ಒಸಡುಗಳಲ್ಲಿ ನೋವೇ? ಚಿಂತಿಸಬೇಡಿ ಇಲ್ಲಿದೆ ಫಲಪ್ರದ ಮನೆಮದ್ದು

By Super

ಹಲ್ಲುಗಳು ಮತ್ತು ಒಸಡುಗಳು ಆರೋಗ್ಯವಾಗಿರಲು ಪ್ರತಿ ಊಟದ ಬಳಿಕವೂ ಹಲ್ಲುಜ್ಜಿಕೊಳ್ಳಬೇಕು ಎಂದು ದಂತವೈದ್ಯರು ಸಲಹೆ ನೀಡುತ್ತಾರೆ. ಆದರೆ ಹೇಳುವುದು ಸುಲಭ, ಆಚರಣೆ ಬಲುಕಷ್ಟ. ಏಕೆಂದರೆ ನಾವೆಲ್ಲರೂ ಎಚ್ಚರವಾಗಿದ್ದ ಹೊತ್ತಿನಲ್ಲಿ ಆಗಾಗ ಏನಾದರೂ ತಿನ್ನುತ್ತಾ ಅಥವಾ ಕುಡಿಯುತ್ತಾ ಇರುತ್ತೇವೆ. ಆದರೆ ಬಳಿಕ ಹಲ್ಲುಜ್ಜಿಕೊಳ್ಳುವುದನ್ನು ನಿರ್ಲಕ್ಷಿಸಿಬಿಡುತ್ತೇವೆ. ಆದರೆ ಹಲ್ಲುಗಳ ಸಂದು ಮತ್ತು ಹಲ್ಲು ಮತ್ತು ಒಸಡುಗಡು ಸಂಧಿಸುವಲ್ಲಿ ಅತ್ಯಲ್ಪಪ್ರಮಾಣದಲ್ಲಿ ಸಂಗ್ರಹವಾದ ಆಹಾರವಸ್ತುಗಳು ಬ್ಯಾಕ್ಟೀರಿಯಾಗಳಿಗೆ ಕೆಂಪುಹಾಸಿನ ಸ್ವಾಗತವನ್ನು ಕೋರುತ್ತವೆ.

ದೇಹದ ರೋಗನಿರೋಧಕ ಶಕ್ತಿಯೂ ಈ ಬ್ಯಾಕ್ಟೀರಿಯಾಗಳನ್ನು ಸದೆಬಡಿಯಲು ಶ್ರಮಮೀರಿ ಪ್ರಯತ್ನಿಸುತ್ತದೆ. (ಇದೇ ಕಾರಣಕ್ಕೆ ಹೆಚ್ಚಿನವರಿಗೆ ಈ ತೊಂದರೆ ಅತಿ ಎನ್ನುವಷ್ಟು ಅಥವಾ ವೈದ್ಯರ ಬಳಿ ಹೋಗುವಷ್ಟು ತೊಂದರೆ ನೀಡುವುದಿಲ್ಲ). ನಿಧಾನವಾಗಿ ಬ್ಯಾಕ್ಟೀರಿಯಾಗಳು ತಮ್ಮ ಸಂಖ್ಯೆಯನ್ನು ವಿಸ್ತರಿಸುತ್ತಾ ಸೋಂಕು ಹರಡಿಸಿ ಒಸಡುಗಳ ಮತ್ತು ಹಲ್ಲಿನ ಬುಡಗಳಿಗೆ ನುಸುಳಲು ಸಾಧ್ಯವಾಯಿತೋ ಅಂದಿನಿಂದ ಒಳಭಾಗದಲ್ಲಿ

ಸೋಂಕು ಶುರುವಾಗುತ್ತದೆ. ಇದರಿಂದ ಒಸಡುಗಳಲ್ಲಿ ನೋವು, ಒಳಗಿನಲ್ಲಿ ಕೀವು ತುಂಬಿಕೊಳ್ಳುವುದು, ಒಸಡು ತೀವ್ರ ಸಂವೇದಿಯಾಗುವುದು, ಒಸಡಿನಲ್ಲಿ ಮತ್ತು ಕೆನ್ನೆಯ ಒಳಭಾಗದಲ್ಲಿ ಹುಣ್ಣು ಮೊದಲಾದ ತೊಂದರೆಗಳು ಪ್ರಾರಂಭವಾಗುತ್ತವೆ. ಮುತ್ತಿನಂತಹ ಸುಂದರ ಹಲ್ಲುಗಳಿಗಾಗಿ ಡಯಟ್ ಸಲಹೆಗಳು

