Latest Updates
-
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು!
ತಂಬಾಕು ನೀಡುವ ಕೊಡುಗೆ-ನರಕದ ಸಾವು
ಮೇ. 31 ವಿಶ್ವ ತಂಬಾಕು ದಿನ. ತಂಬಾಕಿನಿಂದ ಬರುವ ಅನಾರೋಗ್ಯವನ್ನು ತಪ್ಪಿಸಲು, ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ವಿಶ್ವದ ಜನಸಂಖ್ಯೆಯಲ್ಲಿ ತಂಬಾಕು ಸೇವನೆಯಿಂದ ಪ್ರತೀವರ್ಷ ಸರಾಸರಿ 5.4 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ,ಅಂದರೆ ಊಹಿಸಿ ತಂಬಾಕು ಎಷ್ಟರ ಮಟ್ಟಿಗೆ ಹಾನಿಕಾರಕವೆಂದು.
ತಂಬಾಕು ಸೇವನೆಯನ್ನು ಮೊದಲಿಗೆ ತಮಾಷೆಗೆ ಅಂತ ಫ್ರೆಂಡ್ಸ್ ಜೊತೆ ಸೇರಿ ಪ್ರಾರಂಭಿಸುತ್ತಾರೆ, ಆದರೆ ತಮಾಷೆಗೆ ಪ್ರಾರಂಭವಾದ ತಂಬಾಕು ಸೇವನೆ ಚಟವಾಗಿ ಕ್ಯಾನ್ಸರ್, ಉಸಿರಾಟದ ತೊಂದರೆಗಳಿಗೆ ಆಹ್ವಾನ ನೀಡುವುದು.
ತಂಬಾಕಿನಲ್ಲಿ ಸೈನೈಡ್, ಬೆಂಜೈನ್, ಫಾರ್ಮಲ್ ಡೀಹೈಡ್, ಮೆಥಾನಾಲ್, ಆಸಿಟಿಲಿನೆ, ಅಮೋನಿಯಂ ರಾಸಾಯನಿಕಗಳಿರುತ್ತವೆ. ಅವುಗಳಲ್ಲಿದೆ ಧೂಮಪಾನದಲ್ಲಿ ಥಾರ್, ವಿಷಕಾರಕ ಅನಿಲಗಳು ದೇಹವನ್ನು ಸೇರಿ, ನಮ್ಮ ದೇಹದಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ಇದರಿಂದ ದೇಹದಲ್ಲಿ ವಿಷಕಾರಕ ರಾಸಾಯನಿಕಗಳ ಪ್ರಮಾಣ ಹೆಚ್ಚಾಗಿ ಕ್ಯಾನ್ಸರ್, ಹೃದಯದಲ್ಲಿ ತೂತು ಇವುಗಳು ಉಂಟಾಗಿ ತುಂಬಾ ನೋವು ಅನುಭವಿಸಿ ಸಾಯಬೇಕಾದ ಪರಿಸ್ಥಿತಿ ಉಂಟಾಗುವುದು.
ಧೂಮಪಾನ ನಿಮ್ಮ ದೇಹದ ಎಲ್ಲಾ ಭಾಗಗಳನ್ನೂ ಪ್ರಭಾವಿಸುತ್ತದೆ ಮತ್ತು ಇದರ ವಿಷ ದೇಹದಲ್ಲೇ ಉಳಿದುಬಿಡುತ್ತದೆ. ಈ ರೀತಿ ಉಂಟಾದಾಗ ಈ ರೀತಿಯ ಲಕ್ಷಣಗಳು ಕಂಡು ಬರುತ್ತದೆ:

