Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಹಿಮೋಗ್ಲೋಬಿನ್ ಹೆಚ್ಚಿಸುವ ಟಾಪ್ 5 ಆಹಾರಗಳು
ಒಂದು ಹನಿ ರಕ್ತವೂ ಎಷ್ಟೊಂದು ಮಹತ್ವ ಅನ್ನುವುದು ಅದರ ಕೊರತೆ ಉಂಟಾದವರೆಗೂ ಗೊತ್ತು. ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾದರೆ ರಕ್ತ ಹೀನತೆ(anemia), ಸೋಂಕು, ಮುಟ್ಟಿನ ಸಮಯದಲ್ಲಿ ಅಧಿಕ ರಕ್ತ ಸ್ರಾವ ಅಥವಾ ಅನಿಯಮಿತ ಮುಟ್ಟು ಈ ರೀತಿಯ ಸಮಸ್ಯೆ ಕಂಡು ಬರುವುದು.
ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾದಾಗ ದೈನಂದಿನ ಕೆಲಸ ಮಾಡುವಾಗ ಸುಸ್ತು, ಖಿನ್ನತೆ, ನಿರಾಸಕ್ತಿ ಮುಂತಾದ ಸಮಸ್ಯೆ ಕಂಡು ಬರುವುದು. ದೇಹದಲ್ಲಿ ರಕ್ತ ಕಣಗಳು ಕಡಿಮೆಯಾಗುವುದು ಜೀವಕ್ಕೆ ಅಪಾಯಕಾರಿಯಾದ ವಿಷಯವಾದರೂ, ಸರಿಯಾದ ಆಹಾರಕ್ರಮದಿಂದ ದೇಹದಲ್ಲಿ ಹಿಮೋಗ್ಲೋಬಿನ್ ಕಣಗಳನ್ನು ಹೆಚ್ಚಿಸಬಹುದು.
ಇಲ್ಲಿ ನಾವು ಹಿಮೋಗ್ಲೋಬಿನ್ ಹೆಚ್ಚಿಸುವ ಟಾಪ್ 5 ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಕೆಂಪು ಮಾಂಸ
ರಕ್ತ ಹೀನತೆ ಉಂಟಾದರೆ ದೇಹಕ್ಕೆ ಅಧಿಕ ಕಬ್ಬಿಣದಂಶ ಅವಶ್ಯಕ. ಕೆಂಪು ಮಾಂಸದಲ್ಲಿ ಕಬ್ಬಿಣದಂಶ ಅಧಿಕವಾಗಿರುತ್ತದೆ. ಈ ಮಾಂಸ ತಿನ್ನುವುದರ ಮತ್ತೊಂದು ಪ್ರಯೋಜಜವೆಂದರೆ ದೇಹದಲ್ಲಿರುವ ಕಬ್ಬಿಣದಂಶವನ್ನು ಬೇಗನೆ ಹೀರಿಕೊಳ್ಳುತ್ತದೆ. ಇದರಿಂದ ದೇಹದಲ್ಲಿ ರಕ್ತ ಕಣಗಳು ಬೇಗನೆ ಹೆಚ್ಚಾಗುವುದು.
ಗಮನಿಸಬೇಕಾದ ಅಂಶ: ಇದನ್ನು ಮಿತಿಯಲ್ಲಿ ತಿನ್ನಿ, ಅಧಿಕವಾಗಿ ತಿನ್ನುವುದರಿಂದ ಮೈ ತೂಕ ಹೆಚ್ಚಾಗಬಹುದು.

ತರಕಾರಿಗಳು
ಬೀಟ್ ರೂಟ್, ಪಾಲಾಕ್, ಇತರ ಸೊಪ್ಪು, ರಾಜ್ಮಾ, ಕ್ಯಾಬೇಜ್, ಸಿಹಿ ಗೆಣಸು, ಹೂಕೋಸು, ಬ್ರೊಕೋಲಿ, ಬೀನ್ಸ್, ಬ್ಲ್ಯಾಕ್ ಬೀನ್ಸ್ ಇವೆಲ್ಲಾ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಕಬ್ಬಿಣದಂಶ ಹೆಚ್ಚಾದರೆ ನಮ್ಮ ದೇಹವು ಆಮ್ಲಜನಕವನ್ನು ಹೀರಿಕೊಳ್ಳುತ್ತದೆ, ಇದರಿಂದ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುವುದು.

ಹಣ್ಣುಗಳು
ಒಣದ್ರಾಕ್ಷಿ. ಅಂಜೂರ, ಆಪ್ರಿಕಾಟ್, ಸೇಬು, ಕಲ್ಲಂಗಡಿ ಹಣ್ಣು ಇದು ಹಿಮೋಗ್ಲೋಬಿನ್ ಅಂದರೆ ಬಿಳಿ ರಕ್ತಕಣಗಳನ್ನು ಮಾತ್ರವಲ್ಲ, ಬಿಳಿ ರಕ್ತ ಕಣಗಳನ್ನೂ ಹೆಚ್ಚಿಸುತ್ತದೆ.

ಸಿಟ್ರಸ್ ಫ್ರೂಟ್
ಕಿತ್ತಳೆ, ನೆಲ್ಲಿಕಾಯಿ, ನಿಂಬೆ ರಸ, ದ್ರಾಕ್ಷಿ ಈ ರೀತಿಯ ಸಿಟ್ರಸ್ ಆಹಾರಗಳು ದೇಹದಲ್ಲಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ.

ಡ್ರೈ ಫ್ರೂಟ್ಸ್
ರಕ್ತ ಹೀನತೆ ಸಮಸ್ಯೆಯಿಂದ ಹೊರಬರಲು ಸಾಕಷ್ಟು ಡ್ರೈ ಫ್ರೂಟ್ಸ್ ತಿನ್ನಬೇಕು. ಇದರಲ್ಲಿ ಸಾಕಷ್ಟು ಕಬ್ಬಿಣದಂಶ ಇರುವುದರಿಂದ ರಕ್ತ ಹೀನತೆ ಸಮಸ್ಯೆಯಿಂದ ಬೇಗನೆ ಚೇತರಿಸಿಕೊಳ್ಳಬಹುದು.



Click it and Unblock the Notifications