Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಪುರುಷ ಹಾರ್ಮೋನ್ ವೃದ್ಧಿಸಲು ಟಿಪ್ಸ್
ಮನುಷ್ಯ ದೈಹಿಕವಾಗಿ ಬೆಳೆಯಲು ಹಲವಾರು ಪೋಷಕಾಂಶಗಳೊಂದಿಗೆ ಕೆಲವೊಂದು ಹಾರ್ಮೋನ್ ಗಳು ಕೂಡ ಪ್ರಮುಖ ಪಾತ್ರವನ್ನು ನಿಭಾಯಿಸುತ್ತದೆ. ಯಾವುದೇ ಒಂದು ಹಾರ್ಮೋನ್ ವಿನ ಕೊರತೆಯಿಂದಾಗಿ ದೈಹಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು.
ಇಂತಹ ಹಾರ್ಮೋನ್ ಗಳಲ್ಲಿ ಟೆಸ್ಟೋಸ್ಟೆರೋನ್ ಕೂಡ ಒಂದು. ಟೆಸ್ಟೋಸ್ಟೆರೋನ್ ಕಡಿಮೆ ಇರುವುದರಿಂದ ದೈಹಿಕ ಬೆಳವಣಿಗೆಗೆ ಅಡ್ಡಿಯಾಗಬಹುದು. ಈ ಹಾರ್ಮೋನ್ ಮಟ್ಟ ನಿಯಂತ್ರಣದಲ್ಲಿದೆಯಾ ಎನ್ನುವುದನ್ನು ತಿಳಿದುಕೊಳ್ಳಲು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

1. ತೂಕ ಕಡಿಮೆ ಮಾಡಿ
ಅತಿಯಾದ ತೂಕದಿಂದ ಕೆಲವೊಂದು ಋಣಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ದೇಹದಲ್ಲಿ ಹೆಚ್ಚಿನ ಮಟ್ಟದಲ್ಲಿರುವ ಕೊಬ್ಬು ದೇಹದಲ್ಲಿನ ಟೆಸ್ಟೋಸ್ಟೆರೋನ್ ಮಟ್ಟವನ್ನು ಕುಂದಿಸಬಹುದು. ಟೆಸ್ಟೋಸ್ಟೆರೋನ್ ಮಟ್ಟವನ್ನು ಬಲಪಡಿಸಲು ತೂಕ ಕಡಿಮೆ ಮಾಡಲು ಕ್ರಮ ಕೈಗೊಳ್ಳಿ.

2. ಖನಿಜ(ಮಿನರಲ್ಸ್) ಸೇವನೆ
ಜಿಂಕ್(ಸತು) ಮತ್ತು ಮೆಗ್ನೀಸಿಯಂ ನಂತಹ ಖನಿಜಗಳು ಟೆಸ್ಟೋಸ್ಟೆರೋನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಿಂದಾಗಿ ಇಂತಹ ಖನಿಜಾಂಶಗಳಿರುವ ಆಹಾರಗಳನ್ನು ಸೇವಿಸುವುದು ತುಂಬಾ ಮುಖ್ಯ. ಇಂತಹ ಖನಿಜಾಂಶಗಳಿರುವ ಆಹಾರಗಳು ಪುರುಷರಲ್ಲಿ ಟೆಸ್ಟೋಸ್ಟೆರೋನ್ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

3. ಒತ್ತಡದ ಮಟ್ಟ
ವೈಯಕ್ತಿಕ ಅಥವಾ ವೃತ್ತಿ ಬದುಕಿನ ಒತ್ತಡವು ಹಲವಾರು ವಿಧದಲ್ಲಿ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅತಿಯಾದ ಒತ್ತಡದಲ್ಲಿರುವಾಗ ದೇಹದಲ್ಲಿ ಒತ್ತಡದ ಹಾರ್ಮೋನ್ ಗಳು ಹೆಚ್ಚು ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಗಳು ದೇಹದಲ್ಲಿ ಟೆಸ್ಟೋಸ್ಟೆರೋನ್ ಪರಿಣಾಮಕಾರಿಯಾಗಿರಲು ತಡೆಯೊಡ್ಡುತ್ತದೆ. ಸರಳ ಹಾಗೂ ಪರಿಣಾಮಕಾರಿಯಾಗಿರುವ ಧ್ಯಾನದಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.

4. ಸಕ್ಕರೆ ಸೇವನೆ
ಅತಿಯಾದ ಸಕ್ಕರೆ ಸೇವನೆಯಿಂದ ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚುತ್ತದೆ. ಸಕ್ಕರೆ ಸೇವನೆ ಮಾಡುವಾಗ ಟೆಸ್ಟೋಸ್ಟೆರೋನ್ ಮಟ್ಟ ತಾನಾಗಿಯೇ ಕಡಿಮೆಯಾಗುತ್ತದೆ. ಸಕ್ಕರೆ ಸೇವನೆಯನ್ನು ನಿಲ್ಲಿಸುವ ಅಥವಾ ಕಡಿಮೆ ಮಾಡುವ ಮೂಲಕ ಪ್ರಮುಖ ಹಾರ್ಮೋನ್ ಬೆಳವಣಿಗೆಗೆ ನೆರವಾಗಬಹುದು.

5. ಆರೋಗ್ಯಕರ ಆಹಾರ
ಶುದ್ಧ, ಪೋಷಕಾಂಶಗಳಿರುವ ಮತ್ತು ಆರೋಗ್ಯಕರ ಆಹಾರ ಸೇವನೆಯಿಂದ ನಾವು ಎದುರಿಸುವ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಬಹುದು. ಹಸಿರು ತರಕಾರಿ, ಹಣ್ಣುಗಳು, ಒಣಹಣ್ಣುಗಳು ನಿಮ್ಮ ಆಹಾರ ಕ್ರಮದ ಭಾಗವಾಗಿರಬೇಕು. ನೀವು ಸೇವಿಸುತ್ತಿರುವುದು ಆರೋಗ್ಯಕರ ಕೊಬ್ಬು ಎಂದು ಖಾತ್ರಿಪಡಿಸಿಕೊಳ್ಳಬೇಕು.

6. ದೇಹಕ್ಕೆ ವಿಶ್ರಾಂತಿ
ದೇಹ ಸರಿಯಾದ ಕ್ರಮದಲ್ಲಿ ಹಾರ್ಮೋನ್ ಉತ್ಪಾದನೆ ಮಾಡಲು ದೇಹಕ್ಕೆ ಸಾಕಷ್ಟು ಪ್ರಮಾಣದ ವಿಶ್ರಾಂತಿ ಮತ್ತು ನಿದ್ದೆ ತುಂಬಾ ಮುಖ್ಯ. ದಿನಕ್ಕೆ 7-8ಗಂಟೆ ನಿದ್ದೆ ಅವಶ್ಯ. ನಿದ್ದೆಯಲ್ಲಿ ಶೇ. 70ರಷ್ಟು ಟೆಸ್ಟೋಸ್ಟೆರೋನ್ ಬಿಡುಗಡೆಯಾಗುತ್ತದೆ ಎಂದು ತಜ್ಞರು ಸಲಹೆ ಮಾಡುತ್ತಾರೆ.

7. ವ್ಯಾಯಾಮ ಅವಧಿ ಕಡಿಮೆ ಮಾಡುವುದು
ದಿನಕ್ಕೆ ಸುಮಾರು 45-75 ನಿಮಿಷಗಳ ಕಾಲ ನಿರಂತರ ವ್ಯಾಯಾಮ ಮಾಡಿದರೆ ಆಗ ಟೆಸ್ಟೋಸ್ಟೆರೋನ್ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ವೃತ್ತಿಪರರ ನೆರವನ್ನು ಪಡೆದುಕೊಂಡು ವ್ಯಾಯಾಮ ಮಾಡಿದರೆ ಅದು ಪ್ರಯೋಜನಕಾರಿ.

8. ಅಲ್ಕೋಹಾಲ್ ಮಟ್ಟ ಗಮನಿಸಿ
ಅತಿಯಾದ ಅಲ್ಕೋಹಾಲ್ ಸೇವನೆಯಿಂದ ದೇಹದಲ್ಲಿನ ಟೆಸ್ಟೋಸ್ಟೆರೋನ್ ಮಟ್ಟ ಕುಂದಬಹುದು. ನಿರಂತರವಾಗಿ ಆಲ್ಕೋಹಾಲ್ ಅಂಶಗಳು ದೇಹದೊಳಗೆ ಸೇರುವುದರಿಂದ ಶೇ. 50ರಷ್ಟು ಟೆಸ್ಟೋಸ್ಟೆರಾನ್ ಉತ್ಪಾದನೆ ಕಡಿಮೆಯಾಗುತ್ತದೆ.
ನೈಸರ್ಗಿಕ ರೀತಿಯಲ್ಲಿ ಟೆಸ್ಟೋಸ್ಟೆರಾನ್ ಉತ್ಪಾದನೆಯಾಗುತ್ತದೆ ಎನ್ನುವುದನ್ನು ಖಚಿತಪಡಿಸಕೊಳ್ಳುವ ಮೂಲಕ ವೈದಕೀಯ ವಿಧಾನದ ಮೂಲಕ ಇದನ್ನು ಉತ್ಪಾದಿಸುವುದರಿಂದ ನಿಮ್ಮನ್ನು ನೀವು ತಡೆಯಬಹುದಾಗಿದೆ.



Click it and Unblock the Notifications