Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಬಲವಾದ ಆರೋಗ್ಯಕರ ನಿಮಿರುವಿಕೆ ಪಡೆಯುವುದು ಹೇಗೆ?
ಇಂದಿನ ದಿನಗಳಲ್ಲಿ ಹೆಚ್ಚಿನ ಪುರುಷರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ಅದು ನಿಮಿರು ದೌರ್ಬಲ್ಯ ಮತ್ತು ಹೆಚ್ಚಿನವರು ಈ ಸಮಸ್ಯೆಯನ್ನು ವಯಾಗ್ರದಂತಹ ಮಾತ್ರೆ ತಿಂದು ಸರಿಪಡಿಸಿಕೊಳ್ಳಬಹುದೆಂದು ನಂಬಿದ್ದಾರೆ.
ತಜ್ಞರ ಪ್ರಕಾರ ಇದು ಮಾತ್ರ ನಿಮಿರುವಿಕೆಯನ್ನು ಬಲ ಹಾಗೂ ದೀರ್ಘವಾಗುವಂತೆ ಮಾಡುವ ಮಾರ್ಗವಲ್ಲ. ಕೆಲವೊಂದು ಇತರ ಆರೋಗ್ಯಕರ ವಿಧಾನಗಳಿಂದ ನೀವು ಸಂತೃಪ್ತ ನಿಮಿರುವಿಕೆ ನಿಮ್ಮದಾಗಿಸಿಕೊಳ್ಳಬಹುದು.
ನಿಮಿರು ದೌರ್ಬಲ್ಯದ ಬಗ್ಗೆ ಚಿಂತಿತರಾಗಿರುವ ಪುರುಷರು ಕೆಲವೊಂದು ಆಹಾರ ಮತ್ತು ಇತರ ವಿಧಾನಗಳಿಂದ ಸಮಸ್ಯೆ ಬಗೆಹರಿಸಬಹುದು. ಸಮಾಜದಲ್ಲಿ ಇಂದು ಸುಮಾರು 20 ಲಕ್ಷದಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ಇದರ ಬಗ್ಗೆ ನಾಚಿಕೆ ಪಡುವಂತಹ ವಿಷಯವೇನಿಲ್ಲ.
ಒತ್ತಡ ಹಾಗೂ ನಾವು ತಿನ್ನುವ ಆಹಾರದಿಂದಾಗಿ ನಿಮಿರು ದೌರ್ಬಲ್ಯ ಉಂಟಾಗುತ್ತದೆ. ಪುರುಷರಲ್ಲಿ ನಿಮಿರು ದೌರ್ಬಲ್ಯ ಉಂಟಾಗಲು ಪ್ರಮುಖ ಕಾರಣವೆಂದರೆ ಅದು ಒತ್ತಡ. ಈ ಸಮಸ್ಯೆ ನಿವಾರಿಸಲು ಮುಖ್ಯ ವಿಧಾನವೆಂದರೆ ಒತ್ತಡ ನಿವಾರಿಸುವುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಕರ ಸ್ತನಕ್ಕಾಗಿ ಪಾಲಿಸಬೇಕಾದ ಟಿಪ್ಸ್
ತುಂಬಾ ಆರೋಗ್ಯಕಾರಿ ವಿಧಾನದ ಮೂಲಕ ಈ ಸಮಸ್ಯೆಯನ್ನು ನಿವಾರಿಸಲು ಮತ್ತು ಬಲವಾದ ನಿಮಿರುವಿಕೆ ಪಡೆಯಲು ಬೋಲ್ಡ್ ಸ್ಕೈ ಕೆಲವೊಂದು ವಿಧಾನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ.
ಈಗ ಯಾವುದಕ್ಕಾಗಿ ಕಾಯುತ್ತಿದ್ದೀರಿ? ನಾವು ನಿಮಗಾಗಿ ಏನು ನೀಡಲಿದ್ದೇವೆ ಎನ್ನುವ ಬಗ್ಗೆ ಒಮ್ಮೆ ಕಣ್ಣು ಹಾಯಿಸಿ. ಇದು ಪುರುಷರಲ್ಲಿ ಸಾಮಾನ್ಯ ಸಮಸ್ಯೆಯಾಗಿರುವ ಕಾರಣ ಹೆದರುವ ಮತ್ತು ನಾಚಿಗೆಪಡುವ ಅಗತ್ಯವಿಲ್ಲವೆಂದು ಗಮನದಲ್ಲಿಟ್ಟುಕೊಳ್ಳಿ.

