ನಿಶ್ಯಕ್ತಿಗೆ ಇವುಗಳು ಕಾರಣವಿರಬಹುದೇ?

By Super

ಉತ್ತಮ ಆರೋಗ್ಯವಿದ್ದು, ನಿಯಮಿತವಾಗಿ ಆಹಾರ ಸೇವನೆ ಮತ್ತು ನಿದ್ರೆ ಮಾಡುತ್ತಿದ್ದರೂ ಕೆಲವೊಮ್ಮೆ ಆಯಾಸವಾದಂತಾಗಿ ದೇಹದಲ್ಲಿ ನಿಶ್ಯಕ್ತಿ ಕಾಣಿಸಿಕೊಂಡು ಯಾವುದೇ ಕೆಲಸದಲ್ಲಿ ಮನಸ್ಸಿಲ್ಲದಂತೆ ಆಗಬಹುದು. ಇಂತಹ ಪರಿಸ್ಥಿತಿಯಲ್ಲಿ ನಾವು ಕಂಗೆಡುವುದು ಸಹಜ. ದೇಹಕ್ಕೆ ಏನಾಗಿದೆ? ಎಲ್ಲವೂ ಸರಿಯಾಗಿಯೇ ಇದ್ದರೂ ಹೀಗ್ಯಾಕೆ ಆಗುತ್ತಿದೆ ಎನ್ನುವ ಚಿಂತೆ ಕಾಡುವುದು ಸಹಜ. ಎಲ್ಲಾ ಕೋನಗಳಿಂದ ಯೋಚಿಸಿದರೂ ಕಾರಣವನ್ನು ಹುಡುಕಲು ನಮಗೆ ಸಾಧ್ಯವಾಗದು.

ಎಲ್ಲಾ ಪ್ರಯತ್ನದ ಬಳಿಕವೂ ನಿಮ್ಮ ನಿಶ್ಯಕ್ತಿ ಕಾರಣವೇನೆಂದು ತಿಳಿಯದಿರಬಹುದು. ನಿಮ್ಮ ನಿಶ್ಯಕ್ತಿ ಕಾರಣವೇನೆಂದು ತಿಳಿಯಲು ಹತ್ತು ಸುಲಭ ವಿಧಾನಗಳನ್ನು ಕೊಡಲಾಗಿದೆ. ಇದರಲ್ಲಿ ಯಾವುದನ್ನಾದರೂ ಮಾಡುತ್ತಿದ್ದರೆ ಅದನ್ನು ಕಡೆಗಣಿಸಿ ಮುಂದಿನ ದಿನಗಳಲ್ಲಿ ನೀವು ನಿಶ್ಯಕ್ತಿಯಿಂದ ಪಾರಾಗಬಹುದು.

1. ಮಲಗುವ ಮೊದಲು ಎಲೆಕ್ಟ್ರಾನಿಕ್ ಸಾಧನಗಳ ಬಳಕೆ

1. ಮಲಗುವ ಮೊದಲು ಎಲೆಕ್ಟ್ರಾನಿಕ್ ಸಾಧನಗಳ ಬಳಕೆ

ನೀವು ಯಾವುದಾದರೂ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುತ್ತಿದ್ದರೆ ಒಳ್ಳೆಯದು. ಆದರೆ ಇದನ್ನು ತುಂಬಾ ಹೊತ್ತು ಬಳಸುವುದು ಸರಿಯಲ್ಲ. ಅಧ್ಯಯನಗಳ ಪ್ರಕಾರ ಮಲಗುವ ಮೊದಲು ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್, ಟಿವಿ ನೋಡುವುದು ಅಥವಾ ವೀಡಿಯೋ ಗೇಮ್ ನಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದರಿಂದ ಇದರ ಪರಿಣಾಮ ನೇರವಾಗಿ ನಿಮ್ಮ ಮೇಲೆ ಆಗುತ್ತದೆ ಮತ್ತು ದೇಹವು ಒತ್ತಡಕ್ಕೆ ಒಳಗಾಗುತ್ತದೆ. ಅತಿಯಾದ ರಕ್ತದೊತ್ತಡದಿಂದಾಗಿ ಮಲಗಲು ಸಾಧ್ಯವಾಗದು. ಇದರಿಂದಾಗಿ ಮಲಗುವ ಮೂರು ಗಂಟೆಗೆ ಮೊದಲು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ.

