ಅಲಕ್ಷ್ಯ ಮಾಡಬಾರದಂತಹ ಕಾಯಿಲೆಗಳ ಲಕ್ಷಣಗಳಿವು

By Super

"ಆರೋಗ್ಯವೇ ಮಹಾ ಭಾಗ್ಯ" ಎಂದು ಹೇಳುತ್ತಾರೆ, ಹಿರಿಯರು. ನಾವೆಲ್ಲರು ಆರೋಗ್ಯಕ್ಕೆ ಮಹತ್ತರವಾದ ಬೆಲೆಯನ್ನು ನೀಡುತ್ತೇವೆ. ನಾವು ಎಷ್ಟೇ ಆರೋಗ್ಯವಾಗಿ, ಲವ ಲವಿಕೆಯಿಂದ ಇದ್ದರು, ಅನಾರೋಗ್ಯವು ನಮಗೆ ಯಾವುದೇ ಮಾಹಿತಿ ನೀಡದೆ ಸೀದಾ ಬಂದು ನಮ್ಮ ದೇಹದಲ್ಲಿ ಠಿಕಾಣಿ ಹೂಡಿ ಬಿಡುತ್ತದೆ. ಹಾಗಾದರೆ ಅದನ್ನು ಗುರುತಿಸುವುದು ಹೇಗೆ?.

ಅದಕ್ಕೆ ಉತ್ತರ ನೋವುಗಳು ಮತ್ತು ಬೇನೆಗಳು. ಎಂತಹ ಆರೋಗ್ಯವಂತರಲ್ಲಿ ಸಹ ಕೆಲವು ನೋವುಗಳು, ತಲೆ ನೋವು ಮುಂತಾದ ಸಣ್ಣ ಪುಟ್ಟ ಅನಾರೋಗ್ಯ ಕಂಡು ಬರುವುದು ಸಾಮಾನ್ಯ. ಆದರೆ ನಾವು ಸಾಮಾನ್ಯಕಾಯಿಲೆಗಳೆಮದು ಅಲಕ್ಷ್ಯ ಮಾಡಬಾರದ ಕಾಯಿಲೆಗಳ ಲಕ್ಷಣಗಳ ಬಗ್ಗೆ ಹೇಳಿದ್ದೇವೆ. ಈ ಸಾಮಾನ್ಯ ಲಕ್ಷಣಗಳು ಅಪಾಯಕಾರಿಯಾದ ಕಾಯಿಲೆ ಬರುತ್ತದೆ ಎನ್ನುವ ಮುನ್ಸೂಚನೆಯಾಗಿದ್ದು, ಪ್ರಾರಂಭದಲ್ಲಿಯೇ ಎಚ್ಚೆತ್ತುಕೊಂಡರೆ ಒಳ್ಳೆಯದು.

1. ಮತ್ತೆ ಮತ್ತೆ ದೇಹದ ಅಂಗಾಂಗಗಳು ಊದಿಕೊಳ್ಳುವುದು

1. ಮತ್ತೆ ಮತ್ತೆ ದೇಹದ ಅಂಗಾಂಗಗಳು ಊದಿಕೊಳ್ಳುವುದು

ಪುರುಷರಿಗಿಂತ ಮಹಿಳೆಯರಲ್ಲಿ ಈ ಊದಿಕೊಳ್ಳುವ ಪ್ರಕ್ರಿಯೆ ಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕೆ ಮಹಿಳೆಯರ ಋತುಚಕ್ರವೇ ಕಾರಣ. ಆದಾಗಿಯೂ ಮತ್ತೆ ಮತ್ತೆ ಊತಗಳು ಕಂಡು ಬರುತ್ತಿದ್ದರೆ, ತಡಮಾಡದೆ ಮೊದಲು ವೈಧ್ಯರನ್ನು ಕಾಣಿ. ನಿಮ್ಮ ದೇಹದಲ್ಲಿರುವ ವಾಯು, ಊಟ ಮಾಡುವಾಗ ಸಂಕಟವಾಗುವುದು ಅಥವಾ ಉದರದಲ್ಲಿ ನೋವಾಗುವುದು ಮುಂತಾದ ಲಕ್ಷಣಗಳು ಕಂಡು ಬರುತ್ತವೆಯೇ ಎಂದು ಗಮನಿಸಿ. ಬಹುಶಃ ಇದು ನಿಮ್ಮಲ್ಲಿ ಸುಪ್ತವಾಗಿ ಅಡಗಿರುವ ಅನುವಂಶೀಯ ಸಮಸ್ಯೆಯನ್ನು ತೋರಿಸುತ್ತಿರಬಹುದು. ಈ ರೀತಿ ಕಂಡು ಬಂದರೆ ಮೊದಲು ಪರೀಕ್ಷೆ ನಡೆಸಿ.

