Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಲಗುವಾಗ ಬ್ರಾ ಧರಿಸದೇ ಇರಲು ಕಾರಣಗಳು
ಮಲಗುವ ಸಮಯದಲ್ಲಿ ಸಾಕಷ್ಟು ಮಹಿಳೆಯರು ಬ್ರಾವನ್ನು ಧರಿಸಿಯೇ ಮಲಗುತ್ತಾರೆ. ಈ ವಿಷಯದ ಬಗ್ಗೆ ನೀವು ಹತ್ತು ಮಹಿಳೆಯರನ್ನು ಕೇಳಿದರೂ ಹತ್ತು ವಿಭಿನ್ನ ಉತ್ತರಗಳನ್ನು ನೀವು ಪಡೆಯುವಿರಿ. ಆದರೆ ನೀವು ಈ ಬಗ್ಗೆ ಯಾವುದೇ ಪರಿಣಿತ ವೈದ್ಯರನ್ನು ಕೇಳಿದರೆ ಅವರಿಂದ ಸರಿಯಾದ ಮಾಹಿತಿ ನಿಮಗೆ ದೊರೆಯುತ್ತದೆ. ಅವರ ಪ್ರಕಾರ ನಿಮಗೆ ಹಿತಕರವೆನಿಸಿದರೆ, ನಿದ್ರಿಸಲು ಯಾವುದೇ ತೊಂದರೆಯಾಗದಿದ್ದರೆ ನೀವು ಬ್ರಾ ಧರಿಸಿಯೇ ಮಲಗಬಹುದು. ಆದರೆ ಕೆಲವರು ಬ್ರಾ ಧರಿಸಿ ಮಲುಗುವುದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಅತ್ಯಂತ ಬಿಗಿಯಾದ ಬ್ರಾವನ್ನು ಧರಿಸಿ ಮಲಗಿದರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ನೀವು ಒಂದು ಹಗುರವಾದ, ಕೆಳಭಾಗದಲ್ಲಿ ಇಲೆಸ್ಟಿಕ್ ಪಟ್ಟಿಗಳಿಲ್ಲದ, ಕಮ್ಸೋಲ್ ಶೈಲಿಯ ಪೈಜಾಮ ಟಾಪ್ಸ್ ಆರಿಸಿದಲ್ಲಿ, ನೀವು ಆರಾಮದಾಯಕ ನಿದ್ರೆಯನ್ನು ಪಡೆಯಬಹುದು. ನೀವು ಬ್ರಾವನ್ನು ಧರಿಸಿಯೇ ಮಲಗುವಿರಾದರೆ ನೀವು ಆಯ್ಕೆ ಮಾಡುವ ಬ್ರಾ ತುಂಬಾ ಬಿಗಿಯಾಗಿ ಇರುವಂತಿಲ್ಲ. ಆದರೆ ಬ್ರಾದ ಗಾತ್ರ ಅಥವಾ ಬಿಗಿಯ ವಿಷಯದಲ್ಲಿ ತಪ್ಪು ಆಯ್ಕೆ ಮಾಡಿದರೆ ಇದು ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಒಂದು ಆರಾಮದಾಯಕವಾದ ಬ್ರಾವನ್ನು ಧರಿಸುವುದು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಸಹಾಯಕವಾಗುತ್ತದೆ.
ಆದಾಗ್ಯೂ, ಒಂದು ಬಿಗಿಯಾದ ಫಿಟ್ ಮತ್ತು ಅಹಿತಕರ ಬ್ರಾನ್ನು ಧರಿಸುವುದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನೀವು ಬಿಗಿಯಾದ ಸ್ತನಬಂಧ ಬಳಸುತ್ತಿದ್ದರೆ, ಅದರಿಂದ ಉಂಟಾಗುವ ಆರೋಗ್ಯದ ದುಷ್ಪರಿಣಾಮವನ್ನು ಇಲ್ಲಿ ಕೊಡಲಾಗಿದೆ.