2. ಕಳಪೆ ಆಹಾರ ಕ್ರಮ

2. ಕಳಪೆ ಆಹಾರ ಕ್ರಮ

ಕ್ಯಾಲೋರಿ ಕಡಿಮೆ ಸೇವನೆಯಿಂದ ತೂಕ ಹೆಚ್ಚಾಗುವುದನ್ನು ತಡೆಯಬಹುದು. ಆದರೆ ಪೋಷಕಾಂಶಗಳ ಕೊರತೆ ನಿಶ್ಯಕ್ತಿಗೆ ಕಾರಣವಾಗಬಹುದು. ಸಂಸ್ಕರಿಸಿದ ಸಕ್ಕರೆ ಹಾಗೂ ಕಾಬ್ರೋಹೈಡ್ರೆಟ್ಸ್ ಗಳಿಂದ ಕೂಡ ಹೀಗೆ ಆಗಬಹುದು. ಇದಕ್ಕಾಗಿ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಸೇವನೆ ಮಾಡಿ. ಇದರಿಂದ ತಳಮಟ್ಟದ ಪ್ರೋಟೀನ್ ಮತ್ತು ಜಟಿಲ ಕಾಬ್ರೋಹೈಡ್ರೆಟ್ಸ್ ಗಳು ದಿನವಿಡಿ ನಿಮ್ಮನ್ನು ಉಲ್ಲಾಸಿತರಾಗಿರುವಂತೆ ಮಾಡುತ್ತದೆ. ದಿನಕ್ಕೆ ಮೂರು ಊಟ ಮತ್ತು ಪೋಷಕಾಂಶವುಳ್ಳ ತಿಂಡಿ ತಿನ್ನಿ.

3. ಖಿನ್ನತೆ ಕಾಡುತ್ತಿದೆಯಾ?

3. ಖಿನ್ನತೆ ಕಾಡುತ್ತಿದೆಯಾ?

ಖಿನ್ನತೆ ಎನ್ನುವುದು ಭಾವನಾತ್ಮಕ ವ್ಯಾಧಿ. ಇದರಿಂದಾಗಿ ವಿವರಿಸಲಾಗದ ದಣಿವು, ಹಸಿವಿನ ಕೊರತೆ, ಋಣಾತ್ಮಕ ಭಾವನೆಗಳು. ಇವುಗಳೆಲ್ಲವೂ ಶಕ್ತಿಯ ಕೊರತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಆರಂಭಿಸಬೇಕು. ವ್ಯಾಯಾಮ, ಕೌನ್ಸಿಲಿಂಗ್ ಮತ್ತು ಕೆಲವೊಮ್ಮೆ ಔಷಧಿ ಮೂಲಕ ತಮ್ಮ ಶಕ್ತಿ ಮರಳಿ ಪಡೆಯಬಹುದು.

4. ದೀರ್ಘಕಾಲದ ಯುಟಿಐ ಅಥವಾ ಈಸ್ಟ್ ಸೋಂಕು

4. ದೀರ್ಘಕಾಲದ ಯುಟಿಐ ಅಥವಾ ಈಸ್ಟ್ ಸೋಂಕು

ಮಹಿಳೆಯರಿಗೆ ಸಾಮಾನ್ಯವಾಗಿ ಈಸ್ಟ್ ಅಥವಾ ಮೂತ್ರ ಸಂಬಂಧಿ ಸೋಂಕು(ಯುಟಿಐ) ಬಗ್ಗೆ ತಿಳಿದಿರುತ್ತದೆ. ಆದಾಗ್ಯೂ ಇತ್ತೀಚೆಗೆ ನೀವು ಯುಟಿಐ ಅಥವಾ ಈಸ್ಟ್ ಸೋಂಕಿಗೆ ಚಿಕಿತ್ಸೆ ಪಡೆದಿದ್ದರೆ ನಿಮಗೆ ಇದರ ಯಾವುದೇ ಲಕ್ಷಣಗಳು ಕಾಣಿಸದಿದ್ದರೂ ಅದು ದೀರ್ಘಾವಧಿಗೆ ಮುಂದುವರಿಯಬಹುದು. ಸೋಂಕು ಇದೇ ರೀತಿ ಮುಂದುವರಿದರೆ ಭಾರೀ ದಣಿವಿನ ಭಾವನೆಯಾಗುತ್ತದೆ. ಸೋಂಕು ಸಂಪೂರ್ಣವಾಗಿ ನಿವಾರಣೆಯಾಗಿದೆಯಾ ಎಂದು ತಿಳಿಯಲು ನಿಮ್ಮ ವೈದ್ಯರ ಜತೆ ಮಾತನಾಡಿ.