ಜಠರ ಮತ್ತು ಕರುಳಿನ ಮೇಲೆ ಧೂಮಪಾನ ಸರಿಪಡಿಸಲು ಆಗದಂತಹ ಪರಿಣಾಮ ಬೀರುತ್ತದೆ. ಸಿಗರೇಟಿನಲ್ಲಿರುವ ದುಷ್ಪರಿಣಾಮ ಬೀರುವ ವಿಷದ ಅಂಶ ಜಠರದ ಒಳಪದರವನ್ನು ಸವೆಸುತ್ತದೆ ಮತ್ತು ಜೀರ್ಣಾಂಗದ ಕಿಣ್ವಗಳು ಸರಿಯಾಗಿ ಕೆಲಸ ಮಾಡಲು ಅಡ್ಡಿಪಡಿಸುತ್ತದೆ. ಇದೇ ಕಾರಣದಿಂದ ಧೂಮಪಾನ ವ್ಯಸನಿಗಳು ಆಹಾರ ಜೀರ್ಣವಾಗುವುದರಲ್ಲಿ ತೊಂದರೆ ಅನುಭವಿಸುತ್ತಾರೆ.

ಬಾಯಿ ರುಚಿ ಇಲ್ಲದಾಗುವುದು
ನೀವು ಧೂಮಪಾನ ವ್ಯಸನಿಯಾಗಿದ್ದರೆ ನಿಮ್ಮ ನಾಲಗೆಯ ಮೇಲಿರುವ ರುಚಿ ಗ್ರಾಹಕ (ಟೇಸ್ಟ್ ಬಡ್) ಗಳು ಬೇಗನೆ ನಶಿಸಿ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿಯೇ ಧೂಮಪಾನ ವ್ಯಸನಿಗಳು ಖಾರ ಪದಾರ್ಥಗಳನ್ನು ಯಾವುದೇ ತೊಂದರೆಯಿಲ್ಲದೆ ಸೇವಿಸುತ್ತಾರೆ. ಅವರ ನಾಲಗೆಯ ಮೇಲಿನ ರುಚಿ ಗ್ರಾಹಕಗಳು ನಶಿಸಿ ಹೋಗಿರುವ ಕಾರಣ ಅವರಿಗೆ ರುಚಿ ತಿಳಿಯುದಿಲ್ಲ.

ಮೈಯಲ್ಲಿ ನೀರಿನಂಶ ಕಡಿಮೆಯಾಗುವುದು
ಧೂಮಪಾನ ವ್ಯಸನಿಗಳು ಸಾಮಾನ್ಯ ಜನರು ಸೇವಿಸುವುದಕ್ಕಿಂತ ಕನಿಷ್ಟ 2 ಲೀಟರ್ ಗಿಂತ ಹೆಚ್ಚಿನ ನೀರನ್ನು ಸೇವಿಸಬೇಕು. ಇದಕ್ಕೆ ಕಾರಣ ಧೂಮಪಾನ ದೇಹದ ದ್ರವ ಸಮತೋಲನದ ಮೇಲೆ ಬೀರುವ ಪ್ರಭಾವ. ಇದಕ್ಕೆ ಕಾರಣ ಧೂಮಪಾನ ದೇಹವನ್ನು ಆಂತರಿಕವಾಗಿ ಒಣಗಿಸುತ್ತದೆ. ಇದು ಒಣಗಿದ ತುಟಿಗಳು, ಒಣ ಚರ್ಮ ಹಾಗೂ ಹಲವಾರು ಮೂತ್ರ ಸಂಬಂಧಿ ಸೋಂಕುಗಳ ಮೂಲಕ ಪ್ರಕಟವಾಗುತ್ತದೆ.

