Latest Updates
-
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು!
ಮಹಿಳೆಯರ ಮೂಡ್ ಬದಲಾಯಿಸುತ್ತೆ ಈ ಎಸ್ಟ್ರೋಜೆನ್
ನಮ್ಮ ಜೀವನದಲ್ಲಿ ಕೆಲವೊಮ್ಮೆ ಸಾಕಷ್ಟು ಏರುಪೇರು ಆಗುತ್ತಿರುತ್ತದೆ. ಹಾಗೆಯೇ ಮನಸ್ಸಿಗೂ ಕೂಡ. ಅದರಲ್ಲೂ ಮಹಿಳೆಯರ ಮನಸ್ಸು ಆಗಾಗ ಜೋಕಾಲಿಯಂತೆ ತೂಗುವುದನ್ನು ಎಲ್ಲರು ಗಮನಿಸಿರಬಹುದು. ಮುತ್ತಿನ ಸಂದರ್ಭದಲ್ಲಿ ಅಥವಾ ಹುಚ್ಚು ಮನಸ್ಸಿನ ಹೊಯ್ದಾಟಕ್ಕೆ ಕಾರಣ ತಿಳಿಯದೆ, ಅದರ ಬಗ್ಗೆ ಆಶ್ಚರ್ಯ ಮೂಡಿರಬಹುದು. ಅದಕ್ಕೆಲ್ಲ ಮುಖ್ಯ ಕಾರಣವೆಂದರೆ ಎಸ್ಟ್ರೋಜೆನ್. ಎಸ್ಟ್ರೋಜೆನ್ ಮಹಿಳೆಯರಿಗೆ ಪ್ರತಿ ತಿಂಗಳ ಮುಟ್ಟಿಗೆ ಕಾರಣವಾಗುವ ಅಂಶ ಮತ್ತು ಮಗುವನ್ನು ಹೊಂದಲು ಕಾರಣವಾದ ಅಂಶವೇ ಈ ಎಸ್ಟ್ರೋಜೆನ್.
ಈ ಹಾರ್ಮೋನ್ ಮಹಿಳೆಯರ ಅಚ್ಚು ಮೆಚ್ಚಿನ ಸ್ನೇಹಿತನಂತೆ ಹೇಗೆ ವರ್ತಿಸುತ್ತದೆ ಎಂದು ತಿಳಿಯಲು ಮುಂದೆ ಓದಿ:

ಒತ್ತಡವನ್ನು ಕಡಿಮೆ ಮಾಡುತ್ತದೆ
*ಇತ್ತೀಚಿಗೆ ಬಫೆಲೋ ವಿಶ್ವವಿದ್ಯಾಲಯ ಮಾಡಿದ ಸಂಶೋಧನೆ ಪ್ರಕಾರ ಮಹಿಳೆಯರು ಅವರು ಹೊಂದಿರುವ ಎಸ್ಟ್ರೋಜೆನ್ ನಿಂದಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಗುಣ ಹೊಂದಿದ್ದಾರೆ ಎನ್ನಲಾಗಿದೆ. ಪುರುಷರಲ್ಲಿ ಈ ಹಾರ್ಮೋನ್ ಇಲ್ಲದಿರುವುದರಿಂದ ಮಹಿಳೆಯರು ಒತ್ತಡ ನಿವಾರಿಸುವಲ್ಲಿ ಹೆಚ್ಚಿನ ಅರಿವನ್ನು ಹೊಂದಿದ್ದಾರೆ ಎಂದು ಕಂಡುಕೊಳ್ಳಲಾಗಿದೆ.

