Latest Updates
-
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ -
ಬಿಸಿಗಾಳಿ ಕಾಟ: ಮದುವೆ ಡೇಟಿಂಗ್ ಪ್ಲಾನ್ ಹಾಳಾಗದಂತೆ ತಡೆಯುವುದು ಹೇಗೆ? -
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ
ಧ್ಯಾನವನ್ನು ಇಷ್ಟಪಡಲು ಕಾರಣಗಳು
ಯೋಗ ಮತ್ತು ಧ್ಯಾನವನ್ನು ಮಾಡುವುದರಿಂದ ದೇಹವನ್ನು ಚಟುವಟಿಕೆಯುಕ್ತವಾಗಿ ಇಟ್ಟುಕೊಳ್ಳುವುದರ ಜೊತೆಗೆ ಮನಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.ಕೆಲವು ಕಾಯಿಲೆಗಳಿಗೆ ಒತ್ತಡದಿಂದ ಮುಕ್ತರಾಗುವುದೇ ಪರಿಹಾರ.ಹೀಗೆ ಒತ್ತಡ ಮುಕ್ತರಾಗಲು ಯೋಗ ಅಥವಾ ಧ್ಯಾನ ಸಹಾಯಕ.ನಿಯಮಿತವಾಗಿ ಧ್ಯಾನ ಮಾಡುವುದರಿಂದ ಒತ್ತಡ ನಿವಾರಣೆ,
ಅನಿಯಮಿತ ಮುಟ್ಟಿಗೂ, ಮಾನಸಿಕ ಸ್ಥಿತಿಗೂ ಸಂಬಂಧವಿದೆ
ಏಕಾಗ್ರತೆ,ಸರಿಯಾದ ನಿದ್ದೆ,ಉಲ್ಲಾಸ ಇವುಗಳನ್ನು ಪಡೆಯಬಹುದು ಎನ್ನಲಾಗುತ್ತದೆ.ಇದಲ್ಲದೆ ಧ್ಯಾನದಿಂದಾಗುವ ಅನೇಕ ಸಹಾಯಕವನ್ನು ಇಲ್ಲಿ ನೀಡಿದ್ದೇವೆ. ನೀವು ಪ್ರಯತ್ನಿಸಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಕಳೆದ ತಿಂಗಳು ಆರೋಗ್ಯ ಮನಶ್ಯಾಸ್ತ್ರದ ಸಂಶೋಧನಾ ಪತ್ರಿಕೆ ಪ್ರಕಟಪಡಿಸಿದಂತೆ ಸಾವಧಾನತೆ ಕೇವಲ ಒತ್ತಡ ಕಡಿಮೆ ಮಾಡಲು ಮಾತ್ರವಲ್ಲ,ಕಾರ್ಟಿಸೋಲ್ ಎಂಬ ಒತ್ತಡವನ್ನು ಕಡಿಮೆ ಮಾಡುವ ಹಾರ್ಮೊನನ್ನು ಬಿಡುಗಡೆ ಮಾಡಲು ಕೂಡ ಕಾರಣವಾಗುತ್ತದೆ.
ಕಂಪ್ಯೂಟರ್ ಮೆಡಿಟೇಷನ್ ಮಾಡುವುದು ಹೇಗೆ?

ನಮ್ಮ ನಿಜವಾದ ಅಸ್ತಿತ್ವ ತಿಳಿದುಕೊಳ್ಳಲು ಇದು ಸಹಾಯಕ:-
ನಮ್ಮನ್ನು ನಾವು ಸರಿಯಾಗಿ ತಿಳಿದುಕೊಳ್ಳಲು ಈ ಧ್ಯಾನ ಸಹಾಯಕವಾಗಬಲ್ಲದು.ಮನೋವೈಜ್ಞಾನಿಕ ಪತ್ರಿಕೆಯ ಅಧ್ಯಯನದ ಪ್ರಕಾರ ಧ್ಯಾನ ನಮ್ಮ ನ್ಯೂನ್ಯತೆ ಕಂಡುಕೊಂಡು ಸರಿಹೊಂದಲು ಸಹಕರಿಸುತ್ತದೆ.

ಸಂಧಿವಾತ ಹೋಗಲಾಡಿಸಲು ಸಹ ಇದು ಸಹಾಯಕ:-
2001 ರಲ್ಲಿ ಸಂಧಿವಾತ ರೋಗ ಪತ್ರಿಕೆ ನಡೆಸಿದ ಅಧ್ಯಯನದ ಪ್ರಕಾರ ಧ್ಯಾನ ಸಂಧಿವಾತದ ನೋವನ್ನು ಕಡಿಮೆ ಮಾಡಲು ಸಾಧ್ಯವಿಲ್ಲದಿದ್ದರೂ ಕೂಡ ಅದರಿಂದಾಗುವ ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ ಎನ್ನುತ್ತದೆ.