5. ನಿದ್ರಾ ಹೀನತೆ

5. ನಿದ್ರಾ ಹೀನತೆ

ರಾತ್ರಿಯಿಡಿ ನೀವು ಸರಿಯಾಗಿ ನಿದ್ರೆ ಮಾಡಿದ್ದೀರೆಂದು ಭಾವಿಸಿದ್ದೀರಾ? ಆದರೆ ಹಾಗೆ ಆಗಿರುವುದಿಲ್ಲ. ನೀವು ನಿದ್ರಾ ಶ್ವಾಸಬಂಧನದಿಂದ ಬಳಲುತ್ತಿರಬಹುದು. ಇದರಿಂದಾಗಿ ನಿಮಗೆ ಗೊತ್ತಾಗದೆ ರಾತ್ರಿ ನಿದ್ರೆಯಲ್ಲಿ ನಿಮ್ಮ ಶ್ವಾಸ ಹಲವಾರು ಬಾರಿ ನಿಂತು ನಿದ್ರೆಗೆ ಭಂಗವಾಗಿರಬಹುದು. ಇದನ್ನು ಖಚಿತಪಡಿಸಿಕೊಳ್ಳಲು ರಾತ್ರಿ ನಿದ್ರಾ ಶ್ವಾಸಬಂಧನದಿಂದಾಗಿ ಗೊರಕೆ ಹೊಡೆಯುವುದರಿಂದ ನಿಮ್ಮ ಪತ್ನಿಗೆ ಎಚ್ಚರವಾಗಿದೆಯಾ ಎಂದು ಕೇಳಿ. ಒಂದು ವೇಳೆ ಹೀಗೆ ಆಗುತ್ತಿದ್ದರೆ ತೂಕ ಕಡಿಮೆ ಮಾಡಿ, ಧೂಮಪಾನ ಬಿಟ್ಟುಬಿಡಿ ಅಥವಾ ನಿದ್ರೆಯಲ್ಲಿ ಸರಿಯಾಗಿ ಉಸಿರಾಡುವಂತಾಗಲು ಸಿಪಿಎಪಿ ಸಾಧನವನ್ನು ಬಳಸುವ ಬಗ್ಗೆ ತಜ್ಞ ವೈದ್ಯರಿಂದ ಸಲಹೆ ಪಡೆಯಿರಿ.

6. ಥೈರಾಯ್ಡ್ ಸಮಸ್ಯೆ

6. ಥೈರಾಯ್ಡ್ ಸಮಸ್ಯೆ

ಹೈಪೋಥೈರಾಯ್ಡಿಸಮ್ ಫಲಿತಾಂಶ ನಿಮ್ಮ ಚಯಾಪಚಯಾ ಕ್ರಿಯೆಯನ್ನು ನಿಯಂತ್ರಿಸುವ ಗ್ರಂಥಿಯಲ್ಲಿ ಕ್ರಿಯೆಯಿಲ್ಲದ ಥೈರಾಯ್ಡ್ ಆಗಬಹುದು(ಅಥವಾ ದೇಹವು ನಿಮ್ಮ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಮಾಣ ನಿರ್ಧರಿಸುತ್ತದೆ). ಹೈಪೋಥೈರಾಯ್ಡಿಸಮ್ ನಿಂದ ಬಳಲುತ್ತಿರುವವರು ನಿಷ್ಕ್ರೀಯ ಜೀರ್ಣಶಕ್ತಿಯಿಂದಾಗಿ ಶಕ್ತಿ ಕುಂದಬಹುದು ಮತ್ತು ತೂಕ ಹೆಚ್ಚಾಗಬಹುದು. ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಹಾರ್ಮೋನ್ ಮಟ್ಟವನ್ನು ಪರೀಕ್ಷಿಸಲು ವೈದ್ಯರಿಗೆ ತಿಳಿಸಿ.

 7. ರಕ್ತಹೀನತೆ ಇರಬಹುದು

7. ರಕ್ತಹೀನತೆ ಇರಬಹುದು

ದಣಿವಿಗೆ ರಕ್ತಹೀನತೆ ಪ್ರಮುಖ ಕಾರಣವಾಗಬಹುದು. ವಿಶೇಷವಾಗಿ ಮಹಿಳೆಯಲ್ಲಿ ಮುಟ್ಟಿನ ವೇಳೆ ಆಗುವ ರಕ್ತಸ್ರಾವದಿಂದಾಗಿ ರಕ್ತಹೀನತೆ ಉಂಟಾಗಬಹುದು. ರಕ್ತಹೀನತೆಯಿಂದಾಗಿ ತೀವ್ರ ಕಬ್ಬಿಣದ ಕೊರತೆಯುಂಟಾಗಿ ರಕ್ತದ ಜೀವಕೋಶ ಕಡಿಮೆಯಾಗಬಹುದು. ಕೆಂಪು ರಕ್ತ ಕಣಗಳು ನಿಮ್ಮ ಅಂಗಾಂಶಗಳು ಮತ್ತು ಅಂಗಗಳಿಗೆ ಆಮ್ಲಜನಕ ಹಾಗೂ ಶಕ್ತಿ ಸಾಗಿಸಲು ಅಗತ್ಯ. ರಕ್ತಹೀನತೆಯನ್ನು ನಿವಾರಿಸಲು ಕಬ್ಬಿನಾಂಶ ಹೆಚ್ಚಾಗಿರುವ ಆಹಾರಗಳಾದ ಚಿಪ್ಪುಮೀನು, ಬೀನ್ಸ್, ಇಡೀ ಏಕದಳ ಧಾನ್ಯಗಳು ಮತ್ತು ಬೀಫ್ ಲಿವರ್ ನ್ನು ಸಾಪ್ತಾಹಿಕ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ.