ಬ್ಲ್ಯಾಕ್ ಬೆರ್ರಿ
ಬ್ಲ್ಯಾಕ್ ಬೆರ್ರಿ ಗಾಢ ಬಣ್ಣ ಹೊಂದಿರುವ ಹಣ್ಣಾಗಿದ್ದು, ಇದರಲ್ಲಿ ಆಂತೋಸಿಯಾನ್ಸಿಸ್ ಮತ್ತು ಅತಿ ಶಕ್ತಿಯುತ ಉತ್ಕರ್ಷಣ ಗುಣಗಳಿಂದ ಸಮೃದ್ಧವಾಗಿದೆ. ಇವು ಬಲವಾದ ನಿಮಿರುವಿಕೆಗೆ ನೆರವಾಗುತ್ತದೆ. ಪ್ರತೀ ದಿನ ಮಲಗುವ ಮೊದಲು ನೀವು ಒಂದು ಕಪ್ ಬ್ಲ್ಯಾಕ್ ಬೆರ್ರಿ ಸೇವಿಸಿದರೆ ಇದು ಆರೋಗ್ಯಕರ ವಿಧಾನದಿಂದ ಸಮಸ್ಯೆ ನಿವಾರಿಸಲು ನೆರವಾಗುತ್ತದೆ.

ಧೂಮಪಾನ ತ್ಯಜಿಸಿ
ಆರೋಗ್ಯಕರ ವಿಧಾನದಲ್ಲಿ ಬಲವಾದ ನಿಮಿರುವಿಕೆ ಪಡೆಯಲು ನೀವು ಧೂಮಪಾನ ಮಾಡದಿರುವ ನಿಯಮವಾಗಿ ಕಡ್ಡಾಯವಾಗಿ ಪಾಲಿಸಬೇಕು. ನಿಮಿರುವಿಕೆ ಸಾಮರ್ಥ್ಯವನ್ನು ಧೂಮಪಾನವು ಕಡಿಮೆ ಮಾಡುತ್ತದೆ.

ಡಾರ್ಕ್ ಚಾಕಲೇಟ್
ಒಂದು ಕಾಮೋತ್ತೇಜಕ ಆಹಾರ. ಡಾರ್ಕ್ ಚಾಕಲೇಟ್ ನಿಮ್ಮ ದೇಹಕ್ಕೆ ಹೆಚ್ಚಿನ ಶಕ್ತಿ ತಂದುಕೊಡುತ್ತದೆ. ಲೈಂಗಿಕ ಕ್ರಿಯೆಗೆ ಒಂದು ಗಂಟೆಗೆ ಮೊದಲು ಡಾರ್ಕ್ ಚಾಕಲೇಟ್ ತಿನ್ನುವುದು ತುಂಬಾ ಲಾಭಕಾರಿ.

