Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವ ದೃಷ್ಟಿ ದಿನ- ಕಣ್ಣಿನ ಸುರಕ್ಷತೆಗಾಗಿ ಒಂದಿಷ್ಟು ಟಿಪ್ಸ್
ಸುಮಾರು ಹದಿನೈದು ವರ್ಷಗಳ ಹಿಂದೆ ಎಲ್ಲೋ ಕೆಲವೆಡೆ ಬಳಕೆಯಾಗುತ್ತಿದ್ದ ಕಂಪ್ಯೂಟರುಗಳು ಈಗ ಎಲ್ಲಾ ರಂಗಗಳನ್ನು ಆಕ್ರಮಿಸಿಕೊಂಡುಬಿಟ್ಟಿವೆ. ನಮ್ಮಲ್ಲಿ ಹೆಚ್ಚಿನವರು ಇಡಿಯ ದಿನ ಕಂಪ್ಯೂಟರ್ ಪರದೆಯನ್ನು ನೋಡುತ್ತಲೇ ಸಮಯವನ್ನು ಕಳೆಯುವುದು ಅನಿವಾರ್ಯವಾಗಿದೆ. ಆದರೆ ಈ ಪರಿ ಆರೋಗ್ಯಕರವೆ?
ಖಂಡಿತವಾಗಿಯೂ ಅಲ್ಲ, ಇದು ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಸೂಚನೆಯಾಗಿದೆ. ಸತತವಾಗಿ ಎಂಟು ಗಂಟೆಗಳಿಗೂ ಹೆಚ್ಚು ಕಾಲ ಮಾನಿಟರ್ ನೋಡುವುದರಿಂದ ಎದುರಾಗುವ ಸ್ಥಿತಿಗೆ ತಜ್ಞರು Computer Vision Syndrome ಎಂಬ ಹೆಸರು ನೀಡಿದ್ದಾರೆ. ಅಂದರೆ ಸತತ ಪರದೆಯನ್ನು ನೋಡುತ್ತಲೇ ಇರುವುದರಿಂದ ಕಣ್ಣುಗಳು ದಣಿಯುತ್ತವೆ. ಪರದೆ ನೋಡದೇ ಇರುವಂತೆ ಸಲಹೆ ನೀಡುವುದು ಪ್ರಾಯೋಗಿಕವಲ್ಲ, ಏಕೆಂದರೆ ನಮ್ಮೆಲ್ಲರ ಉದ್ಯೋಗವೇ ಇದರ ಮೇಲೆ ನಿರ್ಧಾರವಾಗಿದೆ. ಕಂಪ್ಯೂಟರ್ ಬಳಕೆದಾರರಿಗೆ ಕಣ್ಣಿನ ಕಾಳಜಿಯ ಟಿಪ್ಸ್
ಹಾಗಾದರೆ ಕಣ್ಣುಗಳು ತಮ್ಮ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತವೆಯೇ? ಇದಕ್ಕೆ ತಜ್ಞರು ನೀಡುವ ಉತ್ತರ- ಒಂದು ವೇಳೆ ಸೂಕ್ತ ಆರೈಕೆ ಇಲ್ಲದಿದ್ದರೆ ಹೌದು. ಈ ಸ್ಥಿತಿಗೆ ಎದುರಾಗದಿರಲು ಕೆಲವು ಸುಲಭ ವಿಧಾನಗಳಿದ್ದು ಇಂದು ಆ ವಿಧಾನಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರವಾಗಿ ನೀಡಲಾಗಿದೆ. ಮುಂದೆ ಓದಿ ಕಣ್ಣಿನ ಆರೋಗ್ಯಕ್ಕೆ ಬೇಕು, ಸ್ವಲ್ಪ ಸ್ಪೆಷಲ್ ಆರೈಕೆ!

