Latest Updates
-
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ!
ಆರೋಗ್ಯಭರಿತ ಸಿಹಿ ಆಲೂಗಡ್ಡೆ ಸೇವನೆಯ ಪ್ರಯೋಜನ
ಸಿಹಿ ಆಲೂಗಡ್ಡೆ ಸ್ವಾದಿಷ್ಟ ಹಾಗೂ ಆರೋಗ್ಯಯುತವಾಗಿದೆ. ಆಲೂಗಡ್ಡೆಗೆ ಪರ್ಯಾಯವಾಗಿ ಇದನ್ನು ಬಳಸಲಾಗುತ್ತದೆ. ಸಿಹಿ ಆಲೂಗಡ್ಡೆಯಲ್ಲಿ ನ್ಯೂಟ್ರಿಯಂಟ್ಸ್‌ಗಳು ಹೇರಳವಾಗಿದ್ದು ಕಡಿಮೆ ಪ್ರಮಾಣದ ಗ್ಲಿಸಮಿಕ್ ಅಂಶವನ್ನು ಹೊಂದಿದೆ. ಇದೊಂದು ವಸಂತ ಮಾಸದ ತರಕಾರಿಯಾಗಿದ್ದು ಹೆಚ್ಚು ಆರೋಗ್ಯದಾಯಕ ಹಾಗೂ ನ್ಯೂಟ್ರಿಶಿಯಸ್ ಆಗಿದೆ.
ಸಿಹಿ ಆಲೂಗಡ್ಡೆಯನ್ನು ಸೇವಿಸುವುದು ಈ ನ್ಯೂಟ್ರಿಶಿಯಸ್ ಹಾಗೂ ಪ್ರೋಟೀನ್‌ಗಳಿಗಾಗಿ. ಇದರಲ್ಲಿರುವ ವಿಟಮಿನ್‌ಳಾದ ಸಿ, ಬಿ2, ಬಿ6, ಡಿ, ಇ ಹಾಗೂ ಬಯೋಟಿನ್ ದೇಹಕ್ಕೆ ಪೋಷಕಾಂಶವನ್ನು ಒದಗಿಸಿ ದೇಹಸ್ಥಿತಿಯನ್ನು ಕಾಪಾಡುತ್ತದೆ. ಇದರಲ್ಲಿ ಬೇಟಾ ಕ್ಯಾರೊಟಿನ್ ಹಾಗೂ ವಿಟಮಿನ್ ಎ ಅಧಿಕವಾಗಿದ್ದು ತರಕಾರಿಗಳಲ್ಲೇ ಮೇಲ್ದರ್ಜೆಯಲ್ಲಿದೆ.
ಸಿಹಿ ಆಲೂಗಡ್ಡೆಯಲ್ಲಿರುವ ಕ್ಯಾರೊಟಿನಾಯ್ಡ್ ಕ್ಯಾನ್ಸರ್‌ನ ಹಲವಾರು ವಿಧಗಳಿಂದ ದೇಹವನ್ನು ಕಾಪಾಡುತ್ತದೆ. ಇದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ಸಿಹಿ ಆಲೂಗಡ್ಡೆಯನ್ನು ತಮ್ಮ ದೈನಂದಿನ ಜೀವನದಲ್ಲಿ ಆಹಾರವನ್ನಾಗಿ ಬಳಸಿದವರು ಹಲವಾರು ರೋಗಗಳಿಂದ ಚೇತರಿಕೆಯನ್ನು ಪಡೆದುಕೊಂಡಿದ್ದಾರೆ. ಇದು ತನ್ನಲ್ಲಿ ಐರನ್, ಕೋಪರ್, ಫೊಲೇಟ್, ಮ್ಯಾಂಗನೀಸ್ ಸತ್ವವನ್ನು ಹುದುಗಿಸಿಕೊಂಡಿದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿರುವ ಸಿಹಿ ಆಲೂಗಡ್ಡೆ ವಸಂತ ಮಾಸದ ತರಕಾರಿಯಾಗಿ ವಿಶಿಷ್ಟ ಗುಣಗಳನ್ನು ತನ್ನಲ್ಲಿ ಮೈದುಂಬಿಸಿಕೊಂಡಿದೆ.
ಸಿಹಿ ಆಲೂಗಡ್ಡೆಯ ಸೇವನೆಯ ಪ್ರಯೋಜನವನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ ಅದರತ್ತ ದೃಷ್ಟಿ ಹರಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಯಸ್ಸಾದವರಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳು

ರಕ್ತದ ಮಧುಮೇಹ ಮಟ್ಟವನ್ನು ನಿಯಂತ್ರಿಸುತ್ತದೆ
ಇದರಲ್ಲಿ ಗ್ಲಿಸಮಿಕ್ಸ್ ಅಂಶ ಕಡಿಮೆ ಇರುವುದರಿಂದ ಮಧುಮೇಹಿಗಳು ಸಿಹಿ ಆಲೂಗಡ್ಡೆಯನ್ನು ಸೇವಿಸಬಹುದು.

