Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೈ ಬ್ಲಡ್ ಫ್ರೆಶರ್ ಸಮಸ್ಯೆ ಬಾರದಂತೆ ತಡೆಯಬೇಕೆ?
ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಯಾವುದೇ ಸಮಯದಲ್ಲಿ ಯಾವುದೇ ಕೆಲಸವನ್ನೂ ಸಹ ದಣಿವಿಲ್ಲದೇ ಮಾಡುತ್ತಿದ್ದರು. ಎಷ್ಟೇ ಕೆಲಸ ಮಾಡಿದರೂ ಸಹ ಅವರಲ್ಲಿ ಯಾವುದೇ ಖಾಯಿಲೆಗಳು ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಋತುಮಾನ ಕಾಲಾವಧಿ ಬದಲಾದಂತೆ ಎಲ್ಲವೂ ಬದಲಾಗಿಬಿಟ್ಟಿದೆ. ನಾವು ಮಾಡುವ ಕೆಲಸ, ನಮ್ಮ ಹವ್ಯಾಸಗಳು ನಮ್ಮಲ್ಲಿ ಹಲವಾರು ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ!
ಆರೋಗ್ಯದಲ್ಲಂತೂ ಸಾಕಷ್ಟು ಏರುಪೇರುಗಳು ಕಂಡುಬರುತ್ತವೆ. ವಾಸಿಯೇ ಆಗದ ಖಾಯಿಲೆಗಳೂ ನಮ್ಮನ್ನು ಆವರಿಸಿಕೊಂಡುಬಿಟ್ಟಿವೆ. ಅಂತಹವುಗಳಲ್ಲಿ ಅಧಿಕ ರಕ್ತದೊತ್ತಡ ( ಹೈ ಬ್ಲಡ್ ಫ್ರೆಶರ್) ಎಲ್ಲರಲ್ಲಿಯೂ ಕಂಡುಬರುವ ಸಾಮಾನ್ಯ ಖಾಯಿಲೆ. ಆದರೆ ಈ ಖಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಕೆಲವು ಮುಖ್ಯ ಸಲಹೆಗಳನ್ನು ಇಲ್ಲಿ ಕೊಡಲಾಗಿದೆ.

1. ನಿಮ್ಮ ತೂಕ ನಿಮ್ಮ ನಿಯಂತ್ರಣ
ನಿಮ್ಮ ದೇಹದ ಅತೀಯಾದ ದೇಹದ ತೂಕ, ಅಧಿಕ ರಕ್ತದೊತ್ತಡದಂತಹ ತೊಂದರೆಗಳಿಗೆ ಪ್ರಾಥಮಿಕ ಕಾರಣ! ಈ ಸಮಸ್ಯೆಯಿಂದ ದೂರವುಳಿಯಬೇಕಾದರೆ ವ್ಯಾಯಾಮ, ಆಹಾರಗಳ ಮೂಲಕ ನಿಮ್ಮ ದೇಹ ತೂಕವನ್ನು ನಿಯಂತ್ರಿಸಿಕೊಳ್ಳಿ. ಇದು ನಿಮ್ಮ ದೇಹದ ಸಂಪೂರ್ಣ ಆರೋಗ್ಯವನ್ನು ಕಾಯ್ದುಕೊಳ್ಳಲೂ ಸಹ ಸಹಾಯಕವಾಗುತ್ತದೆ.

2. ಒತ್ತಡ ಮಟ್ಟದ ನಿಯಂತ್ರಣ
ಅಧಿಕ ರಕ್ತದೊತ್ತಡಕ್ಕೆ ಇನ್ನೊಂದು ಮೂಲ ಕಾರಣ, ನಿಮ್ಮಲ್ಲಿನ ಒತ್ತಡ! ಆದ್ದರಿಂದ ನಿಮ್ಮ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಇಂದೇ ಕ್ರಮ ತೆಗೆದುಕೊಳ್ಳಿ. ಯೋಗ, ಧ್ಯಾನ, ಸಂಗೀತ, ಮಸಾಜ್ ಮೊದಲಾದವು ನಿಮ್ಮ ಒತ್ತಡವನ್ನು ನಿಯಂತ್ರಿಸಲು ಪರಿಣಾಮಕಾರಿ ವಿಧಾನಗಳಾಗಿವೆ.