ಇವೆಲ್ಲಾ ಹಲ್ಲಿನ ಕಾಳಜಿಯ ಕೊರತೆಯ ಪರಿಣಾಮಗಳಾದರೆ, ಅತಿಕಾಳಜಿಯ ಪರಿಣಾಮಗಳು ಬೇರೆಯೇ ಇವೆ. ಒಸಡುಗಳು ಒಂದು ವಿಶಿಷ್ಟ ರೀತಿಯ ಜೀವಕೋಶಗಳಿಂದ ಕೂಡಿದೆ. ಇದನ್ನು ಉಜ್ಜಲು ಹಲ್ಲುಗಳಿಗೆ ನೀಡುವಷ್ಟು ಒತ್ತಡವನ್ನು ನೀಡಬಾರದು ಮತ್ತು ಪಾತ್ರೆ ಉಜ್ಜಿದಂತೆ ಗಸಗಸ ಉಜ್ಜಬಾರದು. ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲ್ಲುಜ್ಜುವ ಬ್ರಶ್ ಗಳ ಮಧ್ಯಭಾಗದ ಕೂದಲುಗಳು ಗಡುಸಾಗಿಯೂ ಬದಿಯ ಕೂದಲುಗಳು ಮೃದುವಾಗಿಯೂ ಇರುತ್ತವೆ. ಆದರೆ ಸರಿಯಾದ ಕ್ರಮದಲ್ಲಿ ಉಜ್ಜದೇ ಇರುವುದರಿಂದ ಒಸಡುಗಳಿಗೂ ಹೆಚ್ಚಿನ ಒತ್ತಡ ಬಿದ್ದು ಸವೆಯಲು ತೊಡಗುತ್ತವೆ. ಹೆಚ್ಚು ಸವೆದ ಒಸಡುಗಳಿಂದ ನೋವುಪ್ರಾರಂಭವಾಗುತ್ತದೆ.

ಆಹಾರದಲ್ಲಿ ವಿಟಮಿಸ್ ಸಿ ಕೊರತೆಯೂ ಇನ್ನೊಂದು ಕಾರಣವಾಗಿದೆ. ಬಾಧೆಗೊಳಗಾದ ಒಸಡಿನಿಂದ ರಕ್ತ ಒಸರಲು ಪ್ರಾರಂಭವಾಗುತ್ತದೆ. ಬದಲಾದ ಆಧುನಿಕ ಆಹಾರಕ್ರಮ, ಸಿದ್ಧ ಆಹಾರಗಳು, ಆಹಾರಕ್ಕೆ ಕೃತಕ ಬಣ್ಣ ನೀಡುವ ರಾಸಾಯನಿಕಗಳು ಸಹಾ ಒಸಡಿನ ನೋವಿಗೆ ಕಾರಣವಾಗಬಲ್ಲವು. ಈ ತೊಂದರೆಗಳಿಂದ ರಕ್ಷಣೆ ಪಡೆಯಲು ಮನೆಯಲ್ಲಿ ಲಭ್ಯವಿರುವ ಸುಲಭ ಸಾಮಾಗ್ರಿಗಳಿಂದಲೇ ಉತ್ತಮ ಪರಿಹಾರ ಪಡೆಯಬಹುದು. ದಂತಕುಳಿ ಸಮಸ್ಯೆ: ತ್ವರಿತವಾಗಿ ಶಮನಗೊಳಿಸುವ ಮನೆಮದ್ದುಗಳು

