Latest Updates
-
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ!
ಸೈನಸ್ ಗೆ ಸರಳವಾದ ಮನೆಮದ್ದು
ಸೈನಸ್ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಇದು ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಅಥವಾ ಸೋಂಕಾಣುಗಳ ದಾಳಿಯಿಂದ ಉಂಟಾಗುತ್ತದೆ. ಮೂಗು ಕಟ್ಟುವುದು, ತಲೆನೋವು, ಮೂಗು ಸೋರುವುದು, ಮುಖ ಬಿಗಿದುಕೊಂಡು ನೋವು ಉಂಟಾಗುವುದು ಸೈನಸ್ ಸಮಸ್ಯೆಯ ಸಾಮಾನ್ಯ ಲಕ್ಷಣಗಳು.
ಸೈನಸ್ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೆ ವೈದ್ಯರಲ್ಲಿ ತೋರಿಸಿ, ಔಷಧಿ ತೆಗೆದುಕೊಳ್ಳಬೇಕು, ಕೆಲವೊಂದು ಮನೆ ಮದ್ದುಗಳು ಕೂಡ ಸೈನಸ್ ಸಮಸ್ಯೆಗೆ ತಾತ್ಕಾಲಿಕ ಶಮನ ನೀಡುತ್ತದೆ. ಆ ಮನೆ ಮದ್ದುಗಳ ಬಗ್ಗೆ ಮಾಹಿತಿ ಈ ಕೆಳಗೆ ನೀಡಲಾಗಿದೆ ನೋಡಿ:

ಆವಿ ತೆಗೆದುಕೊಳ್ಳುವುದು
ಕುದಿಯುವ ಬಿಸಿ ನೀರನ್ನು ಅಗಲವಾದ ಬಾಯಿ ಇರುವ ಪಾತ್ರೆಗೆ ಹಾಕಿ ಅದರಲ್ಲಿ 8-10 ಹನಿ ನೀಲಗಿರಿ ಎಣ್ಣೆಯನ್ನು ಹಾಕಿ ಹಬೆ ತೆಗೆದುಕೊಳ್ಳಿ. ಇದು ಸೈನಸ್ ಸಮಸ್ಯೆಯನ್ನು ತಾತ್ಕಾಲಿಕವಾಗಿ ಕಮ್ಮಿ ಮಾಡುತ್ತದೆ.
ನೀರು ಕುಡಿಯಿರಿ
ಸೈನಸ್ ಸಮಸ್ಯೆ ಕಾಣಿಸಿಕೊಂಡಾಗ ಸಾಕಷ್ಟು ನೀರು ಕುಡಿಯಿರಿ. ಶುಂಠಿ ಟೀ ಅಥವಾ ಹರ್ಬಲ್ ಟೀ ಕೂಡ ಒಳ್ಳೆಯದೇ. ಸೈನಸ್ ಆದಾಗ ಮದ್ಯ ಮುಟ್ಟಲೇಬಾರದು.
ನಿಂಬೆ ಎಲೆಯ ಚಮತ್ಕಾರ
ನಿಂಬೆ ಎಲೆಯನ್ನು ಬಿಸಿ ನೀರಿಗೆ ಹಾಕಿ ಕುದಿಸಿ, ನಂತರ ನೀರು ಸ್ವಲ್ಪ ಬಿಸಿ ಕಮ್ಮಿಯಾದ ಮೇಲೆ ಬಾಯಿ ಮುಕ್ಕಳಿಸಿ. ಹೀಗೆ ಮಾಡಿದರೆ ತಲೆನೋವು ಸ್ವಲ್ಪ ಮಟ್ಟಿಗೆ ಕಮ್ಮಿಯಾಗುವುದು.
ಕಂಪ್ರೆಸ್
ತಲೆಗೆ ಮಸಾಜ್ ಮಾಡುವುದು, ವಾರ್ಮ್ ಕಂಪ್ರೆಸ್ ಬಳಸಿದರೆ ನೋವು ಸ್ವಲ್ಪ ಕಮ್ಮಿಯಾಗುವುದು.
ವಿಶ್ರಾಂತಿ
ಸೈನಸ್ ಬಂದಾಗ ವಿಶ್ರಾಂತಿ ತೆಗೆದುಕೊಳ್ಳಿ. ಚೆನ್ನಾಗಿ ನಿದ್ದೆ ಮಾಡಿ ಎದ್ದರೆ ತಲೆನೋವು ಕಡಿಮೆಯಾಗುವುದು.
ಆಗಾಗ ತಲೆನೋವು ಕಾಣಿಸುತ್ತಿದ್ದರೆ ಕಡೆಗಣಿಸಬೇಡಿ, ವೈದ್ಯರಲ್ಲಿ ತೋರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
