇಲು ಸಹ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ನೀವು ಮೂಡಿಯಾಗುತ್ತೀರಿ ಮತ್ತು ಸುಸ್ತಾಗುತ್ತೀರಿ. ಕೆಫಿನ್‍ನಿಂದ ಉಂಟಾಗುವ ಮತ್ತೊಂದು ಸಮಸ್ಯೆಯೆಂದರೆ, ನಾವು ಕೆಫಿನ್ ಅನ್ನು ಪ್ರತ್ಯೇಕವಾಗಿ ಸೇವಿಸುವುದಿಲ್ಲ. ಅದರ ಬದಲಿಗೆ ಹಾಲು, ಕೆನೆ ಮತ್ತು ಸಕ್ಕರೆಗಳನ್ನು ಹಾಕಿಕೊಂಡು ಸೇವಿಸುತ್ತೇವೆ. ಹಾಗಾಗಿ ಮುಟ್ಟು ನಿಲ್ಲುವ ಅವಧಿಯಲ್ಲಿ ಹರ್ಬಲ್ ಪೆಪ್ಪರ್‌ಮಿಂಟ್ ಟೀ ಅಥವಾ ಕೆಫಿನ್ ರಹಿತ ಟೀಯನ್ನು ಸೇವಿಸಿ.

ಆಲ್ಕೋಹಾಲ್
ಯಾವಾಗಲೋ ಒಮ್ಮೆ ಸ್ನೇಹಿತರ ಜೊತೆಗೂಡಿ ಒಂದು ಗ್ಲಾಸ್ ವೈನ್ ಅನ್ನು ಸೇವಿಸುವುದರಿಂದ ಮುಟ್ಟು ನಿಲ್ಲುವ ಅವಧಿಯಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮವಾಗುವುದಿಲ್ಲ. ಆದರೆ ಪ್ರತಿನಿತ್ಯ ಎರಡು ಅಥವಾ ಮೂರು ಪಾನೀಯಗಳನ್ನು ಸೇವಿಸುವುದರಿಂದ ಈ ಅವಧಿಯಲ್ಲಿ ನಿಮ್ಮ ದೇಹದಲ್ಲಿ ಕ್ಯಾಲೋರಿಗಳ ಪ್ರಮಾಣ ಅಧಿಕವಾಗುತ್ತವೆ. ಇದರಿಂದ ಸುಸ್ತು ಮತ್ತು ಮೂಡಿಯಾಗುವುದು ಸಹ ಮತ್ತಷ್ಟು ಹೆಚ್ಚುತ್ತದೆ. ಆದ್ದರಿಂದ ಆದಷ್ಟು ಆಲ್ಕೋಹಾಲನ್ನು ಸೇವಿಸುವುದನ್ನು ಬಿಟ್ಟು ಬಿಡಿ ಅಥವಾ ಅದನ್ನು ನೀರು, ಇಲ್ಲವೆ ಸೋಡಾವನ್ನು ಮಿಶ್ರಣ ಮಾಡಿಕೊಂಡು ಆಲ್ಕೋಹಾಲ್ ಸೇವಿಸಿ. ಇದನ್ನು ಸೇವಿಸುವ ಅವಧಿಯನ್ನು ಸಹ ಗಂಟೆಗಟ್ಟಲೆ ವಿಸ್ತರಿಸಬಹುದು.

ಮಸಾಲೆಯುತ ಆಹಾರಗಳು
ಮಸಾಲೆಯುತ ಆಹಾರಗಳು ದೇಹ ಬಿಸಿಯಾಗುವಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಥವಾ ನಿಮಗೆ ಮತ್ತಷ್ಟು ಅಸೌಖ್ಯವನ್ನುಂಟು ಮಾಡುತ್ತವೆ. ನೀವು ಮಸಾಲೆ ಪದಾರ್ಥಗಳನ್ನು ಅಧಿಕವಾಗಿ ಸೇವಿಸಿದಾಗ ನಿಮ್ಮ ದೇಹದ ಉಷ್ಣಾಂಶವು ಅಧಿಕವಾಗುತ್ತದೆ ಮತ್ತು ನಿಮಗೆ ಬೆವರು ಬರುತ್ತದೆ. ಇದು ಸಾಮಾನ್ಯವಾಗಿ ದೇಹ ಬಿಸಿಯಾದಾಗ ಕಂಡು ಬರುತ್ತಿರುತ್ತದೆ. ಒಂದು ವೇಳೆ ನೀವು ಮಸಾಲೆ ಪದಾರ್ಥಗಳನ್ನು ಸೇವಿಸಿದರು, ಮುಟ್ಟು ನಿಲ್ಲುವ ಅವಧಿಯಲ್ಲಿ ಇದರ ಸೇವನೆಯನ್ನು ಕಡಿಮೆ ಮಾಡುವುದು ಒಳಿತು. ಇದನ್ನು ಸೇವಿಸುವಾಗ ಇದರಿಂದ ನಿಮ್ಮ ದೇಹದ ಮೇಲೆ ಉಂಟಾಗುವ ಪರಿಣಾಮಗಳನ್ನು ಮಾತ್ರ ಮರೆಯದಿರಿ.

ಬಿಸಿ ಆಹಾರ
ನಿಮ್ಮ ದೇಹ ಬಿಸಿಯಾಗಿರುವಾಗ ಬಿಸಿಯಾದ ಸೂಪ್‍ನಂತಹ ಆಹಾರ ಪದಾರ್ಥಗಳನ್ನು ಸೇವಿಸಲು ಆಗಾಗ ಹೋಗಬೇಡಿ. ನಿಮ್ಮ ಹೊಟ್ಟೆ ಹಸಿವನ್ನು ಹೆಚ್ಚಿಸಿಕೊಳ್ಳಲು, ನೀವು ಸೈಡ್ ಸಲಾಡ್ ಮುಂತಾದ ಆಹಾರ ಪದಾರ್ಥಗಳನ್ನು ಪ್ರಯತ್ನಿಸಿ ನೋಡಬಹುದು. ದೇಹ ಬಿಸಿಯಾದಾಗ, ಫ್ರಿಡ್ಜ್‌ನಲ್ಲಿರಿಸಿದ ತರಕಾರಿಗಳು, ಹಣ್ಣುಗಳು ಅಥವಾ ತಣ್ಣಗೆ ಕೊರೆಯುವ ನೀರನ್ನು ಗುಟುಕು ಗುಟುಕಾಗಿ ಕುಡಿಯುವ ಮೂಲಕ ನಿಯಂತ್ರಣಕ್ಕೆ ತರಬಹುದು.



Click it and Unblock the Notifications