ಲವಂಗದ ಎಣ್ಣೆ

ಲವಂಗದ ಎಣ್ಣೆ

ಆಯುರ್ವೇದದ ಪ್ರಕಾರ ಹಲ್ಲು ಮತ್ತು ಒಸಡುಗಳ ನೋವಿಗೆ ಲವಂಗದ ಎಣ್ಣೆ ಅತ್ಯುತ್ತಮವಾಗಿದೆ. ಲವಂಗದೆಣ್ಣೆಯಲ್ಲಿರುವ ನೋವು ನಿವಾರಕ ಗುಣ (analgesic) ನೋವು ಮತ್ತು ಉರಿಯನ್ನು ಕಡಿಮೆಗೊಳಿಸಲು ಮತ್ತು ಬ್ಯಾಕ್ಟೀರಿಯಾಗಳನ್ನು ಸದೆಬಡಿಯಲು ನೆರವಾಗುತ್ತದೆ. ಇದಕ್ಕಾಗಿ ಹತ್ತಿಯ ಉಂಡೆಯಲ್ಲಿ ಲವಂಗದೆಣ್ಣೆಯ ಕೆಲವು ಹನಿಗಳನ್ನು ತೋಯಿಸಿ ನವಿರಾಗಿ ನೋವಿರುವ ಒಸಡಿನ ಭಾಗದ ಮೇಲೆ ಮಸಾಜ್ ಮಾಡಿ. ಹಲ್ಲು ಮತ್ತು ಒಸಡುಗಳು ಕೂಡುವಲ್ಲಿ ಹತ್ತಿಯನ್ನು ಹಿಂಡಿ ಎಣ್ಣೆ ಇಳಿಯುವಂತೆ ಮಾಡಿ. ನೋವು ಹೆಚ್ಚಿದ್ದರೆ ಹತ್ತಿಯ ಉಂಡೆಯಲ್ಲಿ ಕೊಂಚ ಹೆಚ್ಚಿನ ಎಣ್ಣೆಯನ್ನು ಅದ್ದಿ ನೋವಿರುವ ಸ್ಥಳದಲ್ಲಿಯೇ ಸುಮಾರು ಇಪ್ಪತ್ತು ನಿಮಿಷ ಹಾಗೇ ಇಡಿ. ಸ್ವಲ್ಪ ಸಮಯದ ಬಳಿಕ ಲಾಲಾರಸ ತುಂಬಿಕೊಂಡರೆ ನುಂಗದೇ ಉಗುಳಿಬಿಡಿ. ಕೊಂಚ ಹೊತ್ತಿನ ಬಳಿಕ ಈ ಚಿಕಿತ್ಸೆಯನ್ನು ಮುಂದುವರೆಸಿ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಈ ಚಿಕಿತ್ಸೆ ನಡೆಸುವ ಮೂಲಕ ಉತ್ತಮ ಫಲ ಕಂಡುಬರುತ್ತದೆ.

ಲೋಳೆಸರ

ಲೋಳೆಸರ

ಹಲ್ಲುನೋವು ಮತ್ತು ಒಸಡುಗಳಲ್ಲಿ ಉರಿಯನ್ನು ಕಡಿಮೆಗೊಳಿಸಲು ಲೋಳೆಸರವನ್ನೂ ಉಪಯೋಗಿಸಬಹುದು. ಇದಕ್ಕಾಗಿ ಈಗತಾನೇ ಮುರಿದ ಲೋಳೆಸರದ ಚಿಕ್ಕ ಕೋಡನ್ನು ಹಿಂಡಿ ರಸತೆಗೆಯಿರಿ. ಇದನ್ನು ಹತ್ತಿಯ ಉಡೆಯಲ್ಲಿ ತೋಯಿಸಿ ನೋವಿರುವ ಭಾಗಕ್ಕೆ ನವಿರಾಗಿ ಮಸಾಜ್ ಮಾಡಿ. ನೋವು ಹೆಚ್ಚಿದ್ದರೆ ಹತ್ತಿಯ ಉಂಡೆಯಲ್ಲಿ ಕೊಂಚ ಹೆಚ್ಚಿನ ಎಣ್ಣೆಯನ್ನು ಅದ್ದಿ ನೋವಿರುವ ಸ್ಥಳದಲ್ಲಿಯೇ ಸುಮಾರು ಇಪ್ಪತ್ತು ನಿಮಿಷ ಹಾಗೇ ಇಡಿ. ಲಾಲಾರಸ ತುಂಬಿಕೊಂಡ ಬಳಿಕ ಉಗುಳಿಬಿಡಿ. ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಈ ಚಿಕಿತ್ಸೆಯನ್ನು ಮುಂದುವರೆಸಿ

