Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಹೆಪಟೈಟಿಸ್ ಬಿ ತುಂಬಾ ಅಪಾಯಕಾರಿಯಾದ ಕಾಯಿಲೆ
ಹೆಪಟೈಟಿಸ್ ಬಿ ವೈರಾಣು ಸೋಂಕಿನಿಂದ ಬರುವ ಕಾಯಿಲೆ ಮಾರಣಾಂತಿಕವಾಗಿದ್ದು, ಜಗತ್ತಿನಾದ್ಯಂತ ಗಂಭೀರ ಆರೋಗ್ಯ ಸಮಸ್ಯೆ ಉಂಟುಮಾಡುವ ಕಾಯಿಲೆಯಾಗಿದೆ. ಹೆಪಟೈಟಿಸ್ ವೈರಸ್ ಗಳಲ್ಲೇ ಇದು ಅತ್ಯಂತ ತೀವ್ರ ಸ್ವರೂಪದ್ದಾಗಿದೆ. ಲಿವರ್ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್ ನಂತಹ ಯಕೃತ್ತಿನ ಕಾಯಿಲೆಗೆ ಕಾರಣವಾಗುವ ಇದು ಅತ್ಯಂತ ಮಾರಣಾಂಕತಿಕ ವೈರಸ್ ಆಗಿದೆ.
ಜಗತ್ತಿನಾದ್ಯಂತ ಸುಮಾರು 200 ಕೋಟಿ ಜನ ಹೆಪಟೈಟಿಸ್ ಬಿ ಸೋಂಕಿಗೆ ಗುರಿಯಾಗಿದ್ದು, 24 ಕೋಟಿಗೂ ಹೆಚ್ಚು ಮಂದಿ ದೀರ್ಘಕಾಲೀನ ಯಕೃತ್ತಿನ ಸೋಂಕುಗಳಿಂದ ಬಳಲುತ್ತಿದ್ದಾರೆ. ಸುಮಾರು 6 ಲಕ್ಷ ಜನ ಇದರಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಈಗ ಲಸಿಕೆ ಲಭ್ಯವಿದ್ದು ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆ ಹೆಚ್ಚಿದೆ.

ಹೆಪಟೈಟಿಸ್ ಬಗ್ಗೆ ಕೆಲವು ಅಚ್ಚರಿಯ ವಿಷಯಗಳು
* ಹೆಪಟೈಟಿಸ್ ಬಿ ಒಂದು ವೈರಸ್ ಸೋಂಕು ಆಗಿದ್ದು, ಅದು ಯಕೃತ್ತಿನ (ಲಿವರ್) ಮೇಲೆ ದಾಳಿ ಮಾಡುತ್ತದೆ. ಅದರಿಂದಾಗಿ ತೀವ್ರಸ್ವರೂಪದ ಕಾಯಿಲೆ ಕಾಣಿಸಿಕೊಳ್ಳುತ್ತದೆ.
* ಸೋಂಕು ತಗುಲಿದ ವ್ಯಕ್ತಿಯಿಂದ ರಕ್ತ ಅಥವಾ ಇತರ ಶರೀರಸ್ರಾವಗಳ ಮೂಲಕ ಇದು ಹರಡುತ್ತದೆ.
* ಜಗತ್ತಿನಾದ್ಯಂತ 20 ಲಕ್ಷ ಜನ ಸೋಂಕಿನಿಂದ ನರಳುತ್ತಾರೆ ಮತ್ತು ಹೆಪಟೈಟಿಸ್ ಬಿ ಯಿಂದಾಗಿ ಪ್ರತಿವರ್ಷ 6 ಲಕ್ಷ ಜನ ಸಾವಿಗೀಡಾಗುತ್ತಾರೆ.
* ಹೆಪಟೈಟಿಸ್ ಬಿ ವೈರಸ್ ಎಚ್ಐವಿಗಿಂತಲೂ 50ರಿಂದ 100 ಪಟ್ಟು ವೇಗವಾಗಿ ಹರಡುತ್ತದೆ.
* ಆರೋಗ್ಯ ಕಾರ್ಯಕರ್ತರಿಗೆ ವೃತ್ತಿಸಂಬಂಧಿತವಾಗಿ ಬರುವ ಪ್ರಮುಖ ಕಾಯಿಲೆ ಹೆಪಟೈಟಿಸ್ ಬಿ.
ಹರಡುವಿಕೆ: ಹೆಪಟೈಟಿಸ್ ಬಿ ಸೋಂಕು ತಗುಲಿ ವ್ಯಕ್ತಿಯಿಂದ ನೇರವಾಗಿ ರಕ್ತ ಮೂಲಕ, ವೀರ್ಯ ಅಥವಾ ಯೋನಿದ್ರವದ ಮೂಲಕ ಹರಡುತ್ತದೆ. ಹೆಚ್ಚುಕಡಿಮೆ ಎಚ್ಐವಿ ಮಾದರಿಯಲ್ಲೇ ಇದು ಪ್ರಸರಣಗೊಳ್ಳುತ್ತದೆ. ಆದರೆ ಇದು ಎಚ್ಐವಿಗಿಂತಲೂ 50ರಿಂದ 100 ಪಟ್ಟು ಹೆಚ್ಚು ಮಾರಕವಾಗಿದೆ. ಎಚ್ಐವಿಗಿಂತ ಭಿನ್ನವಾಗಿ, ಹೆಪಟೈಟಿಸ್ ಬಿ ವೈರಸ್ ದೇಹದ ಹೊರಗೆ ಕನಿಷ್ಠ 7 ದಿನಗಳ ಕಾಲ ಬದುಕಬಲ್ಲದು. ಈ ಅವಧಿಯಲ್ಲೂ ಅದು ನಿರೋಧಕ ಲಸಿಕೆ ಹಾಕಿಸಿಕೊಂಡಿರದ ವ್ಯಕ್ತಿಗೆ ಸೋಂಕಿದರೆ ಕಾಯಿಲೆ ಉಂಟುಮಾಡುವ ಶಕ್ತಿ ಹೊಂದಿರುತ್ತದೆ.
ಅಭಿವೃದ್ಧಿಶೀಲ ದೇಶಗಳಲ್ಲಿ ಇದು ಹರಡುವ ಸಾಮಾನ್ಯ ವಿಧಾನಗಳು:
* ಹೊಕ್ಕುಳಬಳ್ಳಿಯ ಮೂಲಕ (ಜನನದ ವೇಳೆ ತಾಯಿಯಿಂದ ಮಗುವಿಗೆ)
* ಎಳೆಯ ವಯಸ್ಸಿನಲ್ಲಿ ಮಕ್ಕಳಿಗೆ ತಗುಲುವ ಸೋಂಕಿನ ಮೂಲಕ
* ಅಸುರಕ್ಷಿತ ಇಂಜೆಕ್ಷನ್ ಸಿರಿಂಜ್ ಗಳ ಮೂಲಕ
* ಅಸುರಕ್ಷಿತ ರಕ್ತ ವರ್ಗಾವಣೆಯಿಂದ
* ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ
ಈ ಸೋಂಕು ಹರಡುತ್ತದೆ.
ತಡೆಯುವುದು ಹೇಗೆ:
ಎಲ್ಲ ಮಕ್ಕಳಿಗೂ ಹೆಪಟೈಟಿಸ್ ಬಿ ನಿರೋಧಕ ಲಸಿಕೆ ಹಾಕುವುದು ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಮಕ್ಕಳಿಗೆ ನಿಯಮಿತವಾಗಿ ನೀಡುವ ಲಸಿಕೆಗಳ ಜತೆಗೆ ಮೂರು ಅಥವಾ ನಾಲ್ಕು ಪ್ರತ್ಯೇಕ ಡೋಸ್ ಗಳಲ್ಲಿ ಈ ಲಸಿಕೆಯನ್ನು ಹಾಕಿಸಬಹುದು.
ತಾಯಿಯಿಂದ ಮಕ್ಕಳಿಗೆ ಸೋಂಕು ಹರಡುವ ಪ್ರದೇಶಗಳಲ್ಲಿ ಮಗು ಜನಿಸಿದ 24 ಗಂಟೆಯೊಳಗೆ ಶಿಶುವಿಗೆ ಲಸಿಕೆಯ ಮೊದಲ ಡೋಸ್ ನೀಡಬೇಕು. ಪೂರ್ಣಪ್ರಮಾಣದ ಲಸಿಕೆ ನೀಡಿದ ಬಳಿಕ ಶೇಕಡಾ 95 ಮಕ್ಕಳಲ್ಲಿ ಈ ಸೋಂಕಿಗೆ ಪ್ರತಿರೋಧಕ ಶಕ್ತಿ ಬೆಳೆಯುತ್ತದೆ. 20 ವರ್ಷಗಳ ವರೆಗೆ ಈ ನಿರೋಧಕ ಶಕ್ತಿ ದೇಹದಲ್ಲಿ ಇರುತ್ತದೆ. ಕೆಲವರಲ್ಲಿ ಜೀವನಪರ್ಯಂತ ನಿರೋಧಕ ಶಕ್ತಿ ಮುಂದುವರಿಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
