Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಈ ಮನೆ ಮದ್ದುಗಳು ವಿಚಿತ್ರವಾದವು, ಆದರೆ ಪರಿಣಾಮಕಾರಿ
ಹೆಚ್ಚಿನ ಮನೆ ಮದ್ದುಗಳು ತುಂಬಾ ಪರಿಣಾಮಕಾರಿ. ಸಾವಿರಾರು ರುಪಾಯಿಗೆ ಔಷಧಿಗೆ ಖರ್ಚು ಮಾಡಿ ಕಡಿಮೆಯಾಗದಿರುವ ಕೆಲವೊಂದು ರೋಗಗಳು ಮನೆ ಮದ್ದಿಗೆ ಗುಣಮುಖವಾಗುವುದು! ಮನೆ ಮದ್ದು ತಲಾತಲಾಂತರಗಳಿಂದ ಮಾಡುತ್ತಿರುವ ಔಷಧಿಯ ವಿಧಾನವಾಗಿದೆ. ಆಸ್ಪತ್ರೆಯ ಮೆಟ್ಟಿಲು ಹತ್ತದ ಅನೇಕ ಹಳ್ಳಿಯ ಜನರನ್ನು ನೋಡಬಹುದು. ಕೇಳಿದರೆ "ನಾಟಿ ಮದ್ದು ತೆಗೆದುಕೊಳ್ಳುತ್ತೇವೆ, ಬೇಗನೆ ಗುಣವಾಗುವುದು" ಎನ್ನುವ ಉತ್ತರ ದೊರೆಯುತ್ತದೆ.
ಹೌದು ಈ ನಾಟಿ ಔಷಧಿಗಳ ಮೇಲೆ ನಂಬಿಕೆ ಇರುವವರು ಅದನ್ನೇ ತೆಗೆದುಕೊಳ್ಳುತ್ತೇರೆ ಹೊರತು ಇಂಗ್ಲೀಷ್ ಮೆಡಿಷನ್ ಕಡೆ ಒಲವು ತೊರುವುದಿಲ್ಲ. ಕೆಲವೊಂದು ಮನೆ ಮದ್ದು ನೋಡುವಾಗ ತುಂಬಾ ವಿಚಿತ್ರ ಅನಿಸುವುದು, ಪೆನ್ಸಿಲ್ ತಿಂದರೆ ತಲೆ ನೋವು ಕಡಿಮೆಯಾಗುವುದು ಅಂದರೆ ವಿಚಿತ್ರ ತಾನೇ. ಈ ರೀತಿಯ ಕೆಲವು ವಿಚಿತ್ರವಾದ ಆದರೆ ಪರಿಣಾಮಕಾರಿಯಾದ ಮನೆ ಮದ್ದುಗಳ ಬಗ್ಗೆ ಹೇಳಿದ್ದೇವೆ ನೋಡಿ:

ವೋಡ್ಕಾ
ಕಾಲು ಬೆವರಿ ದುರ್ವಾಸನೆ ಬೀರುತ್ತಿದೆಯೇ? ಹಾಗಾದರೆ ಹತ್ತಿಯನ್ನು ವೋಡ್ಕಾದಲ್ಲಿ ಅದ್ದಿ ಕಾಲು ಒರೆಸಿದರೆ ನಿಮ್ಮ ಸಮಸ್ಯೆ ದೂರ ಬಹು ದೂರ.

ಟೆನ್ನೀಸ್ ಬಾಲ್
ಟೆನ್ನೀಸ್ ಬಾಲ್ ಬಳಸಿ ಮಸಾಜ್ ಮಾಡಿದರೆ ಕಾಲು ನೋವು ಕಡಿಮೆಯಾಗುವುದು. ಪಾದದ ನೋವು ಕೂಡ ಕಡಿಮೆಯಾಗುವುದು.

ಲಿಸ್ಟ್ರೈನ್
ಹೆಬ್ಬರಳಿನಲ್ಲಿ ಅಲರ್ಜಿ, ತಲೆ ಹೊಟ್ಟು ಈ ರೀತಿಯ ಸಮಸ್ಯೆಯನ್ನು ಲಿಸ್ಟ್ರೈನ್ (listerine) ಬಳಸಿ ಹೋಗಲಾಡಿಸಬಹುದು.

