Latest Updates
-
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್!
ಮಹಿಳೆಯರೇ ಎಚ್ಚರ, ಧೂಮಪಾನದಿಂದ ಬದುಕು ಭಯಂಕರ!
ಬಹುಬೇಗ ಪ್ರಾಣಕ್ಕೆ ಕುತ್ತುತರುವಂತಹ ಮಾರ್ಗಗಳಲ್ಲಿ ಧೂಮಪಾನ ಮಾಡುವುದು ಸಹ ಒಂದು ಮಾರ್ಗವಾಗಿ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. 'ಧೂಮಪಾನದಿಂದ ಆರೋಗ್ಯಕ್ಕೆ ಹಾನಿಕರ' ಎಂಬ ವಾಕ್ಯವು ಎಲ್ಲರಿಗೂ ಚಿರಪರಿಚಿತ. ಹೀಗಿದ್ದಾಗ್ಯೂ ಸಹ ವಿದ್ಯಾವಂತ ಮಹಿಳೆಯರೂ ಒಳಗೊಂಡಂತೆ ಹೆಚ್ಚಿನವರು ಈ ಚಟಕ್ಕೆ ದಾಸರಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಈ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಆಂದೋಲನಗಳು ಜನರಿಗೆ ದಿನನಿತ್ಯ ಜನರಿಗೆ ಜಾಗೃತಿಯನ್ನು ಮೂಡಿಸುತ್ತಿದ್ದು, ಸರ್ಕಾರಗಳೂ ಸಹ ಸಮಾಜವನ್ನು ಜಾಗೃತಿಗೊಳಿಸುವ ಕಾರ್ಯದಲ್ಲಿ ತೊಡಗಿವೆ. ಈ ಲೇಖನದಲ್ಲಿ ವಿಶೇಷವಾಗಿ ಮಹಿಳೆಯರು ಧೂಮಪಾನ ಮಾಡಿದರೆ ಉಂಟಾಗುವ ನಿವಾರಣೆಯಾಗದಂತಹ ಆರೋಗ್ಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.

ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಧೂಮಪಾನ ಮಾಡುವುದರಿಂದ ನಮ್ಮ ದೇಹಕ್ಕೆ ತೀವ್ರ ತರದ ಹಾನಿಯಾಗಲಿದೆ ಎಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ಪರೋಕ್ಷವಾಗಿ ಧೂಮಪಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅನಾರೋಗ್ಯವೂ ಸಹ ಹೆಚ್ಚಾಗುತ್ತಿದೆ. ಇದರಿಂದ ಮಹಿಳೆಯರಲ್ಲಿ ಬಹು ಬೇಗನೆ ಬಂಜೆತನ ಅಥವಾ ಗರ್ಭಪಾತ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಹಿಳೆಯರು ಹೆಚ್ಚಾಗಿ ಧೂಮಪಾನ ಮಾಡುವುದರಿಂದ ಬಹು ಬೇಗನೇ ಗರ್ಭಕೋಶ ಸಂಬಂಧಿತ ಸಮಸ್ಯೆಗಳಿಗೆ ತುತ್ತಾರೆ ಸಂತಾನದಿಂದ ವಿಮುಖರಾಗುತ್ತಾರೆ. ಆಶ್ಚರ್ಯಕರ ಸಂಗತಿಯೆಂದರೆ ಪರೋಕ್ಷವಾಗಿ ಧೂಮಪಾನ ಮಾಡುವವರಿಗೂ ಸಹ ಅಪಾಯ ಕಟ್ಟಿಟ್ಟ ಬುತ್ತಿ.
ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಧೂಮಪಾನ ಮಾಡುವ ಪುರುಷರನ್ನು ಅದೇ ರೀತಿಯ ಧೂಮಪಾನ ಮಾಡುವ ಮಹಿಳೆಯರೊಂದಿಗೆ ಹೋಲಿಕೆ ಮಾಡಿ ನೋಡಿದಾಗ, ಮಹಿಳೆಯರಲ್ಲಿ ಹೆಚ್ಚು ಅಪಾಯ ಸೃಷ್ಟಿಸುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬಂದಿರುತ್ತದೆ. ಆರೋಗ್ಯ ತಜ್ಞರ ಸಂಶೋಧನೆಯ ಪ್ರಕಾರ ಧೂಮಪಾನ ಮಾಡುವ ಮಹಿಳೆಯರ ಆರೋಗ್ಯವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಹೆಚ್ಚು ಅಪಾಯ ಪೀಡಿತರಾಗುತ್ತಿದ್ದಾರೆ. ಆದ್ದರಿಂದ ಮಹಿಳೆಯರು ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಧೂಮಪಾನದಿಂದ ದೂರವಿರಲು ಸಲಹೆ ನೀಡಲಾಗಿದೆ. ಇನ್ನು ಮುಲಾಜಿಲ್ಲದೆ ಸಿಗರೇಟ್‌ಗೆ ಗುಡ್ ಬೈ ಹೇಳಿ!
ಪರೋಕ್ಷವಾಗಿ ಧೂಮಪಾನ ಮಾಡುವವರಿಗೆ ಉಂಟಾಗುವ ಅಡ್ಡಪರಿಣಾಮಗಳು
ತಂಬಾಕುವಿನಿಂದ ಉಂಟಾಗುವ ಮುಖ್ಯವಾದ ಸಮಸ್ಯೆ ಏನೆಂದರೆ ಅದರಲ್ಲಿರುವ ವಿಷಕಾರಿ ಅಂಶಗಳು ಮತ್ತು ಅದರಿಂದ ಉಂಟಾಗುವ ಸಂತಾನೋತ್ಪತ್ತಿ ಸಮಸ್ಯೆಗಳು. ಅದರಿಂದ ದೇಹದಲ್ಲಿನ ಹಾರ್ಮೋನ್ ಕ್ರಿಯೆಗೂ ಸಹ ಅಡಚಣೆಯುಂಟಾಗುತ್ತದೆ ಎಂದು ಸಂಶೋಧನೆಯೊಂದು ದೃಢಪಡಿಸುತ್ತದೆ. ಆರೋಗ್ಯ ತಜ್ಞರು ತೀವ್ರ ನಿಗಾವಹಿಸಿ ಧೂಮಪಾನ ಅಭ್ಯಾಸಗಳ ಬಗ್ಗೆ, ಗರ್ಭಕೋಶ ತೊಂದರೆಗಳ ಬಗ್ಗೆ ಮತ್ತು ಋತುಬಂಧದ ಸಮಯದ ಬಗ್ಗೆ ಸುಮಾರು ಒಂದು ಲಕ್ಷ ಮಹಿಳೆಯರನ್ನು ಭಾಗವಾಗಿಸಿಕೊಂಡು ಈ ಕುರಿತು ಸಂಶೋಧನೆ ಕೈಗೊಂಡಿದ್ದಾರೆ.
