Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ನಕ್ಕು ದೀರ್ಘಾಯುಷ್ಯಿಗಳಾಗಿ!
ನಗು ಎಲ್ಲದಕ್ಕೂ ಮದ್ದು, ಯಾವಾಗಲೂ ನಗುತ್ತೀರಿ ಎಂದು ತಿಳಿದವರು ಹೇಳುತ್ತಾರೆ. ನಗು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ನಗುವುದರಿಂದ ಆರೋಗ್ಯವು ಉತ್ತಮವಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ವೈದ್ಯರು ಕೂಡ ತಮ್ಮ ರೋಗಿಗಳಿಗೆ ಚಿಂತೆ ಬಿಟ್ಟು ನಗುವಂತೆ ಸೂಚಿಸುತ್ತಾರೆ. ಒತ್ತಡದಲ್ಲೇ ಇರುವಂತಹ ಇಂದಿನ ದಿನಗಳಲ್ಲಿ ಕೆಲವು ಮಂದಿ ಆರೋಗ್ಯದ ದೃಷ್ಟಿಯಿಂದ ಬೆಳಗ್ಗಿನ ಅವಧಿಯಲ್ಲಿ ನಗುವ ತರಗತಿಗಳಿಗೆ ಹೋಗುತ್ತಾರೆ. ಇಂತಹ ತರಗತಿಗಳಲ್ಲಿ ಎಲ್ಲರು ಜತೆಸೇರಿ ವಿವಿಧ ಶೈಲಿಯಲ್ಲಿ ನಗುತ್ತಾರೆ.
ದೀರ್ಘಾಯುಷ್ಯಕ್ಕೆ ನಗು ಒಳ್ಳೆಯ ಮದ್ದು. ನಗುವಿನಿಂದಾಗಿ ದೀರ್ಘಕಾಲ ಹೇಗೆ ಬದುಕಬಹುದು ಎನ್ನುವುದನ್ನು ಕೆಲವೊಂದು ಸತ್ಯ ಮತ್ತು ಕಾರಣಗಳು ಹೇಳುತ್ತಿವೆ. ನಗುವಿನಿಂದ ನಮ್ಮ ಆರೋಗ್ಯಕ್ಕೆ ಆಗುವ ವಿವಿಧ ರೀತಿಯ ಲಾಭಗಳೆಂದರೆ ಅದು ನಮ್ಮ ಜೀವನ ಹಾಗೂ ಬದುಕನ್ನು ಹೇಗೆ ಸುಧಾರಿಸುತ್ತದೆ ಎಂಬ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

1. ನಗು ಮನಸ್ಸಿಗೆ ಶಾಂತಿ ನೀಡುತ್ತದೆ
ನಗು ಅಥವಾ ತಮಾಷೆಯಿಂದ ನಿಮ್ಮ ಮನಸ್ಸು ಯಾವಾಗಲೂ ಶಾಂತವಾಗಿರುತ್ತದೆ. ಇದು ಒತ್ತಡ, ಚಿಂತೆ ಹಾಗೂ ನೋವಿನ ಸಮಸ್ಯೆಗಳಿಗೆ ಒಳ್ಳೆಯ ಮದ್ದು. ನಗುವು ಕೋಪ ಮತ್ತು ಹತಾಶೆಯನ್ನು ನಿಯಂತ್ರಿಸುತ್ತದೆ. ನಗುವಾಗ ಹಾರ್ಮೋನ್ ಬಿಡುಗಡೆಗೊಂಡು ನೀವು ಒಳ್ಳೆಯ ಭಾವನೆಯಿಂದ ಇರುವಂತೆ ಮಾಡುತ್ತದೆ. ನಗುವಿನಿಂದಲೇ ಎಲ್ಲಾ ಸಮಸ್ಯೆಗಳನ್ನು ದೂರಕ್ಕೆ ಅಟ್ಟುವುದರಿಂದ ನೀವು ಹೆಚ್ಚಿನ ಕಾಲ ಬಾಳಬಹುದು. ಜನರು ತುಂಬಾ ಬೇಸರದಲ್ಲಿ ಇರುವಾಗ ಕಾಮಿಡಿ ಷೋ ಮತ್ತು ಸಿನೆಮಾಗಳನ್ನು ನೋಡಲು ಬಯಸುತ್ತಾರೆ. ಯಾಕೆಂದರೆ ಇದರಲ್ಲಿ ಇರುವ ತಮಾಷೆ ಮತ್ತು ಕಾಮಿಡಿ ಅವರು ನಗುವಂತೆ ಮಾಡುತ್ತದೆ. ನಗುವಾಗ ಒತ್ತಡದ ಹಾರ್ಮೋನು ಕಡಿಮೆಯಾಗಿ, ಒಳ್ಳೆಯ ಭಾವನೆಯ ಹಾರ್ಮೋನುಗಳು ಹೆಚ್ಚಾಗುತ್ತದೆ.