ರಕ್ತದ ಹರಿವಿಗೆ ಅಡ್ಡಿ ಉಂಟುಮಾಡಬಹುದು: ಬಿಗಿಯಾದ, ಇಲೆಸ್ಟಿಕ್ ಬ್ರಾ ಬಳಸುವುದರಿಂದ ರಕ್ತದ ಚಲಾವಣೆಯಲ್ಲಿ ತೊಂದರೆ ಉಂಟಾಗಬಹುದು. ಹೆಚ್ಚು ಆರಾಮದಾಯಕವಾಗಿರಲು ಸಡಿಲವಾದ ಬ್ರಾವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ವರ್ಣದ್ರವ್ಯ : ಬ್ರಾವನ್ನು ನಿರಂತರ ಬಳಕೆ ಮಾಡುವುದರಿಂದ ಬಿಗಿಯಾದ ಭಾಗದಲ್ಲಿ ಚರ್ಮದ ಬಣ್ಣ ಬದಲಾಗಬಹುದು. ಯಾವುದೇ ಆರೋಗ್ಯ ದುಷ್ಪರಿಣಾಮಗಳನ್ನು ತಪ್ಪಿಸಲು ಒಂದು ಮೃದು ಮತ್ತು ಸಡಿಲ ಬ್ರಾ ಬಳಸುವುದು ಒಳ್ಳೆಯದು.
ನಿದ್ರೆಗೆ ತೊಂದರೆಯಾಗಬಹುದು : ಉತ್ತಮ ನಿದ್ರೆ ಮಾಡಬೇಕೆಂದರೆ ನಿಮ್ಮ ಉಸಿರಾಟದ ಮಟ್ಟ ಸರಿಯಾಗಿರಬೇಕು. ನೀವು ಬಿಗಿಯಾದ ಬ್ರಾ ಧರಿಸಿ ಮಲಗಿದರೆ ಆರಾಮದಾಯಕ ನಿದ್ರೆ ಮಾಡಲು ಖಂಡಿತ ಸಾಧ್ಯವಿಲ್ಲ. ಇದು ನೇರವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಚರ್ಮದ ತೊಂದರೆ : ಬಿಗಿಯಾದ ಬ್ರಾ ಚರ್ಮದ ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಇಲೆಸ್ಟಿಕ್ ಇಲ್ಲದ ಬ್ರಾ ಬಳಸುವುದು ಉತ್ತಮ. ರಾತ್ರಿ ಸಮಯದಲ್ಲಿ ಧರಿಸಲು ಸಡಿಲವಾದ ಬ್ರಾ ಧರಿಸಿದರೆ ಯಾವುದೇ ಆರೋಗ್ಯದ ತೊಂದರೆಗಳೂ ಉಂಟಾಗುವುದಿಲ್ಲ. ಜೊತೆಗೆ ಚರ್ಮದ ಮೇಲೆ ಯಾವುದೇ ತುರಿಕೆ ಅಥವಾ ಇನ್ಯಾವುದೇ ಸಮಸ್ಯೆಗಳೂ ಉಂಟಾಗುವುದಿಲ್ಲ.
ಚಡಪಡಿಕೆ : ರಾತ್ರಿ ಮಲಗುವ ಮುನ್ನ ಬ್ರಾ ಧರಿಸುವುದು ಕೆಲವರಿಗೆ ಕಿರಿಕಿರಿ ಉಂಟು ಮಾಡಬಹುದು. ಜೊತೆಗೆ ಆರೋಗ್ಯಕ್ಕೂ ಹಾನಿಯುಂಟುಮಾಡಬಹುದು. ಸರಿಯಾಗಿ ನಿದ್ರೆ ಮಾಡಲಾಗದೆ ರಾತ್ರಿಯಿಡಿ ಸಮಸ್ಯೆಗಳಾಗಬಹುದು. ಆದ್ದರಿಂದ ಇಂತಹ ತೊಂದರೆಗಳಿಂದ ದೂರವಿಡಲು ಮುಂಜಾಗ್ರತೆಯಿಂದ ಬ್ರಾ ಆಯ್ಕೆಯನ್ನು ಸರಿಯಾಗಿ ಮಾಡಿ.
ಎಡಿಮಾ: ನೀವು ವಾಡಿಕೆಯಂತೆ ಬಿಗಿಯಾದ ಬ್ರಾ ಬಳಸುತ್ತಿದ್ದರೆ, ಇದು ದುಗ್ಧರಸ ನಿರೋಧವನ್ನು ಉಂಟುಮಾಡಬಹುದು . ಈ ಕಾರಣದಿಂದಾಗಿ, ಅಡಚಣೆಗೆ ಸಂಬಂಧಿಸಿದ ಇತರ ಪರಿಣಾಮಗಳು ಉಂಟಾಗಬಹುದು. ಈ ಎಡಿಮಾ ಅಥವಾ ಸ್ತನಗಳಲ್ಲಿ ದ್ರವದ ಸಂಗ್ರಹಣೆ ಬ್ರಾವನ್ನು ಧರಿಸಿ ಮಲಗಿದರೆ ಉಂಟಾಗುವ ಗಂಭೀರ ಆರೋಗ್ಯ ಪರಿಣಾಮಗಳಲ್ಲಿ ಒಂದು.
