Latest Updates
-
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು
ಋತುಚಕ್ರ ಕ್ರಿಯೆ ನಿಲ್ಲುವಾಗ ಕಂಡು ಬರುವ ಲಕ್ಷಣಗಳು
ಮೆನೋಪಸ್ ಅಥವಾ ಮುಟ್ಟು ನಿಲ್ಲುವಿಕೆಯ ಲಕ್ಷಣಗಳು ಹಲವಾರು ವಿಧಗಳಿಂದ ಗೊತ್ತಾಗುತ್ತದೆ. ಮಹಿಳೆಯರಲ್ಲಿ ವಯಸ್ಸಾದ ಹಾಗೇ ಮುಟ್ಟಿನಿಂದ ನಿವೃತ್ತಿ ಸಾಮಾನ್ಯ. ಆದರೆ ಆ ಹಂತಕ್ಕೆ ತಲುಪುವುದಕ್ಕಿಂತ ಮೊದಲು ಉಂಟಾಗುವ ಕೆಲವು ಲಕ್ಷಣಗಳು ಮೆನೋಪಾನ್ ನ ಮುನ್ಸೂಚನೆಯನ್ನು ನೀಡುತ್ತವೆ.
ಇಂತಹ ಲಕ್ಷಣಗಳು ಮೊದಲೇ ಅರಿತಿದ್ದರೆ ಸನ್ನಿವೇಶಕ್ಕೆ ತಕ್ಕ ಹಾಗೆ ಸಿದ್ಧರಾಗಲು ನಿಮಗೆ ಸಹಾಯಕವಾಗುತ್ತದೆ. ಅಲ್ಲದೇ ಯಾವುದೇ ಆತಂಕವಿಲ್ಲದೇ ಇರಬಹುದು. ಇಲ್ಲಿ ಕೆಲವು ಲಕ್ಷಣಗಳನ್ನು ನೀಡಲಾಗಿದೆ.

1. ಹಾಟ್ ಪ್ಲಾಷ್
ಮುಟ್ಟು ನಿಲ್ಲುವ ಸಂದರ್ಭದಲ್ಲಿ ಸಾಮಾನ್ಯವಾಗಿ ಮುಖದ ಅಥವಾ ಎದೆಯ ಭಾಗವು ಕೆಂಪಾಗುತ್ತದೆ. ಹಾಗೂ ಮುಟ್ಟಿದರೆ ಬಿಸಿಯ ಅನುಭವವಾಗುತ್ತದೆ. ಜೊತೆಗೆ ಮುಖವು ಬೆವರುತ್ತಿರುತ್ತದೆ.

2. ರಾತ್ರಿ ಬೆವರುವುದು
ಮಧ್ಯರಾತ್ರಿಯ ಸಮಯದಲ್ಲಿ ತಂಪಾದ ಹವಾಮಾನವಿದ್ದರೂ ಬೆವರಬಹುದು. ಈ ತೇವದ ಅನುಭವ ಮುಟ್ಟು ನಿವೃತ್ತಿಯ ಲಕ್ಷಣಗಳನ್ನು ತೋರಿಸುತ್ತದೆ.

3. ಮನಸ್ಥಿತಿಯಲ್ಲಿ ಬದಲಾವಣೆ
ಋತು ನಿಲ್ಲುವ ಸಂದರ್ಭದಲ್ಲಿ ಮನಸ್ಥಿತಿ ಎಂದಿನಂತೆ ಇರುವುದಿಲ್ಲ. ಹಠಾತ್ತನೆ ಬೇಜಾರಾಗುವುದು, ಅತ್ಯಾನಂದ, ಸಿಡುಕು, ಸುಸ್ತು, ಅಳುಬುರುಕುತನ ಹೀಗೆ ಮನಸ್ಸು ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ.