ಮೆದುಳನ್ನು ಸುರಕ್ಷಿತ ಆಯಾಮಕ್ಕೆ ಬದಲಾಯಿಸುತ್ತದೆ:-
ಸಂಶೋಧನೆಗಳು ಕಂಡು ಹಿಡಿದ ಪ್ರಕಾರ ಧ್ಯಾನದ ವಿಧಾನವಾದ ಸುಸಂಯೋಜಿತ ದೇಹ ಮತ್ತು ಮನಸ್ಸಿನ ತರಭೇತಿ ಮೆದುಳನ್ನು ಸುರಕ್ಷಿತ ಆಯಾಮಕ್ಕೆ ಬದಲಾಯಿಸುತ್ತದೆ.ಧ್ಯಾನದ ಅಭ್ಯಾಸದಿಂದ ಮೆದುಳಿನಲ್ಲಿರುವ ಅಕ್ಸೊನ ಸಾಂಧ್ರತೆಯನ್ನು ಹೆಚ್ಚಿಸುತ್ತದೆ.ಮೆದುಳಿನ ಭಾಗದಲ್ಲಿರುವ ಅಕ್ಸೊನದ ಹತ್ತಿರದಲ್ಲಿರುವ ಸುರಕ್ಷಿತ ನರತಂತು ಮೆಲಿನ್ ನ ಸಂಪರ್ಕ ಸಂಕೇತವನ್ನು ಕೂಡ ಹೆಚ್ಚಿಸುತ್ತದೆ.

ಸಂಗೀತವನ್ನು ಆಲಿಸಲು ಸಹಕರಿಸುತ್ತದೆ:-
ಸಂಗೀತ ಮನೋಶಾಸ್ತ್ರದ ಹೇಳಿಕೆ ಪ್ರಕಾರ ಧ್ಯಾನವು ಸಂಗೀತವನ್ನು ಆಲಿಸಲು ಮತ್ತು ಅದನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಹಾಯಕವಾಗುತ್ತದೆ.

ನಾಲ್ಕು ವಿಭಿನ್ನ ರೀತಿಯಲ್ಲಿ ಸಹಕರಿಸುತ್ತದೆ:-
ಮನೋಶಾಸ್ತ್ರ ವಿಜ್ಞಾನ ತಿಳಿಸುವ ಪ್ರಕಾರ ಧ್ಯಾನದಿಂದ ನಮಗೆ ನಾಲ್ಕು ವಿಭಿನ್ನ ಸಹಕಾರ ದೊರೆಯುತ್ತದೆ.ಅವುಗಳೆಂದರೆ ದೇಹದ ಅರಿವು,ಸ್ವಯಂ ಅರಿವು,ಭಾವನಾ ನಿಯಂತ್ರಣ ಮತ್ತು ಗಮನದ ನಿಯಂತ್ರಣ ಅಥವಾ ಏಕಾಗ್ರತೆ ಇವುಗಳಿಗೆ ಸಹಾಯಕ.

ಗರ್ಭಿಣಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಖಿನ್ನತೆ ಹೋಗಲಾಡಿಸುತ್ತದೆ:-
ಐದರಲ್ಲಿ ಒಂದು ಮಹಿಳೆ ಗರ್ಭಿಣಿಯಾದಾಗ ಖಿನ್ನತೆ ಅನುಭವಿಸುತ್ತಾಳೆ.ಅತಿ ಖಿನ್ನತೆಯಿಂದ ಬಳಲುತ್ತಿರುವ ಮಹಿಳೆ ಸಾವಧಾನ ಯೋಗದಿಂದ ಪರಿಹಾರವನ್ನು ಕಂಡುಕೊಳ್ಳಬಹುದು.ಯೋಗ ಮಾಡುವುದರಿಂದ ಧಾನಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ತೂಕಕಡಿಮೆ ಮಾಡಿಕೊಳ್ಳಲು ಸಹಕಾರಿ:-
ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರ?ಅಮೇರಿಕ ಮನೋಶಾಸ್ತ್ರ ಮತ್ತು ಗ್ರಾಹಕ ವರದಿ ಅಧ್ಯಯನದ ಪ್ರಕಾರ ಯೋಗ ಮತ್ತು ಧ್ಯಾನ ತೂಕ ಕಡಿಮೆ ಮಾಡುವಲ್ಲಿ ಸಹಕರಿಸುತ್ತದೆ.

ಸರಿಯಾದ ನಿದ್ದೆಗೆ ಯೋಗ ಅಥವಾ ಧ್ಯಾನ ಸಹಕಾರಿ :-
ಉತ್ ವಿಶ್ವವಿಧ್ಯಾಲಯದ ಅಧ್ಯಯನದ ಪ್ರಕಾರ ಯೋಗ ಮತ್ತು ಧ್ಯಾನದ ಮೂಲಕ ನಮ್ಮ ಮನಸ್ಸು ಮತ್ತು ಭಾವನೆಗಳನ್ನು ನಿಗ್ರಹಿಸಬಹುದು ಇದರಿಂದಾಗಿ ನಿದ್ದೆ ಸರಿಯಾಗಿ ಆವರಿಸಲು ಸಹಕರಿಸುತ್ತದೆ ಎನ್ನಲಾಗುತ್ತದೆ.



Click it and Unblock the Notifications











