Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹಲ್ಲುಗಳು ಹಳದಿಯಾಗದಂತೆ ತಡೆಯಬೇಕೆ?
ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆ. ಹಲ್ಲನ್ನು ತುಂಬಾ ಬೆಳ್ಳಗಾಗಿಸುತ್ತದೆ ಎಂಬ ಜಾಹೀರಾತು ನೋಡಿ, ಆ ಟೂತ್ ಪೇಸ್ಟ್ ಕೊಂಡು ತಂದು ಬ್ರೆಷ್ ನಿಂದ ದಿನದಲ್ಲಿ ಎರಡು ಬಾರಿ ಹಲ್ಲುಜ್ಜಿದರೂ ಹಲ್ಲಿನ ಹಳದಿ ಬಣ್ಣ ಹೋಗುವುದಿಲ್ಲ.
ಈ ರೀತಿ ಹಲ್ಲು ಹಳದಿ ಬಣ್ಣಕ್ಕೆ ತಿರುಗುವಾಗ ಕೆಲವೊಂದು ಟೆಕ್ನಿಕ್ ಉಪಯೋಗಿಸಿ, ಹಲ್ಲಿನ ಬಿಳುಪನ್ನು ಹೆಚ್ಚಿಸಬಹುದು. ಹಲ್ಲನ್ನು ಬಿಳುಪಾಗಿಸುವ ಐಡಿಯಾಗಳನ್ನು ಸ್ಲೈಡ್ ನಲ್ಲಿ ನೀಡಲಾಗಿದೆ ನೋಡಿ:

ಸಾಸಿವೆ ಎಣ್ಣೆಯಿಂದ ಹಲ್ಲುಗಳನ್ನು ಉಜ್ಜಿ
ಪೇಸ್ಟ್ ಹಾಕಿ ಹಲ್ಲುಜ್ಜುವ ಮುನ್ನ, ಸಾಸಿವೆ ಎಣ್ಣೆ ಮತ್ತು ಉಪ್ಪು ಹಾಕಿ ಕೈಯಿಂದಲೋ, ಬ್ರೆಷ್ ನಿಂದಲೂ ತಿಕ್ಕಿ ನಂತರ ಪೇಸ್ಟ್ ಹಾಕಿ ಬ್ರೆಷ್ ನಿಂದ ತಿಕ್ಕಿದರೆ ಹಲ್ಲು ಬೆಳ್ಳಗಿರುತ್ತದೆ.

ಟೀ ಅಥವಾ ಕಾಫಿ ಕುಡಿದ ಬಳಿಕ ಹೀಗೆ ಮಾಡಿ
ಟೀ ಮತ್ತು ಕಾಫಿ ಕುಡಿದರೆ ಹಲ್ಲುಗಳು ಹಳದಿಯಾಗುವುದು, ಹಾಗಂತ ಇದನ್ನು ಕುಡಿಯದೆ ಇರಲು ಸಾಧ್ಯವೇ? ಆದ್ದರಿಂದ ಟೀ ಅಥವಾ ಕಾಫಿ ಕುಡಿದ ಬಳಿಕ ನೀರು ಕುಡಿಯಿರಿ, ಇದರಿಂದ ಹಲ್ಲಿನಲ್ಲಿ ಹಳದಿ ಬಣ್ಣ ನಿಲ್ಲುವುದಿಲ್ಲ ಹಾಗೂ ಮೇಲೆ ಹೇಳಿದ ವಿಧಾನವನ್ನು ಹಲ್ಲುಜ್ಜಲು ಬಳಸಿ, ಆಗ ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದಿಲ್ಲ.

ಹಲ್ಲನ್ನು ಬೆಳ್ಳಗಾಗಿಸುವ ಆಹಾರಗಳು
ಸೇಬು, ಕಬ್ಬು ಈ ರೀತಿಯ ಆಹಾರಗಳು ಹಲ್ಲನ್ನು ಬೆಳ್ಳಗೆ ಮಾಡುತ್ತದೆ. ಸಿಟ್ರಸ್ ಆಹಾರಗಳು ಹಲ್ಲನ್ನು ಬೆಳ್ಳಗೆ ಮಾಡುವುದರ ಜೊತೆಗೆ, ಹಲ್ಲು ಹಳದಿ ಆಗುವುದನ್ನು ತಡೆಯುತ್ತದೆ.

ಅಡುಗೆ ಸೋಡಾ ಬಳಸಿ
ಹಲ್ಲು ಹಳದಿ ಬಣ್ಣಕ್ಕೆ ತಿರುಗಿದ್ದರೆ ಅಡುಗೆ ಸೋಡಾದಿಂದ ಹಲ್ಲುಜ್ಜಿದರೆ ಹಲ್ಲು ಬೆಳ್ಳಗಾಗುವುದು.

ಊಟದ ನಂತರ ಬಾಯಿ ತೊಳೆಯಿರಿ
ಊಟ ಮಾಡಿದ ಬಾಯಿ ಮುಕ್ಕಳಿಸಬೇಕು. ಇದರಿಂದ ಬಾಯಿ ದುರ್ವಾಸನೆ ಬೀರುವುದನ್ನು ತಡೆಯುವುದರ ಜೊತೆಗೆ ಹಲ್ಲು ಹಳದಿಯಾಗುವುದನ್ನು ತಡೆಯಬಹುದು.

ಧೂಮಪಾನ
ಧೂಮಪಾನ ಅಭ್ಯಾಸ ಇರುವವರಲ್ಲಿ ಹಲ್ಲುಗಳು ಹಳದಿಯಾಗುವುದು. ಈ ಅಭ್ಯಾಸ ಆರೋಗ್ಯವನ್ನೂ ಹಾಳು ಮಾಡುತ್ತದೆ.

ಡೆಂಡಲ್ ಕೇರ್ ಗೆ ಹೋಗಿ ಹಲ್ಲುಗಳನ್ನು ಸ್ವಚ್ಛ ಮಾಡಿಸಿ
ನಿಮಗೆ ಸಮಯ ಸಿಕ್ಕಾಗ ಡೆಂಟಲ್ ಕೇರ್ ಗೆ ಹೋಗಿ ಹಲ್ಲುಗಳನ್ನು ಸ್ವಚ್ಛ ಮಾಡಿಸಿ. ಈ ರೀತಿಯ ಹಲ್ಲುಗಳ ಆರೈಕೆ ಮಾಡಿದರೆ ಹಳದಿ ಹಲ್ಲುಗಳ ಸಮಸ್ಯೆ ನಿಮಗಿರುವುದಿಲ್ಲ.



Click it and Unblock the Notifications