ದಾಳಿಂಬೆ
ದಾಳಿಂಬೆ ಜ್ಯೂಸ್ ನಲ್ಲಿ ಬಹಳಷ್ಟು ಶಕ್ತಿಯಿದ್ದು, ಇದನ್ನು ಸೇವಿಸುವುದರಿಂದ ಪುರುಷರಲ್ಲಿ ಬಲವಾದ ನಿಮಿರುವಿಕೆಯನ್ನು ನೈಸರ್ಗಿಕ ವಿಧಾನದಿಂದ ಪಡೆಯಬಹುದಾಗಿದೆ. ಒಂದು ಕಪ್ ದಾಳಿಂಬೆ ಜ್ಯೂಸ್ ನ್ನು ಕುಡಿದರೆ ಪುರುಷರು ತಮ್ಮ ಶಕ್ತಿಯನ್ನು ತೋರಿಸಬಹುದಾಗಿದೆ.

ಆಕ್ಯುಪಂಕ್ಚರ್
ಮಾನಸಿಕ ಪ್ರೇರಿತ ನಿಮಿರು ದೌರ್ಬಲ್ಯ ಎದುರಿಸುತ್ತಿರುವ ಶೇ. 70ರಷ್ಟು ಪುರುಷರು ನಿಮಿರು ದೌರ್ಬಲ್ಯ ಸಮಸ್ಯೆ ನಿವಾರಿಸಲು ಆಕ್ಯುಪಂಕ್ಚರ್ ಚಿಕಿತ್ಸೆ ಪ್ರಯತ್ನಿಸಿದ್ದಾರೆ. ಇದು ಧನಾತ್ಮಕ ಪರಿಣಾಮ ಬೀರಿದೆ ಮತ್ತು ನೈಸರ್ಗಿಕವಾಗಿ ಬಲವಾದ ನಿಮಿರುವಿಕೆ ಪಡೆಯಲು ನೆರವಾಗಿದೆ.

ಬೆಳ್ಳುಳ್ಳಿ: ಪವಾಡ ಆಹಾರ
ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎನ್ನುವ ಅಂಶವಿದ್ದು, ಇದು ಸಂತಾನೋತ್ಪತ್ತಿ ಅಂಗಾಂಗಗಳಲ್ಲಿ ರಕ್ತದ ಸಂಚಲನ ಉತ್ತಮಪಡಿಸುತ್ತದೆ. ಬೆಳ್ಳುಳ್ಳಿಯನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸುವ ಮೂಲಕ ನೈಸರ್ಗಿಕ ಹಾಗೂ ಆರೋಗ್ಯಕರ ವಿಧಾನದಿಂದ ಬಲವಾದ ನಿಮಿರುವಿಕೆ ಪಡೆಯಬಹುದು.

ವ್ಯಾಯಾಮ
ಪುರುಷರು ಯಾವಾಗಲೂ ತಮ್ಮನ್ನು ಫಿಟ್ ಆಗಿಟ್ಟುಕೊಳ್ಳಬೇಕು. ಇದಕ್ಕೆ ವ್ಯಾಯಾಮ ಒಳ್ಳೆಯ ವಿಧಾನ. ಪ್ರತೀದಿನ ಒಂದು ಗಂಟೆ ಕಾಲ ವ್ಯಾಯಾಮ ಮಾಡಿದರೆ ನೈಸರ್ಗಿಕವಾಗಿ ಬಲವಾದ ನಿಮಿರುವಿಕೆ ಪಡೆಯಬಹುದು.

ಆಹಾರ ಕ್ರಮದ ಬಗ್ಗೆ ಗಮನಹರಿಸಿ
ನೀವು ಆಹಾರ ಕ್ರಮದ ಬಗ್ಗೆ ಗಮನಹರಿಸಬೇಕು. ನೀವು ನಿಮಿರು ದೌರ್ಬಲ್ಯ ಸಮಸ್ಯೆ ಎದುರಿಸುತ್ತಿದ್ದರೆ ಶಕ್ತಿ ಮತ್ತು ಅಂಗಾಂಗಳಿಗೆ ರಕ್ತ ಸಂಚಲನ ಹೆಚ್ಚಿಸುವ ಆಹಾರಗಳನ್ನು ತಿನ್ನಬೇಕು.



Click it and Unblock the Notifications








