ಬೆನ್ನು ನೋವನ್ನು ನಿವಾರಿಸಲು ಖರ್ಚಿಲ್ಲದ ಮಾರ್ಗಗಳು

By Super

ಸಾಧಾರಣ ಬೆನ್ನು ನೋವು ನಿಜಕ್ಕೂ ಹೆಚ್ಚಿನ ತೊಂದರೆಯುಂಟು ಮಾಡುತ್ತದೆ. ಅದನ್ನು ನಿವಾರಿಸಲು ಹಲವಾರು ಖರ್ಚಿಲ್ಲದ ಮಾರ್ಗಗಳು ಇವೆ. ಈ ಅಂಕಣದಲ್ಲಿ ಇವುಗಳನ್ನು ವಿವರಣಾತ್ಮಕವಾಗಿ ಚರ್ಚಿಸಲಾಗಿದೆ.

ಸಾಧಾರಣ ಬೆನ್ನು ನೋವನ್ನು ನಿವಾರಿಸಲು ಖರ್ಚಿಲ್ಲದ ಮಾರ್ಗಗಳು

ಸಾಧಾರಣ ಬೆನ್ನು ನೋವನ್ನು ನಿವಾರಿಸಲು ಖರ್ಚಿಲ್ಲದ ಮಾರ್ಗಗಳಲ್ಲಿ ಕೆಲವು ಇಂತಿವೆ:

ಒಂದಕ್ಕಿಂತ ಹೆಚ್ಚಿನ ತಲೆದಿಂಬನ್ನು ಬಳಸಿ

ಒಂದಕ್ಕಿಂತ ಹೆಚ್ಚಿನ ತಲೆದಿಂಬನ್ನು ಬಳಸಿ

ಭವಿಷ್ಯದಲ್ಲಿ ಬರುವ ಯಾವುದೇ ರೀತಿಯ ಬೆನ್ನು ನೋವನ್ನು ನಿಯಂತ್ರಿಸಲು ಮಲಗುವಾಗ ಒಂದಕ್ಕಿಂತ ಹೆಚ್ಚು ತಲೆದಿಂಬನ್ನು ಬಳಸಿ. ಒಂದು ನಿಮ್ಮ

ತಲೆಗೆ ಆರಾಮವನ್ನು ಒದಗಿಸಿದರೆ, ಇನ್ನೊಂದು ನಿಮ್ಮ ಬೆನ್ನು ಮತ್ತು ಸೊಂಟಕ್ಕೆ ಆರಾಮವನ್ನು ಒದಗಿಸುತ್ತದೆ. ಒಂದು ವೇಳೆ ನೀವು ಮಗ್ಗುಲಾಗಿ ಮಲಗುವ ಅಭ್ಯಾಸವನ್ನು ಹೊಂದಿದ್ದರೆ, ಸಾಧಾರಣವಾದ ತಲೆದಿಂಬನ್ನು ನಿಮ್ಮ ಕಾಲುಗಳ ನಡುವೆ ಇಡಿ. ಒಂದು ವೇಳೆ ನೀವು ಬೋರಲಾಗಿ ಮಲಗುವ ಅಭ್ಯಾಸವನ್ನು ಹೊಂದಿದ್ದರೆ, ತಲೆದಿಂಬನ್ನು ನಿಮ್ಮ ಸೊಂಟದ ಭಾಗದಲ್ಲಿ ಇಟ್ಟು ಮಲಗಿ.

ಎರಡು ಟೆನ್ನಿಸ್ ಬಾಲ್ ಮತ್ತು ಸಾಕ್ಸ್ ಬಳಸಿ ಮಸಾಜ್

ಎರಡು ಟೆನ್ನಿಸ್ ಬಾಲ್ ಮತ್ತು ಸಾಕ್ಸ್ ಬಳಸಿ ಮಸಾಜ್

ಎರಡು ಟೆನ್ನಿಸ್ ಬಾಲ್ ತೆಗೆದುಕೊಳ್ಳಿ. ಅದನ್ನು ಒಂದು ಉದ್ದವಾದ ಸಾಕ್ಸ್ ಒಳಗೆ ಸೇರಿಸಿ. ತುದಿಯನ್ನು ಗಟ್ಟಿಯಾಗಿ ಕಟ್ಟಿ. ಈಗ ಈ ಚೆಂಡುಗಳನ್ನು ತೆಗೆದುಕೊಂಡು ಹೋಗಿ ಗೋಡೆಗೆ ಅಥವಾ ನೆಲದ ಮೇಲೆ ಇಟ್ಟು, ನಿಮ್ಮ ಬೆನ್ನಿನ ಭಾಗಕ್ಕೆ ಅವು ಬರುವಂತೆ ಮಾಡಿ. ಈಗ ಅದರ ಮೇಲೆ ನಿಮ್ಮ ಭಾರವನ್ನು ಬಿಟ್ಟು ಸ್ವಲ್ಪ ನಿಧಾನವಾಗಿ ಉರುಳಾಡಿ.