ಇದು ಮಹಿಳೆಯರ ಹೃದಯವನ್ನು ಕಾಪಾಡುತ್ತದೆ
*ಎಸ್ಟ್ರೋಜೆನ್ ಹೃದಯದ ರಕ್ತ ನಾಳಗಳ ಅಪಧಮನಿಯನ್ನು ಸುರಕ್ಷಿತವಾಗಿ ಕಾಪಾಡುವ ಗುಣ ಹೊಂದಿದೆ. ಇದು ಕೊಲೆಸ್ಟ್ರಾಲ್ ಅನ್ನು ಕೂಡ ಕಡಿಮೆ ಮಾಡುತ್ತದೆ .ಇದು ಬ್ಲಾಕ್ ಗಳನ್ನು ತಡೆಗಟ್ಟಿ ಹೃದಯದ ತೊಂದರೆ ಬರದಂತೆ ಕಾಪಾಡುತ್ತದೆ.

ಸೋಂಕು ಮತ್ತು ಉರಿಯೂತದಿಂದ ಕಾಪಾಡುತ್ತದೆ
* ಲಂಡನ್ ವಿಶ್ವವಿದ್ಯಾಲಯದ ಸಂಶೋಧನೆ ಪ್ರಕಾರ ಮಹಿಳೆಯರಿಗಾಗುವ ಸೋಂಕು ಮತ್ತು ಉರಿಯುತವನ್ನು ಇದು ತಡೆಯುವ ಶಕ್ತಿ ಹೊಂದಿದೆ ಎನ್ನಲಾಗಿದೆ.ಗಾಯದ ಸಂದರ್ಭದಲ್ಲಿ ಆಗುವ ಸೋಂಕನ್ನು ಅಥವಾ ಊತವನ್ನು ಮತ್ತು ಕೆಂಪುರಕ್ತ ಕಣಗಳಿಂದ ಬಿಳಿ ರಕ್ತ ಕಣಗಳು ಸೋರುವುದನ್ನು ಈ ಎಸ್ಟ್ರೋಜೆನ್ ತಡೆಯುತ್ತದೆ ಎನ್ನಲಾಗಿದೆ.

ಮಹಿಳೆಯರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
ಎಸ್ಟ್ರೋಜೆನ್ ಮಹಿಳೆಯರ ಸ್ಥಾನ,ಮುಖದಲ್ಲಿ ಕೂದಲಿಲ್ಲದಿರುವಿಕೆಗೆ ಹೇಗೆ ಕಾರಣವೋ ಹಾಗೆಯೇ ಮಹಿಳೆಯರಲ್ಲಿ ಕಾಮ ಕೆರಳಿಸುವಲ್ಲಿ ಕೂಡ ಇದು ಮುಖ್ಯ ಪಾತ್ರ ವಹಿಸುತ್ತದೆ. ಮಾನವರ ಲೈಂಗಿಕ ಆಸಕ್ತಿಗೆ ಆನ್ಡ್ರೋಜೆನ್ ಪಾತ್ರ ಹೇಗಿದೆಯೋ ಅಷ್ಟೇ ಮುಖ್ಯ ಪಾತ್ರ ಎಸ್ಟ್ರೋಜೆನ್ ಕೂಡ ವಹಿಸುತ್ತದೆ.ಇದು ಮಹಿಳೆಯರು ಸೇರಿದಂತೆ ಎಲ್ಲ ಸಸ್ತನಿಗಳಲ್ಲಿ ಬೆನ್ನಿನ ಗೂನಿಗೆ ಮತ್ತು ಲೈಂಗಿಕ ಪ್ರಚೋದನೆಗೆ ಕಾರಣವಾಗುತ್ತದೆ.ಇದು ಪುರುಷರಿಗೆ ಯೋನಿ ಮಟ್ಟವನ್ನು ಹೆಚ್ಚಿಸಿ ಸುಲಭವಾಗಿ ಉತ್ತೇಜಿತಗೊಂಡು ಎಗ್ ಉತ್ಪತ್ತಿ ಆಗಲು ಸಹಕರಿಸುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಅಸ್ಥಿರಂದ್ರತೆ ಅನ್ನು ತಡೆಯುತ್ತದೆ
*ಎಸ್ಟ್ರೋಜೆನ್ ಮಹಿಳೆಯರ ಮೂಳೆಗಳನ್ನು ಬಲಪಡಿಸುತ್ತದೆ.ಇದು ದೇಹಕ್ಕೆ ಹರಿದುಹೋಗುವ ಕ್ಯಾಲ್ಸಿಯಂ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಮೂಳೆಗಳ ಸೂಕ್ಷ್ಮತೆ ಕಡಿಮೆ ಮಾಡುತ್ತದೆ.ಇದರಿಂದಾಗಿ ಮೂಳೆ ರೋಗಗಳು ಮತ್ತು ಅಸ್ಥಿರಂದ್ರತೆ ಬರದಂತೆ ತಡೆಯುವಲ್ಲಿ ಯಶಸ್ವಿಯಾಗುತ್ತದೆ.