ಕಣ್ಣುಗಳಿಗೆ ದಣಿವಾಗಲು ಪ್ರಮುಖ ಕಾರಣ
ಕಣ್ಣುಗಳಿಗೆ ದಣಿವಾಗಲು ಪ್ರಮುಖ ಕಾರಣಗಳೆಂದರೆ ಪರದೆಯ ಪ್ರಖರತೆ (brightness), ಅದರಿಂದ ಯಾವ ತರಹದ ಕಿರಣಗಳು ಸೂಸುತ್ತಿವೆ ಎಂಬುದು, ಕೋಣೆಯಲ್ಲಿರುವ ಬೆಳಕಿನ ಪ್ರಮಾಣ, ಬೆಳಕಿನ ಮೂಲ (ಬಲ್ಬ್ ಅಥವಾ ಟ್ಯೂಬ್ ಲೈಟ್) ಮತ್ತು ಗಾಳಿಯಲ್ಲಿರುವ ಧೂಳು ಅಥವಾ ಇತರ ಸೂಕ್ಷ್ಮ ಕಣಗಳು. ಸೂಕ್ತ ಆರೈಕೆ ಪಡೆದುಕೊಳ್ಳದೇ ಇದ್ದರೆ ಕಣ್ಣಿಗೆ ಸಂಬಂಧಿಸಿದ ತೊಂದರೆಗಳು ಎದುರಾಗುತ್ತಾ ಹೋಗುತ್ತವೆ. ಇದು ನಿಮ್ಮ ಕಾರ್ಯಕ್ಷಮತೆಯನ್ನು ಅಪಾರವಾಗಿ ಬಾಧಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಣ್ಣುಗಳಿಗೆ ದಣಿವಾಗಲು ಪ್ರಮುಖ ಕಾರಣ
ಕೆಲವರು ಕಣ್ಣುಗಳ ಬಗ್ಗೆ ಚಿಂತಿಸದೇ ತಮ್ಮ ಕೆಲಸದ ಬಗ್ಗೆ ಹೆಚ್ಚು ಚಿಂತಿಸುವ ಕಾರಣ ಅವರ ಕಣ್ಣುಗಳು ಕೆಂಪಗಾಗಿ ಅವರ ಕನ್ನಡಕದ ಸಂಖ್ಯೆ ವೇಗವಾಗಿ ಏರುಗತಿಯಲ್ಲಿ ಸಾಗುತ್ತದೆ. ಈ ಸ್ಥಿತಿಯಿಂದ ದೂರವಿರಲು ಹೆಚ್ಚಿನ ವಿವರಗಳನ್ನು ಈಗ ನೋಡೋಣ:

ಕೋಣೆಯಲ್ಲಿನ ಬೆಳಕಿನ ವ್ಯವಸ್ಥೆ
ನಿಮ್ಮ ಕೋಣೆಯ ಬೆಳಕಿನ ವ್ಯವಸ್ಥೆಯನ್ನು ಗಮನಿಸಿ. ನಿಮ್ಮ ಕಂಪ್ಯೂಟರ್ ಇರುವ ಕೋಣೆಯಲ್ಲಿ ಬೆಳಕು ಅತಿ ಹೆಚ್ಚೂ ಇರಬಾರದು, ಅತಿ ಕಡಿಮೆಯೂ ಇರಬಾರದು. ಅಲ್ಲದೇ ಬೆಳಕಿನ ಕಿರಣಗಳು ನಿಮ್ಮ ಕಣ್ಣುಗಳಿಗೆ ಬೇರೊಂದು ಕೋನದಿಂದ ನೇರವಾಗಿ ಬರದಂತಿರಬೇಕು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಮೇಲ್ಛಾವಣಿಗೆ ಅಳವಡಿಸಲಾಗುವ ಟ್ಯೂಬ್ ಲೈಟುಗಳ ವ್ಯವಸ್ಥೆ ಲಭ್ಯವಿದೆ.

ಕೋಣೆಯಲ್ಲಿನ ಬೆಳಕಿನ ವ್ಯವಸ್ಥೆ
ಕೊಂಚ ದುಬಾರಿಯಾದರೂ ಇದು ಎಲ್ಲರ ಕಣ್ಣುಗಳಿಗೆ ಸುರಕ್ಷಿತವಾಗಿದೆ. ಈ ಕ್ಷೇತ್ರದಲ್ಲಿ ಪರಿಣಿತರ ಸಲಹೆ ಪಡೆಯುವುದು ಉತ್ತಮ. ಸಾಧ್ಯವಾದಷ್ಟು ಸೂರ್ಯನ ಬೆಳಕನ್ನು ಪಡೆಯಲು ಯತ್ನಿಸಿ. ಹಗಲಿನಲ್ಲಿ ಕೋಣೆಯೊಳಗೆ ಸಾಕಷ್ಟು ಸೂರ್ಯನ ಬೆಳಕಿರುವುದು ಕಣ್ಣುಗಳಿಗೆ ಉತ್ತಮವಾಗಿದೆ.

ದೀಪಗಳ ಆಯ್ಕೆ
ನಿಮ್ಮ ಕೋಣೆಯಲ್ಲಿ ಯಾವ ದೀಪಗಳನ್ನು ಬಳಸುತ್ತೀರಿ ಎಂಬುದೂ ಮುಖ್ಯ. ಹಳೆಯ ಹಳದಿ ಬಣ್ಣದ ಬಲ್ಬುಗಳಿದ್ದರೆ ಕೂಡಲೇ ಬದಲಿಸಿ. ಇದರ ಬದಲಿಗೆ ಬಿಳಿಯ ಬಣ್ಣದ ಟ್ಯೂಬ್ ಲೈಟ್ ಅಥವಾ ಸಿ ಎಫ್ ಎಲ್ ಗಳನ್ನು ಅಳವಡಿಸಿ. ಒಂದು ವೇಳೆ ಹಗಲು ಮಾತ್ರ ಉಪಯೋಗಿಸುವುದಾದರೆ warm white ಎಂದಿರುವ ಟ್ಯೂಬ್ ಲೈಟುಗಳನ್ನು ಆರಿಸಿ. ಸಂಜೆ ಮತ್ತು ರಾತ್ರಿಯ ವೇಳೆಗೂ ಉಪಯೋಗಿಸುವುದಾದರೆ cool day light ಎಂದಿರುವ ಟ್ಯೂಬ್ ಲೈಟುಗಳನ್ನು ಆರಿಸಿ. ಆದರೆ ಎರಡರಲ್ಲಿ warm white ಕಣ್ಣುಗಳಿಗೆ ಹೆಚ್ಚು ಸೂಕ್ತವಾಗಿದೆ.

ನಿಮ್ಮ ಮಾನಿಟರ್ ನ ಪ್ರಖರತೆಯನ್ನು ನಿಯಂತ್ರಿಸಿ
ಈಗ ಪ್ರತಿ ಮಾನಿಟರ್ ನಲ್ಲಿಯೂ ಪ್ರಖರತೆ (brightness)ಯನ್ನು ಬದಲಿಸುವ ಸುಲಭ ಬಟನ್ನುಗಳನ್ನು ಒದಗಿಸಲಾಗಿರುತ್ತದೆ. ಇದನ್ನು ಉಪಯೋಗಿಸಿ ನಿಮ್ಮ ಕೋಣೆಯ ಬೆಳಕಿಗೆ ಅನುಸಾರವಾಗಿ ಮಾನಿಟರ್ ನ ಪ್ರಖರತೆಯನ್ನು ನಿಯಂತ್ರಿಸಿ. ಇದು ನಿಮ್ಮ ಕಣ್ಣುಗಳಿಗೆ ಹೆಚ್ಚು ಶ್ರಮವಾಗದಂತೆ ನೋಡಿಕೊಳ್ಳುತ್ತದೆ.

ಕಣ್ಣುಗಳನ್ನು ಆಗಾಗ ಮುಚ್ಚಿಕೊಳ್ಳುತ್ತಿರಿ
ಪ್ರತಿ ಬಾರಿಯೂ ಕಣ್ಣುಗಳನ್ನು ಮುಚ್ಚಿಕೊಂಡಾಗ ತೆಳುವಾದ ದ್ರವವನ್ನು ಕಣ್ಣಿನ ಪಾಪೆಯ ಮೇಲೆ ಹರಡಿದಂತಾಗುತ್ತದೆ. ಇದರಿಂದ ಕಣ್ಣುಗಳು ಒಣಗುವುದು ತಪ್ಪುತ್ತದೆ. ಒಣಗಿದ ಕಣ್ಣು ಬೇಗನೇ ದಣಿಯುತ್ತದೆ ಹಾಗೂ ಉರಿಯುತ್ತದೆ. ನೆನಪಾದಾಗಲೆಲ್ಲಾ ಕಣ್ಣುಗಳನ್ನು ಮಿಟುಕಿಸುತ್ತಾ ಇರಿ.

ದೃಷ್ಟಿಯನ್ನು ಬೇರೆಡೆಗೆ ಹೊರಳಿಸಿ
ನೀವು ಎಷ್ಟೇ ವ್ಯಸ್ತರಿದ್ದರು ಕೆಲವು ಕ್ಷಣಗಳಿಗಾದರೂ ನಿಮ್ಮ ಚಿತ್ತವನ್ನು ಬೇರೆಡೆಗೆ ಹರಿಸುವುದು ಸಾಧ್ಯ. ಸದಾ ಮಾನಿಟರ್ ಕಡೆಗೇ ನೋಡುತ್ತಿರುವ ಬದಲು ನಿಮ್ಮ ದೃಷ್ಟಿಯನ್ನು ಬೇರೆಡೆಯೂ ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ಹೊರಳಿಸುತ್ತಿರಿ. ಇದು ಕಣ್ಣುಗಳಿಗೆ ಒಂದು ರೀತಿಯ ವ್ಯಾಯಾಮವೂ ಹೌದು. ಇದಕ್ಕಾಗಿ ಮೊದಲು ನಿಮ್ಮ ಮಾನಿಟರ್ ಗೆ ಸರಿಸಮಾನವಾದ ದೂರದಲ್ಲಿರುವ ವಸ್ತುವನ್ನು ಹತ್ತು ಸೆಕೆಂಡುಗಳ ಕಾಲ ದಿಟ್ಟಿಸಿ. (ನಿಮ್ಮ ಕುಟುಂಬದ ಚಿತ್ರ ಅಥವಾ ಮನೆದೇವರ ಪಟ ಯಾವುದೂ ಆಗಬಹುದು) ಬಳಿಕ ಸುಮಾರು ಹತ್ತು ಹದಿನೈದು ಅಡಿ ದೂರದಲ್ಲಿರುವ ವಸ್ತುವನ್ನು ಹತ್ತು ಸೆಕೆಂಡುಗಳ ಕಾಲ ದಿಟ್ಟಿಸಿ.

ದೃಷ್ಟಿಯನ್ನು ಬೇರೆಡೆಗೆ ಹೊರಳಿಸಿ
ನಂತರದ ಹತ್ತು ಸೆಕೆಂಡುಗಳ ಕಾಲ ಸುಮಾರು ಇಪ್ಪತ್ತು ಮೂವತ್ತು ಅಡಿ ದೂರದಲ್ಲಿರುವ ವಸ್ತುವನ್ನು ದಿಟ್ಟಿಸಿ. ನಂತರದ ಹತ್ತು ಸೆಕೆಂಡುಗಳ ಕಾಲ ಅತ್ಯಂತ ದೂರದಲ್ಲಿರುವ ವಸ್ತುವನ್ನು ನೋಡಲು ಯತ್ನಿಸಿ. ನಂತರ ಕೆಲವು ಸೆಕೆಂಡುಗಳ ಕಾಲ ಕಣ್ಣು ಮುಚ್ಚಿಕೊಂಡು ಬಳಿಕ ನಿಮ್ಮ ಕಾರ್ಯಕ್ಕೆ ಹಿಂದಿರುಗಿ.

ತೀಕ್ಷ್ಣಬೆಳಕಿನ ಪರದೆ ಬಳಸಿ
ಬೆಳಕಿನ ಕೆಲವು ಪ್ರಖರ ಕಿರಣಗಳ ಪ್ರಖರತೆಯನ್ನು ಕಡಿಮೆಗೊಳಿಸುವ ಪರದೆಗಳು (anti glare sheet) ಮಾರುಕಟ್ಟೆಯಲ್ಲಿ ದೊರಕುತ್ತವೆ. ಇದನ್ನು ನಿಮ್ಮ ಕಂಪ್ಯೂಟರ್ ಪರದೆಗೆ ಅಳವಡಿಸುವ ಮೂಲಕ ತೀಕ್ಷ್ಣ ಕಿರಣಗಳಿಂದ ರಕ್ಷಣೆ ಪಡೆಯಬಹುದು. ಪರ್ಯಾಯವಾಗಿ ಇದೇ ಕಾರ್ಯಕ್ಕೆ ಇರುವ ಕನ್ನಡಗಳನ್ನೂ ಬಳಸಬಹುದು ಅಥವಾ ನೀವು ಈಗಾಗಲೇ ಕನ್ನಡಕ ಬಳಸುತ್ತಿದ್ದರೆ ನಿಮ್ಮ ಕನ್ನಡದಕ ಗಾಜುಗಳಿಗೆಗೂ ಈ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬಹುದು.