ಬಿಸಿಯಾದ ಪ್ಯಾಡ್‍ಗಳ ಶಾಖವನ್ನು ಬೆನ್ನು ಮತ್ತು ಕತ್ತಿನ ಮೇಲೆ ನೀಡಿ.

ಬಿಸಿಯಾದ ಪ್ಯಾಡ್‍ಗಳ ಶಾಖವನ್ನು ಬೆನ್ನು ಮತ್ತು ಕತ್ತಿನ ಮೇಲೆ ನೀಡಿ.

ಬಿಸಿಯಾದ ಪ್ಯಾಡ್‍ಗಳ ಶಾಖವನ್ನು ಬೆನ್ನು ಮತ್ತು ಕತ್ತಿನ ಮೇಲೆ ನೀಡುವುದರಿಂದ ಸ್ನಾಯುಗಳಲ್ಲಿ ಹಿಡಿದಿರುವ ಜೋಮು ಮತ್ತು ಬಿಗಿತನವನ್ನು ಬಿಡಿಸಬಹುದು.

ಎಪ್ಸಂ ಉಪ್ಪು ಸೇರಿಸಿರುವ ಬಿಸಿ ನೀರಿನಲ್ಲಿ ಸ್ನಾನ ಮಾಡಿ

ಎಪ್ಸಂ ಉಪ್ಪು ಸೇರಿಸಿರುವ ಬಿಸಿ ನೀರಿನಲ್ಲಿ ಸ್ನಾನ ಮಾಡಿ

ಒಂದು ಸುದೀರ್ಘವಾದ ಕೆಲಸದ ದಿನದ ಕೊನೆಯಲ್ಲಿ ನಿಮ್ಮ ಸ್ನಾನದ ನೀರಿಗೆ ಒಂದೆರಡು ಕಪ್ ಎಪ್ಸಂ ಉಪ್ಪನ್ನು ಹಾಕಿ ಸ್ನಾನ ಮಾಡುವುದರಿಂದ ಕೇವಲ ಒತ್ತಡದಿಂದಷ್ಟೇ ಅಲ್ಲದೆ ಸ್ನಾಯುಗಳ ಬಿಗಿತದಿಂದ ಸಹ ಮುಕ್ತಿ ಪಡೆಯಬಹುದು. ಇದು ಬೆನ್ನು ನೋವುಕಾರಕವಾದ ಒತ್ತಡವನ್ನು ಮತ್ತು ಸ್ನಾಯುಗಳ ಬಿಗಿತವನ್ನು ತಪ್ಪಿಸಿ ನಿಮಗೆ ಉಪಯೋಗವನ್ನುಂಟು ಮಾಡುತ್ತದೆ.

ನಿಮ್ಮ ಲ್ಯಾಪ್‍ಟಾಪ್‍ ಅನ್ನು ಎತ್ತರದ ಸ್ಥಳದಲ್ಲಿಡಿ

ನಿಮ್ಮ ಲ್ಯಾಪ್‍ಟಾಪ್‍ ಅನ್ನು ಎತ್ತರದ ಸ್ಥಳದಲ್ಲಿಡಿ

ನಿಮ್ಮ ಲ್ಯಾಪ್‍ಟಾಪ್ ಕೆಳಗೆ ಪುಸ್ತಕಗಳನ್ನು ಜೋಡಿಸಿ ಇಡುವುದರಿಂದ ಅದು ನಿಮ್ಮ ಕತ್ತಿನ ಮಟ್ಟಕ್ಕೆ ಬರುತ್ತದೆ. ಹೀಗೆ ಮಾಡುವುದರಿಂದ ನೀವು ಬಾಗಿ ಕೆಲಸ ಮಾಡುವ ಪ್ರಯಾಸ ತಪ್ಪುತ್ತದೆ. ಅಲ್ಲದೆ ಕುಳಿತು ಕೆಲಸ ಮಾಡಲು ಹಾಗು ನೇರವಾಗಿ ಕುಳಿತುಕೊಳ್ಳುವ ಅಭ್ಯಾಸವನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಉತ್ತಮವಾದ ದೈಹಿಕ ನಿಲುವನ್ನು ರೂಢಿಸಿಕೊಳ್ಳಿ

ಉತ್ತಮವಾದ ದೈಹಿಕ ನಿಲುವನ್ನು ರೂಢಿಸಿಕೊಳ್ಳಿ

ಉತ್ತಮವಾದ ದೈಹಿಕ ನಿಲುವನ್ನು ರೂಢಿಸಿಕೊಳ್ಳುವುದರಿಂದಾಗಿ ನಿಮಗೆ ಇರುವ ಬೆನ್ನು ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಭವಿಷ್ಯದಲ್ಲಿ ಬೆನ್ನು ನೋವು ಬರುವ ಸಾಧ್ಯತೆಯನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ಇದೆಲ್ಲದಕ್ಕಿಂತ ಮಿಗಿಲಾಗಿ ಉತ್ತಮ ನಿಲುವು ನಿಮಗೆ ಪ್ರತ್ಯೇಕವಾದ