2.ಯಾತನಮಯವಾದ ತಲೆನೋವು

2.ಯಾತನಮಯವಾದ ತಲೆನೋವು

ನಿಮ್ಮ ಮೆದುಳಿನಲ್ಲಿರುವ ರಕ್ತನಾಳವೊಂದು ಒಡೆದು ಹೋದಾಗ ನಿಮಗೆ ತಕ್ಷಣ ತಲೆನೋವನ್ನು ಉಂಟು ಮಾಡುತ್ತದೆ. ಈ ತಲೆನೋವು ನಿಮಗೆ ಸಹಿಸಲಸಾಧ್ಯವಾದ ಯಾತನೆಯನ್ನು ಉಂಟು ಮಾಡುತ್ತದೆ. ಇದನ್ನು ರಪ್ಚರ್ಡ್ ಅನ್ಯೂರಿಸಂ ಎಂದು ಕರೆಯಲಾಗುತ್ತದೆ. ಇದಕ್ಕೆ ಎಷ್ಟು ಬೇಗ ಚಿಕಿತ್ಸೆ ಪಡೆಯುತ್ತೀರೋ, ಅಷ್ಟು ಒಳ್ಳೆಯದು. ಇದರ ಜೊತೆಗೆ ಎದೆ ನೋವು, ದೃಷ್ಟಿಯು ಕ್ಷೀಣಿಸುವುದು ಮತ್ತು ನೋಡಲು ಆಲಸಿತನ ಉಂಟಾಗುವುದು ಕಂಡು ಬಂದರೆ, ನಿರ್ಲಕ್ಷಿಸಬೇಡಿ. ಬಹುಶಃ ಇದು ಕಾರ್ಡಿಯಕ್ ಸೆಫಲ್ಗಿಯ ಅಥವಾ ಮೆನಿಂಗಿಟಿಸ್ ಇರಬಹುದು.

ಪರಿಹಾರ: ನಿಮ್ಮ ವೈದ್ಯರನ್ನು ಕಂಡು ಈ ತೀವ್ರತರದ ತಲೆ ನೋವಿನ ಸಮಸ್ಯೆಗಾಗಿ ಹೆಚ್ಚಿನ ಪರೀಕ್ಷೆ ಅಥವಾ ಎಕ್ಸ್ ರೇ ಮುಂತಾದ ಪರೀಕ್ಷೆಗಳ ಅಗತ್ಯವಿದೆಯೇ ಎಂದು ಕೇಳಿ.

3. ಅತಿಯಾದ ಹಲ್ಲು ನೋವು

3. ಅತಿಯಾದ ಹಲ್ಲು ನೋವು

ಐಸ್ ಕ್ರೀಮ್ ಅಥವಾ ತಂಪಾದ ಪಾನೀಯವನ್ನು ಸೇವಿಸಿದಾಗ ಸ್ವಲ್ಪ ಜುವು ಜುವು ಎಂದಾಗುವ ಹಲ್ಲು ನೋವು ಪರವಾಗಿಲ್ಲ. ಅದರ ಬದಲಿಗೆ ವಿಲಿ ವಿಲಿ ಎಂದು ಒದ್ದಾಡಿಸುವ, ಮಾತನಾಡಲು ತ್ರಾಸವುಂಟು ಮಾಡುವ ಹಲ್ಲು ನೋವಾದರೆ ಎಚ್ಚರ. ಮೊದಲು ವೈಧ್ಯರ ಬಳಿ ಹೋಗಿ. ಅತಿಯಾದ ಹಲ್ಲು ನೋವು, ಹಲ್ಲಿನ ನರ ಸಂಬಂಧಿ ಸಮಸ್ಯೆಯಿಂದ ಉಂಟಾಗುತ್ತದೆ. ಇದು ಹಲ್ಲಿನ ದವಡೆಯ ಸಮಸ್ಯೆಯಾಗಿರ ಬಹುದು. ನೀವು ವೈಧ್ಯರ ಬಳಿ ಹೋಗಲು ತಡ ಮಾಡಿದಷ್ಟು, ಬ್ಯಾಕ್ಟೀರಿಯಾಗಳು ಉಲ್ಪಣಿಸಿ, ನೋವನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ.

