Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಡೊಪಾಮೈನ್ (ಲವ್ ಹಾರ್ಮೋನ್) ಹೆಚ್ಚಿಸಲು ಮಾರ್ಗಗಳು
ಡೊಪಾಮೈನ್(dopamine) ನೈಸರ್ಗಿಕವಾಗಿ ಮಿದುಳಿನಲ್ಲಿ ಉತ್ಪತ್ತಿಯಾಗಿ ನಮ್ಮನ್ನು ಖುಷಿಯಾಗಿ ಇರುವಂತೆ ಮಾಡುತ್ತದೆ. ಲೈಂಗಿಕ ಕ್ರಿಯೆಯಲ್ಲೂ ಈ ಡೊಪಾಮೈನ್ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಉತ್ಪತ್ತಿ ಕಡಿಮೆಯಾದರೆ ಲೈಂಗಿಕ ನಿಶ್ಯಕ್ತಿ ಉಂಟಾಗುತ್ತದೆ. ಅದಲ್ಲದೆ ಇದರ ಕೊರತೆ ಉಂಟಾದರೆ ಪಾರ್ಶ್ವವಾಯು, ಖಿನ್ನತೆ, ನಿರಾಸಕ್ತಿ ಉಂಟಾಗುವುದು.
ಗಂಡ- ಹೆಂಡತಿ ನಡುವೆ ಭಾಂದವ್ಯ ಹೆಚ್ಚಾಗಲು ನಮ್ಮ ದೇಹದಲ್ಲಿರುವ ಡೊಪಾಮೈನ್ ಎಂಬ ಹಾರ್ಮೋನ್ ಕಾರಣವಾಗಿದೆ. ಪ್ರೇಮಿಗಳು ಪರಸ್ಪರ ಭೇಟಿಯಾದಾಗ ತುಂಬಾ ಖುಷಿಯಾಗಲು ಕಾರಣ ಈ ಹಾರ್ಮೋನ್ ನ ಉತ್ಪತ್ತಿಯಾಗಿದೆ. ಇದು ಅವರಲ್ಲಿ ಲೈಂಗಿಕ ನಿಶ್ಯಕ್ತಿ ಉಂಟಾಗದಂತೆ ಮಾಡಿ ಅವರ ಬಾಂಧವ್ಯ ಗಟ್ಟಿ ಮಾಡುತ್ತದೆ.
ಈ ಡೊಪಾಮೈನ್ ಉತ್ಪತ್ತಿ ಕಡಿಮೆಯಾದರೆ ಅದನ್ನು ಹೆಚ್ಚಿಸಲು ನೈಸರ್ಗಿಕವಾದ ವಿಧಾನಗಳಿವೆ. ಅವುಗಳು ಡೊಪಾಮೈನ್ ಹಾರ್ಮೋನ್ ಅನ್ನು ಹೆಚ್ಚಿಸುವಂತೆ ಮಾಡುತ್ತವೆ.

ಸ್ಟ್ರಾಬರಿ
ರಾತ್ರಿ ಮಲಗುವ ಮುಂಚೆ ಸ್ಟ್ರಾಬರಿ ಸೇವಿಸುವುದು ಒಳ್ಳೆಯದು. ಇದು ಲವ್ ಹಾರ್ಮೋನ್ ಹೆಚ್ಚಿಸುವುದಷ್ಟೇ ಅಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದರಲ್ಲಿರುವ antioxidants ಅಂಶ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ.

2. ಡಾರ್ಕ್ ಚಾಕಲೇಟ್
ಕಪ್ಪು ಚಾಕಲೇಟ್ ಲವ್ ಹಾರ್ಮೋನ್ ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಕಪ್ಪು ಚಾಕಲೇಟ್ ಸೇವಿಸುವುದರಿಂದ ಹೃದಯದ ಸ್ವಾಸ್ಥವನ್ನು ಕಾಪಾಡಬಹುದು. ಇದರಲ್ಲಿರುವ ಒಳ್ಳೆಯ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

3. ಸಮುದ್ರ ಆಹಾರ
ಸಮದ್ರ ಆಹಾರದಲ್ಲಿ ದೊರೆಯುವಷ್ಟು ಖನಿಜಾಂಶಗಳು ಬೇರೆ ಆಹಾರದಲ್ಲಿ ದೊರೆಯಲು ಸಾಧ್ಯವಿಲ್ಲ. ಅದರಲ್ಲೂ ಸೀಗಡಿ, ಮೃದ್ವಂಗಿಗಳನ್ನು ಸೇವಿಸುವುದರಿಂದ ದೇಹದಲ್ಲಿ ಡೊಪಾಮೈನ್ ಹೆಚ್ಚಾಗುತ್ತದೆ.

