Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಇದು ಕಣ್ಣಿನಲ್ಲಿ ಬೆಳೆಯುವ ಅಪಾಯಕಾರಿಯಾದ ಹುಳ!
ಜಂತು ಹುಳವಿದೆ ಇದೆ ಎಂದು ಹೇಳಿದರೆ ಏನೂ ಆಶ್ಚರ್ಯವಾಗುವುದಿಲ್ಲ. ಆದರೆ ಕಣ್ಣಿನಲ್ಲಿ ಹುಳ ಬೆಳೆದಿದೆ ಎಂದರೆ ಬೆಚ್ಚಿ ಬಿದ್ದೇ ಬೀಳುತ್ತೇವೆ. ಕಣ್ಣಿನಲ್ಲಿ ಪೊರೆ ಬೆಳೆಯಲು ಸಾಧ್ಯ, ಹುಳ ಬೆಳೆಯಲು ಸಾಧ್ಯವೇ? ಎಂದು ಆಶ್ಚರ್ಯವಾಗಬಹುದು. ಆದರೆ ಕಣ್ಣಿನಲ್ಲಿ ಬೆಳೆಯುವ ಈ ಹುಳಾ ತುಂಬಾ ಅಪಾಯಕಾರಿಯಾಗಿದ್ದು, ಇದರ ಬಗ್ಗೆ ಮಾಹಿತಿ ನೋಡಿ ಇಲ್ಲಿದೆ.
ಈ ಹುಳ ಸಾಧಾರಣವಾದ ಹುಳವಲ್ಲ, ಕಣ್ಣಿನಲ್ಲಿ ಬೆಳೆಯುವ ಈ ಹುಳ ಮೆದುಳಿನ ನರದ ಮೇಲೆ ಕಟ್ಟ ಪರಿಣಾಮ ಬೀರುವುದು. ಇದೀಗ ವೈದ್ಯಕೀಯ ಜಗತ್ತಿನಲ್ಲಿ ಈ ಹುಳ ಹಾಟ್ ಟಾಪಿಕ್ ಆಗಿದೆ. ಈ ಹುಳವನ್ನು ವೈದ್ಯಕೀಯ ಭಾಷೆಯಲ್ಲಿ ಲೋವೋ-ಲೋವೋ ಎನ್ನುತ್ತಾರೆ. ಪ್ರಸಿದ್ಧ ನೇತ್ರ ತಜ್ಞ ಡಾ. ಆಶ್ಲೇ ಥೋಮಸ್ ಮೂಳಾಮುಟಿಲ್ ಒಬ್ಬ ರೋಗಿಯ ಕಣ್ಣಿನಿಂದ 20cm ಹುಳವನ್ನು ತೆಗೆಯುವುದರ ಮುಖಾಂತರ ತಮ್ಮ ನವೀನ ಶಸ್ತ್ರ ಚಿಕಿತ್ಸೆಯಿಂದಾಗಿ ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದಾರೆ.
ಇವರು ನಡೆಸಿದ ಶಸ್ತ್ರ ಚಿಕಿತ್ಸೆಯ ಬಗ್ಗೆ ವೀಡಿಯೋ ನೋಡಿ ಇಲ್ಲಿದೆ:
<center><center><center><center><center><center><center><center><iframe width="600" height="450" src="http://www.youtube.com/embed/BwlNw_GaMUE?feature=player_embedded" frameborder="0" allowfullscreen></iframe></center></center></center></center></center></center></center></center>
http://www.indiavideo.org/
ಈ ಹುಳ ಹರುಡುವಿಕೆಯ ಬಗ್ಗೆ
ಈ ಹುಳ ಮೂಲತಃ ಆಫ್ರಿಕದಲ್ಲಿ ಕಂಡು ಬರುತ್ತಿತ್ತು, ಇದೀಗ ಏಷ್ಯಾದಲ್ಲೂ ಕಂಡು ಬರುತ್ತಿದೆ.
ಮ್ಯಾಂಗ್ರೂ ಫ್ಲೈ ಅಥವಾ ಡೀರ್ ಫ್ಲೈ ಈ ಹುಳ ಹರಡಲು ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಈ ಕೀಟ ಮನುಷ್ಯನನ್ನು ಕಡಿದಾಗ ಲೋವೋ-ಲೋವೋ ಹುಳದ ಮೊಟ್ಟೆ ಮನುಷ್ಯನ ದೇಹದ ಒಳಕ್ಕೆ ಸೇರಿ ಅಲ್ಲಿ ಮರಿಯಾಗಿ ಬೆಳೆಯಲಾರಂಭಿಸುತ್ತದೆ. ಈ ಹುಳ ಮನುಷ್ಯನ ದೇಹದಲ್ಲಿಯೇ ಸತ್ತರೆ ಲೂಯಾಸಿಸ್ ( microfilariasis or Loa Loa infestation) ಕಾಯಿಲೆ ಉಂಟಾಗುತ್ತದೆ ಎಂದು ಡಾ. ಆಶ್ಲೇ ಈ ಹುಳದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
ಲೋವೋ-ಲೋವೋಕ್ಕೆ ಚಿಕಿತ್ಸೆ
ಈ ಕಾಯಿಲೆ ಇರುವ ರೋಗಿಗೆ chemotherapy ಅಥವಾ ಶಸ್ತ್ರ ಚಿಕಿತ್ಸೆಯ ಮೂಲಕ ಹುಳವನ್ನು ತೆಗೆಯಲಾಗುವುದು. ದುರಾದೃಷ್ಟಕರವೆಂದರೆ ಈ ಕಾಯಿಲೆಗೆ ಇದುವರೆಗೆ ಯಾವುದೇ ಚುಚ್ಚುಮದ್ದು ಕಂಡು ಹಿಡಿದಿಲ್ಲ. ಆದನ್ನು ಸರಿಯಾದ ಸಮಯಕ್ಕೆ ಗುರುತಿಸಿದರೆ ಗುಣ ಪಡಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