 melaleuca oil ಅಥವಾ Tea Tree Oil

melaleuca oil ಅಥವಾ Tea Tree Oil

ಅತ್ಯಾವಶ್ಯ ಎಣ್ಣೆಗಳಲ್ಲಿ ಒಂದಾದ ಟೀ ಟ್ರೀ ಎಣ್ಣೆ ಹಲ್ಲು ಮತ್ತು ಒಸಡುಗಳ ನೋವಿಗೂ ಉತ್ತಮ ಪರಿಹಾರ ನೀಡುತ್ತದೆ. ಇದಕ್ಕಾಗಿ ಎಣ್ಣೆಯ ಕೆಲವು ಹನಿಗಳನ್ನು ಹತ್ತಿಯ ಉಂಡೆಯಲ್ಲಿ ಅಥವಾ ನೇರವಾಗಿ ಬೆರಳುಗಳ ಮೂಲಕ ನೋವಿರುವ ಸ್ಥಳದಲ್ಲಿ ಹಚ್ಚಿ ಸುಮಾರು ಐದು ನಿಮಿಷ ಹಾಗೇ ಬಿಡಿ. ಬಳಿಕ ಲಾಲಾರಸದೊಡನೆ ಉಗುಳಿಬಿಡಿ. ದಿನಕ್ಕೆ ಮೂರು ಬಾರಿ ಪುನರಾವರ್ತಿಸಿ. ಈ ಎಣ್ಣೆಯನ್ನು ಹಚ್ಚಿದ ಕೂಡಲೇ ಬ್ಯಾಕ್ಟೀರಿಯಾಗಳು ನಾಶವಾಗುವುದರಿಂದ ಹಲ್ಲುನೋವು ಶೀಘ್ರವಾಗಿ ಕಡಿಮೆಯಾಗುತ್ತದೆ. ನೋವು, ಕೀವು ಮತ್ತು ಉರಿ ಕಡಿಮೆಯಾಗುತ್ತದೆ. ಒಂದು ವೇಳೆ ಒಸಡಿನಿಂದ ರಕ್ತ ಒಸರುತ್ತಿದ್ದರೆ ಕಡಿಮೆ ಪ್ರಮಾಣದಲ್ಲಿ ಹಚ್ಚಿ, ಏಕೆಂದರೆ ಈ ಭಾಗ ಕೊಂಚ ಉರಿ ತರಿಸಬಹುದು.

ಲಿಂಬೆಯ ರಸ

ಲಿಂಬೆಯ ರಸ

ಲಿಂಬೆಯ ರಸದಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಗುಣ ಹಲ್ಲು ಮತ್ತು ಒಸಡುಗಳ ನೋವಿಗೂ ಉತ್ತಮ ಪರಿಹಾರ ನೀಡುತ್ತದೆ. ರಕ್ತ ಒಸರುವುದನ್ನೂ ನಿಲ್ಲಿಸುತ್ತದೆ. ಇದಕ್ಕಾಗಿ ಈಗತಾನೇ ಹಿಂಡಿದ ಲಿಂಬೆಹಣ್ಣಿನ ರಸದಲ್ಲಿ ಚಿಟಿಕೆ ಉಪ್ಪ್ತುಸೇರಿಸಿ ನೋವಿರುವ ಸ್ಥಳದಲ್ಲಿ ಬೆರಳುಗಳಿಂದ ಹಚ್ಚಿ ಮಸಾಜ್ ಮಾಡಿ. ರಕ್ತ ಒಸರುತ್ತಿರುವಲ್ಲಿ ಕೊಂಚ ಉರಿ ತರಿಸಬಹುದಾದುದರಿಂದ ಈ ಸ್ಥಳದಲ್ಲಿ ಕೊಂಚ ತೆಳುವಾಗಿ ಹೆಚ್ಚಿ. ನೋವು ಶೀಘ್ರದಲ್ಲಿಯೇ ಮಾಯವಾಗುತ್ತದೆ. ಲಾಲಾರಸ ತುಂಬಿಕೊಂಡ ಬಳಿಗ ಉಗುಳಿಬಿಡಿ. ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಪುನರಾವರ್ತಿಸಿ.

ಕ್ಯಾಲ್ಸಿಯಂ ಹೆಚ್ಚಿರುವ ಆಹಾರ ಸೇವಿಸಿ

ಕ್ಯಾಲ್ಸಿಯಂ ಹೆಚ್ಚಿರುವ ಆಹಾರ ಸೇವಿಸಿ

ನಮ್ಮ ದೇಹದ ಅತಿ ಗಡಸು ಭಾಗಗಳಾದ ಮೂಳೆ ಮತ್ತು ಹಲ್ಲುಗಳ ದೃಢತೆಗೆ ಕ್ಯಾಲ್ಸಿಯಂ ಅಗತ್ಯವಾಗಿದೆ. ಹಲ್ಲುಗಳು ಗಟ್ಟಿಗೊಳ್ಳಲು ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸಿ. ಹಸುವಿನ ಹಾಲು, ಒಣಫಲಗಳು,ಮೊಸರು, ಹಸಿರಾದ ಮತ್ತು ದಪ್ಪನಾದ ಎಲೆಗಳಿರುವ ಸೊಪ್ಪು (ಪಾಲಕ್ ಮತ್ತು ಬಸಲೆ) ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ದೇಹಕ್ಕೆ ಹೆಚ್ಚಿನ ಕ್ಯಾಲ್ಸಿಯಂ ದೊರೆತು ಹಲ್ಲು ಮತ್ತು ಮೂಳೆಗಳನ್ನು ದೃಢಗೊಳಿಸಲು ನೆರವಾಗುತ್ತದೆ. ಜೊತೆಗೇ ರೋಗನಿರೋಧಕ ಶಕ್ತಿಯು ಹೆಚ್ಚಿ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಹಲ್ಲುನೋವಿದ್ದಾಗ ವಹಿಸಬೇಕಾದ ಎಚ್ಚರಿಕೆಗಳು