4. ಕ್ಯಾರೆಟ್
ಕ್ಯಾರೆಟ್ ಸೇವಿಸದರೆ ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ. ಕ್ಯಾರೆಟ್ ನಲ್ಲಿ ವಿಟಮಿನ್ 'ಎ' ಇರುವುದರಿಂದ ಕಣ್ಣಿಗೆ ತುಂಬಾ ಒಳ್ಳೆಯದು.

5. ಪೈನಾಪಲ್
ಪೈನಾಪಲ್ ನಲ್ಲಿ ಸಿಟ್ರಸ್ ಇರುವುದರಿಂದ ಅದನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಪುರುಷರು ಸೇವಿಸಿದರೆ ವೀರ್ಯಾಣುಗಳ ಉತ್ಪತ್ತಿ ಹೆಚ್ಚಾಗುತ್ತದೆ.

6. ಬಾದಾಮಿ
ಬಾದಾಮಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದ್ದು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಇದನ್ನು ಸೇವಿಸದಾಗ ರೊಮ್ಯಾಂಟಿಕ್ ಮೂಡ್ ಹೆಚ್ಚಿಸುತ್ತೆ.

7. ವೈನ್
ವೈನ್ ಕುಡಿಯುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮಿತಿಯಲ್ಲಿ. ದೇಹದಲ್ಲಿ ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ. ವೈನ್ ರೊಮ್ಯಾಂಟಿಕ್ ಫೀಲಿಂಗ್ ಹೆಚ್ಚಿಸುತ್ತೆ.

8. ಬಾಳೆ ಹಣ್ಣು
ಬಾಳೆ ಹಣ್ಣಿನಲ್ಲಿ ಅಧಿಕ ಡೊಪಾಮೈನ್ ಇರುತ್ತದೆ. ಪ್ರತಿದಿನ ಒಂದು ಬಾಳೆ ಹಣ್ಣು ತಿಂದರೆ ಲೈಂಗಿಕ ನಿಶ್ಯಕ್ತಿ ಉಂಟಾಗುವುದಿಲ್ಲ.

9. ಸೂರ್ಯಕಾಂತಿ ಬೀಜ
ನೈಸರ್ಗಿಕವಾಗಿ ಡೊಪಾಮೈನ್ ಹೆಚ್ಚಿಸಬೇಕೆಂದು ಬಯಸುವುದಾದರೆ ಪ್ರತಿದಿನ ಸೂರ್ಯಕಾಂತಿ ಬೀಜ ತಿನ್ನುವುದು ಒಳ್ಳೆಯದು.

10. ಕೆಫೀನ್
ಕೆಫೀನ್ ಅಂಶವು ಡೊಪಾಮೈನ್ ಹೆಚ್ಚಿಸುವಲ್ಲಿ ತುಂಬಾ ಸಹಕಾರಿ. ದಿನದಲ್ಲಿ ಒಂದು ಕಪ್ ಕಾಫಿ ಕುಡಿದರೆ ಕಡಿಮೆ ಸಮಯದಲ್ಲಿಯೇ ಲವ್ ಹಾರ್ಮೋನ್ ಹೆಚ್ಚಾಗುತ್ತದೆ.

11. ವ್ಯಾಯಾಮ
ಪ್ರತಿದಿನ ವ್ಯಾಯಾಮ ಮಾಡುವುದರಿಂದ ಡೊಪಾಮೈನ್ ಉತ್ಪತ್ತಿಯಾಗುತ್ತದೆ. ಆದ್ದರಿಂದಲೇ ವ್ಯಾಯಾಮ ಮಾಡಿದಾಗ ಮನಸ್ಸು ತುಂಬಾ ನಿರಾಳ ಅನಿಸುವುದು.

12. ನಿದ್ದೆ
ನಿದ್ದೆ ಸರಿಯಾಗಿ ಮಾಡದಿದ್ದರೆ ಡೊಪಾಮೈನ್ ಉತ್ಪತ್ತಿ ಕಡಿಮೆಯಾಗುತ್ತದೆ. ಇದರಿಂದ ಲೈಂಗಿಕ ನಿಶ್ಯಕ್ತಿ ಉಂಟಾಗುವುದು. ದಿನದಲ್ಲಿ 6-8 ಗಂಟೆ ನಿದ್ದೆ ಅವಶ್ಯಕ.



Click it and Unblock the Notifications