3. ಕಡಿಮೆ ಉಪ್ಪು ಬಳಕೆ
ವಯಸ್ಸಿನ ಒಂದು ಹಂತದಲ್ಲಿ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವುದೂ ಸಹ ಅತ್ಯಂತ ಅಗತ್ಯ. ಉಪ್ಪು ಮತ್ತು ಸೋಡಿಯಂ ಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ಆದ್ದರಿಂದ ಅತ್ಯಂತ ಮಿತವಾಗಿ ಉಪ್ಪನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಅಕ್ಷರಶಃ ಒಳ್ಳೆಯದು.

4. ಮದ್ಯಪಾನದಲ್ಲಿ ಮಿತಿಯಿರಲಿ
ಮಿತ ಪ್ರಮಾಣದ ಆಲ್ಕೋಹಾಲ್ / ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಇದು ಅತಿಯಾದರೆ ರಕ್ತದೊತ್ತಡದ ಮಟ್ಟ ಅತೀಯಾಗಿ ಹೆಚ್ಚಾಗುತ್ತದೆ. ಅಲ್ಲದೇ ಲಿವರ್ ಹಾನಿ ಹಾಗೂ ಮಿದುಳಿನ ತೊಂದರೆಗಳನ್ನೂ ಸಹ ಇದರಿಂದ ಎದುರಿಸಬೇಕಾಗುತ್ತದೆ! ನಿಮ್ಮ ಮದ್ಯಪಾನದ ಹವ್ಯಾಸದಿಂದ ದೂರವಿದ್ದಷ್ಟೂ ನಿಮ್ಮ ಆಯಸ್ಸು ಗಟ್ಟಿಯಾಗುತ್ತಾ ಹೋಗುತ್ತದೆ!

5. ಹಣ್ಣುಗಳು ಮತ್ತು ತರಕಾರಿಗಳು
ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ದಿನವೂ ನಿಮ್ಮ ಆಹಾರದ ಒಂದು ಭಾಗವಾಗಿ ಸೇವಿಸಿದರೆ ಸರಿಯಾದ ಪ್ರಮಾಣದಲ್ಲಿ ಪೊಟ್ಯಾಶೀಯಂ ಅಂಶ ನಿಮ್ಮ ದೇಹವನ್ನು ಸೇರುತ್ತದೆ. ಇದು ಸದಾ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ನಿಮ್ಮನ್ನು ದೂರವಿಡುತ್ತದೆ. ಆದ್ದರಿಂದ ದಿನವೂ ನೀವು ಸೇವಿಸುವ ಆಹಾರ ಹಣ್ಣುಗಳು ಮತ್ತು ತರಕಾರಿಗಳಿಂದ ಕೂಡಿರಲಿ!

6. ಕ್ರೀಯಾಶೀಲರಾಗಿರಿ
ನಿಮ್ಮನ್ನು ನೀವು ಆರೋಗ್ಯಕರವಾಗಿಟ್ಟುಕೊಳ್ಳಲು ನಿಮ್ಮ ದೈಹಿಕ ಸಕ್ರಿಯತೆ, ಕ್ರೀಯಾಶೀಲತೆ ಅತ್ಯಂತ ಅಗತ್ಯ. ನಿಮ್ಮ ಚಿಕ್ಕ ಚಿಕ್ಕ ಅಗತ್ಯಗಳಿಗೂ ಬೇರೆಯವರನ್ನು ಅವಲಂಬಿಸದೇ ನಿಮ್ಮ ಕಾರ್ಯವನ್ನು ಸದಾ ನೀವೇ ಮಾಡಿಕೊಂಡು ಕ್ರೀಯಾಶೀಲರಾಗಿದ್ದರೆ ಅಧಿಕ ರಕ್ತದೊತ್ತಡದಂತಹ ಸಮಸ್ಯೆಯನ್ನು ಸಾಕಷ್ಟು ದೂರವಿಡಬಹುದು.