4. ಎದೆಯಲ್ಲಿ ನೋವು

4. ಎದೆಯಲ್ಲಿ ನೋವು

ಕೆಲವೊಂದು ಆಹಾರವು ಎದೆಯಲ್ಲಿ ಉರಿತ ಅಥವಾ ಅಜೀರ್ಣವನ್ನು ಉಂಟು ಮಾಡುತ್ತವೆ. ಆದರೆ ಅಪಥ್ಯವಾದ ಆಹಾರದಿಂದ ಉಂಟಾಗುವ ಎದೆಯುರಿತವನ್ನು ಮತ್ತು ಅಪಾಯಕಾರಿಯಾದ ಎದೆಯುರಿತದ ನಡುವೆ ಇರುವ ವ್ಯತ್ಯಾಸವನ್ನು ಕಂಡು ಹಿಡಿಯಬೇಕಾದುದು ನಿಮ್ಮ ಕೆಲಸ. ಹೃದಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಬಂದರು ವೈಧ್ಯರ ಬಳಿ ಹೋಗಲು ತಡಮಾಡಬೇಡಿ. ಯಾವಾಗ ನಿಮ್ಮ ಎದೆಯಲ್ಲಿ ಭಾರವಾದಂತಹ ಅನುಭವವುಂಟಾಗುತ್ತದೊ ಅಥವಾ ನೋವಾಗುತ್ತದೊ ಅದನ್ನು ಉದಾಸೀನ ಮಾಡಬೇಡಿ. ಏಕೆಂದರೆ ಇದು ಹೃದಯಾಘಾತದ ಲಕ್ಷಣಗಳಲ್ಲಿ ಒಂದಾಗಿರುತ್ತದೆ.

5. ಅಸ್ವಾಭಾವಿಕ ಕೂದಲಿನ ಬೆಳವಣಿಗೆ

5. ಅಸ್ವಾಭಾವಿಕ ಕೂದಲಿನ ಬೆಳವಣಿಗೆ

ನಾವೆಲ್ಲರು ಕೂದಲನ್ನು ಹೊಂದಿದ್ದೇವೆ. ಇದರಲ್ಲೇನು ಮಹಾ ವಿಷಯ ಎನ್ನಬಹುದು. ಆದರೂ ಮುಖ, ಎದೆ, ಹೊಟ್ಟೆ ಅಥವಾ ಎದೆಯ ಬಳಿ ದಟ್ಟವಾದ ಕೂದಲು ಕಂಡು ಬಂದಲ್ಲಿ ಎಚ್ಚರವಹಿಸಿ. ಬಹುಶಃ ಇದು ಅನುವಂಶೀಯವಾಗಿ ಕಂಡು ಬರುವ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ( ಪಿಸಿಒಎಸ್) ಎಂಬ ಕಾಯಿಲೆಯ ಮುನ್ಸೂಚನೆಯಿರಬಹುದು. ಈ ಸಮಸ್ಯೆಯು ದೇಹದಲ್ಲಿರುವ ಸ್ತ್ರೀ ಸಂಬಂಧಿ ಹಾರ್ಮೋನುಗಳ ಏರು ಪೇರಿನಿಂದಾಗಿ ಉಂಟಾಗುತ್ತದೆ. ಇದರ ಜೊತೆಗೆ ಅನಿಯಮಿತ ಋತು ಚಕ್ರ ಮತ್ತು ಹೆರಿಗೆಯಲ್ಲಿ ಉಂಟಾಗುವ ತಾಪತ್ರಯವು ಸಹ ಇದನ್ನೆ ಸೂಚಿಸುತ್ತದೆ.

6. ದಿಢೀರ್ ತೂಕ ಕಳೆದುಕೊಳ್ಳುವುದು

6. ದಿಢೀರ್ ತೂಕ ಕಳೆದುಕೊಳ್ಳುವುದು

ನೀವು ಪಥ್ಯವಿದ್ದೀರೋ, ವ್ಯಾಯಾಮ ಮಾಡುತ್ತಿದ್ದೀರೋ ಅಥವಾ ಇಲ್ಲವೋ, ಏನೇ ಇರಲಿ ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಅಧಿಕ ತೂಕವನ್ನು ಕಳೆದುಕೊಳ್ಳುವುದು ಒಳ್ಳೆಯದಲ್ಲ. ವಿವರಿಸಲಾಗದಂತಹ ತೂಕ ಕಳೆದುಕೊಳ್ಳುವ ಸಮಸ್ಯೆಯು ನಮ್ಮ ದೇಹದಲ್ಲಿ ಸುಪ್ತವಾಗಿ ಇರುವ ಕಾಯಿಲೆ, ಮಧುಮೇಹ ಅಥವಾ ಇನ್ನಿತರ ಆರೋಗ್ಯದ ಸಮಸ್ಯೆಗಳನ್ನು ಸೂಚಿಸುತ್ತದೆ.

