Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ದೇಹದ ದುರ್ವಾಸನೆ ತಡೆಯಲು ಟಿಪ್ಸ್

ಬೆವರಿನ ದುರ್ವಾಸನೆಯನ್ನು ಈ ಕೆಳಗಿನ ವಿಧಾನಗಳಿಂದ ಕಡಿಮೆ ಮಾಡಬಹುದು:
* ಸೋಂಕಾಣುಗಳ ವಿರುದ್ಧ ಹೋರಾಡುವ ಸೋಪು ಬಳಸಿ ಸ್ನಾನ
ಮೈ ತುಂಬಾ ಬೆವರುವುದಾದರೆ ಎರಡು ಹೊತ್ತು ಸ್ನಾನ ಮಾಡುವುದು ಒಳ್ಳೆಯದು. ಮೈಗೆ ಸೋಂಕಾಣುಗಳ ವಿರುದ್ಧ ಹೋರಾಡುವ ಸೋಪು ಬಳಸಿ.
* ಶುದ್ಧವಾದ ಬಟ್ಟೆ ಧರಿಸಿ
ಕೆಲವರು ಒಮ್ಮೆ ಧರಿಸಿದ ಬಟ್ಟೆಯನ್ನು ಒಗೆಯದೆ ಮತ್ತೊಮ್ಮೆ ಧರಿಸುತ್ತಾರೆ. ಹೀಗೆ ಮಾಡಿದರೆ ಬೆವರಿನ ದುರ್ಗಂಧ ಹೆಚ್ಚುವುದು. ಶುಭ್ರವಾದ ಬಟ್ಟೆ ಮಾತ್ರ ಧರಿಸಿ, ಅದರಲ್ಲೂ ಬೇಸಿಗೆಯಲ್ಲಿ ಹತ್ತಿಯ ಬಟ್ಟೆ ಒಳ್ಳೆಯದು.
* ಸ್ನಾನ ಮಾಡುವ ನೀರಿಗೆ ಸ್ವಲ್ಪ ಜೇನು ಬೆರೆಸಿ
ಸ್ನಾನ ಮಾಡಿದ ನಂತರ ಲಾಸ್ಟ್ 2 ಮಗ್ ನಷ್ಟು ನೀರು ಇರುವಾಗ 1 ಚಮಚ ಜೇನು ಬೆರೆಸಿ ಆ ನೀರನ್ನು ಮೈಗೆ ಹಾಕಿಕೊಳ್ಳಿ. ಹೀಗೆ ಮಾಡಿದರೆ ದೇಹ ದುರ್ಗಂಧ ಬೀರುವುದನ್ನು ತಡೆಯಬಹುದು.
* ಗೋಧಿ ಹುಲ್ಲು ಹಾಕಿ ನೀರು ಕುಡಿಯುವುದು
ದೇಹದ ದುರ್ವಾಸನೆ ತಡೆಯಲು ಪ್ರತೀದಿನ ಬೆಳಗ್ಗೆ ಸ್ವಲ್ಪ ಗೋಧಿ ಹುಲ್ಲನ್ನು ಪೇಸ್ಟ್ ಮಾಡಿ ಹಾಕಿದ ನೀರು ಕುಡಿಯಿರಿ.
* ಅಡುಗೆ ಸೋಡ
ಕಂಕುಳವನ್ನು ಅಡುಗೆ ಸೋಡಾದಿಂದ ಸ್ಕ್ರಬ್ ಮಾಡಿದರೆ ದೇಹ ದುರ್ವಾಸನೆ ಬೀರುವುದು ಕಡಿಮೆಯಾಗುತ್ತದೆ.
* ಆಪಲ್ ಸೈಡರ್ ವಿನಿಗರ್
ಸ್ನಾನ ನೀರಿಗೆ ಆಪಲ್ ಸೈಡರ್ ವಿನಿಗರ್ ಹಾಕಿದರೂ ಉತ್ತಮ ಫಲಿತಾಂಶ ದೊರೆಯುತ್ತದೆ.
* ಸ್ನಾನದ ನಂತರ ಮೈಗೆ ರೋಸ್ ವಾಟರ್ ತಿಕ್ಕಿ. ಇದರಿಂದ ದೇಹ ದಿನಾಪೂರ್ತಿ ಸುವಾಸನೆಯಿಂದ ಕೂಡಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