7. ಧೂಮಪಾನ ಸಲ್ಲದು
ಮಧ್ಯಪಾನದಂತೆ ಧೂಮಪಾನ ಮಾಡುವುದೂ ಸಹ ಆರೋಗ್ಯದ ದೃಷ್ಟಿಯಿಂದ ಕಿಂಚಿತ್ತೂ ಒಳ್ಳೆಯದಲ್ಲ! ಧೂಮಪಾನವನ್ನು ನಿರಂತರವಾಗಿ ಮಾಡುವುದರಿಂದ ಅಧಿಕ ರಕ್ತದೊತ್ತಡದಂತಹ ಹಲವಾರು ಸಮಸ್ಯೆಗೆ ಕಾರಣವಾಗುತ್ತದೆ. ಕ್ಯಾನ್ಸರ್, ಪಾರ್ಶ್ವವಾಯು ಹಾಗೂ ಇನ್ನೂ ಅನೇಕ ಸಮಸ್ಯೆಗಳು ಇದರಿಂದ ಉದ್ಭವಿಸುತ್ತವೆ. ಆದ್ದರಿಂದ ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಲು ಧೂಮಪಾನದಿಂದ ದೂರವಿದ್ದರೆ ಮಾತ್ರ ಸಾಧ್ಯ!

8. ನಿರಂತರ ತಪಾಸಣೆ
ಆಗಾಗ ನಿಮ್ಮ ಕುಟುಂಬ ವೈದ್ಯರಿಗೆ ನಿಮ್ಮ ದೇಹ ಪ್ರಕೃತಿಯನ್ನು ತೋರಿಸಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಒಳ್ಳೆಯದು. ಪ್ರಜ್ಞಾಪೂರ್ವಕ ಜೀವನ ವಿಧಾನ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸುತ್ತದೆ. ನಿಮ್ಮ ದಿನನಿತ್ಯದ ಆಹಾರ ಸೇವನೆಯಲ್ಲಾಗಲಿ ಅಥವಾ ಯಾವುದೇ ವಿಷಯಗಳಲ್ಲಾಗಲೀ ಸಣ್ಣ ಬದಲಾವಣೆಗಳಾದರೂ ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ನಿಮ್ಮ ಆರೋಗ್ಯದ ದೃಷ್ಟಿಯಿಂದ ಆಗಾಗ್ಗೆ ಸಾಮಾನ್ಯ ತಪಾಸಣೆಗೆ ಒಳಗಾಗುವುದು ಅತ್ಯಂತ ಸೂಕ್ತ.
ಯಾವುದೇ ಖಾಯಿಲೆ - ಕಸಾಲೆಗಳು ಇದೇ ವಯಸ್ಸಿಗೆ ಬರುತ್ತವೆ ಎನ್ನಲಾಗುವುದಿಲ್ಲ. ಬಾಲ್ಯಾವಸ್ಥೆಯಿಂದ ಹಿಡಿದು ಯೌವ್ವನಾವಸ್ಥೆಯಲ್ಲಿಯೂ ಕೂಡ ಹಲವಾರು ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಆದ್ದರಿಂದ ಇವೆಲ್ಲದರ ಮುಂಜಾಗ್ರತಾ ಕ್ರಮವಾಗಿ ನಿಮ್ಮ ಆರೋಗ್ಯದ ಮೇಲೆ ನಿಮಗೆ ಸದಾ ಗಮನವಿರುವುದು ಅತ್ಯಗತ್ಯ.



Click it and Unblock the Notifications