2. ನಗುವಿನಿಂದ ಸ್ಥಿರತೆ
ತಮಾಷೆ ಮಾಡಿ ನಕ್ಕ ಬಳಿಕವೂ ನೀವು ಒಳ್ಳೆಯ ಭಾವನೆಯಿಂದ ಇರುವಂತೆ ನಗು ಮಾಡುತ್ತದೆ. ಇದು ಧನಾತ್ಮಕ ಮತ್ತು ಪ್ರೋತ್ಸಾಹಕರ ಭಾವನೆ ಹೆಚ್ಚಿಸಿ, ಭಾವನಾತ್ಮಕ ಮತ್ತು ಮಾನಸಿಕವಾಗಿ ಸ್ಥಿರತೆಯಿಂದ ಇರುವಂತೆ ಮಾಡುತ್ತದೆ. ಕೆಲವರು ತಮ್ಮ ಕೋಪ ನಿಯಂತ್ರಿಸಲು ನಗುವಿನ ಥೆರಪಿ ಪಡೆಯುತ್ತಾರೆ. ಈ ಥೆರಪಿಯಲ್ಲಿ ಜನರು ಕೋಪ ಬಂದಾಗ ಮತ್ತು ಹತಾಶೆಗೊಳಗಾದಾಗ ತುಂಬಾ ಜೋರಾಗಿ ನಗುತ್ತಾರೆ. ಇದು ತುಂಬಾ ಹಾಸ್ಯಾಸ್ಪದವಾಗಿ ಕಾಣಬಹುದು. ಆದರೆ ತುಂಬಾ ಪ್ರಯೋಜನಕಾರಿ. ಕೋಪ ನಿಯಂತ್ರಣಕ್ಕೆ ನಗು ಒಳ್ಳೆಯ ಮದ್ದು.
3. ನಗು ಒಳ್ಳೆಯ ವ್ಯಾಯಾಮ
ಹೆಚ್ಚಿನ ಜನರು ನಗುವನ್ನು ಒಂದು ವ್ಯಾಯಾಮವಾಗಿ ಮಾಡಿಕೊಳ್ಳುತ್ತಾರೆ. ನಕ್ಕಾಗ ನಾವು ಸಾಮಾನ್ಯವಾಗಿ ತೆಗೆದುಕೊಳ್ಳುವ ಆಮ್ಲಜನಕಕ್ಕಿಂತ ಹೆಚ್ಚಿನ ಆಮ್ಲಜನಕ ಉಸಿರಾಡುತ್ತೇವೆ. ನಗುವು ಆಮ್ಲಜನಕ ಪಡೆಯುವುದನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ಬಡಿತವು ಹೆಚ್ಚಾಗಿ ದೇಹದಲ್ಲಿ ರಕ್ತ ಪರಿಚಲನೆಯು ಉತ್ತಮವಾಗುತ್ತದೆ. ಬೆಳಗ್ಗೆ ತಾಜಾವಾಗಿರುವ ಗಾಳಿಯಲ್ಲಿ ನಕ್ಕರೆ ಖಂಡಿತವಾಗಿಯೂ ನಿಮ್ಮ ಜೀವನದ ಅವಧಿ ಹೆಚ್ಚಾಗಬಹುದು. ವಯಸ್ಸಾದವರು ಗುಂಪುಗುಂಪಾಗಿ ಉದ್ಯಾನದಲ್ಲಿ ಕೆಲವೊಂದು ಸರಳ ಮತ್ತು ಸುಲಭ ವ್ಯಾಯಾಮಗಳೊಂದಿಗೆ ನಗುವುದನ್ನು ಕಾಣಬಹುದು. ಇಂತಹ ಅಭ್ಯಾಸವು ವ್ಯಾಯಾಮದ ಲಾಭವನ್ನು ಉಂಟುಮಾಡಲಿದೆ.
4. ನಗು ಪ್ರತಿರಕ್ಷಣೆಗೆ ಒಳ್ಳೆಯದು
ಮೇಲಿನ ಎಲ್ಲಾ ಲಾಭಗಳು ನಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸಮತೋಲನಕ್ಕೆ ಒಳ್ಳೆಯದೆಂದು ಸಾಬೀತಾಗಿದೆ. ನಗುವು ನಮ್ಮ ಪ್ರತಿರಕ್ಷಣೆಯನ್ನು ಹೆಚ್ಚಿಸುತ್ತದೆ. ನಗುವು ದೇಹದ ಅಂಗಾಂಗಗಳ ಚಟುವಟಿಕೆ ಹೆಚ್ಚುಮಾಡಿ ಕ್ಯಾಲರಿ ನಶಿಸಲು ನೆರವಾಗುತ್ತದೆ. ಇದು ಹಲವಾರು ಒಳ್ಳೆಯ ಹಾರ್ಮೋನು ಮತ್ತು ಜೀವಕೋಶಗಳ ಬಿಡುಗಡೆಗೆ ನೆರವಾಗುತ್ತದೆ. ಮಧುಮೇಹ ಇರುವ ರೋಗಿಗಳು ನಗುವಾಗ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಕೆಲವೊಂದು ಸಂಶೋಧನೆಗಳಿಂದ ಸಾಬೀತಾಗಿದೆ. ಇದರಿಂದ ನಗು ಪ್ರತಿರಕ್ಷಣಾ ವ್ಯವಸ್ಥೆಗೆ ಬಲ ನೀಡಿ ನಮ್ಮನ್ನು ಆರೋಗ್ಯವಾಗಿಡುತ್ತದೆ. ಅಂತಿಮವಾಗಿ ನಕ್ಕು ಹಗುರಾಗಿ ಮತ್ತು ದೀರ್ಘಾಯುಷ್ಯಿಗಳಾಗಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications