For Quick Alerts
ALLOW NOTIFICATIONS  
For Daily Alerts

ವಯಸ್ಸಾದವರಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳು

By Hemanth P
|

ವಯಸ್ಸಾಗುವ ಪ್ರಕ್ರಿಯೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಆದರೆ ಅದರ ವಿವರಣೆ ಮಾತ್ರ ಒಂದೇ ಆಗಿರುತ್ತದೆ. ಪುನರುಜ್ಜೀವನಗೊಳಿಸುವ ಸಾಮರ್ಥ್ಯವು ವಯಸ್ಸಾಗುತ್ತಿದ್ದಂತೆ ಕಡಿಮೆಯಾಗುತ್ತದೆ. ಇದರಿಂದ ವಯಸ್ಸಾಗುತ್ತಿರುವಾಗ ಹಲವಾರು ರೀತಿಯ ಅನಾರೋಗ್ಯ ಸಮಸ್ಯೆಗೆ ಸಿಲುಕಬೇಕಾಗುತ್ತದೆ.

ವಯಸ್ಸಾಗುತ್ತಿರುವವರಲ್ಲಿ ಉಂಟಾಗುತ್ತಿರುವ ಹಲವಾರು ರೀತಿಯ ಅನಾರೋಗ್ಯಗಳ ಬಗ್ಗೆ ತಿಳಿಯಲು ಅಧ್ಯಯನಗಳು ನಡೆಯುತ್ತಿದ್ದು, ಇದನ್ನು ವೃದ್ಧಾರೋಗ್ಯಶಾಸ್ತ್ರ ಎನ್ನಲಾಗುತ್ತದೆ. ವಯಸ್ಸಾಗುತ್ತಿದ್ದಂತೆ ಕಾಡುವ ಕೆಲವೊಂದು ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ತಿಳಿದುಕೊಂಡರೆ ಆಗ ನಿಮ್ಮ ಜೀವನ ಹಾಗೂ ಜೀವನಶೈಲಿಯನ್ನು ಸರಿಯಾದ ರೀತಿ ನಿರ್ವಹಿಸಲು ಸಾಧ್ಯವಾಗುತ್ತದೆ ಮತ್ತು ಅನಾರೋಗ್ಯದ ಪ್ರಭಾವ ಕಡಿಮೆ ಮಾಡಿಕೊಳ್ಳಬಹುದು.

ವಯಸ್ಸಾಗುತ್ತಿರುವುದನ್ನು ತುಂಬಾ ಸುಂದರವಾಗಿಸಲು ಕೆಲವೊಂದು ಯೋಜನೆ ಹಾಗೂ ತಯಾರಿ ಬೇಕಾಗುತ್ತದೆ. ವಯಸ್ಸಾಗುತ್ತಿರುವಂತೆ ಕಾಡುವ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ನಿಮ್ಮಲ್ಲಿನ ಸಾಮಾರ್ಥ್ಯವು ಸವಾಲನ್ನು ಸರಳವಾಗಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಊಟದ ನಂತರದ 7 ಅಪಾಯಕಾರಿ ಕ್ರಿಯೆಗಳು!

ಭವಿಷ್ಯದಲ್ಲಿ ನೀವು ಎದುರಿಸಬಹುದಾದ ಕೆಲವೊಂದು ಅತಿ ಮುಖ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.

ಅಸ್ಥಿರಂಧ್ರತೆ

ಅಸ್ಥಿರಂಧ್ರತೆ

ಅಸ್ಥಿರಂಧ್ರತೆ ವಯಸ್ಸಾದವರಲ್ಲಿ ಕಂಡುಬರುವಂತಹ ಅತ್ಯಂತ ದೊಡ್ಡ ಆರೋಗ್ಯ ಸಮಸ್ಯೆ. ಅಸ್ಥಿರಂಧ್ರತೆಯೆಂದರೆ ದೇಹದಲ್ಲಿನ ಮೂಳೆಗಳು ದುರ್ಬಲವಾಗುವುದು. ಮೂಳೆ ಸಾಂದ್ರತೆ ಕಡಿಮೆಯಾಗುವ ಕಾರಣ ಮೂಳೆ ಮುರಿತವು ಹೆಚ್ಚಾಗಬಹುದು. ಋತುಚಕ್ರ ನಿಂತ ಬಳಿಕ ಮಹಿಳೆಯರಲ್ಲಿ ಹೆಚ್ಚಾಗಿ ಅಸ್ಥಿರಂಧ್ರತೆ ಕಂಡುಬರುವ ಅಪಾಯವಿದೆ.