ಸಕ್ಕರೆ
ಬಿಕ್ಕಳಿಕೆ ಉಂಟಾಗಿ ನೀರು ಕುಡಿದು ಕಮ್ಮಿಯಾಗದಿದ್ದರೆ ಒಂದು ಚಮಚ ಸಕ್ಕರೆ ತಿಂದರೆ ಸಾಕು ಬಿಕ್ಕಳಿಕೆ ತಕ್ಷಣ ಕಡಿಮೆಯಾಗುವುದು.

ಸುಗಂಧವಾಸನೆಯ ಎಣ್ಣೆ
ತಲೆ ನೋವು ಉಂಟಾದಾಗ ಸುಗಂಧವಾಸನೆಯ ಎಣ್ಣೆಯನ್ನು ತಲೆಗೆ ಹಾಕಿದರೆ ಅಥವಾ ವಾಸನೆಯನ್ನು ಗ್ರಹಿಸಿದರೆ ತಲೆ ನೋವು ಕಡಿಮೆಯಾಗುವುದು.

ಕುಷನ್ಸ್
ತುಂಬಾ ಸುಸ್ತಾದಾಗ ದಿಂಬಿಗೆ ಒರಗಿ ಕೂತರೆ ಸಾಕು ಯಾವ ಗ್ಲೂಕೋಸ್ ಇಲ್ಲದೆ ಲವಲವಿಕೆ ಮರಳಿ ಬರುವುದು.

ಪೆನ್ಸಿಲ್
ಒತ್ತಡದಿಂದ ತಲೆನೋವು ಉಂಟಾದಾಗ ಪೆನ್ಸಿಲ್ ಕಚ್ಚಿದರೆ ಸಾಕು ತಲೆನೋವು ಕಡಿಮೆಯಾಗುವುದು. ಆದರೆ ಪೆನ್ಸಿಲ್ ತಿಂದರೆ ಆ ಕೆಮಿಕಲ್ ಹೊಟ್ಟೆಗೆ ಸೇರಿ ಬೇರೆ ಕಾಯಿಲೆ ಹುಟ್ಟಿಕೊಳ್ಳಬಹುದು. ಆದ್ದರಿಂದ ಇದನ್ನು ಮಾಡದಿರುವುದು ಒಳ್ಳೆಯದು.

ಡಕ್ಟ್ ಟ್ಯಾಪ್(duct tap)
ಕಾಲಿನಲ್ಲಿ ಗಂಟಾಗಿದ್ದರೆ(wart) ಅದಕ್ಕೆ ಈ ಟ್ಯಾಪ್ ಸುತ್ತಿಟ್ಟು ಒಂದು ವಾರದ ಬಳಿಕ ತೆಗೆದರೆ ಆ ಗಂಟು ಹೋಗಿರುತ್ತದೆ.

ಪುದೀನಾ
ಕೆಲವು ಪುದೀನಾ ಎಲೆ ತಿಂದರೆ ಸಾಕು ಅಜೀರ್ಣ ಸಮಸ್ಯೆ ತಕ್ಷಣ ಕಡಿಮೆಯಾಗುವುದು. ಇದಕ್ಕೆ ವೈದ್ಯರ ಬಳಿ ಹೋದರೆ ಕ್ಮಮಿಯೆಂದರೂ 500ರು, ಬಿಲ್ ಆಗುತ್ತದೆ.

ಮೊಸರು
ಬಾಯಿ ದುರ್ವಾಸನೆ ಬೀರದಿರಲು ದಿನಾ ಮೊಸರು ತಿಂದರೆ ಸಾಕು.

ವನಸ್ಪತಿ
ಕೈ ಮತ್ತು ಕಾಲುಗಳು ಡ್ರೈಯಾಗಿದ್ದರೆ ವನಸ್ಪತಿ ಹಚ್ಚಿದರೆ ಇದು ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡುತ್ತದೆ.



Click it and Unblock the Notifications