ಬೇಗನೇ ಆಗುವ ಋತುಬಂಧ ಮತ್ತು ಬಂಜೆತನ ಸಮಸ್ಯೆಯು ಹೆಚ್ಚಾಗಿ ನೇರವಾಗಿ ಮತ್ತು ಪರೋಕ್ಷವಾಗಿ ತಂಬಾಕುಯುಕ್ತ ಧೂಮಪಾನ ಮಾಡಿದ್ದ ಮಹಿಳೆಯರಲ್ಲೇ ಹೆಚ್ಚಾಗಿರುವುದು ಕಂಡುಬಂದಿರುತ್ತದೆ. ಧೂಮಪಾನ ಮುಕ್ತ ಮಹಿಳೆಯರಿಗಿಂತ ಧೂಮಪಾನ ಮಾಡಿದ ಮಹಿಳೆಯರಲ್ಲಿ ಶೇಖಡಾ 15 ರಷ್ಟು ಬಂಜೆತನದ ಅಪಾಯವು ಹೆಚ್ಚಿರುವುದು ಕಂಡುಬಂದಿರುತ್ತದೆ. ಜೊತೆಗೆ ಈ ರೀತಿಯ ಮಹಿಳೆಯರಲ್ಲಿ ಶೇಖಡಾ 25 ರಷ್ಟು ಬಹು ಬೇಗನೇ ಋತುಬಂಧವಾಗುವ ಅಪಾಯ ಹೆಚ್ಚಿರುತ್ತದೆ. ಆರೋಗ್ಯ ತಜ್ಞರಿಗೆ ಸಂಶೋಧನೆಯಿಂದ ಬಂದ ವರದಿಯನ್ನು ಕಂಡ ಮೇಲಂತೂ ದಿಗ್ಭ್ರಮೆಗೊಂಡಿದ್ದಾರೆ.
ಹೆಚ್ಚು ಧೂಮಪಾನ ಮಾಡುವ ಮಹಿಳೆಯರಲ್ಲಿ ಋತುಬಂಧವು ಸುಮಾರು 2 ವರ್ಷ ಬೇಗನೇ ಬರುವುದನ್ನು ಗಮನಿಸಲಾಗಿದೆ. ಹದಿಹರೆಯದಿಂದಲೇ ಧೂಮಪಾನ ಮಾಡಿಕೊಂಡು ಬಂದ ಮಹಿಳೆಯರಲ್ಲಂತೂ ಈ ಸಮಸ್ಯೆ ಸಾಮಾನ್ಯವಾಗಿ ಕಂಡುಬಂದಿದೆ. ದಿನನಿತ್ಯ ಒಂದು ಪ್ಯಾಕ್ ಗಿಂತಲೂ ಹೆಚ್ಚು ಧೂಮಪಾನ ಮಾಡಿದ ಮಹಿಳೆಯರಲ್ಲಿ ಸಹಜ ಪ್ರಕ್ರಿಯೆಗಿಂತಲೂ 18 ತಿಂಗಳುಗಳು ಮುಂಚಿತವಾಗಿ ಋತುಬಂಧವಾಗುವುದು ಕಂಡುಬಂದಿದೆ. ಧೂಮಪಾನ ತ್ಯಜಿಸುವಂತೆ ಮಾಡುವ ಗಿಡಮೂಲಿಕೆಗಳು
ಇನ್ನು ಪರೋಕ್ಷವಾಗಿ ಧೂಮಪಾನ ಮಾಡುವ ಅಭ್ಯಾಸ ಹೊಂದಿರುವ ಮಹಿಳೆಯರಿಗೆ ಸುಮಾರು ಒಂದು ವರ್ಷ ಮುಂಚಿತವಾಗಿ ಋತುಬಂಧವಾಗುತ್ತಿದೆ. ಇದು ನಿಜಕ್ಕೂ ಆಘಾತಕರ ವಿಚಾರ. ಆದ್ದರಿಂದ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ಮಹಿಳೆಯರು ಧೂಮಪಾನದಿಂದ ದೂರವಿರಿ ಹಾಗೂ ಧೂಮಪಾನ ಮಾಡುವ ಪ್ರದೇಶ ಅಥವಾ ಧೂಮಪಾನ ಪ್ರಕ್ರಿಯೆ ನಡೆಯುವಾಗ ಆ ಸ್ಥಳದಿಂದ ದೂರವಿರಿ ಮತ್ತು ಯಾವುದೇ ಕಾರಣಕ್ಕೂ ಧೂಮಪಾನದಂತಹ ಮಾರಣಾಂತಿಕ ಚಟಕ್ಕೆ ನಿಮ್ಮ ಸುಂದರ ಬದುಕನ್ನು ಬಲಿ ಕೊಡಬೇಡಿ. ಎಚ್ಚರವಿರಲಿ!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