ಅಕ್ಷಿಪಟಲದ ಅವನತಿ

ಅಕ್ಷಿಪಟಲದ ಅವನತಿ

ವಯಸ್ಸಾದ ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯೆಂದರೆ ದೃಷ್ಟಿ ಮಂದವಾಗುವುದು. ಇದನ್ನು ಅಕ್ಷಿಪಟಲದ ಅವನತಿ ಎಂದು ಕರೆಯುತ್ತಾರೆ. ಇದರಿಂದ ವಯಸ್ಸಾದವರು ತುಂಬಾ ಕಷ್ಟಪಡಬೇಕಾಗುತ್ತದೆ. ಅಕ್ಷಿಪಟಲವು ಪ್ರಜ್ಞೆಗೆ ನೆರವಾಗುತ್ತದೆ ಮತ್ತು ಅದನ್ನು ಮೆದುಳಿಗೆ ವರ್ಗಾಯಿಸುವುದರ ಮೇಲೆ ಪರಿಣಾಮ ಉಂಟಾಗುತ್ತದೆ.

ಶ್ರವಣ ಶಕ್ತಿ ಕಳಕೊಳ್ಳುವುದು

ಶ್ರವಣ ಶಕ್ತಿ ಕಳಕೊಳ್ಳುವುದು

ವಯಸ್ಸಾದ ಹೆಚ್ಚಿನವರು ಎದುರಿಸುವ ಸಮಸ್ಯೆಯೆಂದರೆ ಅದು ಶ್ರವಣಶಕ್ತಿ ಕಳಕೊಳ್ಳುವುದು. ಶ್ರವಣ ಶಕ್ತಿ ಕಳಕೊಳ್ಳುವ ವಯಸ್ಸಿಗೆ ಸಂಬಂಧಿಸಿದ ಈ ಸಮಸ್ಯೆಯನ್ನು ಪ್ರೆಸ್ಬ್ಯಕುಸಿಸ್ ಎನ್ನುತ್ತಾರೆ. ವಯಸ್ಸಾದಂತೆ ಶ್ರವಣಶಕ್ತಿ ಕಳಕೊಳ್ಳುವ ಕಾರಣದಿಂದಾಗಿ ವಯಸ್ಸಾದವರಿಗೆ ಶ್ರವಣ ಸಾಧನಗಳು ಬೇಕಾಗುತ್ತದೆ.

ಗ್ಲುಕೊಮಾ

ಗ್ಲುಕೊಮಾ

ವಯಸ್ಸಾದವರಲ್ಲಿ ಕಂಡುಬರುವ ಸಮಸ್ಯೆಯೆಂದರೆ ಅದು ಗ್ಲುಕೊಮಾ. ಕಣ್ಣಿನಲ್ಲಿ ದ್ರವ ಒತ್ತಡ ಹೆಚ್ಚಾಗಿ ಈ ಸಮಸ್ಯೆ ಕಂಡುಬರುತ್ತದೆ. ಇದು ದೃಷ್ಟಿಯ ನರಗಳಿಗೆ ಹಾನಿಯನ್ನು ಉಂಟುಮಾಡಿ ದೃಷ್ಟಿ ಕಳಕೊಳ್ಳುವಂತೆ ಮಾಡುತ್ತದೆ.

ಆಲ್ಝೈಮರ್ ಕಾಯಿಲೆ

ಆಲ್ಝೈಮರ್ ಕಾಯಿಲೆ

ಆಲ್ಝೈಮರ್ ಕಾಯಿಲೆಯು ವಯಸ್ಸಾದವರಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳ ಪಟ್ಟಿಯಲ್ಲಿ ಗಂಭೀರವಾಗಿರುವ ಸಮಸ್ಯೆ. ಒಮ್ಮೆ ಆಲ್ಝೈಮರ್ ಕಾಯಿಲೆ ಬಂದರೆ ಆಗ ಜ್ಞಾಪಕ ಶಕ್ತಿ ಮತ್ತು ಯೋಜನಾ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯಿಲೆಯ ಆರಂಭದಲ್ಲಿ ನೆನಪು ಶಕ್ತಿ ಕಳಕೊಳ್ಳುವುದು ಸಾಮಾನ್ಯ.

ಅರಿವಿನ ಕೊರತೆ

ಅರಿವಿನ ಕೊರತೆ

ಅರಿವಿನ ಕೊರತೆ ನೆನಪಿನ ಶಕ್ತಿಗೆ ಹಾನಿಯನ್ನುಂಟುಮಾಡುತ್ತದೆ ಮತ್ತು ವಸ್ತುಗಳನ್ನು ಗುರುತಿಸುವುದು, ವಿಷಯಗಳ ಸಾಂಗತ್ಯ ಕಲ್ಪಿಸುವ ನಿಮ್ಮ ಸಾಮರ್ಥ್ಯ ಮತ್ತು ಸಮಯ ಕಳೆದಂತೆ ಲೆಕ್ಕಾಚಾರ ಮಾಡುವ ಶಕ್ತಿ ಕಡಿಮೆಯಾಗಬಹುದು. ಇಂತಹ ಸಮಸ್ಯೆ ಹೊಂದಿರುವ ವ್ಯಕ್ತಿ ಯಾವಾಗಲೂ ಗೊಂದಲದಲ್ಲಿರುತ್ತಾನೆ ಮತ್ತು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸ ಮಾಡಲು ಈ ವ್ಯಕ್ತಿಯಿಂದ ಸಾಧ್ಯವಾಗದು.