ಆಗಾಗ ವಿರಾಮ ಪಡೆದುಕೊಳ್ಳುತ್ತಿರಿ
ನೀವೆಷ್ಟೇ ವ್ಯಸ್ತರಿದ್ದರೂ ನಿಮ್ಮ ಆರೋಗ್ಯ ಅದಕ್ಕಿಂತ ಮುಖ್ಯವಾಗಿದೆ. ಯಾವುದಾದರೂ ನೆಪ ಮಾಡಿಕೊಂಡು ಆಗಾಗ ಒಂದೆರಡು ನಿಮಿಷಗಳಿಗಾದರೂ ನಿಮ್ಮ ಕಾರ್ಯಸ್ಥಳದಿಂದ ಹೊರಬನ್ನಿ. (ಇದಕ್ಕೆ ಸಿಗರೇಟಿನ ನೆವ ಸರ್ವಥಾ ಬೇಡ) ಅಲ್ಲದೇ ಒಂದೇ ಬಾರಿ ಸತತವಾಗಿ ಹಲವು ಘಂಟೆ ಕೆಲಸ ಮಾಡಬೇಡಿ. ಟೀವಿಯಲ್ಲಿ ನಿರೂಪಕರು ನಡುನಡುವೆ ಬ್ರೇಕ್ ತೆಗೆದುಕೊಳ್ಳುವುದು ಏಕೆಂದು ಈಗ ಅರ್ಥವಾಯಿತೇ?

ಕಣ್ಣುಗಳನ್ನು ಆಗಾಗ ತಪಾಸಣೆಗೊಳಪಡಿಸಿ
ನಿಮ್ಮ ನೇತ್ರತಜ್ಞರ ಬಳಿ ನಿಯಮಿತವಾಗಿ ಭೇಟಿ ನೀಡಿ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳುತ್ತಿರಿ ಮತ್ತು ವೈದ್ಯರ ಸಲಹೆಯ ಪ್ರಕಾರವೇ ಕನ್ನಡಕ ಮತ್ತು ಇತರ ಸೂಚನೆಗಳನ್ನು ಪಾಲಿಸಿ. ಒಂದು ವೇಳೆ ಕಂಪ್ಯೂಟರ್ ಪರದೆಯ ವಿಕಿರಣ ಬಾಧಿಸಿದ್ದರೆ ವೈದ್ಯರು ಖಂಡಿತಾ ಗಮನಿಸುತ್ತಾರೆ. ಒಂದು ವೇಳೆ ಹೌದು ಎಂದಾದರೆ ಮುಂದೆ ಅತಿ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.

ಗುಣಮಟ್ಟದ ಮಾನಿಟರ್ ಬದಲಿಸಿ
ಕೆಲವರ್ಷಗಳ ಹಿಂದಿನ ಸಿಆರ್ ಟಿ (cathode ray Tube) ಮಾನಿಟರ್ ಅಥವಾ ಚಪ್ಪಟೆ ಮಾನಿಟರ್ ಹೆಚ್ಚಿನ ವಿಕಿರಣ ಸೂಸುತ್ತಿದ್ದಲ್ಲಿ ಯಾವುದೇ ಮುಲಾಜಿಗೆ ಒಳಗಾಗದೇ ಇವನ್ನು ಮೂಲೆಗೆ ತಳ್ಳಿ ಆಧುನಿಕ ಮತ್ತು ಅತಿ ಕಡಿಮೆ ವಿಕಿರಣವಿರುವ ಎಲ್.ಇ.ಡಿ ಪರದೆಯ ಮಾನಿಟರುಗಳನ್ನು ಖರೀದಿಸಿ. ಇದು ನಿಮ್ಮ ಕಣ್ಣುಗಳಿಗೆ ಅತಿ ಕಡಿಮೆ ಶ್ರಮ ನೀಡುತ್ತದೆ ಮತ್ತು ಆರೋಗ್ಯವನ್ನು ಕಾಪಾಡುತ್ತದೆ.



Click it and Unblock the Notifications