Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ನೀರು ಕುಡಿಯುವುದರ ಬಗ್ಗೆ ಇರುವ ಟಾಪ್ 7 ಮಿಥ್ಯೆಗಳು
ನೀರು ಕುಡಿಯದಿದ್ದರೆ ಅನಾರೋಗ್ಯ ಉಂಟಾಗುತ್ತದೆ ಅನ್ನುವುದು ಪ್ರತಿಯೊಬ್ಬರಿಗೂ ಗೊತ್ತು! ಕಮ್ಮಿ ನೀರು ಕುಡಿದರೆ ಅಜೀರ್ಣ, ಮಲಬದ್ಧತೆ, ತಲೆನೋವು, ಕಿಡ್ನಿಯಲ್ಲಿ ಕಲ್ಲು, ತ್ವಚೆ ಒಣಗುವುದು ಮುಂತಾದ ಸಮಸ್ಯೆ ಉಂಟಾಗುತ್ತದೆ.
ನೀರು ಕುಡಿಯುವುದರ ಬಗ್ಗೆ ಅನೇಕ ಅಭಿಪ್ರಾಯಗಳು ನಮ್ಮಲ್ಲಿವೆ. ಉದಾಹರಣೆಗೆ ಊಟದ ಮಧ್ಯೆ ನೀರು ಕುಡಿದರೆ ಅಜೀರ್ಣ ಉಂಟಾಗುತ್ತದೆ, ತುಂಬಾ ನೀರು ಕುಡಿದಷ್ಟು ಒಳ್ಳೆಯದು. ಈ ರೀತಿಯ ಅನೇಕ ಅಭಿಪ್ರಾಯಗಳು ನಮ್ಮಲ್ಲಿವೆ. ನೀರಿನ ಬಗ್ಗೆ ನಮ್ಮಲ್ಲಿರುವ ಅಭಿಪ್ರಾಯಗಳು ನಿಜವೇ? ಎಂದು ತಿಳಿಯಲು ಮುಂದೆ ಓದಿ:

ಊಟದ ನಡುವೆ ನೀರು ಕುಡಿಯಬಾರದು
ಈ ಅಭಿಪ್ರಾಯ ತುಂಬಾ ಹಿಂದಿನಿಂದಲೂ ನಮ್ಮ ನಡುವೆ ಇದೆ. ಊಟದ ಮಧ್ಯೆ ನೀರು ಕುಡಿದರೆ ಅಜೀರ್ಣ ಉಂಟಾಗುತ್ತದೆ ಅನ್ನುತ್ತಾರೆ. ಆದರೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ.

8 ಗ್ಲಾಸ್ ನೀರು ಕುಡಿಯಬೇಕು
ದಿನಕ್ಕೆ 8 ಗ್ಲಾಸ್ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತೇವೆ. ಚಳಿಗಾಲದಲ್ಲಿ ನೀರು ಅಷ್ಟು ಕುಡಿಯದಿದ್ದರೂ ದೇಹದಲ್ಲಿ ನೀರಿನಂಶವಿರುತ್ತದೆ. ಅದೇ ಬೇಸಿಗೆಯಲ್ಲಿ ಮೈ ಬೆವರುವುದರಿಂದ 8-10 ಗ್ಲಾಸ್ ನೀರು ಕುಡಿಯಬೇಕಾಗುತ್ತದೆ. ಕಾಲಕ್ಕೆ ತಕ್ಕಂತೆ ನೀರು ಕುಡಿದರೆ ಆರೋಗ್ಯದಿಂದ ಇರುವಿರಿ.

ತುಂಬಾ ನೀರು ಕುಡಿಯುವುದು ಒಳ್ಳೆಯದು
ಇತ್ತೀಚಿಗೆ ನಡೆಸಿದ ಸಂಶೋಧನೆಯಿಂದ ತುಂಬಾ ನೀರು ಕುಡಿಯುವುದು ಕೂಡ ಅಪಾಯಕಾರಿ ಎಂದು ತಿಳಿದು ಬಂದಿದೆ. ತುಂಬಾ ನೀರು ದೇಹವನ್ನು ಸೇರಿದರೆ ಇದು ರಕ್ತದಲ್ಲಿರುವ ಸೋಡಿಯಂ ಅಂಶವನ್ನು ಕಡಿಮೆ ಮಾಡುತ್ತದೆ, ಕಿಡ್ನಿ ಅಧಿಕ ಕೆಲಸ ಮಾಡುತ್ತದೆ, ಕಿಡ್ನಿಗೆ ತುಂಬಾ ನೀರನ್ನು ಯೂರಿನ್ ಆಗಿ ಪರಿವರ್ತಿಸಲು ಸಾಧ್ಯವಾಗದೆ ಅನಾರೋಗ್ಯ ಉಂಟಾಗುವುದು. ಆದ್ದರಿಂದ 10 ಗ್ಲಾಸ್ ಗಿಂತ ಹೆಚ್ಚು ನೀರು ಕುಡಿಯಬೇಡಿ.

ನೀರು ಕುಡಿದರೆ ತ್ವಚೆ ಸೌಂದರ್ಯ ಹೆಚ್ಚಾಗುವುದು
ತ್ವಚೆ ಸೌಂದರ್ಯಕ್ಕೆ ನೀರು ಮಾತ್ರ ಸಾಲದು, ಉತ್ತಮ ಆಹಾರಕ್ರಮವೂ ಬೇಕು. ನೀರು ತ್ವಚೆಯನ್ನು ಒಣಗದಂತೆ ಕಾಪಾಡಿದರೆ ತ್ವಚೆಯಲ್ಲಿರುವ ಪೋಷಕಾಂಶಗಳು ಮುಖದ ಕಾಂತಿ ಹೆಚ್ಚಿಸುತ್ತದೆ.

ನೀರು ಕುಡಿದರೆ ತೆಳ್ಳಗಾಗುವುದು
ತುಂಬಾ ನೀರು ಕುಡಿದರೆ ಹೊಟ್ಟೆ ತುಂಬಿ ಅಧಿಕ ಊಟ ಬೇಕಾಗುವುದಿಲ್ಲ, ಇದರಿಂದ ತೂಕ ಕಮ್ಮಿಯಾಗುತ್ತದೆ. ಆದರೆ ನೆನೆಪಿಡಿ ನೀರಿನ ಡಯಟ್ ಮಾಡಿದರೆ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯದೆ ಕಾಯಿಲೆ ಬೀಳುವಿರಿ. ಡಯಟ್ ಮಾಡುವವರು ದಿನಿತ್ಯ ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ದೇಹವನ್ನು ಸೇರುತ್ತಿದೆಯೇ ಎಂದು ಗಮನಿಸಬೇಕು.

ಅಧಿಕ ನೀರು ಕುಡಿದರೆ ದೇಹದ ಕಲ್ಮಶಗಳನ್ನು ಹೊರಹಾಕುತ್ತದೆ
ಅಧಿಕ ನೀರು ಕುಡಿದರೆ ಕಿಡ್ನಿಯಲ್ಲಿರುವ ಕಷ್ಮಲಗಳನ್ನು ಹೊರಹಾಕುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಆದರೆ ಅಧಕ ನೀರು ಕುಡಿದರೆ ಕಿಡ್ನಿಗೆ ತನ್ನ ಕಾರ್ಯನಿರ್ವಹಿಸಲು ತೊಂದರೆ ಉಂಟಾಗುವುದು. ಆದ್ದರಿಂದ ನೀರನ್ನು ಮಿತಿ ಮೀರಿ ಕುಡಿಯಬೇಡಿ, ಕಮ್ಮಿಯೂ ಕುಡಿಯಬೇಡಿ.

ವ್ಯಾಯಾಮ ಮಾಡುವಾಗ ತುಂಬಾ ನೀರು ಕುಡಿಯಬೇಕು
ವ್ಯಾಯಾಮ ಮಾಡುವಾಗ ಸಾಕಷ್ಟು ನೀರು ಕುಡಿಯದಿದ್ದರೆ ನಿರ್ಜೀಲೀಕರಣ ಉಂಟಾಗುತ್ತದೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ವ್ಯಾಯಾಮ ಮಾಡುವಾಗ ತುಂಬಾ ನೀರು ಕುಡಿಯಬೇಕಾಗಿಲ್ಲ, ದೇಹದಲ್ಲಿ ನೀರಿನಂಶ ಕಾಪಾಡಲು ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಕುಡಿಯಿರಿ.



Click it and Unblock the Notifications