ಬೆವರುವುದು: ಮಲಗುವಾಗ ಅದರಲ್ಲೂ ವಿಶೇಷವಾಗಿ ಬೇಸಿಗೆಯಲ್ಲಿ ಬಿಗಿಯಾದ ಬ್ರಾ ಧರಿಸಿ ಮಲಗಿದರೆ ಸಾಮಾನ್ಯವಾಗಿ ಕೆಲವರು ಬೆವರುತ್ತಾರೆ. ಸಾಮಾನ್ಯವಾಗಿ ಅಲಂಕಾರಿಕ ಬ್ರಾಗಳು ಈ ಸಂದರ್ಭದಲ್ಲಿ ತೊಂದರೆಯನ್ನುಂಟೂಮಾಡುವಂತವು.. ಪಾಲಿಯೆಸ್ಟರ್ ಅಥವಾ ಲಿನಿನ್ ರೀತಿಯ ವಸ್ತುಗಳಿಂದ ಮಾಡಲಾದ ಬ್ರಾಗಳನ್ನು ಬಳಸುವುದು ಉತ್ತಮ.
ಕ್ಯಾನ್ಸರ್: ಮಲಗುವಾಗ ಬ್ರಾ ಧರಿಸಿ ಮಲಗುವುದು ಸ್ತನ ಕ್ಯಾನ್ಸರ್ ಗೆ ಕಾರಣವಾಗುತ್ತದ್ದೆ ಎನ್ನುವುದು ಇವತ್ತಿಗೂ ಚರ್ಚಾಸ್ಪದ ವಿಷಯ. ರಾತ್ರಿ ಸಮಯದಲ್ಲಿ ಬಿಗಿಯಾದ ಬ್ರಾವನ್ನು ಧರಿಸಿ ಮಲಗುವುದರರಿಂದ ಸ್ತನ ಕ್ಯಾನ್ಸರ್ ಬರಲು ಸಾಧ್ಯ ಎಂಬುದರ ಬಗ್ಗೆ ಪರ ಮತ್ತು ವಿರೋಧಿಸಿ ವಿವಿಧ ಅಧ್ಯಯನಗಳು ನಡೆದಿವೆ.
ಕ್ಯಾನ್ಸರ್ ಅಲ್ಲದ ಗಡ್ಡೆಗಳು : ಮೂತ್ರಕೋಶ ಮತ್ತು ದೇಹದ ಯಾವುದೇ ಭಾಗದಲ್ಲಿ ರಚನೆಗೊಂಡ ಅಂಗಾಂಶದಲ್ಲಿ ಕ್ಯಾನ್ಸರ್ ಅಲ್ಲದ ಗಡ್ಡೆಗಳು ಹುಟ್ಟಿಕೊಳ್ಳಬಹುದು. ಡಾ ಜಾನ್ ಮ್ಯಾಕ್ಡೊಗಾಲ್ " ಒಂದು ಆರೋಗ್ಯಕರ ಹೃದಯಕ್ಕಾಗಿ ಮ್ಯಾಕ್ಡೊಗಾಲ್ ಕಾರ್ಯಕ್ರಮ " ಎಂಬ ಬರಹದಲ್ಲಿ ಬ್ರಾ ಗಳು ಉರಿಯೂತ ಮತ್ತು ಅಸಮರ್ಪಕ ಕೊಳಕಿನಿಂದಾಗಿ ಗಡ್ಡೆಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ ಎಂದು ಸೂಚಿಸಿದ್ದಾರೆ.
ಅದೇನೇ ಇರಲಿ ನಿಮಗೆ ಆರಾಮದಾಯಕ ಎನ್ನಿಸದಿದ್ದಲ್ಲಿ ಮುಂದಾಗುವ ತೊಂದರೆಗಳನ್ನು ಅನುಭವಿಸುವುದಕ್ಕಿಂತ ಮೊದಲು ಬಿಗಿಯಾದ ಬ್ರಾ ಧರಿಸದೆ ಇರುವುದೇ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications