Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಪುರುಷರ ಕಾಯಿಲೆಯೆನ್ನುವ ಸಂಧಿವಾತಕ್ಕೆ ಮನೆಮದ್ದು
ಇತ್ತೀಚಿನ ರೋಗವಾದ ಗೌಟ್, ಸಂಧಿವಾತ ಅಥವಾ ಉರಿಯೂತಕಾರಕ ಕೀಲು ರೋಗದ ಒಂದು ರೂಪವಾಗಿದೆ. ರಕ್ತದಲ್ಲಿ ಯೂರಿಕ ಆಮ್ಲ ಬೆರೆಯುವಿಕೆಯಿಂದ ಉಂಟಾಗುವ ಈ ರೋಗದಿಂದ ಶೆ. 5ರಷ್ಟು ಜನರು ನರಳುತ್ತಿದ್ದಾರೆ. ಪ್ಯೂರಿನ್ ಎಂದು ಕರೆಯಲ್ಪಡುವ ಮಾನವ ದೇಹದಲ್ಲಿನ ತ್ಯಾಜ್ಯವೇ ಈ ಯೂರಿಕ್ ಆಮ್ಲ. ಸಾಮಾನ್ಯವಾಗಿ ಇದು ರಕ್ತದಲ್ಲಿ ಕರಗಿ ಮೂತ್ರಪಿಂಡಗಳ ಮೂಲಕ ಸಂಸ್ಕರಿಸಲ್ಪಟ್ಟು ಮೂತ್ರದ ರೂಪದಲ್ಲಿ ದೇಹದಿಂದ ಹೊರಹಾಕಲ್ಪಡುತ್ತದೆ.
ಆದರೆ ಕೆಲವೊಬ್ಬರಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಿದ್ದು ಇದನ್ನು ತ್ವರಿತವಾಗಿ ಸಂಸ್ಕರಿಸಲು ಮೂತ್ರಪಿಂಡಗಳಿಗೆ ಹೆಚ್ಚಿನ ಕ್ಷಮತೆ ಬೇಕಾಗುತ್ತದೆ. ರಕ್ತದಲ್ಲಿ ಹೆಚ್ಚು ಯೂರಿಕ ಆಮ್ಲ ಕರಗಿರುವುದರ ಪರಿಣಾಮವಾಗಿ ಅದು ಹರಳುಗಳಾಗಿ ದೇಹದಲ್ಲಿನ ಸಂಧುಗಳಲ್ಲಿ ಶೇಖರಿಸಲ್ಪಡುತ್ತದೆ. ಈ ಸ್ಥಿತಿಯನ್ನೇ ಗೌಟ್ ಎನ್ನಲಾಗುತ್ತದೆ. ಕೆಲವೊಮ್ಮೆ ಈ ಶೇಖರಗಳು ಚರ್ಮವನ್ನು ಅದರ ವಿರುದ್ಧ ದಿಕ್ಕಿನಲ್ಲಿ ಒತ್ತುವುದರಿಂದ ಟೊಫಿಗಳೆಂದು ಕರೆಯಲ್ಪಡುವ ಮುದ್ದೆಗಳು ಹಾಗು ಮಚ್ಚೆಗಳನ್ನು ಕಾಣಬಹುದು.
ಗೌಟ್ ದಾಳಿ ಸಾಮಾನ್ಯವಾಗಿ ಐದರಿಂದ ಹತ್ತು ದಿನಗಳವರೆಗೆ ಇರುತ್ತಿದ್ದು ಅದರ ದಾಳಿ ಸಾಮಾನ್ಯವಾಗಿ ಕಾಲಿನ ಹೆಬ್ಬೆರಳಿನ ಪ್ರದೇಶವಾಗಿರುತ್ತದೆ. ಮೊಣಕಾಲು, ಹಿಮ್ಮಡಿಗಳು, ಮೊಣಕೈ,ಬೆರಳುಗಳು,ಮುಂಗೈ ಮತ್ತು ತೊಡೆಗಳಲ್ಲಿಯೂ ಗೌಟ್ ಗಳು ಕಂಡು ಬರಬಹುದು. ಗೌಟ್ ಆದ ಜಾಗವನ್ನು ಮೃದುವಾಗಿ ಸ್ಪರ್ಶಿ ಸಿದರೂ ಅಸಾಧ್ಯ ನೋವು ಉಂಟಾಗುತ್ತದೆ.
ಪ್ರಾರ್ಥಮಿಕವಾಗಿ ಇದನ್ನು ಪುರುಷರ ರೋಗ ಎನ್ನಲಾಗುವುದು. ಮಹಿಳೆಯರಲ್ಲಿ ಯೂರಿಕ ಆಮ್ಲವನ್ನು ಹೊರಹಾಕುವ ಸಾಮರ್ಥ್ಯ ಹೆಚ್ಚಿದ್ದು ಈ ರೋಗ ಬರುವ ಸಾಧ್ಯತೆ ಕಡಿಮೆ.
ಮಧ್ಯಮ ವಯಸ್ಸು ದಾಟಿದ ಪುರುಷರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ.