ನರಗಳ ಉತ್ತಮ ಪ್ರಸರಣ ಪ್ರಚೋದನೆಗೆ ಸಹಾಯಕವಾಗುತ್ತದೆ
* ಎಸ್ಟ್ರೋಜೆನ್ ಮಹಿಳೆಯರ ದೇಹದಲ್ಲಿ ಸೇರಟೋನಿನ್ ಅಂಶವನ್ನು ಹೆಚ್ಚಿಸುತ್ತದೆ. ಸಿರೊಟೋನಿನ್ ನರಗಳು ಸರಿಯಾಗಿ ಮತ್ತು ಹೆಚ್ಚಿನ ಕಾರ್ಯಪಟುತ್ವದಿಂದ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ, ದೇಹದ ಒಂದು ಭಾಗದಿಂದ ಮೆದುಳಿಗೆ ಸಂದೇಶಗಳ ಸೂಕ್ತ ಸಂವಹನ ಮಾಡುತ್ತದೆ.

ಯೌವನ ಭರಿತ ಸೌಂದರ್ಯಕ್ಕಾಗಿ
* ಜರ್ಮನ್ ಅಧ್ಯಯನದ ಪ್ರಕಾರ ಎಸ್ಟ್ರೋಜೆನ್ ಮಹಿಳೆಯರನ್ನು ಕಿರಿಯರಂತೆ ಕಾಣಲು ಸಹಕರಿಸುತ್ತದೆ. ಹೇಗೆಂದರೆ ಇದು ಮಹಿಳೆಯರ ಚರ್ಮವನ್ನು ತೆಳುವಾಗಿ ಮಾಡುತ್ತದೆ ಮತ್ತು ಕಲಜನ್ ಮಟ್ಟವನ್ನು ಹೆಚ್ಚಿಸುತ್ತದೆ.ಇದು ನೆರಿಗೆಗಳಾಗುವುದನ್ನು ತಡೆಯುತ್ತದೆ.ಇದು ಮುಖದಲ್ಲಿ ತೇವಾಂಶ ಉಳಿಯುವಂತೆ ಮಾಡಿ ಮುಖಕ್ಕೆ ಹೆಚ್ಚು ಕಾಂತಿ ನೀಡುತ್ತದೆ ಮತ್ತು ಸದಾ ಯಂಗ್ ಆಗಿ ಕಾಡುವಂತೆ ಮಾಡುತ್ತದೆ. ಸಂಶೋಧಕರು ಹೇಳುವ ಪ್ರಕಾರ ಇದು ಸಂಗಾತಿಯನ್ನು ಹೆಚ್ಚು ಆಕರ್ಷಿಸುವಲ್ಲಿ ಸಹಕರಿಸುತ್ತದೆ.

ಮಹಿಳೆಯರನ್ನು ಸಂತೋಷವಾಗಿಡುತ್ತದೆ
* ಸ್ತ್ರೀಯರ ಹಾರ್ಮೋನ್ ಎಂಡಾರ್ಫಿನ್ ಉತ್ಪತ್ತಿಗೆ ಕಾರಣವಾಗುತ್ತದೆ ಮತ್ತು ಈ ಎಂಡಾರ್ಫಿನ್ ಮಹಿಳೆಯರನ್ನು ಸಂತೋಷವಾಗಿ ಇಡುವುದರಲ್ಲಿ ಸಹಕರಿಸುತ್ತದೆ.



Click it and Unblock the Notifications