4. ಆಯಾಸ
ದಿನನಿತ್ಯದ ಕೆಲಸ ಮಾಡುವಾಗ ಅತೀ ಹೆಚ್ಚಿನ ಸಮಯದಲ್ಲಿ ಆಯಾಸ ಅಥವಾ ದಣಿವಾಗುತ್ತಿದ್ದರೆ ಅದು ಮುಟ್ಟಿನ ನಿವೃತ್ತಿಯ ಲಕ್ಷಣವಲ್ಲದೇ ಬೇರೊಂದಿಲ್ಲ. ಸರಿಯಾದ ನಿದ್ರೆಯೂ ಇಲ್ಲದೇ ದಿನವೂ ಮಾಡುವ ಕಾರ್ಯವನ್ನು ಕೂಡ ಮಾಡಲು ಸಾಧ್ಯವಾಗದೇ ಬಳಲಿಕೆ ಕಾಣಿಸಿಕೊಳ್ಳುತ್ತದೆ.

5. ಆತಂಕ
ಮನಸ್ಥಿಯಲ್ಲಿನ ವ್ಯತ್ಯಯದೊಂದಿಗೆ ಆತಂಕವೂ ಕೂಡ ಮೆನೋಪಸ್ ನ ಲಕ್ಷಣವಾಗಿದೆ. ನೀವು ಸುಲಭವಾಗಿ ಮಾಡಿ ಪ್ರಶಂಸೆಯನ್ನೂ ಗಳಿಸಿದ ಕಾರ್ಯವನ್ನು ಮತ್ತೆ ಮಾಡಲು ಆತಂಕವುಂಟಾಗಬಹುದು. ನಿಮ್ಮಲ್ಲಿ ಈ ರೀತಿಯ ಅನಾವಶ್ಯಕ ಆತಂಕ ಮೂಡಿದೆಯೆಂದರೆ ಋತುಚಕ್ರ ಕ್ರಿಯೆ ನಿಲ್ಲುತ್ತಿದೆಯೆಂದು ಅರ್ಥ.

6. ಲೈಂಗಿಕ ಆಸಕ್ತಿ ಕಡಿಮೆ
ಹಾರ್ಮೋನ್ ಮಟ್ಟ ಕಡಿಮೆಯಾದ ಹಾಗೆ ಕಾಮಾಸಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗಬೇಕಾಗುತ್ತದೆ. ಸಂಗಾತಿಯ ಒತ್ತಾಯವಿಲ್ಲದಿದ್ದರೆ ಲೈಂಗಿಕತೆಯಿಂದ ದೂರವುಳಿಯಬಹುದು.

7. ಸ್ತನಗಳಲ್ಲಿ ಮೃದುತ್ವ
ರಜೋನಿವೃತ್ತಿ ಉಂಟಾಗುವ ಸಂದರ್ಭದಲ್ಲಿ ಮಹಿಳೆಯರ ದೇಹದಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಹಾರ್ಮೋನ್ ಗಳಲ್ಲಿ ಸಾಕಷ್ಟು ಏರಿಳಿತಗಳು ಕಂಡುಬರುತ್ತವೆ. ಇದರಿಂದಾಗಿ ಸ್ತನಗಳ ಸ್ನಾಯುಗಳು ಸಡಿಲವಾಗುವುದು ಹಾಗೂ ನೋವು ಉಂಟಾಗುತ್ತದೆ.

8. ತಲೆನೋವು
ಹಾರ್ಮೋನ್ ಗಳ ಬದಲಾವಣೆ ತಲೆನೋವಿಗೂ ಕಾರಣವಾಗುತ್ತದೆ. ಆದ್ದರಿಂದ ರಜೋನಿವೃತ್ತಿಯ ಸಂದರ್ಭದಲ್ಲಿ ತಲೆನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇದಕ್ಕಿಂತ ಮೊದಲು ನೀವು ತಲೆನೋವನ್ನು ಅನುಭವಿಸಿದ್ದರೆ ಋತುಚಕ್ರ ನಿಲ್ಲುವ ಸಂದರ್ಭದಲ್ಲಿ ಉಂಟಾಗುವ ಸಾಮಾನ್ಯವಾಗಿ ಬರುವ ತಲೆನೋವಿಗಿಂತ ವಿಭಿನ್ನ ಹಾಗೂ ಭಯಂಕರವಾದ ನೋವನ್ನು ಉಂಟುಮಾಡುತ್ತದೆ.

9.ಜನನೇಂದ್ರೀಯ ಒಣಗುವುದು
ರಜೋನಿವೃತ್ತಿಯ ಸಂದರ್ಭದಲ್ಲಿ ಯೋನಿಗಳ ನಿಷ್ಕ್ರಿಯತೆ ಉಂಟಾಗುತ್ತದೆ. ಹಾರ್ಮೋನ್ ಗಳ ಬದಲಾವಣೆಯಿಂದಾಗಿ ದೇಹದಲ್ಲಿ ಈಸ್ಟ್ರೋಜಿನ್ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಲೈಂಗಿಕ ಕ್ರಿಯೆಗೆ ದೇಹ ಸಹಕರಿಸುವುದಿಲ್ಲ.

10. ಅಧಿಕ ತೂಕ
ಹಾರ್ಮೋನ್ ಗಳ ವ್ಯತ್ಯಯದಿಂದಾಗಿ ದೇಹದ ತೂಕ ಜಾಸ್ತಿ ಯಾಗುತ್ತಾ ಹೋಗುತ್ತದೆ. ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆಗಳಾಗಿ ಕೊಬ್ಬು ಬೆಳೆಯುತ್ತದೆ.

11. ಕೂದಲು ಉದುರುವುದು
ಕೂದಲು ಬೆಳೆಯಲು ಬೇಕಾದ ಈಸ್ಟ್ರೋಜಿನ್ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ.

12. ನಿದ್ರಾಹೀನತೆ
ಹಾಟ್ ಫ್ಲಾಷ್, ರಾತ್ರಿ ಬೆವರುವಿಕೆ ಮತ್ತು ಹಾರ್ಮೋನುಗಳ ಮಟ್ಟದಲ್ಲಿ ಬದಲಾವಣೆ ಮುಟ್ಟಿನ ನಿವೃತ್ತಿ ಲಕ್ಷಣವನ್ನು ಹೇಳುತ್ತವೆ.

13. ಕೀಲು ನೋವು ಉಂಟಾಗುತ್ತದೆ
ವಯಸ್ಸಾಗುತ್ತಿದ್ದಂತೆ ಮಹಿಳೆಯರಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುತ್ತದೆ. ಅದರ ಜೊತೆಗೆ ಮುಟ್ಟು ನಿಲ್ಲುವ ಸಮಯವಾದಾಗ ಹಾರ್ಮೋನ್ ನಲ್ಲಿ ವ್ಯತ್ಯಾಸ ಉಂಟಾಗಿ ಕೀಲು ನೋವು ಉಂಟಾಗುವುದು.

14. ಅಧಿಕ ಹೃದಯ ಭಡಿತ ಕಾಣಿಸಿಕೊಳ್ಳುತ್ತದೆ
ಮುಟ್ಟು ನಿಲ್ಲುವ ಸಮಸಯದಲ್ಲಿ ಕಾಣಿಸಿಕೊಳ್ಳುವ ಮತ್ತೊಂದು ಸಮಸ್ಯೆಯೆಂದರೆ ತೇವ್ರವಾಗಿ ಹೃದಯ ಬಡಿದುಕೊಳ್ಳುವುದು. ಮನಸ್ಸು ಕೂಡ ತುಂಬಾ ಗೊಂದಲಮಯವಾಗಿರುತ್ತದೆ.

15. ನೆನಪಿನ ಶಕ್ತಿ ಕುಂದುವುದು
ದಿಗ್ಭ್ರಮೆ ಅಥವಾ ನೆನಪಿನ ಶಕ್ತಿ ಈಸ್ಟ್ರೋಜಿನ್ ಕೊರತೆಯಿಂದ ಉಂಟಾಗುತ್ತದೆ.



Click it and Unblock the Notifications