ಹೃದಯಾಘಾತವನ್ನು ತಡೆಗಟ್ಟುತ್ತದೆ
ಸಿಹಿ ಆಲೂಗಡ್ಡೆಯಲ್ಲಿರುವ ವಿಟಮಿನ್ ಬಿ6 ಹೃದಯವನ್ನು ಆರೋಗ್ಯಕರವಾಗಿರುಸುವಲ್ಲಿ ಸಹಕಾರಿ. ಹೃದಯಾಘಾತಗಳನ್ನು ತಡೆಗಟ್ಟುವ ರಾಸಾಯನಿಕ ಹೋಮೋಸಿಸ್ಟೀನ್ ಅನ್ನು ಸಿಹಿ ಆಲೂಗಡ್ಡೆ ಕಡಿಮೆ ಮಾಡುತ್ತದೆ.

ವಿಟಮಿನ್ ಸಿ
ಒಂದು ಆರೋಗ್ಯಯುತವಾದ ವಸಂತ ಮಾಸದ ತರಕಾರಿಯಾಗಿರುವ ಸಿಹಿ ಆಲೂಗಡ್ಡೆ ವಿಟಮಿನ್ ಸಿ ಯನ್ನು ಹೇರಳವಾಗಿ ಹೊಂದಿದೆ. ಜೀರ್ಣಕ್ರಿಯೆಯಲ್ಲಿ, ರಕ್ತ ಕಣಗಳ ರಚನೆಯಲ್ಲಿ ಮೂಳೆ ಹಾಗೂ ಹಲ್ಲುಗಳ ರಚನೆಯಲ್ಲಿ ಪ್ರಮುಖ ಪಾತ್ರವನ್ನು ಇದು ವಹಿಸುತ್ತದೆ.

ರಕ್ತ ಕಣ ಉತ್ಪಾದನೆ
ಸಿಹಿ ಆಲೂಗಡ್ಡೆ ವಿಟಮಿನ್ ಸಿ ಮತ್ತು ಐರನ್ ಅನ್ನು ಒಳಗೊಂಡಿದ್ದು ರಕ್ತದ ಬಿಳಿ ಮತ್ತು ಕೆಂಪು ರಕ್ತ ಕಣಗಳನ್ನು ವೃದ್ಧಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ವೃದ್ಧಾಪ್ಯದ ಬಲವರ್ಧನೆಗೆ
ವೃದ್ದಾಪ್ಯದಲ್ಲಿ ಕಂಡು ಬರುವ ಪ್ರಮುಖ ಸಮಸ್ಯೆಗಳಾದ ಕಣ್ಣಿನ ದೃಷ್ಟಿ ಕ್ಷೀಣವಾಗುವುದು, ಕಡಿಮೆ ರೋಗನಿರೋಧಕ ಶಕ್ತಿಯನ್ನು ಸಿಹಿ ಆಲೂಗಡ್ಡೆಯ ಸೇವನೆ ನಿವಾರಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಹಾಗೂ ಕ್ಯಾರೊಟಿನಾಯ್ಡ್ಸ್ ಅಂದರೆ ಬೇಟಾ ಕ್ಯಾರೊಟಿನ್ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ ದೃಷ್ಟಿಯನ್ನು ಬಲಪಡಿಸುತ್ತದೆ. ಅಲ್ಲದೆ ಬೇಟಾ ಕ್ಯಾರೊಟಿನ್ ರೇಡಿಕಲ್ ಮುಕ್ತವಾಗಿದ್ದು ನೆರಿಗೆಯ ರಚನೆಯನ್ನು ವಿಳಂಬಗೊಳಿಸುತ್ತದೆ.

ಒತ್ತಡ ನಿವಾರಣೆಗೆ
ಸಿಹಿ ಆಲೂಗಡ್ಡೆಯನ್ನು ಸೇವಿಸುವುದರಿಂದ ಇದೊಂದು ಪ್ರಯೋಜನವಾಗಲಿದೆ. ಒತ್ತಡ ನಿವಾರಕವಾಗಿರುವ ಸಿಹಿ ಆಲೂಗಡ್ಡೆ ಹೃದಯ, ಮೂಳೆ ಹಾಗೂ ನರಗಳಿಗೆ ಉತ್ತಮವಾಗಿದೆ.

ಮೂಲ ಸ್ವಾಸ್ಥ್ಯ
ಸಿಹಿ ಆಲೂಗಡ್ಡೆಯು ವಿಟಮಿನ್ ಡಿ ಯನ್ನು ಹೇರಳವಾಗಿ ಹೊಂದಿದೆ. ಸಿಹಿ ಆಲೂಗಡ್ಡೆಯ ಸೇವನೆಯು ಮೂಡ್ ಅನ್ನು ಸರಿಪಡಿಸಿ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ ಮೂಳೆಗಳನ್ನು ಸ್ವಸ್ಥಗೊಳಿಸುತ್ತದೆ. ಇಷ್ಟೇ ಅಲ್ಲದೆ ಸಿಹಿ ಆಲೂಗಡ್ಡೆ ಮೂಳೆಗಳು, ಹೃದಯ, ನರಗಳು, ತ್ವಚೆ, ಮತ್ತು ಹಲ್ಲುಗಳನ್ನು ಆರೋಗ್ಯಪೂರ್ಣವಾಗಿ ಇರಿಸುತ್ತದೆ.



Click it and Unblock the Notifications