ಶಕ್ತಿ ಹೀನತೆಯ ಮೇಲೆ ಧೂಮಪಾನದ ಪ್ರಭಾವ
ಹೆಚ್ಚಿನ ಧೂಮಪಾನ ವ್ಯಸನಿಗಳು ಧೂಮಪಾನ ತಮಗೆ ರಾತ್ರಿ ಪಾಳಿಯ ಕೆಲಸಗಳನ್ನು ಮಾಡಲು ಹಾಗೂ ತಡರಾತ್ರಿಯ ತನಕ ಕೆಲಸಗಳನ್ನು ಮಾಡಲು ಶಕ್ತಿ ನೀಡುತ್ತದೆ ಎಂಬ ಸಬೂಬು ನೀಡುತ್ತಾರೆ. ಆದರೆ ಧೂಮಪಾನ ನಿಮ್ಮ ಶಕ್ತಿಯ ಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಇದೊಂದು ಕುಂಟು ನೆಪವಾಗಿದೆ. ಇದು ನಿಮ್ಮ ಶ್ವಾಸಕೋಶದ ಮೇಲೆ ಪ್ರಭಾವ ಬೀರುತ್ತದೆ. ಹಾಗೂ ನಿಮ್ಮ ಶ್ವಾಸಕೋಶಗಳು ಸಮರ್ಪಕವಾಗಿ ಗಾಳಿಯನ್ನು ಒದಗಿಸದಿದ್ದಲ್ಲಿ ನೀವು ಹೆಚ್ಚು ಶಕ್ತಿ ಪಡೆಯಲು ಹೇಗೆ ತಾನೇ ಸಾಧ್ಯ?

ಧೂಮಪಾನ ಡಿ.ಎನ್.ಎ (ಜೀವಧಾತು) ಯನ್ನು ಪ್ರಭಾವಿಸುತ್ತದೆ
ನೀವು ಸಿಗರೇಟಿನ ಕೇವಲ ಒಂದೇ ಒಂದು ದಮ್ಮನ್ನು ತೆಗೆದುಕೊಳ್ಳುತ್ತಿದ್ದಂತೆಯೆ ಟಾರ್ ರೀತಿಯ ಒಂದು ಅಂಶ ನಿಮ್ಮ ರಕ್ತದಲ್ಲಿ ರಚನೆಯಾಗುತ್ತದೆ ಹಾಗೂ ಇದು ಡಿ.ಎನ್.ಏ ಯನ್ನು ಘಾಸಿಗೊಳಿಸುವ ಎಲ್ಲಾ ಸಾಧ್ಯತೆಗಳಿವೆ. ಈ ದುಷ್ಪರಿಣಾಮದ ಸ್ವರೂಪ ಏನೆಂಬುದನ್ನು ಇಲ್ಲಿಯ ತನಕ ಪತ್ತೆಹಚ್ಚಲಾಗಲಿಲ್ಲ. ಅಂದರೆ, ಕೇವಲ ನೀವೊಬ್ಬರೆ ಧೂಮಪಾನದ ದುಷ್ಪರಿಣಾಮಕ್ಕೆ ಒಳಗಾಗುವುದಿಲ್ಲ ನೀವಿದನ್ನು ನಿಮ್ಮ ಮುಂದಿನ ಪೀಳಿಗೆಗೂ ವರ್ಗಾಯಿಸುತ್ತೀರಿ ಎಂದರ್ಥ.

ಲೈಂಗಿಕ ಸಾಮರ್ಥ್ಯ ಕುಂದುವುದು
ಧೂಮಪಾನ ವ್ಯಸನಿಗಳಲ್ಲಿ ಲೈಂಗಿಕ ಸಾಮರ್ಥ್ಯ ಕಡಿಮೆಯಾಗುವುದು.

ಕರುಳಿನ ಕ್ಯಾನ್ಸರ್
ಇವು ಕೊನೆಯ ಹಂತದಲ್ಲಿ ಕಂಡು ಬರುವುದು. ಧೂಮಪಾನಿಗಳು ಕರುಳಿನ ಕ್ಯಾನ್ಸರ್ ಅಥವಾ ವಿಪರೀತ ಕೆಮ್ಮು ಬಂದು ತುಂಬಾ ನರಕ ಅನುಭವಿಸಿ ಸಾಯುವ ಪರಿಸ್ಥಿತಿ ಬರಬಹುದು.