ಅಸಂಯಮ

ಅಸಂಯಮ

ವಯಸ್ಸಾದ ಜನರಲ್ಲಿ ಕಂಡುಬರುವ ಸಾಮಾನ್ಯ ಆರೋಗ್ಯ ಸಮಸ್ಯೆಯೆಂದರೆ ಅದು ಮೂತ್ರವಿಸರ್ಜನೆ ಅಸಂಯಮ. ಶ್ರೋಣಿಯ ಸ್ನಾಯುವಿನ ಶಕ್ತಿ ಕುಂದಿರುವ ಕಾರಣ ಮಹಿಳೆಯರು ಹೆಚ್ಚಾಗಿ ಈ ಸಮಸ್ಯೆ ಎದುರಿಸುತ್ತಾರೆ. ವಿಸ್ತೃತ ಪ್ರಾಸ್ಟೇಟ್ ಹೊಂದಿರುವ ಪುರುಷರು ಕೂಡ ಈ ಕಠಿಣ ಸಮಸ್ಯೆ ಎದುರಿಸುತ್ತಾರೆ.

ಸಂಧಿವಾತ

ಸಂಧಿವಾತ

ವಯಸ್ಸಾದ ಹೆಚ್ಚಿನ ಜನರು ಎದುರಿಸುವ ಸಮಸ್ಯೆಯೆ ಸಂಧಿವಾತ. ಇದು ಮುಖ್ಯವಾಗಿ ಸ್ವಯಂಪ್ರತಿರೋಧಕ ಕಾಯಿಲೆಯಾಗಿದ್ದು, ಇದರಿಂದ ಗಂಟುನೋವು ಮತ್ತು ವಿರೂಪಗಳಾಗುತ್ತದೆ. ಸಂಧಿವಾತವು ಬೆರಳು, ಸೊಂಟ, ಮಂಡಿ, ಮಣಿಕಟ್ಟು ಮತ್ತು ಬೆನ್ನುಮೂಳೆಯ ಮೇಲೆ ಪರಿಣಾಮ ಬೀರುತ್ತದೆ.

ಚಯಾಪಚಯಾ ರೋಗಲಕ್ಷಣ

ಚಯಾಪಚಯಾ ರೋಗಲಕ್ಷಣ

ಬೊಜ್ಜು ಮತ್ತು ಇತರ ಕೆಲವೊಂದು ಸಮಸ್ಯೆಗಳು ವಯಸ್ಸಾದವರಲ್ಲಿ ಚಯಾಪಚಯಾ ರೋಗಲಕ್ಷಣಗಳಿಂದ ಕಂಡುಬರುತ್ತದೆ. ಇದರಿಂದ ಎರಡನೇ ಟೈಪ್ ನ ಡಯಾಬಿಟಿಸ್, ಹೃದಯರೋಗ, ಕ್ಯಾನ್ಸರ್ ಮತ್ತು ಅಧಿಕರಕ್ತದೊತ್ತಡ ಕಾಣಿಸಬಹುದು.

ಭಾವನಾತ್ಮಕ ಅಡಚಣೆ

ಭಾವನಾತ್ಮಕ ಅಡಚಣೆ

ವಯಸ್ಸಾದವರಲ್ಲಿ ಆರೋಗ್ಯ ಸಮಸ್ಯೆಗಳು ಕೇವಲ ದೈಹಿಕ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗಿಲ್ಲ. ವಯಸ್ಸಾಗುವುದರಿಂದ ಹಲವಾರು ರೀತಿಯ ಮಾನಸಿಕ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು. ಇದು ನಿಮಗೆ ಹಾಗೂ ಕುಟುಂಬಕ್ಕೆ ಸಮಸ್ಯೆ ಉಂಟುಮಾಡಬಹುದು.

Read more about: health ಆರೋಗ್ಯ
English summary

Health Problems In Old Age

The concept about old age can differ from person to person. But, the definition remains the same. The regenerative capacity of the body will decline with old age, making you more prone to old age related health issues
Story first published: Saturday, January 18, 2014, 11:22 [IST]
X
Desktop Bottom Promotion