7. ಹಾಸಿಗೆಯಲ್ಲಿ ಸಮಸ್ಯೆ

7. ಹಾಸಿಗೆಯಲ್ಲಿ ಸಮಸ್ಯೆ

ಇದೊಂದು ಅತಿ ಸಾಮಾನ್ಯ ಸಮಸ್ಯೆ. ಪ್ರತಿ ಗಂಡಸರಲ್ಲಿ ಕೆಲವೊಂದು ಲೈಂಗಿಕ ದೌರ್ಬಲ್ಯಗಳು ಸಾಮಾನ್ಯವಾಗಿ ಯಾವುದೇ ವಯಸ್ಸಿನಲ್ಲಾದರು ಉಂಟಾಗುವ ಸಮಸ್ಯೆಯಾಗಿರುತ್ತದೆ. ಆದರೆ ಇದಕ್ಕಾಗಿ ಹೆದರಬೇಕಿಲ್ಲ, ಇದಕ್ಕೆ ಪರಿಹಾರವಿದೆ. ಮೊದಲು ಇದನ್ನು ಪರೀಕ್ಷಿಸಿಕೊಳ್ಳಿ.

8. ಕಡಿಮೆ ಉಸಿರಾಟದ ಸಮಸ್ಯೆ

8. ಕಡಿಮೆ ಉಸಿರಾಟದ ಸಮಸ್ಯೆ

ಬಹುಶಃ ಇದು ಹೃದಯಾಘಾತದ ಅಪಾಯವನ್ನು ಸೂಚಿಸಬಹುದು. ಒಂದು ವೇಳೆ ಮಹಡಿಯನ್ನು ಹತ್ತಿದ ಮೇಲೆ ನಿಮ್ಮ ಉಸಿರಾಟ ಕಡಿಮೆಯಾದರೆ, ಎಚ್ಚರವಹಿಸಿ. ಏಕೆಂದರೆ ಇದು ಹೃದಯ ಸಮಸ್ಯೆಯ ಲಕ್ಷಣವಾಗಿರುತ್ತದೆ. ಮೇಲೆ ಹತ್ತಿದಾಗ ನಮಗೆ ಅಗತ್ಯ ಪ್ರಮಾಣದಷ್ಟು ಆಮ್ಲಜನಕವನ್ನು ಉಸಿರಿನ ಮೂಲಕ ಎಳೆದುಕೊಳ್ಳಲು ಸಾಧ್ಯವಾಗದಿದ್ದರೆ, ಹೃದಯದ ಮಾಂಸ ಖಂಡಗಳು ತೊಂದರೆಗೆ ಗುರಿಯಾಗುತ್ತದೆ. ಅದರಲ್ಲಿಯೂ 55 ವರ್ಷ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಕಂಡು ಬಂದರೆ ಅಪಾಯ ಮತ್ತಷ್ಟು ಹೆಚ್ಚು.

9. ಚರ್ಮದ ಮೇಲೆ ಕಂಡು ಬರುವ ಮಚ್ಚೆಗಳು, ಕೆಂಪು ಮಚ್ಚೆಗಳು

9. ಚರ್ಮದ ಮೇಲೆ ಕಂಡು ಬರುವ ಮಚ್ಚೆಗಳು, ಕೆಂಪು ಮಚ್ಚೆಗಳು

ಬಹುಶಃ ಇದು ಚರ್ಮದ ಕ್ಯಾನ್ಸರ್ ಅಥವಾ ಸೆಬೊರ್ರೆಃಕ್ ಕೆರಟೊಸೆಸ್ - ಮಧ್ಯ ವಯಸ್ಸಿನಲ್ಲಿ ಚರ್ಮದ ಮೇಲೆ ಕೆಲವೊಂದು ಮಚ್ಚೆಗಳು ಅಥವಾ ಕಲೆಗಳು ಉಂಟಾಗುವುದು ಸಹಜ. ಯಾವುದೇ ಸಂದರ್ಭದಲ್ಲಿ ಚರ್ಮದ ಬಣ್ಣ ಅಥವಾ ಆಕಾರದಲ್ಲಿ ಪರಿವರ್ತನೆ ಕಂಡು ಬಂದಾಗ ಮೊದಲು ವೈಧ್ಯರನ್ನು ಕಾಣಿರಿ. ವಿಶೇಷವಾಗಿ ಆ ಕಲೆಗಳು ಕಡು ಬಣ್ಣದಲ್ಲಿದ್ದು, ರಕ್ತ ಒಸರುತ್ತಿದ್ದರೆ, ತುರಿಕೆಯುಂಟಾಗುತ್ತಿದ್ದರೆ ಅಥವಾ ನಿಮಗೆ ಕಿರಿಕಿರಿಯುಂಟು ಮಾಡುತ್ತಿದ್ದರೆ, ಯಾವುದೇ ಕಾರಣಕ್ಕೂ ಈ ಕಲೆಗಳ ಬಗ್ಗೆ ಉದಾಸೀನ ಮಾಡಬೇಡಿ. ಏಕೆಂದರೆ ಈ ಲಕ್ಷಣಗಳು ಚರ್ಮ ಕ್ಯಾನ್ಸರನ್ನು ಸೂಚಿಸುತ್ತಿರಬಹುದು.

10. ಹಳದಿ ಬಣ್ಣಕ್ಕೆ ತಿರುಗುವ ಚರ್ಮ

10. ಹಳದಿ ಬಣ್ಣಕ್ಕೆ ತಿರುಗುವ ಚರ್ಮ

ಬಹುಶಃ ಇದು ಪಿತ್ತ ಜನಕಾಂಗದ ಸಮಸ್ಯೆ ಇರಬಹುದು. ಹಳದಿ ಬಣ್ಣದ ಚರ್ಮ ಅಥವಾ ಕಾಮಾಲೆಯು ಪಿತ್ತ ಜನಕಾಂಗವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಸೂಚಿಸುತ್ತದೆ. ವಯಸ್ಕರಲ್ಲಿ ಈ ಸಮಸ್ಯೆಯು ಪಿತ್ತಜನಕಾಂಗದ ಸಮಸ್ಯೆ, ಪಿತ್ತಕೋಶದಲ್ಲಿನ ಕಲ್ಲುಗಳು, ಉದರದ ಕ್ಯಾನ್ಸರ್ ಅಥವಾ ವೈರಲ್ ಹೆಪಟೈಟಿಸ್ ಇನ್‍ಫೆಕ್ಷನ್‍ಗಳು ಪಿತ್ತ ಕೋಶದಲ್ಲಿ ಬಾವುಗಳನ್ನು ಉಂಟು ಮಾಡುತ್ತವೆ.

11. ನಾಲಿಗೆ ಕಟ್ಟಿ ಹಾಕಿದಂತೆ ಇರುವುದು

11. ನಾಲಿಗೆ ಕಟ್ಟಿ ಹಾಕಿದಂತೆ ಇರುವುದು

ಬಹುಶಃ ಇದು ಪಾರ್ಶ್ವವಾಯು ಇರಬಹುದು. ಒಂದು ವೇಳೆ ರಕ್ತ ಹೆಪ್ಪುಗಟ್ಟಿದಾಗ, ಗಾಯವಾದಾಗ, ಕಿರಿದಾದ ರಕ್ತ ನಾಳಗಳು ಅಥವಾ ಮೆದುಳಿಗೆ ಸಾಗುವ ರಕ್ತ ಪರಿಚಲನೆಯಲ್ಲಿ ಏನಾದರು ಅಡೆತಡೆಗಳು ಉಂಟಾದಾಗ ಅದರ ಪರಿಣಾಮವಾಗಿ TIA - ಟ್ರಾನ್ಸಿಯೆಂಟ್ ಇಶೆಮೆಕ್ ಅಟ್ಯಾಕ್ ಸಂಭವಿಸಬಹುದು. ಇದರಿಂದಾಗಿ ಮೆದುಳಿನ ಕಾರ್ಯಕ್ಷಮತೆ ದುರ್ಬಲಗೊಂಡು, ಮಾತನಾಡಲು ಕಷ್ಟವಾಗಬಹುದು.

X
Desktop Bottom Promotion