ತಂಬಾಕು ಬಿಡಬೇಕೆಂದು ಅನಿಸಿದರೆ ಮಾತ್ರ
'ಗೊತ್ತಿದ್ದು-ಗೊತ್ತಿಲ್ಲದೆ ತಂಬಾಕಿನ ಚಟಕ್ಕೆ ಬಿದ್ದೆ, ಆದರೆ ಅದರಿಂದ ಹೊರಬರಬೇಕೆಂದು ಬಯಸುತ್ತಿದ್ದೇನೆ' ಅನ್ನುವುದಾದರೆ ಈ ಪ್ರಯತ್ನವನ್ನು ಮಾಡಿ, ಖಂಡಿತ ಹೊರಬರಬಹುದು.

ಸ್ಮೋಕ್ ಲೆಸ್ ಸಿಗರೇಟ್
ಸ್ಮೋಕ್ ಲೆಸ್ ಸಿಗರೇಟ್ ಅಂದರೆ ಹೊಗೆ ಬರದಂತಹ ಸಿಗರೇಟ್ ಸೇವನೆ ಧೂಮಪಾನ ಅಭ್ಯಾಸ ಬಿಡಲು ಸಹಾಯ ಮಾಡುತ್ತದೆ. ಇದನ್ನು ಪ್ಲಾಸ್ಟಿಕ್ ನಿಂದ ಮಾಡಲಾಗಿರುತ್ತದೆ, ಇದರಲ್ಲಿ ಹೊಗೆಸೊಪ್ಪು ಅಥವಾ ನಿಕೋಟಿನ್ ಇರುವುದಿಲ್ಲ. ಇದರಲ್ಲಿ ಮಿಂಟ್(ಪುದೀನ) ಅಥವಾ ಮೆಂತೋಸ್ ಸ್ವಾದ ಇರುವುದರಿಂದ ಇದನ್ನು ಸೇದಿ ತೃಪ್ತಿಯನ್ನು ಪಟ್ಟುಕೊಳ್ಳಬಹುದು.

ಚ್ಯೂಯಿಂಗ್ ಗಮ್
ಚ್ಯೂಯಿಂಗ್ ಗಮ್ ಅಗೆಯುವುದರಿಂದ ಧೂಮಪಾನ ಅಭ್ಯಾಸವನ್ನು ಕ್ರಮೇಣ ಕಡಿಮೆ ಮಾಡಿಕೊಳ್ಳಬಹುದು, ಆದರೆ ಅಧಿಕ ಚ್ಯೂಯಿಂಗ್ ಗಮ್ ಅಗೆಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಹೆಚ್ಚು ಸಿಹಿ ಇಲ್ಲದ ಚ್ಯೂಯಿಂಗ್ ಗಮ್ ಅಗೆಯಬೇಕು.

ಮಿಂಟ್ ಗಮ್
ಮಿಂಟ್ ತಿನ್ನುವುದು ಅಥವಾ ಮಿಂಟ್ ಗಮ್ ತಿನ್ನುವ ಅಭ್ಯಾಸ ಸಿಗರೇಟ್ ಅನ್ನು ಮರೆಯುವಂತೆ ಮಾಡುತ್ತದೆ.

ಡಾರ್ಕ್ ಚಾಕಲೇಟ್
ಡಾರ್ಕ್ ಚಾಕಲೇಟ್ ರಚಿಯ ಜೊತೆಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದನ್ನು ಸಿಗರೇಟ್ ನೆನಪು ಬರುವಾಗ ಬಾಯಿಗೆ ಹಾಕಿದರೆ ಸಿಗರೆಟ್ ನೆನಪು ಬರುವುದಿಲ್ಲ.ಬಾದಾಮಿಯನ್ನು ಬಾಯಿಗೆ ಹಾಕಿ ಮೆಲ್ಲುತ್ತಾ ಇದ್ದರೆ ಸಿಗರೇಟ್ ಸೇದ ಬೇಕೆಂಬ ತುಡಿತ ಕಡಿಮೆಯಾಗುತ್ತದೆ.



Click it and Unblock the Notifications