ಐಸ್ ಪ್ಯಾಕ್
ಊದಿದ ಜಾಗಕ್ಕೆ ಐಸ್ ನಿಂದ ತಂಪುಗೊಳಿಸಬಹುದು.10-15 ನಿಮಿಷಗಳ ಐಸ್ ಪ್ಯಾಕ್ ಅಳವಡಿಕೆಯಿಂದಾಗಿ ಊದಿಕೊಂಡ ಕೀಲುಗಳು ನೋವು ಮತ್ತು ಉರಿಯನ್ನು ಕಡಿಮೆಯಾಗುವುದು.

ಉಪ್ಪು ನೀರಿನಿಂದ ಆರೈಕೆ
ಕೀಲುಗಳಿಗೆ ವ್ಯಾಯಾಮ ಮಾಡಿದರೆ ಸಂಧಿ ನೋವು ಕಡಿಮೆಯಾಗುವುದು. ಹೆಬ್ಬೆರಳಿನಲ್ಲಿ ನೋವಿದ್ದರೆ, ಕಾಲುಗಳನ್ನು ಉಪ್ಪು ನೀರಿನಲ್ಲಿ ಕೆಲಕಾಲ ಮುಳುಗಿಸಿಡಿ.
ಯೂರಿಕ್ ಆಮ್ಲ ತಟಸ್ಥಗೊಳಿಸುವ ಆಹಾರಗಳು " title="ಯೂರಿಕ್ ಆಮ್ಲ ತಟಸ್ಥಗೊಳಿಸುವ ಆಹಾರಗಳು " class="sliderImg image_listical" width="600" height="338" loading="lazy"/>ಯೂರಿಕ್ ಆಮ್ಲ ತಟಸ್ಥಗೊಳಿಸುವ ಆಹಾರಗಳು
ಯೂರಿಕ್ ಆಮ್ಲ ತಟಸ್ಥಗೊಳಿಸಲು ಸಹಾಯ ಮಾಡುವ ತಾಜಾ ಸ್ಟ್ರಾಬೆರಿಗಳನ್ನು, ಧಾನ್ಯಗಳ ಮತ್ತು ಹಣ್ಣುಗಳನ್ನು ತಿನ್ನಿರಿ. ವಿಟಮಿನ್ ಸಿ, ಮ್ಯಾಗ್ನಿಷಿಯಂ, ಸತು ಈ ರೀತಿಯ ಖನಿಜಾಂಶಗಳು ಯೂರಿಕ್ ಆಮ್ಲವನ್ನು ತಟಸ್ಥ ಮಾಡುತ್ತದೆ. ಚೆರ್ರಿ ಹಣ್ಣು ಕೂಡ ತುಂಬಾ ಒಳ್ಳೆಯದು.

ನೀರು
ದಿನಕ್ಕೆ 8-10 ಲೋಟಗಳಷ್ಟು ನೀರು ಕುಡಿಯಿರಿ.ನೀರು ಯೂರಿಕ್ ಆಮ್ಲ ಮಟ್ಟವನ್ನು ದುರ್ಬಲಗೊಳಿಸುತ್ತದೆ.

ಆಹಾರ
ಸಿಟ್ರಸ್ ಹಣ್ಣುಗಳು, ಟೊಮೆಟೊ, ಹಸಿ ಮೆಣಸು ಇವುಗಳನ್ನು ತಿಂದರೆ ಉರಿಯೂತ ಕಡಿಮೆಯಾಗುವುದು.

ವ್ಯಾಯಾಮ
ನಿಯಮಿತವಾಗಿ ವ್ಯಾಯಾಮ ಮಾಡಿರಿ.ವ್ಯಾಯಾಮ ಕೀಲು ನೋವನ್ನು ತಡೆದು ಸ್ನಾಯುಗಳನ್ನು ಪ್ರಬಲಗೊಳಿಸುತ್ತದೆ.

ಜೇನು ಮತ್ತು ಆಪಲ್ ಸೈಡರ್ ವಿನಿಗರ್
2 ಚಮಚ ಆಪಲ್ ಸೈಡರ್ ವಿನಿಗರ್ ಗೆ ಎರಡು ಚಮಚ ಜೇನುತುಪ್ಪ ಹಾಕಿ ಕುಡಿರೆ ಸಂಧಿ ನೋವು ಕೆಲವೇ ಕ್ಷಣಗಳಲ್ಲಿ ನೋವು ನಿವಾರಣೆಯಾಗುವುದು.



Click it and Unblock the Notifications