8. ಮಧುಮೇಹ

8. ಮಧುಮೇಹ

ಮಧುಮೇಹದ ಆರಂಭಿಕ ಹಂತದಲ್ಲಿ ಜನರಿಗೆ ತಿಳಿಯದೆ ಇದನ್ನು ಅನುಭವಿಸುತ್ತಿರಬಹುದು. ಜೀವಕೋಶದಲ್ಲಿನ ಇನ್ಸುಲಿನ್ ನ್ನು ವರ್ಗಾಯಿಸಲು ಸಾಧ್ಯವಾಗದ ಕಾರಣ ಮಧುಮೇಹದಿಂದ ರಕ್ತನಾಳಗಳಲ್ಲಿ ಅತಿಯಾದ ಸಕ್ಕರೆ ಅಂಶ ಉತ್ಪತ್ತಿಯಾಗುತ್ತದೆ. ಇದರ ಪರಿಣಾಮ ದೇಹಕ್ಕೆ ದಣಿವಾಗುತ್ತದೆ. ಸಕ್ಕರೆ ಕಾಯಿಲೆ ಅಥವಾ ಅತಿಯಾದ ತೂಕ ಹೊಂದಿರುವ ಕೌಟುಂಬಿಕ ಹಿನ್ನೆಲೆಯಿದ್ದರೆ ವೈದ್ಯರಿಂದ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ.

9. ಅತಿಯಾದ ಕೆಫಿನ್

9. ಅತಿಯಾದ ಕೆಫಿನ್

ಕಡಿಮೆ ನಿದ್ರೆಯಿಂದ ಬಳಲಿದಾಗ ಕೆಫಿನ್ ಕಾಫಿ, ಕೆಫಿನ್ ಚಹಾ, ಸೋಡಾ, ಶಕ್ತಿ ಪಾನೀಯಗಳು, ಕೆಲವು ಔಷಧಿಗಳು ಮತ್ತು ಚಾಕಲೇಟ್ ಗಳು ನಿಮಗೆ ಅಗತ್ಯವಿರುವ ಕಿಕ್ ನೀಡಬಲ್ಲದು. ಆದಾಗ್ಯೂ ಅತಿಯಾದ ಕೆಫಿನ್ ಯುಕ್ತ ಪಾನೀಯಗಳ ಸೇವನೆಯಿಂದಾಗಿ ನಿಮ್ಮ ಹೃದಯದ ಬಡಿತ, ರಕ್ತದೊತ್ತಡ ಮತ್ತು ಅಂತಿಮವಾಗಿ ಬಳಲಿಕೆ ಮೇಲೆ ಪರಿಣಾಮ ಬೀರಬಹುದು. ಅತಿಯಾದ ಕೆಫಿನ್ ಸೇವನೆ ಮಾಡುತ್ತಿದ್ದರೆ ತಕ್ಷಣ ಅದನ್ನು ತ್ಯಜಿಸಿ.

10. ನಿರ್ಜಲೀಕರಣ

10. ನಿರ್ಜಲೀಕರಣ

ದಣಿವಾದರೆ ತಕ್ಷಣ ನೀರು ಕುಡಿಯುವುದು ಸರಳ ಹಾಗೂ ತಕ್ಷಣದ ಪರಿಹಾರ. ದೇಹವು ನಿಗದಿತ ಪ್ರಮಾಣದಲ್ಲಿ ನೀರನ್ನು ಪಡೆಯದಿದ್ದರೆ ನಿರ್ಜಲೀಕರಣವು ದೇಹದ ಶಕ್ತಿಯನ್ನು ಕುಂದಿಸುತ್ತದೆ. ನಿರ್ಜಲೀಕರಣವನ್ನು ಮೂತ್ರದ ಮೂಲಕ ಪತ್ತೆಹಚ್ಚಬಹುದು. ಮೂತ್ರವು ಹಳದಿ ಬಣ್ಣದಲ್ಲಿದ್ದರೆ ದೇಹದಲ್ಲಿ ಸರಿಯಾದ ನೀರಿಲ್ಲವೆಂದರ್ಥ ಮತ್ತು ತುಂಬಾ ನೀರು ಕುಡಿಯಿರಿ.

X
Desktop Bottom Promotion