Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಪದೇ ಪದೇ ಕಾಡುವ ಬೆನ್ನು ನೋವಿನ ಸಮಸ್ಯೆಗೆ ಪರಿಹಾರವೇನು?
ಗಂಡಸರು ಮತ್ತು ಮಹಿಳೆಯರು ಎನ್ನದೆ ಎಲ್ಲರೂ ಸಾಮಾನ್ಯವಾಗಿ ಬೆನ್ನು ನೋವಿನಿಂದ ನರಳುತ್ತಿರುತ್ತಾರೆ. ಈ ಸಾಮಾನ್ಯವಾದ ಸಮಸ್ಯೆಯನ್ನು ನಿಯಂತ್ರಿಸಬಹುದು. ಆದರೆ ಅದಕ್ಕಾಗಿ ನೀವು ದಿನ ನಿತ್ಯ ಕೆಲವೊಂದು ಅಂಶಗಳನ್ನು ತಪ್ಪದೆ ಮಾಡಬೇಕಾಗುತ್ತದೆ. ಬೆನ್ನು ನೋವನ್ನು ನಿಯಂತ್ರಿಸಲು, ನೀವು ಅತಿಯಾದ ಭಾರವನ್ನು ಎತ್ತಬಾರದು. ಇದು ಈ ಸಮಸ್ಯೆಯ ಮೊದಲ ಪರಿಹಾರ, ಇದನ್ನು ತಪ್ಪದೆ ಪಾಲಿಸಬೇಕು.
ಅದರಂತೆ ಸಿ-ಸೆಕ್ಷನ್ ಶಸ್ತ್ರ ಚಿಕಿತ್ಸೆಗೆ ಒಳಗಾದ ಹೆಂಗಸರು ಭಾರೀ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇವರಿಗೆ ಬೆನ್ನು ನೋವು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ತಪ್ಪಾದ ಭಂಗಿಯಲ್ಲಿ ಕೂರುವುದರಿಂದ ಸಹ ಬೆನ್ನು ನೋವು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನೀವು ಕೆಲಸ ಮಾಡುವಾಗ ಸರಿಯಾದ ಭಂಗಿಯಲ್ಲಿ ತಪ್ಪದೆ ಕೂರಲು ಪ್ರಯತ್ನಿಸಿ.
ನಿಮ್ಮ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‍ಗಳು ನಿಮ್ಮ ಕಣ್ಣಿನ ದೃಷ್ಟಿಗೆ ನೇರವಾಗಿ ಇರುವಂಟೆ ನೋಡಿಕೊಳ್ಳಿ. ಬನ್ನಿ ನಿಮ್ಮ ಬೆನ್ನು ನೋವು ನಿವಾರಿಸಲು ನಿಮಗೆ ಅಗತ್ಯವಾದ ಕೆಲವು ಮಾಹಿತಿಗಳನ್ನು ನಾವು ತಂದಿದ್ದೇವೆ. ಅವುಗಳ ಕುರಿತು ಒಂದು ನೋಟ ಹರಿಸಿ ಬರೋಣ. ಬೆನ್ನುನೋವಿನ ನಿವಾರಣೆಗೆ ಐದು ಟಿಪ್ಸ್

ನಿಮ್ಮ ಹಾಸಿಗೆ
ನಿಮಗೆ ಬೆನ್ನು ನೋವು ಇದ್ದಲ್ಲಿ ಮೊದಲು ನಿಮ್ಮ ಹಾಸಿಗೆಯನ್ನು ಪರೀಕ್ಷಿಸಿ. ಮೃದುವಾದ ಹಾಸಿಗೆಯು ನಿಮಗೆ ಸುಖಕರವಾಗಿರುತ್ತದೆ ಮತ್ತು ಗಟ್ಟಿಯಾದ ಹಾಸಿಗೆಯು ನಿಮಗೆ ಬೆನ್ನು ನೋವನ್ನು ತರುತ್ತದೆ.
ನಿಮ್ಮ ಭಂಗಿ
ಮನೆಯಲ್ಲಾಗಲಿ, ಕಚೇರಿಯಲ್ಲಾಗಲಿ ಸರಿಯಾದ ಭಂಗಿಯಲ್ಲಿ ಕೂರಲು ಪ್ರಯತ್ನಿಸಿ. ಇದರಿಂದ ಬೆನ್ನು ನೋವನ್ನು ನಿಯಂತ್ರಿಸಿಕೊಳ್ಳಬಹುದು.
ಸ್ನಾಯುಗಳ ಸಮಸ್ಯೆ
ಒಂದೇ ಭಂಗಿಯಲ್ಲಿ ಸುಮಾರು ಹೊತ್ತು ನಿಲ್ಲಲು ಹೋಗಬೇಡಿ. ಇದರಿಂದ ನಿಮ್ಮ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈ ಒತ್ತಡವು ಬೆನ್ನು ನೋವಿಗೆ ಕಾರಣವಾಗಿ ಪರಿವರ್ತನೆಯಾಗುತ್ತದೆ. ನಿರಂತರ ಕಂಪ್ಯೂಟರ್ ಬಳಸುವುವಾಗ ಕಣ್ಣುಗಳ ರಕ್ಷಣೆಗೆ 10 ಸಲಹೆಗಳು
ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು
ಇದು ಹೆಂಗಸರಿಗೆ ಒಪ್ಪುವ ಸಲಹೆ- ಸಾಮಾನ್ಯವಾಗಿ ಹೆಂಗಸರು ಕೆಲಸದ ಸ್ಥಳದಲ್ಲಿ ಬಹಳ ಹೊತ್ತು ಕುಳಿತುಕೊಳ್ಳುವಾಗ ಒಂದೇ ಕಾಲನ್ನು ಕಾಲ ಮೇಲೆ ಹಾಕಿಕೊಂಡು ಕೂರಬೇಡಿ. ಕಾಲುಗಳನ್ನು ಬದಲಾಯಿಸುವ ಮೂಲಕ ನಿಮ್ಮ ಬೆನ್ನು ನೋವಿನ ಪ್ರಮಾಣವನ್ನು ಅಥವಾ ಬೆನ್ನು ನೋವು ಬರುವ ಸಾಧ್ಯತೆಯನ್ನು ನಿಯಂತ್ರಿಸಿಕೊಳ್ಳಬಹುದು.
ವ್ಯಾಲೆಟ್ ಸಮಸ್ಯೆ
ನಿಮಗೆ ಗೊತ್ತೇ? ಡೆಸ್ಕ್‌ಟಾಪ್ ಮುಂದೆ ಕೆಲಸ ಮಾಡುವಾಗ ಹಿಂದಿನ ಪಾಕೆಟ್‌ನಲ್ಲಿ ವ್ಯಾಲೆಟ್ ಇರಿಸಿಕೊಳ್ಳುವುದರಿಂದ ಬೆನ್ನು ನೋವು ಬರುತ್ತದೆ. ಇದನ್ನು ನಿಯಂತ್ರಿಸುವುದರಿಂದ ಬೆನ್ನು ನೋವು ಬರದಂತೆ ತಡೆಯಬಹುದು.
ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ
ಬೆನ್ನು ನೋವು ನಿವಾರಣೆಗೆ ಅಧಿಕ ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ. ವೈದ್ಯರ ಸಲಹೆ ಮೇರೆಗೆ ಕ್ಯಾಲ್ಸಿಯಂ ಇರುವ ಮಾತ್ರೆಗಳನ್ನು ಸೇವಿಸಬಹುದು. ಅಲ್ಲದೆ ಪ್ರತಿನಿತ್ಯ 1-2 ಲೋಟ ಹಾಲು ಕುಡಿಯಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