ಆಕರ್ಷಣೆಯನ್ನು ಒದಗಿಸುತ್ತದೆ ಹಾಗು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಐ ಪೊಸ್ಚರ್ ಎನ್ನುವ ಎಲೆಕ್ಟ್ರಾನಿಕ್ ಸಾಧನವು ನಿಮ್ಮ ನಿಲುವನ್ನು ಗ್ರಹಿಸಿ, ನೀವು ನಿಮ್ಮ ನಿಲುವನ್ನು ಸರಿಪಡಿಸಿಕೊಳ್ಳಲು ಸಹಕರಿಸುತ್ತದೆ. ಒಂದು ವೇಳೆ ನೀವೇನಾದರು ಅವಲಕ್ಷಣವಾಗಿ ನಿಂತರೆ, ತಕ್ಷಣ ಈ ಸಾಧನವು ನಿಮಗೆ ಸಂದೇಶವನ್ನು ರವಾನಿಸುತ್ತದೆ.

ಕುಳಿತು ಕೆಲಸ ಮಾಡುವಾಗ 30 ರಿಂದ 60 ನಿಮಿಷ ವಿಶ್ರಾಂತಿ ಪಡೆಯಿರಿ

ಕುಳಿತು ಕೆಲಸ ಮಾಡುವಾಗ 30 ರಿಂದ 60 ನಿಮಿಷ ವಿಶ್ರಾಂತಿ ಪಡೆಯಿರಿ

ಒಂದು ವೇಳೆ ನೀವು ಕಛೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದಲ್ಲಿ ಅಥವಾ ಕಂಪ್ಯೂಟರಿನ ಮುಂದೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುತ್ತಿದ್ದಲ್ಲಿ, ಆಗಿಂದಾಗೆ ನಡುವೆ ನಿಯಮಿತವಾಗಿ ವಿಶ್ರಾಂತಿ ಪಡೆಯಿರಿ. ಇದು ನಿಮ್ಮ ದೇಹಕ್ಕೆ ಅತ್ಯಗತ್ಯ ಎಂಬುದನ್ನು ಮರೆಯಬೇಡಿ. ಯಥೇಚ್ಛವಾಗಿ ನೀರನ್ನು ಸೇವಿಸಿ.

ಆಗ ನೀವು ನಿಯಮಿತವಾಗಿ ಶೌಚಾಲಯಕ್ಕೆ ಹೋಗುವ ಸಲುವಾಗಿಯಾದರು ಎದ್ದು ಓಡಾಡುತ್ತೀರಿ. ಆಗ ನಿಮ್ಮ ದೇಹವನ್ನು ಸಡಿಲ ಮಾಡುವ ಕೆಲವಚಟುವಟಿಕೆಗಳನ್ನು ಮಾಡಿ. ಮಧ್ಯಾಹ್ನದ ಊಟವಾದ ನಂತರ ಒಂದು ಸಣ್ಣ ನಡಿಗೆಯನ್ನು ಕೈಗೊಳ್ಳಿ. ನಿಮ್ಮ ಕಛೇರಿಯ ಮತ್ತೊಂದು ವಿಭಾಗದಲ್ಲಿರುವ

ನಿಮ್ಮ ಸ್ನೇಹಿತನನ್ನು ಭೇಟಿಯಾಗಿ. ಒಂದು ವೇಳೆ ನೀವು ಮನೆಯಿಂದ ಕೆಲಸ ಮಾಡುತ್ತಿದ್ದರೆ , ಸಣ್ಣ ಮಟ್ಟದ ವಿಶ್ರಾಂತಿಯನ್ನು ಪಡೆಯಿರಿ. ಆದರೆ ಇದು ನಿಯಮಿತವಾಗಿ ಇರಲಿ. ಈ ಬಿಡುವಲ್ಲಿ ಗಿಡಗಳನ್ನು ಬೆಳೆಸಿ, ಅವುಗಳ ಆರೈಕೆ ಮಾಡುತ್ತ, ನಿಮ್ಮ ಕೋಣೆಯನ್ನು ಸ್ವಚ್ಛಗೊಳಿಸುತ್ತ ಮತ್ತು ಇತ್ಯಾದಿ ಕೆಲಸ ಮಾಡುತ್ತ ನೀವು ಬಿಡುವನ್ನು ಸದುಪಯೋಗ ಮಾಡಿಕೊಳ್ಳಬಹುದು.

ಯೋಗ

ಯೋಗ

ನಿಮ್ಮ ದೇಹದಲ್ಲಿ ನಮ್ಯತೆ ಮತ್ತು ನಿಮ್ಮ ನಿಲುವಿನಲ್ಲಿ ಆಕರ್ಷಕತೆಯನ್ನು ತರುವಲ್ಲಿ ಯೋಗ ಚಟುವಟಿಕೆಯು ಉತ್ತಮ ಪಾತ್ರವನ್ನು ನಿರ್ವಹಿಸುತ್ತದೆ.

ಹಾಗಾಗಿ ನಿರಂತರವಾಗಿ ಯೋಗವನ್ನು ಅಭ್ಯಾಸ ಮಾಡಿ. ಇದು ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆಯಾಗಿ ಮಾನಸಿಕ

ಹಾಗು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ.

X
Desktop Bottom Promotion