ಹಲ್ಲುನೋವಿದ್ದಾಗ ವಹಿಸಬೇಕಾದ ಎಚ್ಚರಿಕೆಗಳು

* ಬಿಸಿ ಆಹಾರವನ್ನು ಅಥವಾ ಪೇಯಗಳನ್ನು ಸೇವಿಸಬೇಡಿ

* ನೋವಿರುವ ಸ್ಥಳವನ್ನು ಪದೇ ಪದೇ ನಾಲಿಗೆಯಿಂದ ಸವರುತ್ತಿರುವುದು ಅನೈಚ್ಛಿಕವಾಗಿ ನಡೆಯುತ್ತದೆ. ಸಾಧ್ಯವಾದಷ್ಟು ಮನಸ್ಸನ್ನು ಬೇರೆಡೆಗೆ ಹೊರಳಿಸಿ ಈ ಕ್ರಿಯೆಗೆ ನಿಯಂತ್ರಣ ನೀಡಿ

* ಬುರುಗು ಬರುವ (ಸೋಡಾ ಇತ್ಯಾದಿ) ಪಾನೀಯಗಳನ್ನು ಕುಡಿಯಬೇಡಿ. ಇವು ಬ್ಯಾಕ್ಟೀರಿಯಾಗಳ ಚಟುವಟಿಕೆಯನ್ನು ಹೆಚ್ಚಿಸುತ್ತವೆ.

* ಧೂಮಪಾನ, ತಂಬಾಕು, ಮದ್ಯಪಾನ ಬೇಡ, ಇವೂ ಸಹಾ ನೋವನ್ನು ಉಲ್ಬಣಗೊಳಿಸಬಲ್ಲವು.

* ಕೀವು ತುಂಬಿಕೊಂಡಿದ್ದುದು ದೊಡ್ಡ ಬೊಕ್ಕೆಯಂತಾಗಿದ್ದರೆ, ಎರಡೂ ಬದಿಗಳಿಂದ ನಯವಾಗಿ ಒತ್ತಿ ನೋಡಿ. ಸುಲಭವಾಗಿ ಒಡೆಯುವಂತಿದ್ದರೆ ಒಡೆದು ಕೀವನ್ನು ಹಿಂಡಿ ತೆಗೆಯಿರಿ. (ಏಕೆಂದರೆ ಬೊಕ್ಕೆಯ ತುದಿಯ ಭಾಗ ಅತಿ ತೆಳುವಾಗಿರುತ್ತದೆ). ಸಾಧ್ಯವಾಗದಿದ್ದರೆ ಹೆಚ್ಚಿನ ಒತ್ತಡ ನೀಡಲು ಹೋಗದೇ, ವೈದ್ಯರನ್ನು ಸಂಪರ್ಕಿಸಿ.

* ಹಲ್ಲುಗಳ ಸಂದುಗಳಲ್ಲಿರುವ ಆಹಾರವನ್ನು ತೆಗೆಯಲು ಮರದ ಹಲ್ಲುಕಡ್ಡಿಯನ್ನೇ ಉಪಯೋಗಿಸಿ. ಲೋಹದ ಪಿನ್ನುಗಳನ್ನು ಬಳಸಬೇಡಿ. (ಇದರಲ್ಲಿರುವ ಸೂಕ್ಷ್ಮವಾದ ತುಕ್ಕು ಸೋಂಕನ್ನು ಹೆಚ್ಚಿಸುತ್ತದೆ)

* ಎರಡಕ್ಕಿಂತ ಹೆಚ್ಚು ದಿನದ ಬಳಿಕವೂ ನೋವಿದ್ದರೆ ತಡಮಾಡದೇ ದಂತವೈದ್ಯರನ್ನು ಕಾಣಿರಿ.

X
Desktop Bottom Promotion